ಆರಂಭಕ್ಕೂ ಮುನ್ನ 'ಮುದ್ದು ಸೊಸೆ' ಧಾರಾವಾಹಿ ವಿರುದ್ಧ ಅಭಿಯಾನ; ಕಾರಣ ಆ ಇಬ್ಬರು!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆಗಾಗ ಹೊಸ ಧಾರಾವಾಹಿಗಳು ಶುರುವಾಗುತ್ತಿರುತ್ತವೆ, ಹೊಸ ಕಥೆಯನ್ನೊತ್ತು ಬರುತ್ತಿರುತ್ತವೆ. ಇದೀಗ 'ಮುದ್ದು ಸೊಸೆ' ಎಂಬ ಹೊಸ ಧಾರಾವಾಹಿ ಆರಂಭವಾಗಿದೆ. ಅದರ ಪ್ರೋಮೋ ಕೂಡ ರಿಲೀಸ್ ಆಗಿದ್ದು, ವಿಭಿನ್ನ ಕಥೆಯನ್ನೊತ್ತು ಬಂದ ಧಾರಾವಾಹಿ ಇದಾಗಿದೆ. ಪುಟ್ಟ ಹುಡುಗಿಯ ಕನಸು, ಮದುವೆ ಎಂಬ ಚಪ್ಪರದಡಿ ಕಮರಿ ಹೋಗಿದೆ.
ರಿಲೀಸ್ ಆಗಿರುವ ಪ್ರೋಮೋದಲ್ಲಿ ವಿದ್ಯಾ ಓದುವುದರಲ್ಲಿ ಮುಂದು. ಬಹುಮಾನಗಳು ಅವಳ ಪಾಲಿಗೆ ಜಾಸ್ತಿ. ಡಾಕ್ಟರ್ ಆಗಬೇಕೆಂಬ ಕನಸು ದೊಡ್ಡದು. ಆದರೆ ವಿದ್ಯಾ ತಂದೆಗೆ ಮಗಳ ಓದಿಗಿಂತ ಅವಳ ಮದುವೆಯೇ ಬಹಳ ಮುಖ್ಯ. ಹೀಗಾಗಿ ಅವಳನ್ನ ಶಾಲೆಯಿಂದ ಸುಳ್ಳು ಹೇಳಿ ಮನೆಗೆ ಕರೆತಂದು, ಗಂಡಿನವರಿಗೆ ವಧು ತೋರಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಗಂಡಿನ ಕಡೆಯವರು ಒಪ್ಪಿಕೊಂಡು ಆಗಿದೆ.

ಹೀರೋ ಆಗಿ ಬಂದ ತ್ರಿವಿಕ್ರಂ
ಬಿಗ್ ಬಾಸ್ ಮುಗಿದ ಮೇಲೆ ತ್ರಿವಿಕ್ರಂ, ಸಿಸಿಎಲ್‌ನಲ್ಲೂ ಆಡಿದ್ದಾರೆ. ಇದರ ನಡುವೆ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೇ 'ಮುದ್ದು ಸೊಸೆ'ಯ ಹೀರೋ ಕೂಡ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ತ್ರಿವಿಕ್ರಂ ಮಧು ಮಗನಾಗಿ ಮಿಂಚಿದ್ದಾರೆ. ಬಿಗ್ ಬಾಸ್‌ನಿಂದ ಬಂದ ಮೇಲೆ ತ್ರಿವಿಕ್ರಂಗೆ ಅಭಿಮಾನಿಗಳು ಜಾಸ್ತಿಯಾಗಿದ್ದಾರೆ.
ಹೊಸ ಅಭಿಯಾನ ಶುರು
'ಮುದ್ದು ಸೊಸೆ' ಧಾರಾವಾಹಿಯ ಪ್ರೋಮೋ ಅಷ್ಟೇ ರಿಲೀಸ್ ಆಗಿದೆ. ಆದರೆ ಯಾವಾಗಿನಿಂದ ಪ್ರಸಾರವಾಗಬಹುದು ಎಂಬ ಸಮಯವನ್ನ ಇನ್ನು ತಿಳಿಸಿಲ್ಲ. ಆದರೆ ಅದಕ್ಕೂ ಮುನ್ನವೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಧಾರಾವಾಹಿ ಸಂಬಂಧ ಅಭಿಯಾನ ಒಂದು ಶುರುವಾಗಿದೆ. ಪೋಸ್ಟರ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳು ತಮ್ಮ ಮನದಾಸೆಯನ್ನು ಹೇಳುವ ಮೂಲಕ ಅಭಿಯಾನವನ್ನ ಆರಂಭಿಸಿದ್ದಾರೆ. ಮೊದಲೇ ಹೇಳಿದಂತೆ ತ್ರಿವಿಕ್ರಂಗೆ ಅಭಿಮಾನಿಗಳು ಬಿಗ್ ಬಾಸ್ ನಿಂದ ಬಂದ ಮೇಲೆ ಜಾಸ್ತಿಯಾಗಿದ್ದಾರೆ. ಹಾಗೇ ಕ್ರೇಜ್ ಕೂಡ ಹೆಚ್ಚಾಗಿದೆ.
ಭವ್ಯಾ - ಮೋಕ್ಷಿತಾಗಾಗಿ ಮನವಿ
ಬಿಗ್ ಬಾಸ್ ಮನೆಯಲ್ಲಿದ್ದಾಗ ಎರಡು ಫ್ಯಾನ್ ಪೇಜ್‌ಗಳು ಓಪನ್ ಆಗಿದ್ದವು. ಒಂದು ತ್ರಿಮೋಕ್ಷಿ ಇನ್ನೊಂದು ತ್ರಿವ್ಯ. ತ್ರಿವಿಕ್ರಂ ಜೊತೆಗೆ ಮೋಕ್ಷಿತಾ ಅಥವಾ ಭವ್ಯಾ ಅವರನ್ನ ಜೋಡಿಯಾಗಿ ನೋಡುವುದಕ್ಕೆ ಫ್ಯಾನ್ಸ್ ಇಷ್ಟಪಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮುದ್ದು ಸೊಸೆ ಧಾರಾವಾಹಿಯಲ್ಲಿ ಮೊದಲು ಹೀರೋಯಿನ್ ಬದಲಾಯಿಸಿ. ಮೋಕ್ಷಿತಾ ಅಥವಾ ಭವ್ಯಾ ಅವರನ್ನ ಹಾಕಿ ಎಂದು ಟ್ರೋಲ್ ಮಾಡ್ತಿದ್ದಾರೆ. ಇದಕ್ಕೆ ಆಲ್ಮೋಸ್ಟ್ ಕಮೆಂಟ್‌ಗಳು ಕೂಡ ಸಪೋರ್ಟಿವ್ ಆಗಿನೇ ಬರುತ್ತಿವೆ. ಅಂದ್ರೆ ಜೋಡಿಯಾಗಿ ಇವರನ್ನೇ ನೋಡಬೇಕೆಂಬ ಆಸೆ ಅಭಿಮಾನಿಗಳದ್ದು.
ಪ್ರತಿಮಾ - ತ್ರಿವಿಕ್ರಂ ಜೋಡಿಗೆ ಜೈಕಾರ
'ಮುದ್ದು ಸೊಸೆ' ಧಾರಾವಾಹಿ ಕಥೆ ಬೇರೆನೆ ಇದೆ. ಇನ್ನು ಓದುತ್ತಿರುವ ಹುಡುಗಿಗೆ ಬೇಗ ಮದುವೆ ಮಾಡಿದರೆ ಅವಳ ಕನಸುಗಳು ಏನಾಗುತ್ತವೆ, ಅವಳ ಮನಸ್ಥಿತಿ ಏನಾಗುತ್ತದೆ ಎಂಬುದೇ ವಿಷಯವಿದೆ. ಹಾಗೇ ಗಂಡನಾದವನು ಚಿಕ್ಕ ಹುಡುಗಿಯ ಆಸೆಗೆ ಹೇಗೆ ಹೆಗಲಾಗಿ ನಿಲ್ಲುತ್ತಾನೆ ಎಂಬುದು. ವಿದ್ಯಾಳ ಪರೀಕ್ಷೆ ಬರೆಯುವ ಆಸೆ, ಡಾಕ್ಟರ್ ಆಗಬೇಕೆಂಬ ಕನಸಿಗೆ ತ್ರಿವಿಕ್ರಂ ಬೆನ್ನೆಲುಬಾಗಿ ನಿಲ್ಲುವ ಕಥೆಯೂ ಇದಾಗಿರಬಹುದು. ಯಾಕಂದ್ರೆ ವಿದ್ಯಾ, ಮಧು ಮಗಳ ಗೆಟಪ್‌ನಲ್ಲಿಯೇ ಬಂದು ಪರೀಕ್ಷೆ ಬರೆದಿದ್ದಾಳೆ. ಮುಂದೆ ನೋಡೋಣ ಧಾರಾವಾಹಿ ಶುರುವಾದ ಮೇಲೆ ಹೇಗೆಲ್ಲಾ ಟರ್ನ್ ತೆಗೆದುಕೊಳ್ಳುತ್ತದೆ.


Click it and Unblock the Notifications











