ಬ್ರೇಕಪ್ ಎಂದುಕೊಂಡಿದ್ದ ಫ್ರೆಂಡ್‌ಶಿಪ್ ಕಂಟಿನ್ಯೂ: ಗಂಡನ ಜೊತೆ ಮಂಜು ಭೇಟಿ ಮಾಡಿದ ಗೌತಮಿ!
ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಆರಂಭದಲ್ಲಿ ಹೆಜ್ಜೆ ಇಟ್ಟಾಗ ತಾನೇ ಟ್ರೋಫಿ ಎತ್ತುಕೊಂಡು ಹೋಗುವುದು ಎಂಬ ನಂಬಿಕೆಯಲ್ಲಿದ್ದರು. ಆದರೆ ಅದೇಕೋ ಏನೋ ದಿನಕಳೆದಂತೆ ಬರೀ ಗೌತಮಿಯನ್ನ ಮೆಚ್ಚಿಸುವುದಕ್ಕಾಗಿ ಆಟ ಆಡಿದರೆ ವಿನಃ ಟ್ರೋಫಿ ಕಡೆ ದಿಟ್ಟ ಹೆಜ್ಜೆ ಇಡಲೇ ಇಲ್ಲ. ಕುಂತರು ಗೌತಮಿ, ನಿಂತರು ಗೌತಮಿ. ಅದರಲ್ಲೂ ಒಮ್ಮೆ ಕಿಚ್ಚ ಸುದೀಪ್ ಅವರೇ ಯಾರನ್ನ ಮೆಚ್ಚಿಸಬೇಕು ಮಂಜು ಎಂದು ಕೇಳಿದರೆ ಗೌತಮಿ ಎಂದಿದ್ದರು.
ಬಿಗ್ ಬಾಸ್ ಮನೆಯಲ್ಲಿ ಮಂಜು, ಗೌತಮಿಯನ್ನು ಸಿಕ್ಕಾಪಟ್ಟೆ ಅಚ್ಚಿಕೊಂಡು ಬಿಟ್ಟಿದ್ದರು. ಮೋಕ್ಷಿತಾ ಇಬ್ಬರ ಫ್ರೆಂಡ್ಶಿಪ್‌ನಿಂದ ಹೊರಗೆ ಬಂದರೂ ಸಹ ತಲೆ ಕೆಡಿಸಿಕೊಂಡಿರಲಿಲ್ಲ. ಮಂಜು ಅಷ್ಟೇ ಒಳ್ಳೆಯ ಗೆಳೆಯನಾಗಿಯೇ ಉಳಿದುಕೊಂಡಿದ್ದ. ಗೌತಮಿ ಫಿನಾಲೆಗೆ ವಾರ ಇರುವಾಗ ಹೊರಗೆ ಬಂದ್ರೆ, ಮಂಜು ಕಪ್ ಗೆಲ್ಲದೇ, ಫಿನಾಲೆ ವೇದಿಕೆ ತಲುಪದೆ ಹೊರಗೆ ಬಂದರು. ಇದೀಗ ಗೌತಮಿ ಜೊತೆಗೆ ಅವರ ಪತಿಯನ್ನು ಭೇಟಿ ಮಾಡಿ, ಆಶ್ಚರ್ಯ ಮೂಡಿಸಿದ್ದಾರೆ ಮಂಜು.

ಗೌತಮಿಗೆ ಎಚ್ಚರಿಕೆ ಕೊಟ್ಟಿದ್ದ ಅಭಿ
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಬಂದಾಗ ಮನೆಗೆ ಗೌತಮಿಯ ಗಂಡ ಅಭಿಷೇಕ್ ಹಾಗೂ ಮಂಜು ಅವರ ಅಕ್ಕ ಬಂದಿದ್ದರು. ಈ ವೇಳೆ ಇಬ್ಬರಿಗೂ ಎಚ್ಚರಿಕೆಯ ಕಿವಿ ಮಾತನ್ನ ಹೇಳಿದ್ದರು. ಅಭಿಷೇಕ್ ನೇರವಾಗಿಯೇ, ನಿನ್ನ ವಿಚಾರದಲ್ಲಿ ಮಂಜು ಗೇಮ್ ಆಡ್ತಾ ಇದಾರೆ ಎಂದಿದ್ದರು. ಅಂದ್ರೆ ಆಟಕ್ಕಾಗಿ ಗೆಳತಿ ಎನ್ನುತ್ತಿದ್ದಾರೆ ಎಂಬಂತೆ. ಮಂಜು ಅವರ ಅಕ್ಕ ಕೂಡ ಗೌತಮಿಯಿಂದ ದೂರ ಇರು ಎಂದು ಎಚ್ಚರಿಸಿದ್ದರು. ಆದರೂ ಇಬ್ಬರು ಅದನ್ನ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಆಂಟಿ-ಅಂಕಲ್ ಲವ್ ಸ್ಟೋರಿ
ಗೌತಮಿ ಯಾವಾಗಲೂ ಪಾಸಿಟಿವ್ ಮಂತ್ರ ಪಠಿಸುತ್ತಿದ್ದರು. ಧನರಾಜ್ ಒಮ್ಮೆ ಆಕಸ್ಮಿಕವಾಗಿ ಟಚ್ ಮಾಡಿದಾಗ, ನಂಗೆ ಒಂದು ಬೆರಳಲ್ಲಿ ಯಾರಾದ್ರೂ ಮುಟ್ಟಿದರೂ ಆಗಲ್ಲ ಎಂದಿದ್ದರು. ಆಮೇಲೆ ಮಂಜು ಜೊತೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇದನ್ನ ಹೊರಗಡೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಆಂಟಿ- ಅಂಕಲ್ ಲವ್ ಕಣ್ರೋ ಎಂಬ ಲೆವೆಲ್‌ಗೆ ಟ್ರೋಲ್ ಆಗಿತ್ತು.
ಮಂಜು ಭೇಟಿ ಮಾಡಿದ ಗೌತಮಿ
ಬಿಗ್ ಬಾಸ್ ಮನೆಯೊಳಗೆ ಗೌತಮಿ ಪತಿ ಎಚ್ಚರಿಸಿದ್ದು ಮಂಜುಗೂ ಗೊತ್ತಿತ್ತು. ಅದನ್ನ ಅಲ್ಲಿಗೆ ಬಿಟ್ಟಿದ್ದರು. ಹೊರಗಡೆ ಜನ ಈ ಸ್ನೇಹ ಎಲ್ಲಾ ಮನೆಗೆ ಮಾತ್ರ ಸೀಮಿತ ಎಂದಿದ್ದರು. ಆದರೆ ಅದು ಸುಳ್ಳು ಎಂಬುದನ್ನು ಇದೀಗ ಮಂಜು ಹಾಗೂ ಗೌತಮಿ ಪ್ರೂವ್ ಮಾಡಿದ್ದಾರೆ. ಅದರಲ್ಲೂ ಪತಿಯ ಜೊತೆಗೆ ಭೇಟಿ ಮಾಡಿದ್ದಾರೆ. ಅಭಿಷೇಕ್ ಪಾಪ ಎಂಬಂತೆ ಟ್ರೋಲ್ ಮಾಡಿದವರಿಗೆ ಮನೆಯೊಳಗಿನ ಮ್ಯಾಟರ್ ಬರೀ ಆಟವಷ್ಟೇ ಎಂಬುದನ್ನು ಪ್ರೂವ್ ಮಾಡಿದಂತೆ ಆಗಿದೆ.
ಫ್ರೆಂಡ್ಶಿಪ್ ಬಗ್ಗೆ ಕಮೆಂಟ್ಸ್
ಮಂಜು, ಗೌತಮಿ, ಅಭಿಷೇಕ್ ತುಂಬಾ ಆತ್ಮೀಯವಾಗಿರುವ ಫೋಟೋ ಅದು. ಮಂಜು, ಗೌತಮಿ ಗಂಡ ಅಭಿ ಹೆಗಲ ಮೇಲೆ ಕೈ ಹಾಕಿ ಪೋಸ್ ಕೊಟ್ಟಿದ್ದಾರೆ. ಎಲ್ಲರ ಮುಖದಲ್ಲೂ ನಗು ಇದೆ. ಇದು ಇದು ಆಕ್ಚುಲಿ ಚೆನ್ನಾಗಿರೋದು. ಟ್ರೂ ಫ್ರೆಂಡ್ಶಿಪ್ ಅಂತ ಕಮೆಂಟ್ ಹಾಕುತ್ತಿದ್ದಾರೆ. ಆದರೆ ಈ ಫೋಟೋವನ್ನು ಗೌತಮಿ ಆಗಲಿ, ಮಂಜು ಆಗಲಿ ಹಂಚಿಕೊಂಡಿಲ್ಲ. ಅವರ ಫ್ಯಾನ್ಸ್ ಮಾತ್ರ ಟ್ಯಾಗ್ ಮಾಡ್ತಾ ಇದಾರೆ.


Click it and Unblock the Notifications











