ಎಲ್ಲರ ಮನೆ ದೋಸೆ ತೂತು, ಕೆಲವರ ಮನೆ ಹಂಚೇ ತೂತು ; ಮದುವೆ ಪ್ರಶ್ನೆಗೆ ಹಳ್ಳಿಕಾರ್ ಒಡೆಯ ಕೆಂಡ..ಕೆಂಡ..

By ಫಿಲ್ಮಿಬೀಟ್ ಡೆಸ್ಕ್

ಈ ವರ್ಷ ಮುಕ್ತಾಯವಾದ ಬಿಗ್ ಬಾಸ್ ಮನೆಯಲ್ಲಿ, ವ್ಯೆಯಕ್ತಿಕ ವಿಚಾರಗಳಿಂದ ಚರ್ಚೆಗೀಡಾದ ವ್ಯಕ್ತಿ ವರ್ತೂರು ಸಂತೋಷ್. ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಮೇಲೆ ಮೊದಲು ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿದ್ದ ವರ್ತೂರು ಸಂತೋಷ್ ಆ ನಂತರ ಸುದ್ದಿಯಾಗಿದ್ದು ಮದುವೆ ವಿಚಾರದಿಂದ.

ಮದುವೆಯಾಗಿದ್ದರು ಮದುವೆಯಾಗಿಲ್ಲವೆಂದು ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೇ ತಡ, ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ದ ಸೋಮನಾಥ್, ಅಳಿಯ ವರ್ತೂರು ಸಂತೋಷ್‌ ಮೇಲೆ ಗಂಭೀರ ಆರೋಪಗಳನ್ನ ಮಾಡಿದ್ದರು. ಆ ಎಲ್ಲ ಆರೋಪಗಳಿಗೆ ಉತ್ತರವನ್ನ ಕೇಳುವ ಪ್ರಯತ್ನವನ್ನ ಇಂದು ಮಾಡಲಾಯಿತು.

Bigg boss fame Varthur Santhosh gets angry on marriage question

ವ್ಯೆಯಕ್ತಿಕ ವಿಚಾರವಾದರೂ ಆರೋಪಗಳಿಗೆ, ಸ್ಪಷ್ಟೀಕರಣವನ್ನಾದರೂ ನೀಡಿಯೆಂಬ ಪ್ರಶ್ನೆಯನ್ನ ವರ್ತೂರ್ ಸಂತೋಷ್ ಅವರಿಗೆ ಕೇಳಲಾಯಿತು. ಆದರೆ.. ವರ್ತೂರ್ ಸಂತೋಷ್ ಇದಕ್ಕೆ ಉತ್ತರವನ್ನ ನೀಡಲಿಲ್ಲ. ಬದಲಿಗೆ ಉರಿದು ಬಿದ್ದರು.

ಮದುವೆ ವಿಚಾರಕ್ಕೆ ಹಳ್ಳಿಕಾರ್ ಒಡೆಯ ಹೇಳಿದ್ದೇನು..?

ವ್ಯೆಯಕ್ತಿಕ ವಿಚಾರಗಳನ್ನ ಸಾರ್ವಜನಿಕವಾಗಿ ಹೇಳುವಂತಹ ಮುಠ್ಠಾಳ ನಾನಲ್ಲವೆಂದಿರುವ ವರ್ತೂರ್ ಸಂತೋಷ್, ಮುಠ್ಠಾಳರು ಮುಠ್ಠಾಳತನದ ಕೆಲಸ ಮಾಡಿದ್ದಾರೆ ಅಂದರೆ ನಾನು ಅವರ ಮಟ್ಟಕ್ಕೆ ಇಳಿಯಲು ಸಾಧ್ಯ ಇಲ್ಲವೆಂದು ಕೆಂಡ ಕಾರಿದರು.

ಪರ್ಸನಲ್ ಅನ್ನುವ ಪದದಲ್ಲಿಯೇ ಉತ್ತರ ಇದೆಯಲ್ಲ ಎಂದ ಹಳ್ಳಿಕಾರ್ ಒಡೆಯ, ವ್ಯೆಯಕ್ತಿಕ ವಿಚಾರಗಳನ್ನೆಲ್ಲ ತಗೊಂಡು ಬಂದು ಪಬ್ಲಿಕ್ ಅಲ್ಲಿ ಹೇಳುವಂಥದ್ದು ಏನಿಲ್ಲ ಎಂದರು. ಎಲ್ಲರ ಮನೆ ದೋಸೆನೂ ತೂತು. ಕೆಲವರ ಮನೆ ಹಂಚೇ ತೂತು ಎಂದು ಕೆಂಡ ಕಾರಿದರು ವರ್ತೂರ್ ಸಂತೋಷ್

Bigg boss fame Varthur Santhosh gets angry on marriage question

ವರ್ತೂರ್ ಸಂತೋಷ್ ಮೇಲೆ ಸೋಮನಾಥ್ ಮಾಡಿದ್ದ ಆರೋಪ ಏನು..?

ಬಿಗ್ ಬಾಸ್' ಮನೆಯಲ್ಲಿ ನನಗೆ ಮದುವೆಯಾಗಿದೆ ಅಂತ ವರ್ತೂರು ಸಂತೋಷ್ ಹೇಳಿಕೊಂಡಿಲ್ಲ. ಐ ಆಮ್ ಸಿಂಗಲ್ ಅಂತಲೇ ಹೇಳಿದ್ದಾರೆ. ಇದನ್ನೆಲ್ಲಾ ನೋಡಿ ನಾವೀಗ ಮಾತನಾಡುತ್ತಿದ್ದೀವಿ ಅಷ್ಟೇ. ಎರಡನೇ ಮದುವೆ ಯಾಕೆ ಆಗಬೇಕು? ಎಂದು ಪ್ರಶ್ನಿಸಿದ್ದ ಸೋಮನಾಥ್ ಹನ್ನೆರಡು ಸಾವಿರ ಜನರ ಮುಂದೆ ನನ್ನ ಮಗಳ ಕೈಯನ್ನ ವರ್ತೂರ್ ಸಂತೋಷ್ ಹಿಡಿದಿದ್ದರು.

ಆದರೆ ಈಗ ಮದುವೆಯಾಗಿಲ್ಲವೆನ್ನುತ್ತಿದ್ದಾರೆ ಎಂದು ಗುಡುಗಿದ್ದರು. ಇನ್ನೂ ಅವನಿಗೆ ಡ್ರಗ್ಸ್ ಚಟ ಇದೆ. ಡ್ರಿಂಕ್ಸ್ ಮಾಡ್ತಾನೆ. 2-3 ತಿಂಗಳು ಸ್ಪಂದನಾದಲ್ಲಿ ಚಿಕಿತ್ಸೆ ಕೊಡಿಸಿ ಕಳುಹಿಸಿದ್ದೆ ಎಂದಿದ್ದ ಸೋಮನಾಥ್, ಮಗಳಿಗೆ ಹೆಣ್ಣು ಮಗಳು ಹುಟ್ಟಿದಾಗ ಕೂಡ ನೋಡಲು ಬರಲಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದರು. ಬಾಯಿ ಬಿಟ್ರೆ ಬರೀ ಸುಳ್ಳು ಹೇಳುವ ಅಭ್ಯಾಸ ರೂಢಿಸಿಕೊಂಡಿದ್ದಾನೆ ಎಂದಿದ್ದರು.

Bigg boss fame Varthur Santhosh gets angry on marriage question

ಬಿಗ್ ಬಾಸ್ ಮನೆಯಲ್ಲಿ ಮದುವೆ ಬಗ್ಗೆ ಆ ನಂತರ ಮಾತನಾಡಿದ್ದ ವರ್ತೂರ್ ಸಂತೋಷ್..!

ಆರಂಭದಲ್ಲಿ ಮದುವೆಯ ವಿಚಾರವನ್ನ ಗುಟ್ಟಾಗಿ ಇಟ್ಟಿದ್ದ ವರ್ತೂರ್ ಸಂತೋಷ್, ಆ ನಂತರ ಮದುವೆಯ ಬಗ್ಗೆ ಮೌನ ಮುರಿದಿದ್ದರು. ನನ್ನ ಅಮ್ಮನನ್ನ ಕಡೆಗಣಿಸಲು ಆರಂಭಿಸಿದರು. ನಾನು ಸಂಪಾದನೆ ಮಾಡಿರುವ ಜನ, ಅವರೆಲ್ಲರನ್ನು ತೊರೆದು ಅವರ ಹಿಂದೆ ಹೋಗಬೇಕು ಎಂದರೆ ಸಾಧ್ಯವಿಲ್ಲ. ಹೋಗ್ತೀನಿ ಅವರ ಮನೆ ಹತ್ರ. ನನ್ನ ಮಾತಿನ ಪ್ರಕಾರ ಬಂದರೆ, ನೀನು ರಾಣಿನೇ ಇವತ್ತಿಗುನೂ. ಬಾ ಅಂತ ಕರೀತಿನಿ. ಫಸ್ಟ್‌ ಗೇಟ್‌ನಿಂದ ಆಚೆಗೆ ಹೋಗು ಅಂತಾರೆ ನನ್ನ.

ಅವತ್ತು ಮಾತು ಕೊಟ್ಟು ಬಂದಿದ್ದೀನಿ. ಇವತ್ತು ಆ ಮಾತಿಗೆ ನಿಂತಿದ್ದೀನಿ ಎಂದಿದ್ದರು ವರ್ತೂರ್ ಸಂತೋಷ್. ಇಷ್ಟೇ ಅಲ್ಲ ಒಳಗಡೆ ಏನು ಇದೆ ಎನ್ನುವುದು ನಾನು ಈಗ ಹೇಳ್ತಾ ಇದ್ದೀನಿ. ನನ್ನ ದೊಡ್ಡಪ್ಪಂಗೆ ಮುಂಚೆ ಹೇಳಿದ್ದೆ. ನೀನು ಹೋಗಿ ಇಂತಹವರಿಗೆ ತಾಳಿ ಕಟ್ಟು ಎಂದರೆ ಕಟ್ಟುತ್ತೇನೆ ಎಂದು. ನಾನು ಮಾತು ಕೊಟ್ಟು ಒಪ್ಪಿಕೊಂಡೆ ಎಂದು ವರ್ತೂರ್ ಸಂತೋಷ್ ಹೇಳಿದ್ದರು

More from Filmibeat

English summary
Bigg boss kannada 10 fame Varthur Santhosh gets angry on media for asking about his marital status, labels estranged wife's family as fraud..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X