ನಮ್ಮ ತಾಯಿಗೆ ಅದೊಂದು ಆಸೆಯಿದೆ, 2ನೇ ಮದುವೆ ಇಂಗಿತ ವ್ಯಕ್ತಪಡಿಸಿದ ವರ್ತೂರು ಸಂತೋಷ್

ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಕ್ರೇಜ್ ಕಮ್ಮಿ ಆಗಿಲ್ಲ. ಇವತ್ತಿಗೂ ಅವರ ಬಗ್ಗೆ ಅಭಿಮಾನ ವ್ಯಕ್ತಪಡಿಸುವವರು ಸಾಕಷ್ಟು ಜನ ಇದ್ದಾರೆ. ಹಳ್ಳಿಕಾರ್ ಒಡೆಯ ಎಂದೇ ಜನಪ್ರಿಯರಾಗಿರುವ ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸೆಲೆಬ್ರೆಟಿಗಳನ್ನು ಕೂಡ ರೇಸ್‌ಗೆ ಕರೆಸುವ ಲೆಕ್ಕಾಚಾರದಲ್ಲಿದ್ದಾರೆ.'

ತಮ್ಮ ನೇರಾ ನೇರ ಮಾತುಗಳಿಂದ ಗಮನ ಸೆಳೆದವರು ವರ್ತೂರು ಸಂತೋಷ್. ಶ್ರೀಮಂತ ಮನೆತನದ ಅವರು ಮೈಮೇಲೆ ಸಾಕಷ್ಟು ಆಭರಣ ಧರಿಸಿ ಓಡಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಾರಿಕೆಯಿಂದ ಸದ್ದು ಮಾಡಿದ್ದ ಸಂತೋಷ್ ಬಳಿಕ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಪಡೆದಿದ್ದರು. ಸೀಸನ್ 11ರ ಸ್ಪರ್ಧಿಯಾಗಿ ಫಿನಾಲೆವರೆಗೂ ಹೋಗಿದ್ದರು. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು.

Bigg Boss Fame Varthur Santhosh Hints about Second Marriage

ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಜೈಲಿಗೆ ಹೋಗಿ ಬರುವಂತಾಯಿತು. ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆದರು. ನಡುವೆ ಶೋ ಬಿಟ್ಟು ಬರುವುದಾಗಿ ಹೇಳಿದಾಗಲೂ ಜನರ ಪ್ರೀತಿ ಬಗ್ಗೆ ಹೇಳಿ ಸುದೀಪ್ ಮನೆಯಲ್ಲೇ ಇರುವಂತೆ ಮನ ಒಲಿಸಿದ್ದರು. ಇನ್ನು ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ತಮ್ಮ ಪತ್ನಿಯ ವಿಚಾರ ಹೇಳಿಕೊಂಡಿದ್ದರು.

ಅತ್ತ ಬಿಗ್‌ಬಾಸ್ ಮನೆಯೊಳಗೆ ವರ್ತೂರು ಸಂತೋಷ್ ಇದ್ದರೆ ಇತ್ತ ಅವರ ಮದುವೆ ವಿಚಾರ ಭಾರೀ ಚರ್ಚೆ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೊಗಳು ವೈರಲ್ ಆಗಿತ್ತು. ಸಂತೋಷ್ ಪತ್ನಿ ಪೀಡಕ ಎನ್ನುವ ಆರೋಪ ಕೇಳಿಬಂದಿತ್ತು. ಅದಕ್ಕೆ ವರ್ತೂರು ಸಂತೋಷ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಬಿಗ್‌ಬಾಸ್ ಮನೆಯೊಳಗೆ ಮಾತನಾಡುತ್ತಾ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಹೇಳಿಕೊಂಡಿದ್ದರು.

ಅಂದಹಾಗೆ ವರ್ತೂರು ಸಂತೋಷ್ ಅವರಿಗೆ 2020ರಲ್ಲಿ ಜಯಶ್ರೀ ಎಂಬುವವರ ಜೊತೆ ಮದುವೆ ಆಗಿತ್ತು. ಆದರೆ ಕೌಟುಂಬಿಕ ಕಲಹದಿಂದ ದೂರಾಗಿದ್ದಾರೆ. ಸಂತೋಷ್ ಬಗ್ಗೆ ಹೆಣ್ಣು ಕೊಟ್ಟ ಮಾವ ಸೋಮನಾಥ್‌ ಸಾಕಷ್ಟು ಆರೋಪ ಮಾಡಿದ್ದರು. ಆದರೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಸಂತೋಷ್ ಮಾತನಾಡಲಿಲ್ಲ. ಅದು ನಮ್ಮ ಪರ್ಸನಲ್ ಎಂದಿದ್ದರು. ಸದ್ಯ ಚಿತ್ತಾರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಸಂತೋಷ್ 2ನೇ ಮದುವೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಮತ್ತೆ ಮದುವೆ ಆಗುವ ಋಣ ಇದ್ಯಾ ಎನ್ನುವ ಪ್ರಶ್ನೆಗೆ "100% ಇದೆ. ಮದುವೆ ಊಟ ಹಾಕಿಸೋಣ. ಮೊದಲು ಹಳ್ಳಿಕಾರ್ ರೇಸ್ ಇದೆ. ಅದೆಲ್ಲಾ ಮುಗಿಯಬೇಕು. ಅದು ಮುಗಿದರೆ ನಾನು ನಿರಾಳ. ನಮ್ಮ ತಾಯಿಗೆ ಮೊಮ್ಮಗ ಬೇಕು ಎನ್ನುವ ಆಸೆ. ಮನೆ ಹೋದರೆ ಒಮ್ಮೆಯಾದರೂ ಮೊಮ್ಮಗನ ಪ್ರಸ್ತಾಪ ಮಾಡುತ್ತಾರೆ. ಭಗವಂತ ಹೇಳಿದಂತೆ ನಡೆಯುತ್ತೇನೆ. ಆತನ ಆಜ್ಞೆ ಇಲ್ಲದೇ ಏನು ನಡೆಯಲ್ಲ. ಮದುವೆಗೂ ಭಗವಂತ ಆಜ್ಞೆ ಆಗಿದೆ" ಎಂದು ಪರೋಕ್ಷವಾಗಿ 2ನೇ ಮದುವೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಸಂತೋಷ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ದೊಡ್ಡಪ್ಪಂದಿರು ಸಾಕಿ ಬೆಳೆಸಿದ್ದರು. ಮದುವೆ ವಿಚಾರದಲ್ಲಿ ನೀವು ತೋರಿಸಿದ ಹುಡುಗಿಯನ್ನು ಮದುವೆ ಆಗುತ್ತೇನೆ ಎಂದು ಮಾತುಕೊಟ್ಟಿದ್ದೆ. ದೊಡ್ಡಪ್ಪನಿಗೆ ಕೊಟ್ಟ ಮಾತಿನಂತೆ ಆ ಹುಡುಗಿಯನ್ನು ಮದುವೆ ಆಗಿದ್ದೆ. ಆಕೆ ನನ್ನ ತಾಯಿಯನ್ನು ಮೂಲೆಗುಂಪು ಮಾಡಲು ನೋಡಿದಳು, ಕಷ್ಟಪಟ್ಟು ಗಳಿಸಿದ ಜನರನ್ನು ಬಿಟ್ಟು ಬರಲು ಹೇಳಿದಳು, ಅದು ಮಾತ್ರ ನನ್ನಿಂದ ಸಾಧ್ಯ ಇಲ್ಲ" ಎಂದಿದ್ದರು.

More from Filmibeat

English summary
Hallikar odeya Varthur Santhosh opens up on his second marriage
Read more about: bigg boss kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X