ಹೀಗೆ ಆಗುತ್ತೆ ಎಂದು ಗೊತ್ತಿದ್ದರೆ ನಾನು ಮದುವೆಯಾಗುತ್ತಿರಲಿಲ್ಲ ; ಕಣ್ಣೀರಾದ ಬಿಗ್ ಬಾಸ್ ಸ್ಫರ್ಧಿ..!

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು ಸಹಜ. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ.

ಇದಕ್ಕೆ ವೀಣಾ ನಾಯರ್ ಬದುಕು ಮತ್ತೊಂದು ಉದಾಹರಣೆ. ಹೌದು, ವೀಣಾ ನಾಯರ್.. ಮಲಯಾಳಂ ಬೆಳ್ಳಿತೆರೆ ಮತ್ತು ಕಿರುತೆರೆಯ ಚಿರಪರಿಚಿತ ಮುಖ. 'ವೆಲ್ಲಿಮೊಂಗ' ಚಿತ್ರದಲ್ಲಿನ ಇವರ ಅಭಿನಯವನ್ನು ಪ್ರೇಕ್ಷಕರು ಇನ್ನು ಮರೆತಿರಲಿಕ್ಕಿಲ್ಲ.

Bigg Boss Fame Veena Nair s Post-Divorce Revelation I Shouldn t Have Married

ಇನ್ನು ವೀಣಾ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದವರು. 2020ರಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ನಡೆದ ಬಿಗ್ ಬಾಸ್‌ನಲ್ಲಿ ವೀಣಾ ನಾಯರ್ ಭಾಗವಹಿಸಿದ್ದರು. 63 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದರು.

ಆದರೆ, ದುರ್ದೈವ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೆಲ ದಿನಗಳ ನಂತರ ವೀಣಾ ನಾಯರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವೀಣಾ ತಮ್ಮ ಪತಿ ಆರ್‌ಜೆ ಅಮನ್ ಅವರಿಂದ ದೂರವಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. 2023ರಲ್ಲಿ ಈ ಸುದ್ದಿ ನಿಜಾ ಎಂದು ಒಪ್ಪಿಕೊಂಡ ಆರ್‌ಜೆ ಅಮನ್ ನಾನು ಮತ್ತು ವೀಣಾ ದೂರವಾಗಿದ್ದೇವೆ ಎಂದು ಅಧಿಕೃತವಾಗಿ ಹೇಳಿದ್ದರು.

ಆದರೆ ಮಗನ ಭವಿಷ್ಯವನ್ನು ಗಮನದಲ್ಲಿಟ್ಕೊಂಡು ನಾವು ಇಬ್ಬರು ವಿಚ್ಛೇದನ ಪಡೆಯದಿರಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದರು. ತಂದೆಯಾಗಿ ನನ್ನ ಜವಾಬ್ಧಾರಿಗಳನ್ನು ನಾನು ಪೂರೈಸುವೆ ಇನ್ಮೇಲೆ ವೀಣಾ ಮತ್ತು ನಾನು ಪ್ರತೈಕವಾಗಿ ವಾಸ ಮಾಡಲಿದ್ದೇವೆ ಎಂದು ಹೇಳಿದ್ದರು. ಈ ವಿಚಾರದ ಕುರಿತು ವೀಣಾ ನಾಯರ್ ಈಗ ಮತ್ತೊಮ್ಮೆ ಮಾತನಾಡಿದ್ದಾರೆ.

ಹೌದು..''ಮೈಲ್ ಸ್ಟೋನ್ ಮೇಕರ್ಸ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವೀಣಾ ನಾಯರ್, ನನ್ನ ಬದುಕು ಹೀಗಾಗುತ್ತೆ ಎಂದು ನನಗೆ ಮೊದಲೇ ಗೊತ್ತಿದ್ದರೆ ನಾನು ಮದುವೆಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Bigg Boss Fame Veena Nair s Post-Divorce Revelation I Shouldn t Have Married

ನಾನು ದೇವರ ಬಳಿ ಏನೂ ಕೇಳದಿದ್ದರೂ ಆ ಭಗವಂತ ನನಗೆ ಎಲ್ಲವನ್ನೂ ನೀಡಿದ, ಇವತ್ತು ನನ್ನ ಬಳಿ ಮನೆ ಇದೆ, ಕಾರು ಇದೆ, ಕೆಲಸ ಮಾಡುವ ಶಕ್ತಿ ಇದೆ, ಆ ದೇವರ ಆಶೀರ್ವಾದದಿಂದ ನನಗೆ ಯಾವ ಕಾಯಿಲೆ ಕೂಡ ಇಲ್ಲ ಎಂದಿರುವ ವೀಣಾ ನಮ್ಮ ಸುತ್ತ ಮೂಲಭೂತ ಸೌಕರ್ಯಗಳಿಲ್ಲದ ಅನೇಕರು ಇದ್ದಾರೆ ಅವರನ್ನೆಲ್ಲ ನೋಡಿದಾಗ ನನ್ನ ಕಷ್ಟ ಏನೂ ಅಲ್ಲ ಎಂದು ನನಗೆ ಅನ್ಸುತ್ತೆ ಆದರೂ ಕೂಡ ನನ್ನ ಜೀವನದಲ್ಲಿ ಏನಾದರೂ ಬದಲಾಯಿಸಲು ಸಾಧ್ಯವಾದರೆ ನಾನು ಮದುವೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಎಲ್ಲೋ ಒಂದು ಕಡೆ ನನ್ನ ತಂದೆ ತಾಯಿಯ ಅಕಾಲಿಕ ನಿಧನದಿಂದ ನನ್ನ ಬದುಕು ಹಳಿ ತಪ್ಪಿತು ಎನ್ನುವ ಭಾವನೆ ನನ್ನದು ಎಂದಿರುವ ವೀಣಾ, ನನ್ನ ತಾಯಿ ನಿಧನರಾದ ಕೆಲವೇ ದಿನಗಳಲ್ಲಿ ನಾನು ತಂದೆಯನ್ನು ಕೂಡ ಕಳೆದುಕೊಂಡೆ, ಅವರು ನನ್ನ ಜೊತೆ ಇದ್ದಿದ್ದರೆ ನನ್ನ ಬದುಕು ಹೀಗಾಗುತ್ತಿರಲಿಲ್ಲ ಅವರು ಎಲ್ಲವನ್ನೂ ಸರಿ ಮಾಡುತ್ತಿದ್ದರು ಎಂದು ಭಾವುಕರಾಗಿದ್ದಾರೆ. ನನ್ನ ಸಹೋದರ ನಿನ್ನ ಜೀವನ ನಿನ್ನ ಇಷ್ಟ ಎಂದು ಹೇಳಿದ ನನ್ನ ತಂದೆ ತಾಯಿ ಇದ್ದಿದ್ದರೆ ಅವರು ಖಂಡಿತ ಹೀಗೆ ಹೇಳುತ್ತಿರಲಿಲ್ಲ ಎಂದು ಕೂಡ ವೀಣಾ ನಾಯರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ನಡೆದು ಹೋದ ವಿಚಾರಗಳ ಕುರಿತು ಈಗ ಮಾತನಾಡಿ ಈಗ ಪ್ರಯೋಜನ ಇಲ್ಲ ಎಂದಿರುವ ವೀಣಾ ನಾಯರ್, ಅವರ { ಗಂಡ } ಜೊತೆ ನನ್ನ ಜೀವನ ನಿಜಕ್ಕೂ ಚೆನ್ನಾಗಿತ್ತು. ನಾವು ಇಬ್ಬರು ಸಂತೋಷದಿಂದ ಇದ್ದೇವು ಎಂದು ಹೇಳಿದ್ದಾರೆ. ಕೆಲ ಅಡೆತಡೆಗಳು.. ಸಮಸ್ಯೆಗಳು ಬಂದಾಗ ನಾವು ಇಬ್ಬರು ಪರಿಸ್ಥಿತಿಯನ್ನು ಸತಿಯಾಗಿ ನಿರ್ವಹಿಸುವುದಲ್ಲಿ ವಿಫಲವಾದೆವು, ತಪ್ಪು ಇಬ್ಬರಿಂದಲೂ ನಡೆದಿದೆ ಹೀಗಾಗಿಯೇ ಸಂಬಂಧ ಕಳಚಿ ಬಿತ್ತು ಎಂದು ಹೇಳಿದ್ದಾರೆ. ನನ್ನ ಮಗನ ತಂದೆಯಾಗಿ ಅವರನ್ನು ನಾನು ಪ್ರೀತಿಸುತ್ತೇನೆ ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಕೂಡ ಹೇಳಿದ್ದಾರೆ.

More from Filmibeat

English summary
Discover Veena Nair's candid thoughts on life post-divorce from RJ Aman. The Bigg Boss star shares why she now believes marriage was a mistake.
Read more about: bigg boss divorce ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X