ಬಿಗ್ ಬಾಸ್ ವಿನಯ್ ಗೌಡರಿಂದ ಭಾವುಕ ಪೋಸ್ಟ್.. ಎಮೋಷನಲ್ ಆಗಿದ್ದು ಯಾಕೆ?

By ಅನಿತಾ ಬನಾರಿ

ಕನ್ನಡದಲ್ಲಿ ಎಲ್ಲಾ ರಿಯಾಲಿಟಿ ಶೋಗಳಿಗಿಂತಲೂ ಬಿಗ್ ಬಾಸ್ ವಿಭಿನ್ನ. ಎಷ್ಟು ಸೀಸನ್‌ಗಳು ಮುಗಿದರೂ ಅದರ ಸ್ಪರ್ಧಿಗಳು, ವಿಜಯಶಾಲಿಗಳು, ತಮ್ಮ ನೆಚ್ಚಿನ ನಟ, ನಟಿ ಇತ್ಯಾದಿಯಾಗಿ ಅಭಿಮಾನಿಗಳು ನೆನಪಿನಲ್ಲಿಟ್ಟಿರುತ್ತಾರೆ. ಇನ್‌ಸ್ಟಾಗ್ರಾಂ, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ.

ಹಾಗೆಯೇ ಇತ್ತೀಚಿಗಷ್ಟೇ ಕನ್ನಡದಲ್ಲಿ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಮುಕ್ತಾಯಗೊಂಡಿದೆ. ಹಾಗಿದ್ದರೂ ಪ್ರೇಕ್ಷಕರು ಸೀಸನ್ 10ರ ಗುಂಗಿನಿಂದ ಹೊರಬಂದಿಲ್ಲ. ವಿನಯ್ ಗೌಡ, ಸಂಗೀತಾ ಶೃಂಗೇರಿ ಸೇರಿದಂತೆ ಹಲವು ಸ್ಪರ್ಧಿಗಳು ಈಗಲೂ ಅಭಿಮಾನಿಗಳಿಗೆ ಅಚ್ಚುಮೆಚ್ಚು.

Bigg Boss fame Vinay visited his school after 28 years become emotional

ಈಗ ಇಲ್ಲಿ ಹೇಳ ಹೊರಟಿರುವುದು ಬಿಗ್ ಬಾಸ್ ಮನೆಯಲ್ಲಿ ಆನೆ ಎಂದೇ ಖ್ಯಾತಿಯಾಗಿದ್ದ ವಿನಯ್ ಗೌಡ ವಿಚಾರ. ಬಿಗ್ಬಾಸ್ ಮನೆಯಲ್ಲಿದ್ದಾಗ ವಿನಯ್ ಗೌಡ ಹೇಗಿದ್ದರು ಎಂಬುದು ಎಲ್ಲರಿಗೂ ತಿಳಿದೇ ಇದೆ. ಒಂಟಿ ಸಲಗದಂತೆ ಯಾರನ್ನೂ ಲೆಕ್ಕಿಸದೆ ಹೇಗೆ ಆಡುತ್ತಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.

ಇಂತಹ ಸ್ಟ್ರಾಂಗ್ ಮ್ಯಾನ್ ಎಮೋಷನಲ್ ಆಗಿದ್ದು ತೀರಾ ಕಡಿಮೆ ಬಾರಿ. ಹಾಗಾಗಿ ಅಷ್ಟೊಂದು ಭಾವನಾತ್ಮಕ ಸನ್ನಿವೇಶಗಳು ನೋಡುವುದಕ್ಕೆ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ವಿನಯ್ ಗೌಡ ಅವರು ತುಂಬು ಭಾವುಕತೆಯಿಂದ ಸಖತ್ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು, ನಟ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿಯಾಗಿರುವ ವಿನಯ್ ಗೌಡ ಇತ್ತೀಚೆಗೆ ತಾವು ವಿದ್ಯಾಭ್ಯಾಸ ಪಡೆದ ಅಲ್ಮಾ ಮೇಟರ್ ಸೇಂಟ್ ಆನ್ಸ್ ಹೈಸ್ಕೂಲ್‌ನ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ್ದರು. ಬರೋಬ್ಬರಿ 28 ವರ್ಷಗಳ ನಂತರ ತಮ್ಮ ಹೈಸ್ಕೂಲ್‌ಗೆ ಭೇಟಿ ನೀಡಿದ ನಟ ಭಾವುಕರಾಗಿದ್ದಾರೆ.

ವರುಷಗಳ ನಂತರ ಸೆಲೆಬ್ರಿಟಿಯಾಗಿ ತಮ್ಮ ಸ್ಕೂಲ್‌ಗೆ ಭೇಟಿ ನೀಡಿದ ವಿನಯ್ ಅವರಿಗೆ ಶಾಲೆಯ ವತಿಯಿಂದ ಹೃದಯ ಸ್ಪರ್ಶಿ ಸ್ವಾಗತವನ್ನು ಕೋರಲಾಗಿತ್ತು. ಇವೆಲ್ಲವುಗಳನ್ನು ನೋಡಿ ಫೀಲ್ ಮಾಡಿಕೊಂಡ ನಟ ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ವಿನಯ್ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ. ''28 ವರ್ಷಗಳ ನಂತರ ಸೇಂಟ್ ಆನ್ಸ್ ಹೈಸ್ಕೂಲ್‌ಗೆ ಮುಖ್ಯ ಅತಿಥಿಯಾಗಿ ಹಿಂತಿರುಗಿದ್ದು ಭಾವನಾತ್ಮಕ ಮತ್ತು ಮರೆಯಲಾಗದ ಅನುಭವ. ನಾನು ವೇದಿಕೆಗೆ ಕಾಲಿಡುತ್ತಿದ್ದಂತೆ ನನ್ನ ಶಾಲಾ ದಿನಗಳ ನೆನಪುಗಳು ಮನ ತುಂಬಿದ್ದವು. ಕಾರ್ಯಕ್ರಮವು ಹೃದಯಸ್ಪರ್ಶಿ ಕ್ಷಣಗಳಿಂದ ತುಂಬಿತ್ತು. ಈ ಭೇಟಿಯು ನನ್ನ ಲೈಫ್‌ನ ದಿ ಬೆಸ್ಟ್ ಕ್ಷಣ. ಇದು ಕೃತಜ್ಞತೆ ಮತ್ತು ಭಾವನೆಗಳಿಂದ ತುಂಬಿದ ನೆನಪಿನ ಹಾದಿಯಲ್ಲಿನ ಪಯಣವಾಗಿತ್ತು'' ಎಂದು ಬರೆದು ಫೋಟೋಗಳನ್ನು ವಿನಯ್ ಗೌಡ ಹಂಚಿಕೊಂಡಿದ್ದಾರೆ.

ತಮ್ಮ ನೆಚ್ಚಿನ ನಟನ ಭಾವನಾತ್ಮಕ ಪೋಸ್ಟ್‌ಗೆ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ ನಂತರ ಇದೀಗ ಗರ್ಲ್ಸ್ ವರ್ಸಸ್ ಬಾಯ್ಸ್ ಕೊಳ್ಳುತ್ತಿರುವ ವಿನಯ್ ಅಲ್ಲೂ ತಮ್ಮ ಮನರಂಜನೆಯ ಮೂಲಕ ಮೋಡಿ ಮಾಡುತ್ತಲೇ ಇದ್ದಾರೆ.

More from Filmibeat

English summary
Bigg Boss fame Vinay visited his school after 28 years become emotional;
Read more about: bigg boss actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X