ಹಿಂದೂ ಭಾವನೆಗಳಗೆ ಧಕ್ಕೆ: ಮಾಜಿ ಬಿಗ್‌ಬಾಸ್ ಸ್ಪರ್ಧಿ ಬಂಧನ

ತೆಲುಗು ಬಿಗ್‌ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಯೂಟ್ಯೂಬರ್, ನಟಿ ಸರಯು ರಾಯ್ ಅನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ. ಸರಯು ರಾಯ್ ಮಾತ್ರವೇ ಅಲ್ಲದೆ ಆಕೆಯ ಕೆಲವು ಬೆಂಬಲಿಗರನ್ನೂ ಪೊಲೀಸರು ಬಂಧಿಸಿದ್ದಾರೆ.

ಸಿರಿಸಿಲ್ಲ ಜಿಲ್ಲೆಯ ವಿಶ್ವ ಹಿಂದೂ ಪರಿಷದ್ ಮುಖಂಡ ಚಪುರಿ ಅಶೋಕ್ ಸಿರಿಸಿಲ್ಲ ಕೊಟ್ಟಿರುವ ದೂರಿನ ಆಧಾರದ ಮೇಲೆ ಸರಯು ಅನ್ನು ಪೊಲೀಸರು ಬಂಧಿಸಿದ್ದಾರೆ.

ಸರಯು ಮಾಡಿದ ವಿಡಿಯೋ ಒಂದರಲ್ಲಿ ಹಿಂದು ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಚಪುರಿ ಅಶೋಕ್ ಸಿರಿಸಿಲ್ಲದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸರಯು ಅನ್ನು ಬಂಧಿಸಿದ್ದಾರೆ.

Bigg Boss Former Contestant Sarayu Roy Arrested

ಸರಯು ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ಒಂದನ್ನು ಹಾಕಿದ್ದರು. ಹೊಸ ರೆಸ್ಟೊರೆಂಟ್ ಒಂದರ ಪ್ರಚಾರಕ್ಕಾಗಿ ಮಾಡಲಾಗಿದ್ದ ವಿಡಿಯೋ ಅದಾಗಿದ್ದು, ವಿಡಿಯೋದಲ್ಲಿ ಸರಯು ಹಾಗೂ ಆಕೆಯ ಬೆಂಬಲಿಗರು (ಕಿರು ಚಿತ್ರದಲ್ಲಿ) ಕೆಲವರು ಹಣೆಗೆ 'ಗಣಪತಿ ಬಪ್ಪ ಮೋರೆಯಾ' ಎಂದು ಹೆಸರಿರುವ ಕೇಸರಿ ಪಟ್ಟಿ ತೊಟ್ಟು ಕುಡಿದಂತೆ ನಟಿಸುತ್ತಿದ್ದರು. ಕೇಸರಿ ಪಟ್ಟಿ ಕಟ್ಟಿಕೊಂಡು ದೌರ್ಜನ್ಯ ಮಾಡುತ್ತಿರುವ ದೃಶ್ಯಗಳು ಆ ಕಿರು ಚಿತ್ರದಲ್ಲಿದ್ದವು. ಇದು ಅಶೋಕ್‌ ಸಿರಿಸಿಲ್ಲಗೆ ಅಸಮಾಧಾನ ತಂದಿದೆ.

ಸರಯು ರಾಯ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯ. '7 ಆರ್ಟ್ಸ್' ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಸರಯು, ಚಾನೆಲ್‌ನಲ್ಲಿ ವಯಸ್ಕರ ವಿಡಿಯೋಗಳನ್ನು ಸಹ ಪೋಸ್ಟ್ ಮಾಡುತ್ತಾರೆ. ಲೈಂಗಿಕತೆ ಕುರಿತ ಮಾಹಿತಿಯನ್ನು ಹಾಸ್ಯದ ಲೇಪನದೊಂದಿಗೆ ಸರಯು ಹಂಚಿಕೊಳ್ಳುತ್ತಾರೆ. ಹಾಗಾಗಿ ಸರಯುಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ.

ತಮ್ಮ ಬಂಧನದ ಬಗ್ಗೆ ಮಾತನಾಡಿರುವ ಸರಯು, ''ನನ್ನನ್ನು ಪೊಲೀಸರು ಬಂಧಿಸಿರಲಿಲ್ಲ. ನಿಜವಾದ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲಷ್ಟೆ ನಾನು ಬಂಜಾರಾ ಹಿಲ್ಸ್ ಪೊಲಿಸ್ ಠಾಣೆಗೆ ಬಂದಿದ್ದೆ. ನನ್ನ ವಿರುದ್ಧ ದೂರು ನೀಡಿದವರನ್ನು ಸಹ ನಾನು ಭೇಟಿಯಾಗಿಲ್ಲ'' ಎಂದಿದ್ದಾರೆ.

ಆದರೆ ಸರಯು ಅವರನ್ನು ಮನೆಯಿಂದ ಕೆಲವು ಪೊಲಿಸರು, ಮಹಿಳಾ ಪೊಲೀಸರೊಟ್ಟಿಗೆ ಕರೆದುಕೊಂಡು ಹೋಗುತ್ತಿರುವ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

More from Filmibeat

English summary
Bigg Boss former contestant Sarayu Roy arrested by Banjara Hills police. complaint filed against Sarayu in Sircilla district for hurting Hindu sentiment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X