ಬಿಗ್‌ಬಾಸ್ ಸ್ಪರ್ಧಿಗಳ ಮೇಲೆ ಮೂತ್ರ ಎರಚಿದ್ದ 'ಸ್ವಯಂಘೋಷಿತ ದೇವಮಾನವ' ಸ್ವಾಮಿ ಓಂ ನಿಧನ

ವಿವಾದಗಳಿಂದ, ಉದ್ರೇಕಕಾರಿ ಹೇಳಿಕೆಗಳಿಂದ, ಮಹಿಳಾ ಪೀಡನೆಯಿಂದ ಖ್ಯಾತಿ (?!) ಗಳಿಸಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸ್ವಾಮಿ ಓಂ ಇಂದು (ಫೆಬ್ರವರಿ 03) ನಿಧನವಾಗಿದ್ದಾರೆ.

ತನ್ನನ್ನು ತಾನು ದೇವರ ಅವತಾರ ಎಂದು ಕರೆದುಕೊಳ್ಳುತ್ತಿದ್ದ ಸ್ವಾಮಿ ಓಂ ಗಾಜಿಯಾಬಾದ್‌ನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ತಿಂಗಳ ಹಿಂದೆ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು, ಅದಾದ ಬಳಿಕ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂತು. ಕೊನೆಗೆ ಇಂದು ಸ್ವಾಮಿ ಓಂ ನಿಧನಹೊಂದಿದ್ದಾರೆ.

ಹಿಂದಿ ಬಿಗ್‌ಬಾಸ್ 10 ರಲ್ಲಿ ಭಾಗವಹಿಸಿದ್ದ ಸ್ವಾಮಿ ಓಂ ಬಿಗ್‌ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೆ ದ್ವೇಷ ಬೆಳೆಸಿಕೊಂಡಿದ್ದರು. ತಮ್ಮನ್ನು ಕೂಡಿ ಹಾಕಿದರು ಎಂಬ ಕಾರಣಕ್ಕೆ ತಮ್ಮ ಮೂತ್ರವನ್ನು ಬಾನಿ ಜೆ ಹಾಗೂ ಇನ್ನೂ ಕೆಲವು ಸ್ಪರ್ಧಿಗಳ ಮೇಲೆ ಚೆಲ್ಲಿದ್ದರು. ಘಟನೆ ನಂತರ ಅವರನ್ನು ಬಿಗ್‌ಬಾಸ್ ನಿಂದ ಹೊರಗೆ ಹಾಕಲಾಯಿತು.

Bigg Boss Former Contestant Swami Om Passed Away

ಬಿಗ್‌ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಸಲ್ಮಾನ್ ಖಾನ್ ವಿರುದ್ಧ ಹಾಗೂ ಬಿಗ್‌ಬಾಸ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದ ಸ್ವಾಮಿ ಓಂ, ತನ್ನ ಅನುಯಾಯಿಗಳೊಟ್ಟಿಗೆ ಬಂದು ಬಿಗ್‌ಬಾಸ್ ಮನೆಯನ್ನು ಒಡೆದುಹಾಕುವುದಾಗಿಯೂ ಬೆದರಿಕೆ ಹಾಕಿದ್ದರು.

ಬಿಗ್‌ಬಾಸ್ ಮನೆಗೆ ಹೋಗುವುದಕ್ಕೆ ಮುನ್ನಾ, ಟಿವಿ ಮಾಧ್ಯಮ ಚರ್ಚೆಯೊಂದರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು ಸ್ವಾಮಿ ಓಂ. ಆ ಬಗ್ಗೆ ದೂರು ಸಹ ದಾಖಲಾಗಿತ್ತು.

ಸ್ವಾಮಿ ಓಂ ನಿಧನಕ್ಕೆ ಬಿಗ್‌ಬಾಸ್ 10 ನ ಕೆಲವು ಸ್ಪರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bigg Boss former contestant Swami Om passed away in Gaziabad on February 03. He participated in Bigg Boss 10 season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X