BBK9: ನೋಡುಗರಿಗೆ ಶಾಕ್ ಕೊಟ್ಟ ಬಿಗ್ ಬಾಸ್ : ಗುರೂಜಿ ಎಲಿಮಿನೇಷನ್..!
ಶನಿವಾರ ಬಂತು ಅಂದ್ರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದು ಯಾರು ಎಂಬ ಪ್ರಶ್ನೆ ಎದುರಾಗುತ್ತೆ. ಬಿಗ್ ಬಾಸ್ ಎಪಿಸೋಡ್ ಬಿಡದೆ ನೋಡುಗರಿಗೆ ಈ ವಾರ ಇಂಥವರು ಔಟ್ ಆಗಲಿದ್ದಾರೆ ಎಂಬ ಅಂದಾಜು ಸಿಕ್ಕಿಬಿಡುತ್ತೆ. ಒಮ್ಮೊಮ್ಮೆ ಅದೇ ಸತ್ಯವಾಗಿ ಬಿಡಬಹುದು, ಇನ್ನೊಮ್ಮೆ ಅದಕ್ಕೆ ಉಲ್ಟಾ ಕೂಡ ಹೊಡೆಯಬಹುದು. ಆದ್ರೆ ಈ ವಾರ ಬಿಗ್ ಬಾಸ್ ಮಾಡಿದ ತುಂಟಾಟ ನೋಡುಗರಿಗೇನೆ ಶಾಕ್ ನೀಡಿತ್ತು.
ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಟಫ್ ಕಾಂಪಿಟೇಷನ್ ಶುರುವಾಗಿದೆ. ನೋಡುಗರಿಗೂ ಅಂದಾಜಿಗೂ ಸಿಗುತ್ತಿಲ್ಲ, ಬಿಗ್ ಬಾಸ್ ಗೂ ಅಂದಾಜಿಗೆ ಸಿಗುತ್ತಿಲ್ಲ. ಒಂದು ಲೆಕ್ಕದಲ್ಲಿ ಬಿಗ್ ಬಾಸ್ ಮನೆಯಿಂದ ಒಬ್ಬ ಕ್ಯಾಂಡಿಡೇಟ್ ಹೊರಗೆ ಬರುವ ಅರ್ಹತೆಯನ್ನು ಹೊಂದಿದ್ದಾರೆ. ಅವರು ಔಟ್ ಆಗಿ ಬಿಟ್ಟರೆ ಇನ್ನುಳಿದ ಕಂಟೆಸ್ಟೆಂಟ್ ಗಳಲ್ಲಿ ಲೆಕ್ಕ ಹಾಕುವುದು ಬಹಳ ಕಷ್ಟದ ಕೆಲಸವಾಗಿ ಬಿಟ್ಟಿದೆ.

ಆರ್ಯವರ್ಧನ್ ಎಲಿಮಿನೇಟ್ ಆಗಿದ್ದೇಗೆ..?
ಈ ವಾರ ಯಾರು ಮನೆಯಿಂದ ಹೊರ ಬರಬಹುದು ಎಂಬ ಆಲೋಚನೆ ಸಾಕಷ್ಟು ಜನರಲ್ಲಿ ಇತ್ತು. ಆದ್ರೆ ಅದಕ್ಕೆ ಅಂದಾಜಿನ ಉತ್ತರ ಸಿಕ್ಕಿರಲಿಲ್ಲ. ಅದಕ್ಕೆ ವೀಕೆಂಡ್ ಕಾರ್ಯಕ್ರಮ ನೋಡುವುದಕ್ಕೆ ಫಿಕ್ಸ್ ಆಗಿದ್ರು. ಶನಿವಾರವೇ ಅನೌನ್ಸ್ ಆಗಬೇಕಿತ್ತು. ಆದರೂ ಆಗಲಿಲ್ಲ. ಮನೆ ಹೊರಗಿನ ನೋಡುಗರಿಗೂ ಕುತೂಹಲದ ಸರಕಾಗಿದ್ದರೆ ಮನೆಯೊಳಗಿನ ಮಂದಿಗೆ ಭಯದ ವಾತಾವರಣವಿತ್ತು. ಆದ್ರೆ 'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಕೊನೆಗೂ ಎಲಿಮಿನೇಷನ್ ಘೋಷಣೆಯಾಗಿದ್ದು ಆರ್ಯವರ್ಧನ್ ಹೆಸರಲ್ಲಿ.

ಹದಿಮೂರು ಗುರೂಜಿಗೆ ಅನ್ ಲಕ್ ಅಂತೆ
ಕಿಚ್ಚ ಸುದೀಪ್ ಆರ್ಯವರ್ಧನ್ ಗುರೂಜಿ ಯುವರ್ ಬ್ಯಾಡ್ ಲಕ್ ನೀವೂ ಮನೆಯಿಂದ ಹೊರ ನಡೆಯಬೇಕಾಗಿದೆ. ಇನ್ನು ಐದು ನಿಮಿಷಗಳ ಕಾಲಾವಕಾಶವಿದೆ ಎಂದಾಗ, ಮನೆಯವರಿಗೆಲ್ಲಾ ಶಾಕ್. ಓಕೆ ಇದ್ದ ಸಮಯದಲ್ಲಿ ರೂಪೇಶ್ ಕ್ಷಮೆ ಕೇಳಿ ಗೋಳಾಡಿದ್ದು ಆಯ್ತು. ಗುರೂಜಿ ಎಲ್ಲರಿಗೂ ಬೇಸರದಿಂದಾನೇ ಹೇಳಿದ್ದು ಆಯ್ತು. ನಂಗೆ ಗೊತಿತ್ತು ಇವತ್ತಿನ ನಂಬರ್ ನಂಗೆ ಆಗಿ ಬರುವುದಿಲ್ಲ ಅಂತ. ಅದಕ್ಕೆ ನಾಮಿನೇಷನ್ ಮಾಡಬೇಡಿ ಅಂತಾನು ಹೇಳಿದ್ದೆ ಅಂತ ನಗು ನಗುತ್ತಲೇ ತಾಯಿಗೂ ನಮಸ್ಕಾರ ಮಾಡಿ ಎಲ್ಲರಿಗೂ ಬಾಯ್ ಹೇಳಿ, ಬಿಗ್ ಬಾಸ್‌ಗೂ ಒಂದು ಧನ್ಯವಾದ ಅರ್ಪಿಸಿ ಹೊರಟೆ ಬಿಟ್ಟರು.

ಗುರೂಜಿಯ ಕಣ್ಣಲ್ಲಿ ನೀರೋ ನೀರು..!
ವೀಕೆಂಡ್‌ನಲ್ಲಿ ಮನೆಯಿಂದ ಹೊರ ಹೋಗುವವರಿಗೆ ಬಿಗ್ ಬಾಸ್ ಒಂದು ಸ್ಪೆಷಲ್ ಅಧಿಕಾರ ನೀಡುತ್ತೆ, ನೇರವಾಗಿ ನಾಮಿನೇಟ್ ಮಾಡಬಹುದು. ಅದೇ ರೀತಿ ಒಂದು ಹೆಜ್ಜೆ ಹೊರಗೆ ಬಂದು ಗುರೂಜಿ ನಿಂತಿದ್ದಾಗ, ಆರ್ಯವರ್ಧನ್ ಎಂದು ಬಿಗ್ ಬಾಸ್ ಧ್ವನಿ ಕೇಳಿಸಿತು. ಗುರೂಜಿ ಯಾರನ್ನು ನಾಮಿನೇಟ್ ಮಾಡುವುದು ಎಂದು ರೆಡಿಯಾಗಿ ನಿಂತಿದ್ದರು ಎನಿಸುತ್ತದೆ. ಆರ್ಯವರ್ಧನ್ ನೀವೂ ಈ ವಾರ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಒಳಗೆ ಹೋಗಬಹುದು ಎಂದಾಗ ಎಲ್ಲರೂ ಒಂದು ಕ್ಷಣ ಶಾಕ್.

ಕಿಚ್ಚನ ಮಾತು ಕೇಳಿ ಗುರೂಜಿ ಖುಷಿ
ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಎಲಿಮಿನೇಷನ್ ರೌಂಡ್ ಇರುವುದಿಲ್ಲ. ವೋಟಿಂಗ್ ಲೈನ್ ಕೂಡ ಓಪನ್ ಆಗಿರುವುದಿಲ್ಲ. ಅದೇ ರೀತಿ ಈ ವಾರ ಕೂಡ ಎಲಿಮಿನೇಷನ್ ಆಗಿರುವುದಿಲ್ಲ. ಹೀಗಾಗಿ ಗುರೂಜಿಗೆ ಬಿಗ್ ಬಾಸ್ ಟಕ್ಕರ್ ಕೊಟ್ಟಿತ್ತು. ಮನೆಯೊಳಗೆ ಹೋಗಬಹುದು ಎಂದಾಗ ಗುರೂಜಿ ಸುಮ್ಮನೆ ನಿಂತು ಬಿಟ್ಟರು. ಕಣ್ಣೀರು ಸುರಿಸಿದರು. ಮನೆಯವರೆಲ್ಲ ಬಂದು ಸಮಾಧಾನ ಮಾಡಿ, ಮನೆಯೊಳಗೆ ಕರೆದುಕೊಂಡು ಹೋದಾಗ, ಮತ್ತೆ ಕಿಚ್ಚನ ದರ್ಶನ ಆಗಿತ್ತು. ಆಗ ಈ ವಾರ ಎಲಿಮಿನೇಷನ್ ಇರಲಿಲ್ಲ ಎಂದು, 50 ದಿನ ಕಳೆದಿದ್ದಕ್ಕೆ ಎಲ್ಲರ ವಿಟಿ ತೋರಿಸಿದ್ದಾರೆ.


Click it and Unblock the Notifications











