ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಸಲ್ಲಾಪ ; ರಿಂಗ್ ಬದಲಿಸಿ ಎಲ್ಲರೆದುರು ಮನೆಯಲ್ಲಿ 'ಲಿಪ್‌ಲಾಕ್' ಮಾಡಿದ ಲೆಸ್ಬಿಯನ್ ಜೋಡಿ
''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತಾರೆ. ಬೈಯುತ್ತಲೇ ನೋಡುತ್ತಾರೆ. ಇನ್ನೂ ಕೆಲ ಒಮ್ಮೆ ಕೆಲವೊಂದು ಸಾರಿ ''ಬಿಗ್ ಬಾಸ್'' ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ.
ಆಗ ಆ ದೊಡ್ಡ ಮನೆಯ ಹಲವು ಸಂಗತಿಗಳು ಚರ್ಚೆಗೆ ನಾಂದಿಯನ್ನು ಹಾಡುತ್ತಾವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಕುಟುಂಬ ಸಮೇತ ನೋಡುವ ಪ್ರೇಕ್ಷಕರು ಸದ್ಯ ಈ ಕಾರ್ಯಕ್ರಮದ ಕುರಿತು ಅಪಸ್ವರ ತೆಗೆಯುತ್ತಿದ್ದಾರೆ. ಇನ್ನೂ ಕೆಲವರು ಪ್ರೋಮೋ ನೋಡಿ ಮುಜುಗರಕ್ಕೀಡಾಗಿದ್ದಾರೆ. ಮತ್ತೂ ಕೆಲವರು ಆಕ್ರೋಶವನ್ನೂ ಕೂಡ ಹೊರ ಹಾಕುತ್ತಿದ್ದಾರೆ.

ಹೌದು. ಎಲ್ಲರಿಗೆ ಗೊತ್ತಿರುವಂತೆ ಈ ಬಾರಿಯ ''ಬಿಗ್ ಬಾಸ್'' ಕಾರ್ಯಕ್ರಮ ಈಗಾಗಲೇ ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿ ಶುರುವಾಗಿದೆ. ಆ ಪೈಕಿ ಮೋಹನ್ ಲಾಲ್ ಸಾರಥ್ಯದಲ್ಲಿ ಶುರುವಾದ ''ಬಿಗ್ ಬಾಸ್'' ಕಾರ್ಯಕ್ರಮ ಈಗಾಗಲೇ ಅರ್ಧ ಪ್ರಯಾಣವನ್ನು ಮುಗಿಸಿದೆ. ಮಧ್ಯಂತರಕ್ಕೆ ಬಂದು ತಲುಪಿದೆ. ಇನ್ನೇನೂ ಕೆಲವೇ ದಿನ ಈ ಕಾರ್ಯಕ್ರಮದ ಕ್ಲೈಮ್ಯಾಕ್ಸ್ ಶುರುವಾಗಲಿದೆ.
ಹೀಗಿರುವಾಗ ಇದೀಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಲಿಂಗ ಜೋಡಿ ಎಲ್ಲರೆದುರು ''ಲಿಪ್ ಲಾಕ್'' ಮಾಡಿದೆ. ಹೌದು, ಅಸಲಿಗೆ ಕೇರಳ ಮೂಲದ ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಕಾಲೇಜ್ ದಿನಗಳಲ್ಲಿ ಪರಸ್ಪರ ಆಕರ್ಷಿತರಾಗಿದ್ದರು. ಸೌದಿ ಅರೇಬಿಯಾದಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ ಇಬ್ಬರು ಪರಿಚಯರಾದರು.
ಹೀಗೆ ಪರಿಚಯವಾದ ಇಬ್ಬರ ನಡುವೆ ಆ ನಂತರ ಸ್ನೇಹ ಅರಳಿತ್ತು. ಈ ಸ್ನೇಹ ಬಹುಬೇಗ ಪ್ರೇಮದ ಸ್ವರೂಪವನ್ನು ಕೂಡ ಪಡೆಯಿತು. ಹೀಗೆ ಪ್ರೀತಿಯಲ್ಲಿ ಬಿದ್ದು ಆ ನಂತರ ಮನೆಯವರ ವಿರೋಧದ ನಡುವೆ ಹಲವು ಅಡೆ ತಡೆಗಳನ್ನು ದಾಟಿ ಒಂದೇ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಒಂದೇ ಸೂರಿನಡಿ ಬದುಕುತ್ತಿರುವ ಇವರು ಇಬ್ಬರು ಈ ಬಾರಿಯ ಮಲಯಾಳಂನ ''ಬಿಗ್ ಬಾಸ್'' ಮನೆ ಪ್ರವೇಶಿಸಿದ್ದಾರೆ. ಮೊದಲ ದಿನದಿಂದಲೇ ಈ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು ಕೂಡ ಆಗಿದ್ದಾರೆ.
ಇಂಥಾ ಆದಿಲಾ ಮತ್ತು ಫಾತಿಮಾ ನೂರಾ ಅವರ ಪೈಕಿ ಇತ್ತೀಚೆಗೆ ಆದಿಲಾ ಅವರ ಜನ್ಮ ದಿನ ಇತ್ತು. ಈ ಹಿನ್ನೆಲೆ ಬರ್ತ್ಡೇಗೆ ಕೇಕ್ ನೀಡುವಂತೆ ಫಾತಿಮಾ ನೂರಾ ''ಬಿಗ್ ಬಾಸ್'' ಬಳಿ ಮನವಿಯನ್ನು ಮಾಡಿಕೊಂಡಿದ್ದರು. ಈ ಮನವಿಗೆ ಮಣೆ ಹಾಕಿದ ''ಬಿಗ್ ಬಾಸ್'' ಕೇಕ್ ಕೂಡ ಕಳುಹಿಸಿತ್ತು. ಇದೇ ಸಮಯದಲ್ಲಿ ಮನೆಯ ಉಳಿದ ಸದಸ್ಯರ ಎದುರು ''ಬಿಗ್ ಬಾಸ್'' ಮನೆಯಲ್ಲೇ ಆದಿಲಾ ಹಾಗೂ ನೂರಾ ರಿಂಗ್ ಬದಲಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಪರಸ್ಪರ ತುಟಿಗೆ ತುಟಿಯೊತ್ತಿದ್ದಾರೆ.

ಸದ್ಯ ''ಬಿಗ್ ಬಾಸ್''ನ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲವರು ''ಬಿಗ್ ಬಾಸ್'' ಮನೆಯಲ್ಲಿ ಆದ ಬಹುದೊಡ್ಡ ಕ್ರಾಂತಿಕಾರಿ ಬೆಳವಣಿಗೆ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಈ ಕಾರ್ಯಕ್ರಮದ ವಿರುದ್ಧ ಎಂದಿನಂತೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಮೇ 31-2022ರಂದು ಆದಿಲಾ ಮತ್ತು ಫಾತಿಮಾ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಇಬ್ಬರೊಂದಿಗೂ ಮಾತು ಕತೆಯನ್ನು ನಡೆಸಿತು. ಆ ನಂತರ ಇಬ್ಬರ ಪರವಾಗಿ ಐತಿಹಾಸಿಕ ತೀರ್ಪನ್ನು ನೀಡಿತು. ಒಟ್ಟಿಗೆ ವಾಸಿಸಲು ಅವಕಾಶವನ್ನು ನೀಡಿತು.ಇನ್ನು ಮೋಹನ್ ಲಾಲ್ ಕೂಡ ಇತ್ತೀಚೆಗೆ ಈ ಜೋಡಿಯನ್ನು ಮೆಚ್ಚಿಕೊಂಡು ಬೇರೆ ಸ್ಫರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದರು. ಇಬ್ಬರು ಘನತೆಯಿಂದ ಬದುಕುತ್ತಿದ್ದಾರೆ. ಸಮಾಜ ಅವರನ್ನು ಒಪ್ಪಿಕೊಂಡಿದೆ. ನಾವು ಅವರನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದ ಮೋಹನ್ ಲಾಲ್ ನಿಮಗೆ ಇದರಲ್ಲಿ ಸಮಸ್ಯೆ ಇದ್ದಿದ್ದರೆ, ನೀವು ಈ ಕಾರ್ಯಕ್ರಮಕ್ಕೆ ಬರಬಾರದಿತ್ತು. ಯಾರೂ ನಿಮ್ಮನ್ನು ಬಲವಂತಪಡಿಸಿರಲಿಲ್ಲ ಎಂದು ಕೆಂಡ ಕಾರಿದ್ದರು.


Click it and Unblock the Notifications











