For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಫೈನಲ್ ಕೆಲವು ಅವಿಸ್ಮರಣೀಯ ಕ್ಷಣಗಳು

  By Rajendra
  |
  <ul id="pagination-digg"><li class="next"><a href="/tv/sudeep-bowls-over-audience-with-breaks-bigg-boss-075372.html">Next »</a></li></ul>

  'ಬಿಗ್ ಬಾಸ್ ಕನ್ನಡ' ಗ್ರ್ಯಾಂಡ್ ಫಿನಾಲೆಯ ಸುದೀರ್ಘ ಎಪಿಸೋಡ್ ನೋಡಿದವರು ಮುಂಜಾನೆ ತನಕ ಕಾರ್ಯಕ್ರಮ ಹೀಗೇ ಮುಂದುವರಿಯುತ್ತದೋ ಏನೋ ಎಂದು ಭಯಬಿದ್ದಿದ್ದರು. ಆದರೆ ಕಡೆಗೂ ವಿನ್ನರ್ ಹಾಗೂ ರನ್ನರ್ ಯಾರು ಎಂಬುದು ಗೊತ್ತಾಗುತ್ತಿದ್ದಂತೆ. ಅಬ್ಬಬ್ಬಾ ಎಂದು ಸುಧಾರಿಸಿಕೊಂಡರು.

  ಈ ಸುದೀರ್ಘ ಎಪಿಸೋಡಿನಲ್ಲಿ ಹವಲಾರು ಅವಿಸ್ಮರಣೀಯ ಘಟನೆಗಳು ನಡೆದವು. ಸರಿಸುಮಾರು ಐದು ಗಂಟೆಗಳ ಕಾಲ ಸುದೀಪ್ ನಿರೂಪಿಸಿದ್ದು ವಿಶೇಷವಾಗಿತ್ತು. ಎಲ್ಲೂ ಅವರ ಎನರ್ಜಿ ಲೆವೆಲ್ ಕಡಿಮೆಯಾಗಿದ್ದು ಕಂಡುಬರಲಿಲ್ಲ.

  ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಂಕರ್ ನಾಗ್ ಅವರಂತೆ ಮಿಮಿಕ್ರಿ ಮಾಡಿದ್ದು ವಿಶೇಷವಾಗಿತ್ತು. 'ಆಟೋರಾಜ' ಚಿತ್ರದಲ್ಲಿನ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು ಒಂದು ವಿಶೇಷ. ನನಗೆ ಐದು ಕೋಟಿ ಕೊಡ್ತೀನಿ ಅಂದ್ರೂ ನಾನು ಈ ಶೋನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಅಂದ್ರು.

  ಅದಕ್ಕೆ ಅವರು ಕೊಟ್ಟ ವಿವರಣೆ. ಮೊಬೈಲ್ ಇಲ್ಲದೆ, ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ, ಹೆಂಡತಿ ಮಕ್ಕಳಿಂದ ದೂರ ಇರಲಿಕ್ಕೆ ನನ್ನ ಕೈಲಿ ಒಂದೇ ಒಂದು ಕ್ಷಣವೂ ಇರಲಿಕ್ಕೆ ಆಗಲ್ಲ ಎಂದರು. ಈ ಮಾತಿಗೆ ಸುದೀಪ್ ಏನೂ ಹೇಳಲಿಲ್ಲ.

  ಇನ್ನು ಕೆಲವರಿಗೆ ಹಾಟ್ ಸ್ಟಾರ್ (ಶ್ವೇತಾ ಪಂಡಿತ್), ಸ್ಲೀಪಿಂಗ್ ಸ್ಟಾರ್ (ಬ್ರಹ್ಮಾಂಡ ಶರ್ಮಾ), ಡಾನ್ಸಿಂಗ್ ಸ್ಟಾರ್ (ನರ್ಸ್ ಜಯಲಕ್ಷ್ಮಿ), ಲಾಫಿಂಗ್ ಸ್ಟಾರ್ (ಸಂಜನಾ), ಫೈಟಿಂಗ್ ಸ್ಟಾರ್ (ರಿಷಿಕಾ ಸಿಂಗ್), ಬೆಸ್ಟ್ ಜೋಡಿ ಹಕ್ಕಿ (ತಿಲಕ್-ಶ್ವೇತಾ ಪಂಡಿತ್) ಹೀಗೆ ತರಹೇವಾರಿ ಪ್ರಶಸ್ತಿಗಳನ್ನು ಕೊಡಲಾಯಿತು. (ಫೋಟೋ ಕೃಪೆ: ಕೃಷ್ಣ ಪ್ರಸಾದ್)

  <ul id="pagination-digg"><li class="next"><a href="/tv/sudeep-bowls-over-audience-with-breaks-bigg-boss-075372.html">Next »</a></li></ul>
  English summary
  Bigg Boss Kannada grand finale memorable moments. Vijay Raghavendra also recalled the memories inside the house and claimed that he would treasure this experience. Arun Sagar also said that this was not an end of a life rather he felt that he has a better thing in store.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X