BBK 11: ಕಪ್‌ಗಾಗಿ 20 ಲಕ್ಷ ಬಿಟ್ಟ ಮಂಜು ಹೊರಕ್ಕೆ: ಮದುವೆ, ಕುಡಿತ ಯಾವ್ದು ಬಿಡೋಕೆ ಒಪ್ಪಿದ್ರು?

By ಎಸ್ ಸುಮಂತ್

ಬಿಗ್ ಬಾಸ್ ಫಿನಾಲೆ ರೌಂಡ್ ನಡೆಯುತ್ತಿದೆ. ಕಪ್ ಎತ್ತಿ ಹಿಡಿಯುವುದಕ್ಕೆ ಕೆಲವೇ ಕಲೆವು ಗಂಟೆಗಳು ಬಾಕಿ ಇದೆ. ಮನೆಯಲ್ಲಿ ಇರುವ ನಾಲ್ಕು ಜನರಲ್ಲಿ ಕಪ್ ಗೆಲ್ಲೋದು ಯಾರು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಆರಂಭದಿಂಷ ಆಡಿದ ಆಟ, ಇದ್ದ ರೀತಿಗೆ ಒಂದಷ್ಟು ಜನ ಇವರೇ ಬಿಗ್ ಬಾಸ್ ಗೆಲ್ಲಬಹುದು ಎಂಬ ಊಹೆ ಮಾಡ್ತಾ ಇದಾರೆ. ಆದರೆ ಆ ಊಹೆಗೂ ಅಧಿಕೃತವಾಗಿ ತೆರೆ ಬೀಳುವುದಕ್ಕೆ ಇನ್ನೇನು ಕೆಲವೇ ಸಮಯವಿದೆ.

ಆರಂಭದ ದಿನಗಳ ಲೆಕ್ಕಚಾರ ಹಾಕಿದಾಗ ಉಗ್ರಂ ಮಂಜು ವಿನ್ ಆಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆಟ ಆಡ್ತಾ ಇದ್ದದ್ದು, ಮನೆಯಲ್ಲಿ ಎಲ್ಲರ ಜೊತೆಗೆ ಬೆರೆಯುತ್ತಿದ್ದ ರೀತಿಗೆ ಅಂದೇ ಎಲ್ಲರೂ ನಿರ್ಧರಿಸಿದ್ದರು. ಮಂಜುನೇ ಬಿಗ್ ಬಾಸ್ ವಿನ್ನರ್ ಅಂತ. ಆದರೆ ಅದ್ಯಾವಾಗ ಗೌತಮಿ ಜೊತೆಗೆ ಫ್ರೆಂಡ್ಶಿಪ್ ಬೆಳೆಸಿದರೋ ಅಂದೇ ಸೋಲಿನ ರುಚಿಯನ್ನು ಕಂಡರು. ಸೀಮಿತ ಪ್ರದೇಶದಲ್ಲಿ ಉಳಿದುಬಿಟ್ಟರು. ಗೌತಮಿಯನ್ನ ಮೆಚ್ಚಿಸೋ ಕೆಲಸದಲ್ಲಿ ಬ್ಯುಸಿಯಾಗಿ ಇಂದು ಕಪ್ ತೆಗೆದುಕೊಳ್ಳದೆ ಹೊರಗೆ ಬಂದರು.

Bigg Boss Grand finale Ugaram Manju eliminate his price money and more


ಶಾಕಿಂಗ್ ಎಲಿಮಿನೇಷನ್

ಮಂಜು ಔಟ್ ಆಗ್ತಾರೆ ಎಂದು ಹಲವರು ಊಹೆ ಮಾಡಿದ್ದರು. ಈಗ ಅದೇ ಸತ್ಯ ಆಗಿದೆ. ಟಾಪ್ ಐದರಲ್ಲಿ ಬಂದು ಔಟ್ ಆಗಿದ್ದಾರೆ. ಇದು ಸ್ವತಃ ಮಂಜುಗೆ ಮಾತ್ರವಲ್ಲ ಜೊತೆಯಲ್ಲಿದ್ದವರಿಗೂ ಶಾಕ್ ಆಗಿದೆ. ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಮಂಜು ಅವರನ್ನ ಹೊರಗೆ ಕರೆದುಕೊಂಡು ಹೋಗಿದ್ದಾರೆ.


20 ಲಕ್ಷವನ್ನ ಬಿಟ್ಟರಾ ಮಂಜು?

ಕಿಚ್ಚ ಸುದೀಪ್ ಐದನೇ ಸ್ಪರ್ಧಿಯನ್ನ ಹೊರಗೆ ಕರೆಯುವುದಕ್ಕೂ ಮುನ್ನ ಒಂದು ಅವಕಾಶವನ್ನು ಕೊಟ್ಟರು. ಇಂದು ಸೂಟ್ ಕೇಸ್ ತಂದಿಟ್ಟು, ಐದು ಲಕ್ಷದಿಂದ ಅವಕಾಶ ಕೊಟ್ಟರು. ಆಟದಿಂದ ಈಗಲೇ ಕ್ವಿಟ್ ಮಾಡಬಹುದು, ತಕ್ಷಣ ಹಣ ನಿಮಗೆ ಸಿಗುತ್ತೆ. ಆದರೆ ಆಟದಿಂದ ಹೊರ ಹೋಗಬೇಕೆಂದು ಹೇಳುತ್ತಾರೆ. ಆ ಐದು ಲಕ್ಷ 20 ಲಕ್ಷಕ್ಕೆ ಬರುತ್ತದೆ. ಆದರೂ ಯಾರೂ ಆ ಹಣ ತಗೊಂಡು ಆಟ ಕ್ವಿಟ್ ಮಾಡೋದಕ್ಕೆ ಒಪ್ಪಲಿಲ್ಲ. ಇದೀಗ ಮಂಜು ಹೊರಗೆ ಬಂದಿದ್ದಾರೆ. ಕಪ್ ಗೆದ್ದೇ ಗೆಲ್ಲುತ್ತೀನಿ ಎಂಬ ನಂಬಿಕೆ ಅವರಲ್ಲಿತ್ತು.

ವೇದಿಕೆ ಮೇಲೆ ಹೇಳಿದ್ದೇನು?

ನನ್ನ ವ್ಯಕ್ತಿತ್ವವೇ ಅದು ಅಣ್ಣ. ಎದುರು ಯಾರಾದ್ರೂ ಕೆಣಕಿದರೆ ಮ್ಯಾಕ್ಸಿಮಂ ಕೋಪ, ಮ್ಯಾಕ್ಸಿಮಂ ಕಾಮಿಡಿ ಎಲ್ಲವೂ ಇದೆ ಅಣ್ಣ. ಟಾಪ್ 5 ನಲ್ಲಿ ಬರುವುದು ಸುಲಭವಲ್ಲ. ರಿಯಾಲಿಟಿ ಶೋ ಹೇಗಿತ್ತು ಅಂತ ನೋಡಬೇಕಿತ್ತು. ಸಾಕಷ್ಟು ಕಲಿತಿದ್ದೀನಿ, ಜೀವಿಸಿದ್ದೀನಿ. ಈಗ ಮ್ಯಾಕ್ಸ್ ಮ್ಯಾಕ್ಸಿಮಮ್ ಹಿಟ್ ಆಗಿದೆ ಅಣ್ಣ ಎಂದ ಮಂಜುಗೆ ಸುದೀಪ್ ಅವರು ಕೂಡ ಹೊಗಳಿದ್ದಾರೆ. ಸಂಪೂರ್ಣವಾಗಿ ಬಾಳಿ ಬದುಕಿದ್ದೀರಿ ಎಂದಿದ್ದಾರೆ. ಆದರೆ ಅಮ್ಮನ ಆಸೆ ಕಪ್ ಗೆಲ್ಲಬೇಕು ಅಂತ ಇತ್ತು. ಒಳಗೆ ಇರುವ ನಾಲ್ಕು ಜನ, ಇಲ್ಲಿ ಕೂತಿರುವ ಎಲ್ಲಾ ತಾಯಂದಿರಿಗೂ ಆ ಆಸೆ ಇತ್ತು. ಆದರೆ ಯಾರಾದ್ರೂ ಒಬ್ಬ ತಾಯಿಯ ಆಸೆ ಈಡೇರುತ್ತೆ ಎಂದು ಮಂಜು ಹೇಳಿದ್ದಾರೆ.

ಸುದೀಪ್ ಮಾತಿಗೆ ಪ್ರಮಾಣ

ಉಗ್ರಂ ಮಂಜುಗೆ ಮದುವೆ ಮಾಡಬೇಕು ಎಂಬುದು ಅವರ ತಂದೆ ತಾಯಿ ಆಸೆ. ಅದರ ಜೊತೆಗೆ ವಿಪರೀತ ಕುಡಿತವನ್ನ ಬಿಡಬೇಕು ಎಂಬುದು. ಅದನ್ನ ಸುದೀಪ್ ಅವರು ವೇದಿಕೆ ಮೇಲೆ ಕೇಳಿದ್ದಾರೆ. ಕುಡಿತ ಬಿಡಬೇಕು, ಮದುವೆಯಾಗಬೇಕು ಅನ್ನೋದು ಮನೆಯವರ ಆಸೆ. ಏನು ಮಾಡ್ತೀರ ಎಂದಾಗ. ಮಂಜು ಅವರ ತಾಯಿಗೆ ಸಮಾಧಾನ ಮಾಡಿದ್ದಾರೆ, ಅದು ಆಗಬೇಕಾದಾಗ ಆಗುತ್ತದೆ ಎಂದು ಹೇಳಿದ್ದಾರೆ.

ಮಂಜುಗೆ ಸಿಕ್ಕ ಹಣವೆಷ್ಟು..?

ಐದನೇ ಸ್ಥಾನದಲ್ಲಿದ್ದ ಮಂಜುಗೆ 2 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದೀಗ ಮಂಜು ಆ ಹಣವನ್ನು ವಯಸ್ಸಾದವರಿಗೆ ನೀಡಿದ್ದಾರೆ. ಮತ್ತೊಂದು ಲಕ್ಷ ಹಣ ಸಿಕ್ಕಿದ್ದು, ಅದನ್ನ ರೈತರಿಗೆ ನೀಡಿದ್ದಾರೆ. ಆಗ ಮಧ್ಯೆ ಪ್ರವೇಶಿಸಿದ ಸುದೀಪ್, ಬುದ್ದಿ ಹೇಳಿ, ಮೊದಲು ಎಲ್ಲಾ ಹಣವನ್ನು ಅವರ ತಂದೆ ತಾಯಿಗೆ ಕೊಡಿ.‌ಆಮೇಲೆ ಅವರು ಏನು ಮಾಡುತ್ತಾರೋ ಅವರೇ ತೀರ್ಮಾನ ಮಾಡಲಿ ಎಂದಿದ್ದಾರೆ. ಮಂಜು ಅವರಿಗೆ ಮೂರುವರೆ ಲಕ್ಷ ಸಿಕ್ಕಿದೆ.

More from Filmibeat

English summary
BBK 11: Here is the details about Manju, who came out without winning the Bigg Boss Cup, also left behind 20 lakhs
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X