Bigg Boss: ಆತ್ಮೀಯ ಸ್ನೇಹಿತರಿಗೆ ಸ್ನೇಹಿತ್ ಗೌಡ ಶಾಕ್: ನಮ್ರತಾ ಗೌಡ ಭಾವುಕ
ಬಿಗ್ ಬಾಸ್ ಮನೆಯಲ್ಲಿ ಈಗ ಟಾಸ್ಕ್ ವಿಷಯಕ್ಕಾಗಿ ಜಗಳ, ಗುದ್ದಾಟ, ಮಾತು ಎಲ್ಲವೂ ಮುಗಿದಿದೆ. ಗಂಧರ್ವರು ಹಾಗೂ ರಾಕ್ಷಸರು ಎಂಬ ಒಂದು ಪರಿಕಲ್ಪನೆ ಸದ್ಯಕ್ಕೆ ಅಂತ್ಯವಾದಂತೆ ಕಾಣುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮ ವಾರದ ಅಂತ್ಯಕ್ಕೆ ಬಂದಿದ್ದು ಕ್ಯಾಪ್ಟನ್ಸಿ ಆಯ್ಕೆ ನಡೆಯುತ್ತಿದೆ. ಕ್ಯಾಪ್ಟನ್ಸಿ ಟಾಸ್ಕ್ ಆಡಲು ಸ್ನೇಹಿತ್ ಅರ್ಹರಾಗಿರುವ ಮನೆಯ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್ ಮನೆಯಲ್ಲಿ ಅರ್ಹರಾಗಿರುವ ಸದಸ್ಯರನ್ನ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಮಾಡಬೇಕಾಗಿದೆ. ಈ ವೇಳೆ ಸ್ನೇಹಿತ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಮನೆ ಮಂದಿ ಶಾಕ್ ಆಗಿದ್ದಾರೆ. ಬಿಗ್ ಬಾಸ್ ಸ್ನೇಹಿತ್ ಅವರಿಗೆ ಎರಡು ಗುಂಪುಗಳ ಪೈಕಿ ಟಾಸ್ಕ್ ಆಡಲು ಅರ್ಹರಾಗಿರುವವರನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಈ ವೇಳೆ ಸ್ನೇಹಿತ್ ಬಳಿ ಬಂದ ಸ್ಪರ್ಧಿಗಳು ತಾವು ಸಹ ಕ್ಯಾಪ್ಟನ್ಸಿ ಟಾಸ್ಕ್ ಆಡುವುದಾಗಿ ಹೇಳಿದ್ದಾರೆ. ಇನ್ನೂ ಸ್ನೇಹಿತ್ ತೀರ್ಮಾನವೇ ಅಂತಿಮವಾಗಿದ್ದು, ಸ್ನೇಹಿತ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಸಹ ಮನೆ ಮಾಡಿತ್ತು. ಆದರೆ ಸ್ನೇಹಿತ್ ಯಾರು ಊಹಿಸಿರದ ರೀತಿಯಲ್ಲಿ ವಿನಯ್ ಹಾಗೂ ನಮ್ರತಾ ಅವರನ್ನು ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ.

ಸ್ನೇಹಿತ್ ಹಾಗೂ ವಿನಯ್, ನಮ್ರತಾ ಮೂವರು ಎಷ್ಟು ಕ್ಲೋಸ್ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ಇಲ್ಲಿ ಸ್ನೇಹಿತ್ ಅಣ್ಣ ಎಂದು ಕರೆಯುತ್ತಿದ್ದ ವಿನಯ್ ಹಾಗೂ ತನ್ನ ಗೆಳತಿ ಎಂದುಕೊಂಡಿದ್ದ ನಮ್ರತಾ ಇಬ್ಬರನ್ನು ಕೂಡ ಅನರ್ಹರು ಎಂದು ಘೋಷಣೆ ಮಾಡಿದ್ದಾರೆ.
ನಮ್ರತಾ ಹಾಗೂ ವಿನಯ್ ಇಬ್ಬರೂ ಸ್ನೇಹಿತ್ ನಮ್ಮ ವಿರುದ್ಧ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸ್ನೇಹಿತ್ ತೆಗೆದುಕೊಂಡಿರುವ ನಿರ್ಧಾರ ಮಾತ್ರ ವಿನಯ್ ಮುಖದಲ್ಲಿ ಬೇಸರ ತರಿಸಿದೆ. ನಮ್ರತಾ ಕೂಡ ಸ್ನೇಹಿತ್ ನಾನು ಹೇಳಿದಂತೆ ಮಾಡುತ್ತಾರೆ, ಈ ಬಾರಿ ನಾನು ಕ್ಯಾಪ್ಟೆನ್ಸಿ ಟಾಸ್ಕ್ ಆಡಬಹುದು ಎಂದುಕೊಂಡಿದ್ದರು. ಆದರೆ ನಮ್ರತಾ ಯೋಚನೆ ಸಹ ತಲೆಕೆಳಗಾಗಿದೆ.

ಕ್ಯಾಪ್ಟನ್ಸಿ ಟಾಸ್ಕ್‌ನಿಂದ ನಮ್ರತಾ- ವಿನಯ್ ಔಟ್
ಬಿಗ್ ಬಾಸ್ ಸ್ನೇಹಿತ್ ಅವರಿಗೆ ಕ್ಯಾಪ್ಟನ್ಸಿ ಆಟದಿಂದ ಯಾರು ಅನರ್ಹರು ಎಂಬುದನ್ನು ಸೂಚಿಸಬೇಕು ಎಂದು ಹೇಳಿದ್ದರು. ಇದೇ ವೇಳೆ ಸ್ನೇಹಿತ್ ಬಳಿ ಬಂದ ವಿನಯ್ ಪ್ರತಿಯೊಂದು ವಿಷಯದಲ್ಲೂ ನಾನು ಜೀವ ಕೊಟ್ಟು ಆಡುತ್ತೇನೆ ಎಂದು ಹೇಳಿದ್ದಾರೆ. ನಮ್ರತಾ, ಸ್ನೇಹಿತ್ ಬಳಿ ಬಂದವರೆ ನಿಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಸ್ನೇಹಿತ್ ಎಲ್ಲಾ ಸ್ಪರ್ಧಿಗಳ ಮಾತು ಕೇಳಿದ ಮೇಲೆ ಎಲ್ಲರೂ ಒಂದು ಕಡೆ ಕುಳಿತುಕೊಂಡಿದ್ದು, ತಮ್ಮ ನಿರ್ಧಾರ ತಿಳಿಸಿದ್ದಾರೆ.
ಸ್ನೇಹಿತರ ನಡುವೆ ಬಿರುಕು!?
ನಮ್ರತಾ ಹಾಗೂ ವಿನಯ್ ಅವರನ್ನು ಕ್ಯಾಪ್ಟನ್ಸಿ ಆಟದಿಂದ ಹೊರಗಡೆ ಇಟ್ಟಿದ್ದೇನೆ ಎಂದು ಸ್ನೇಹಿತ್ ಹೇಳಿದ್ದಾರೆ. ಇದಕ್ಕೆ ಸೂಕ್ತವಾದ ಕಾರಣ ಕೊಟ್ಟಿದ್ದಾರೆ. ವಿನಯ್ ನಾನು ಹೇಳಿದ ಎಲ್ಲಾ ಆಜ್ಞೆಯನ್ನ ಪಾಲಿಸಿದರು. ಆದರೆ ನಮ್ರತಾ ಮಾತ್ರ ನಾನು ಹೇಳಿದ ಯಾವುದೇ ಆಜ್ಞೆ ಪಾಲಿಸಲಿಲ್ಲ ಎಂದಿದ್ದಾರೆ. ಸ್ನೇಹಿತ್ ಮಾತು ನಮ್ರತಾಗೆ ಕೋಪ ತರಿಸಿದ್ದು, ಬುಲ್‌ಶೀಟ್ ಎಂದು ಹೇಳಿದ್ದಾರೆ. ಸರಿಯಾದ ಕಾರಣ ಕೊಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೇಹಿತ್ ತೆಗೆದುಕೊಂಡಿರುವ ಈ ನಿರ್ಧಾರ ನಮ್ರತಾ, ವಿನಯ್ ಹಾಗೂ ಸ್ನೇಹಿತ್ ಮೂವರ ಸ್ನೇಹದಲ್ಲಿ ಬಿರುಕು ತರುತ್ತಾ ನೋಡಬೇಕಿದೆ.
ಕಣ್ಣೀರು ಹಾಕಿದ ನಮ್ರತಾ
ಎಲ್ಲಾ ಮುಗಿದ ಮೇಲೆ ವಿನಯ್ ಹಾಗೂ ನಮ್ರತಾ ಇಬ್ಬರೂ ಕುಳಿತುಕೊಂಡು ಸ್ನೇಹಿತ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುತ್ತಾ ಇದ್ದಾರೆ. ಅವನು ಯಾರು ನನ್ನನ್ನು ಅನರ್ಹಳು, ಎಂದು ಹೇಳುವುದಕ್ಕೆ ಎಂಬ ಮಾತನ್ನು ನಮ್ರತಾ ವಿನಯ್ ಬಳಿಯಲ್ಲಿ ಹೇಳಿದ್ದಾರೆ. ಏನು ಆಜ್ಞೆ ಕೊಟ್ಟಿದ್ದಾರೆ. ನಾವು ಏನನ್ನ ಫಾಲೋ ಮಾಡಿಲ್ಲ ಎಂಬುದರ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿದೆ. ಅವನು ಯಾವನ್ ಗುರು ಫ್ರೆಂಡು ಎಂದು ನಮ್ರತಾ ಬೇಸರದಿಂದ ಕಣ್ಣೀದು ಹಾಕಿದ್ದಾರೆ. ಈ ಕಡೆ ಸ್ನೇಹಿತ್ ಕೂಡ ಬೇಸರಗೊಂಡಂತೆ ಕಾಣುತ್ತಿದ್ದಾರೆ.
ಎಲ್ಲರಿಗೂ ಶಾಕ್ ಕೊಟ್ಟ ಸ್ನೇಹಿತ್
ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತನ್ನು ವೀಕ್ಷಕರು ಹೇಳುತ್ತಾ ಇದ್ದಾರೆ. ಮನೆಯ ಸದಸ್ಯರು ಕೂಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್ ಹಾಗೂ ನಮ್ರತಾ ಇದ್ದೇ ಇರುತ್ತಾರೆ ಎಂದುಕೊಂಡಿದ್ದರು. ಮನೆಯ ಇತರ ಸದಸ್ಯರಿಗೂ ಕೂಡ ಸ್ನೇಹಿತ್ ಶಾಕ್ ಕೊಟ್ಟಿದ್ದಾರೆ.


Click it and Unblock the Notifications











