ರಿಷಿಕಾ ಮದುವೆ ಬಗ್ಗೆ ಮನೆಯಲ್ಲಿ ಗುಸುಗುಸು
ಬಳಿಕ ಮನೆಯಲ್ಲಿ ರಿಷಿಕಾ ಬಗ್ಗೆ ಎಲ್ಲರೂ ಗುಸುಗುಸು ಪಿಸಪಿಸ ಎಂದು ಮಾತನಾಡಿಕೊಂಡರು. ಅಯ್ಯೋ ಅವಳಿಗೆ ಮದುವೆ ಆಯ್ತಂತೆ ಎಂದು ಮಾತನಾಡಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ಬ್ರಹ್ಮಾಂಡ ಶರ್ಮಾ ಅವರು ಅಯ್ಯೂ ಮದುವೆ ಆಗಿಲ್ಲ ಅದು ಕ್ಯಾನ್ಸಲ್ ಆಯ್ತು ಎಂದು ಹೇಳಿ ಎಲ್ಲರನ್ನೂ ಚಕಿತಗೊಳಿಸಿದರು.
ಶರ್ಮಾ ಅವರು ಒಬ್ಬರೇ ಕುಳಿತುಕೊಂಡು ಶೂನ್ಯದಲ್ಲಿ ಅದೇನನ್ನೋ ಬರೆದಂತೆ ಮಾಡುತ್ತಾ, ಒಬ್ಬೊಬ್ಬರದ್ದೇ ಮೈಂಡ್ ಸೆಟ್ ಅರ್ಥ ಮಾಡಿಕೊಳ್ಳಬೇಕಂತೆ. ಅವರಿಗೆ ಅಡ್ಜೆಸ್ಟ್ ಆಗಿ ಇಲ್ಲಿ ಇರಬೇಕಂತೆ. ಅದೇ ಸ್ವಿಮ್ಮಿಂಗ್ ಫೂಲ್, ಅದೇ ಬಾತ್ ರೂಮ್ ತಲೆ ಕೆಟ್ಟಿಹೋಗಿದೆ. ನನ್ನ ಕೈಯಲ್ಲಿ ಆಗಲ್ಲಪ್ಪಾ. ದಯವಿಟ್ಟು ನನ್ನನ್ನು ಕಳುಹಿಸಿ ಬಿಡಿ ಎಂದು ಮತ್ತೆ ತಮ್ಮಷ್ಟಕ್ಕೆ ತಾವು ಹೇಳಿಕೊಂಡರು.

ಈ ಬಾರಿ ಮನೆಯಿಂದ ಹೊರಹೋಗಲು ಮೂವರು ನಾಮಿನೇಟ್ ಆಗಿದ್ದಾರೆ. ಚಂದ್ರಿಕಾ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ನಿಖಿತಾ ಹಾಗೂ ನರ್ಸ್ ಜಯಲಕ್ಷ್ಮಿ ನಾಮಿನೇಟ್ ಆಗಿರುವ ಉಳಿದವರು. ಬ್ರಹ್ಮಾಂಡ ಗುರುಗಳು ತಾನು ಗ್ಯಾರಂಟಿ ನಾಮಿನೇಟ್ ಆಗುತ್ತೇನೆ ಎಂದುಕೊಂಡಿದ್ದರು. ಆದರೆ ಅವರು ಈ ಬಾರಿ ನಾಮಿನೇಟ್ ಆಗಿಲ್ಲ.
ಮನೆಯಲ್ಲಿ ನಾಮಿನೇಷನ್ ಜ್ವರ ಹಬ್ಬಿದೆ. ರಿಷಿಕಾ ಸಿಂಗ್ ಎಂಟ್ರಿಯಿಂದ ಮನೆಯಲ್ಲಿ ಏನೇನು ಅಗಿಲ್ಲ. ಮುಂದಿನ ದಿನಗಳಲ್ಲಿ ಬೆಂಕಿ ಬಿರುಗಾಳಿ ಏಳಬಹುದೇನೋ. ಆದರೆ ಗೊಂಬೆ ಆಡಿಸೋನು 'ಬಿಗ್ ಬಾಸ್'.


Click it and Unblock the Notifications











