'ಬ್ರಹ್ಮಾಂಡ' ಶರ್ಮಾ ಬುಡಕ್ಕೆ ಬಂತಲ್ಲಪ್ಪ ಕುತ್ತು
ಈ ಡಂಬಲ್ಸ್ ನೋಡುತ್ತಿದ್ದರೆ ನನಗೆ ಬಿಗ್ ಬಾಸ್ ಮನೆಯ ನೆನಪುಗಳು ಬರುತ್ತವೆ ಆಗಾಗಿ ಇದು ನನಗೆ ಬೇಕು ಎಂದರು. ಈ ಕಾಫಿ ಕಪ್ ಜೊತೆ ನಾನು ಹಲವಾರು ಭಾವನಾತ್ಮಕ ಕ್ಷಣಗಳನ್ನು ಕಳೆದಿದ್ದೇನೆ ಎಂದರು ಶ್ವೇತಾ. ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ಒಂದು ದಿನದ ವಾಸ ಅಲ್ಲಿಗೆ ಅಂತ್ಯವಾಯಿತು. ಮುಂಬಾಲಿನ ಮೂಲಕ ಗೌರವಪೂರ್ವಕವಾಗಿ ಅವರನ್ನು ಕಳುಹಿಸಿಕೊಡಲಾಯಿತು.
ಫೈನಲ್ ಸ್ಪರ್ಧೆಯಲ್ಲಿ ನೀವ್ಯಾಕೆ ಗೆಲ್ಲಬೇಕು ಎಂದು ಬಯಸುತ್ತೀರಿ ಎಂದು ಎಲ್ಲರೂ ಹೇಳಬೇಕಾಗಿತ್ತು. ಹಾಗೆಯೇ ಯಾರನ್ನು ಹೊರ ಕಳುಹಿಸಲು ಇಚ್ಛಿಸುತ್ತೀರಿ ಎಂದು ಬಿಗ್ ಬಾಸ್ ಮನೆಯ ನಾಲ್ಕು ಸದಸ್ಯರಿಗೆ ಕೇಳಿದರು. ತಮ್ಮನ್ನು ತಾವು ಸಮರ್ಥಿಸಿಕೊಂಡ ಎಲ್ಲರೂ ಬ್ರಹ್ಮಾಂಡ ಶರ್ಮಾ ಅವರನ್ನು ಸ್ಪರ್ಧೆಯಿಂದ ಹೊರಕಳುಹಿಸಬೇಕು ಎಂದು ಬಯಸಿದರು.

ಒಬ್ಬರ ಮನಸ್ಸಿಗೆ ನೋವಾಗದ ಹಾಗೆ ವಿಷಯವನ್ನು ತಲುಪಿಸುವ ಪ್ರಯತ್ನವನ್ನು ಮಾಡಿದ್ದೇನೆ. ಜನರ ಮನಸ್ಸನ್ನು ಗೆದ್ದಿರಬೇಕು ಎಂದು ಭಾವಿಸುತ್ತೇನೆ ಎಂದರು ವಿಜಯ್ ರಾಘವೇಂದ್ರ. ಬಿಗ್ ಬಾಸ್ ವಿರುದ್ಧ ಮಾತನಾಡಿದಾಗ ವಿರೋಧಿಸಿದವನು ನಾನು. ಈ ಸ್ಪರ್ಧೆಯಲ್ಲಿ ಗೆಲ್ಲುವ ಎಲ್ಲ ಅರ್ಹತೆಗಳು ನನಗಿವೆ ಎಂದರು ಅರುಣ್. ಇನ್ನು ನಿಕಿತಾ ಅವರು ಗೆಲ್ಲಲೇಬೇಕೆಂಬ ಅಭಿಮತವನ್ನು ವ್ಯಕ್ತಪಡಿಸಿದರು.


Click it and Unblock the Notifications











