ಮೊಹಮ್ಮದ್ ಇಕ್ರೀಮ್ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಫರ್ಧಿ ; ಮದುವೆ ಯಾವಾಗ ?
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ.
ಇನ್ನು ನಿಜವಾದ ಪ್ರೀತಿಯ.. ಕೂಡ ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಉದಾಹರಣೆಗೆ ಮರಿಯಾ ಜೂಲಿಯಾನಾ ಮತ್ತು ಮೊಹಮ್ಮದ್ ಇಕ್ರೀಮ್ ಅವರನ್ನೇ ತೆಗೆದುಕೊಳ್ಳಿ.

ಹೌದು.. ಮರಿಯಾ ಜೂಲಿಯಾನಾ.. ''ಬಿಗ್ ಬಾಸ್''' ಜೂಲಿ ಎಂದೇ ಪಕ್ಕದ ಚೆನ್ನೈನಲ್ಲಿ ಖ್ಯಾತರಾದವರು ಇವರು. 2017ರಲ್ಲಿ ತಮಿಳರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ ಪಳಗಿಸುವ ''ಜಲ್ಲಿಕಟ್ಟು'' ಎಂಬ ದೇಸಿ ಕ್ರೀಡೆಯ ವಿರುದ್ಧ ದೇಶವ್ಯಾಪಿ ಆಕ್ರೋಶದ ಅಲೆ ಎದ್ದಿತ್ತಲ್ಲ..?
ಆ ಕಾಲದಲ್ಲಿ ಬೆಳಕಿಗೆ ಬಂದ ಪ್ರತಿಭೆ ಇವರು. 3500 ವರ್ಷಗಳ ಇತಿಹಾಸ ಇದೆ ಎನ್ನಲಾಗುವ ಜಲ್ಲಿಕಟ್ಟುವನ್ನು ಸುಪ್ರೀಂಕೋರ್ಟ್ ನಿಷೇಧಿಸಿದಾಗ ವಿರೋಧ ಮಾಡಿದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಇದೇ ಮರಿಯಾ ಜೂಲಿಯಾನ.
ಹೀಗೆ ಸಿಕ್ಕ ಈ ಖ್ಯಾತಿಯ ಪ್ರಭೆಯಲ್ಲಿಯೇ ತಮಿಳು ''ಬಿಗ್ ಬಾಸ್''ನ ಮನೆಯನ್ನು ಪ್ರವೇಶ ಮಾಡಿ ಆ ನಂತರ ''ಬಿಗ್ ಬಾಸ್'' ಜೂಲಿ ಎಂದೇ ಜನಜನಿತರಾದ ಈ ಚೆಲುವೆ ಆ ನಂತರ್ ''ಬಿಗ್ ಬಾಸ್ ಜೋಡಿಗಳ್'' ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡರು. ನೋಡ .. ನೋಡುತ್ತಾ .. ತಮಿಳು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದರು. ಇಷ್ಟೇ ಯಾಕೆ ಎರಡು ಮೂರು ಸಿನಿಮಾಗಳನ್ನು ಕೂಡ ಮಾಡಿದರು.
ಇಂಥಾ ಜೂಲಿ ಅಲಿಯಾಸ್ ಮರಿಯಾ ಜೂಲಿಯಾನಾ ಸದ್ಯ ಸದ್ದಿಲ್ಲದೇ ಉದ್ಯಮಿ ಮೊಹಮ್ಮದ್ ಇಕ್ರೀಮ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ತಮ್ಮ ಕೈ ಹಿಡಿಯುತ್ತಿರುವ ಮೊಹಮ್ಮದ್ ಇಕ್ರೀಮ್ ಅವರ ಮುಖವನ್ನು ಜೂಲಿ ತಾವು ಹಂಚಿಕೊಂಡ ಫೋಟೊ ಮತ್ತು ವಿಡಿಯೋದಲ್ಲಿ ತೋರಿಸಿಲ್ಲವಾದರೂ ತಮ್ಮ ಪೋಸ್ಟ್‌ನಲ್ಲಿ ಭಾವಿ ಪತಿಯನ್ನು ಟ್ಯಾಗ್ ಮಾಡಿದ್ದಾರೆ.

ಸದ್ಯ ಜೂಲಿ ಮತ್ತಿ ಮೊಹಮ್ಮದ್ ಇಕ್ರೀಮ್ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಜೂಲಿ ಮತ್ತು ಮೊಹಮ್ಮದ್ ಇಕ್ರೀಮ್ ಅವರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಇಬ್ಬರು ಭೇಟಿಯಾಗಿದ್ದು ಎಲ್ಲಿ..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಸದ್ಯ ಇಬ್ಬರು ಸ್ಪಷ್ಟವಾದ ಉತ್ತರ ನೀಡದಿದ್ದರೂ ಕೂಡ ಮೊಹಮ್ಮದ್ ಇಕ್ರೀಮ್ ಕೂಡ ತಮಿಳು ಕಿರುತೆರೆಯಲ್ಲಿ ಕೆಲಸ ಮಾಡುತ್ತಾರೆ ಎನ್ನುವ ವಿಚಾರ ಸದ್ಯ ಜಗಜ್ಜಾಹೀರಾಗಿದೆ.
ಜೂಲಿಗೆ ಅಪಾರವಾದ ಹೆಸರು ನೀಡಿದ ತಮಿಳಿನ ''ವಿಜಯ ಟಿವಿ''ಯಲ್ಲಿಯೇ ಮೊಹಮ್ಮದ್ ಇಕ್ರೀಮ್ ಕೆಲಸ ಮಾಡುತ್ತಿದ್ದು, ಒಟ್ಟಿಗೆ ಕೆಲಸ ಮಾಡುತ್ತಾ ಇಬ್ಬರು ಪ್ರೀತಿಯಲ್ಲಿ ಬಿದ್ದಿರಬಹುದು ಎನ್ನುವ ಶಂಕೆಯನ್ನು ಸದ್ಯ ಹಲವರು ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೂಡ ಇಬ್ಬರಿಗೂ ಸದ್ಯ ಹಲವರು ಕೇಳುತ್ತಿದ್ದಾರೆ.
ಒಟ್ನಲ್ಲಿ ಸದ್ಯ ''ಬಿಗ್ ಬಾಸ್''ಜೂಲಿ ಮತ್ತು ಮೊಹಮ್ಮದ್ ಇಕ್ರೀಮ್ ಸದ್ದಿಲ್ಲದೇ ಎಂಗೇಜ್ ಆಗಿದ್ದು ಮುಂಬರುವ ವರ್ಷದ ಮೊದಲಾರ್ಧದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ. ತಮಿಳಿನ ಬೆಳ್ಲಿತೆರೆ ಮತ್ತು ಕಿರುತೆರೆಯ ಹಲವು ಗಣ್ಯರು ಈ ಮದುವೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.


Click it and Unblock the Notifications











