BBK 11; ತ್ರಿವಿಕ್ರಮ್‌ಗೆ ಶಾಕ್, ಈ ವಾರ ದೊಡ್ಮನೆಯಿಂದ ಔಟ್? ಗೋಲ್ಡ್ ಸುರೇಶ್ ಮತ್ತೆ ಬಂದ್ರಾ?

ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 85ನೇ ದಿನಕ್ಕೆ ಕಾಲಿಟ್ಟಿದೆ. ಈ ಬಾರಿ ಶೋ ಭರ್ಜರಿ ಮನರಂಜನೆಯನ್ನೇ ಉಣಬಡಿಸುತ್ತಿದೆ. ವೀಕೆಂಡ್ ಎಪಿಸೋಡ್‌ಗಳಲ್ಲಿ ಕಿಚ್ಚನನ್ನು ನೋಡಲು ವೀಕ್ಷಕರು ಮುಗಿಬೀಳುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಶೋ ಗಮನ ಸೆಳೆದಿದೆ. ಮತ್ತೊಂದು ವೀಕೆಂಡ್ ಬಂದಿದೆ.

ಈ ವಾರ ಯಾರು ದೊಡ್ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ ಬಹುತೇಕರಿಗೆ ಒಂದು ವಿಚಾರ ಮೊದಲೇ ಗೊತ್ತಿತ್ತು. ಇನ್ನು ಪ್ರತಿವಾರದಂತೆ ಈ ವಾರ ಕೂಡ ಕಿಚ್ಚ ವೇದಿಕೆ ಎಂಟ್ರಿ ಕೊಟ್ಟಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಮುಗಿಸಿದೆ. ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಕೂಡ ಚಿತ್ರೀಕರಣವಾಗಿದೆ.

Bigg boss kannada 1 No Contestant Eliminated On 14th week super sunday with sudeepa

14ನೇ ವಾರಕ್ಕೆ ಬಿಗ್‌ಬಾಸ್ ಮನೆಯಲ್ಲಿ 10 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲಿ ಈ ವಾರ ದೊಡ್ಮನೆ ತೊರೆದು ಹೊರ ಬರಲು ಹನುಮಂತ, ರಜತ್, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ನಾಮಿನೇಟ್ ಆಗಿದ್ದರು. ಅದರಲ್ಲಿ ಒಬ್ಬರು ಈ ವಾರ ದೊಡ್ಮನೆ ಜರ್ನಿ ಮುಗಿಸಿ ಹೊರ ಬರಬೇಕಿದೆ.

ಕಳೆದ ಶಾಕಿಂಗ್ ಎನ್ನುವಂತೆ ಇಬ್ಬರು ದೊಡ್ಮನೆ ಬಿಟ್ಟು ಹೊರ ಬಂದಿದ್ದರು. ಶಿಶಿರ್ ಶಾಸ್ತ್ರಿ ಎಲಿಮಿನೇಟ್ ಆಗಿದ್ದರೆ ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಗಳನ್ನು ಕೊಟ್ಟು ಶೋ ಕ್ವಿಟ್ ಮಾಡಿದ್ದರು. ಅವರಿಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಕ್ಕರೂ ಇರಲಿಲ್ಲ. ಅದಕ್ಕೂ ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ಕೂಡ ಶೋ ಕ್ವಿಟ್ ಮಾಡಿದ್ದರು.

ಅಂದಹಾಗೆ ಈ ವಾರ ಬಿಗ್‌ಬಾಸ್ ಮನೆಯಿಂದ ತ್ರಿವಿಕ್ರಮ್ ಔಟ್ ಎಂದು ಕಿಚ್ಚ ಶಾಕ್ ಕೊಟ್ಟಿದ್ದಾರೆ. ಅಂದರೆ ಫ್ರಾಂಕ್ ಮಾಡಿದ್ದಾರೆ. ಕೊನೆಗೆ ನೋ ಎಲಿಮಿನೇಷನ್ ಎನ್ನುವುದು ಗೊತ್ತಾಗಿದೆ. ಬಳಿಕ ತಾವು ಎಲಿಮಿನೇಟ್ ಆಗಲ್ಲ ಎನ್ನುವುದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಭಾನುವಾರದ ಎಪಿಸೋಡ್‌ಗೆ ಗೋಲ್ಡ್ ಸುರೇಶ್ ಅತಿಥಿಯಾಗಿ ಬಂದಿದ್ದಾರೆ ಎನ್ನಲಾಗ್ತಿದೆ.

ಈ ವಾರ ಎಲಿಮಿನೇಷನ್ ಇರಲ್ಲ ಎನ್ನುವುದು ನಾಲ್ಕು ದಿನಗಳ ಹಿಂದೆಯೇ ಗೊತ್ತಾಗಿತ್ತು. ಕಾರಣ ವೋಟಿಂಗ್ ಲೈನ್ ಓಪನ್ ಆಗಿರಲಿಲ್ಲ. ಎಲಿಮಿನೇಷನ್ ನಡೆಯದ ವಾರ ಈ ರೀತಿ ಮಾಡಲಾಗುತ್ತದೆ. ಹಾಗಾಗಿ ಕೆಲವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು. ಅದೇ ನಿಜವಾದಂತೆ ಆಗಿದೆ. ಆದರೆ ಮುಂದಿನ ವಾರದ ನಡುವೆ ಯಾರಾದರೂ ಒಬ್ಬರು ದೊಡ್ಮನೆ ತೊರೆಯುವ ಸಾಧ್ಯತೆಯಿದೆ.

ಪ್ರತಿ ವಾರದಂತೆ ಈ ವಾರದ ಕಿಚ್ಚನ ಜೊತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕೆಲವರಿಗೆ ಕ್ಲಾಸ್ ತೆಗೆದುಕೊಂಡರು. ಮುಖ್ಯವಾಗಿ ಹನುಮಂತುಗೆ ಕಿಚ್ಚ ಮಾತಿನ ಚಾಟಿ ಬೀಸಿದರು. ಪ್ರತಿ ವೀಕೆಂಡ್ ಹನುಮಂತ ಚಪ್ಪಾಳೆ ಪಡೆಯುತ್ತಿದ್ದರು. ಸುದೀಪ್ ತಮಾಷೆಯಾಗಿಯೇ ಅವರೊಟ್ಟಿಗೆ ಮಾತನಾಡುತ್ತಿದ್ದರು. ಆದರೆ ಟಾಸ್ಕ್‌ಗಳ ಬಗ್ಗೆ ಹನುಮಂತ ಆಡುತ್ತಿದ್ದ ಅದೊಂದು ಮಾತಿಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು.

"ಟಾಸ್ಕ್ ರದ್ದಾದರೂ ಪರವಾಗಿಲ್ಲ" ಎಂದು ಹನುಮಂತ ಪದೇ ಪದೆ ಹೇಳುತ್ತಿದ್ದರು. ಇದಕ್ಕೆ ಸುದೀಪ್, "ಇದು ಪುನರಾವರ್ತನೆ ಆದರೆ ನಿಮಗೆ ವೋಟ್ ಬಂದರೂ ಹೊರಗೆ ಕಳುಹಿಸುತ್ತೇನೆ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಅವರಿಗೂ ಸುದೀಪ್ ತಿರುಗೇಟು ನೀಡಿದರು.

ಚೈತ್ರಾ ಪದೇ ಪದೆ ಅನಾರೋಗ್ಯಕ್ಕೆ ತುತ್ತಾಗುವ ಬಗ್ಗೆ ಚರ್ಚೆ ಆಯಿತು. ಈ ವೇಳೆ ಸರಿ ಊಟ ಮಾಡಿದರೆ ಸರಿ ಹೋಗುತ್ತದೆ ಎಂದು ಚೈತ್ರಾಗೆ ಸುದೀಪ್ ಕಿವಿಮಾತು ಹೇಳಿದ್ದರು. ನಾನು ಕುಗ್ಗಿದಾಗ ಸರಿಯಾಗಿ ಊಟ ಸೇವಿಸಲು ಸಾಧ್ಯವಾಗಲ್ಲ ಎಂದು ಅವರು ಹೇಳಿದರು. ಅದಕ್ಕೆ ಗರಂ ಆಗಿದ್ದ ಕಿಚ್ಚ "ನಿಮ್ಮನ್ನು ಯಾರೂ ಇಲ್ಲಿ ಕುಗ್ಗಿಸಲ್ಲ, ಅದಕ್ಕೆ ಬೇರೆಯೇ ಕಾರಣ ಇದೆ" ಎಂದರು.

More from Filmibeat

English summary
Hanumantha, Mokshitha, Rajath, Trivikram, Aishwarya nominated this week, but no one evicted;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X