BBK 11: ಅಬ್ಬಾ, ವೀಕ್ಷಕರು ಬಯಸುತ್ತಿದ್ದ ಸ್ಪರ್ಧಿಯೇ ಈ ವಾರ ಎಲಿಮಿನೇಟ್!; ಯಾರು ಗೊತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 100ನೇ ದಿನಕ್ಕೆ ಸಮೀಪದಲ್ಲಿದೆ. ಇನ್ನೇನು ಎರಡ್ಮೂರು ವಾರಗಳಲ್ಲಿ ಸೀಸನ್ ಮುಗಿಯಲಿದೆ. ಇನ್ನು 9 ಜನ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕಳೆದ ವಾರ ಕೂಡ ಎಲಿಮಿನೇಷನ್ ನಡೆದಿರಲಿಲ್ಲ. ಆದರೆ ಈ ವಾರ ಒಬ್ಬರು ಹೊರ ಬಂದಿದ್ದಾರೆ.
ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರಲು 10 ಮಂದಿಯ ಪೈಕಿ 8 ಜನ ನಾಮಿನೇಟ್ ಆಗಿದ್ದರು. ಭವ್ಯಾ ಹಾಗೂ ರಜತ್ ಮಾತ್ರ ಬಚಾವ್ ಆಗಿ ಗಮನ ಸೆಳೆದಿದ್ದರು. ಮಂಜು, ಗೌತಮಿ, ಧನರಾಜ್, ಹನುಮಂತ, ಚೈತ್ರಾ, ಮೋಕ್ಷಿತಾ ಹೀಗೆ ಎಲ್ಲರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇತ್ತು.

'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್‌ನಲ್ಲಿ ಧನರಾಜ್ ಹಾಗೂ ಹನುಮಂತ ಸೇವ್ ಆಗಿದ್ದರು. ಈ ವಾರ ಧನರಾಜ್‌ಗೆ ಕಿಚ್ಚನ ಚಪ್ಪಾಳೆ ಹಾಗೂ ಹನುಮಂತಗೆ ಕಳಪೆ ಪಟ್ಟ ಸಿಕ್ಕಿರುವುದು ಗೊತ್ತೇಯಿದೆ. ಶನಿವಾರ ಇಬ್ಬರು ಸೇವ್ ಆಗಿದ್ದರು. ಆಗಿದ್ದರೆ ನಾಮಿನೇಟ್ ಲಿಸ್ಟ್‌ನಲ್ಲಿದ್ದ ಇನ್ನು 6 ಜನರ ಪೈಕಿ ಯಾರು ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.
ಅಚ್ಚರಿ ಎಂದರೆ ಈ ವಾರವೂ ಚೈತ್ರಾ ಕುಂದಾಪುರ ಎಲಿಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. ಆದರೆ ಐಶ್ವರ್ಯಾ ಸಿಂಧೋಗಿ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಾಕಷ್ಟು ಜನ ವೀಕ್ಷಕರು ಆಕೆ ಬೇಗ ಎಲಿಮಿನೇಟ್ ಆಗಬೇಕು ಎಂದು ಬಯಸಿದ್ದರು. ಅದೇ ರೀತಿ ಚೈತ್ರಾ ಇನ್ನು ದೊಡ್ಮನೆ ಒಳಗೆ ಉಳಿದುಕೊಂಡಿರುವುದು ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿದೆ.
ಬಹಳ ಸ್ಟ್ರಾಂಗ್ ಎನಿಸಿಕೊಂಡಿದ್ದ ಸ್ಪರ್ಧಿಗಳೇ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿತ್ತು. ಐಶ್ವರ್ಯ ಹೇಗೆ ಇಷ್ಟು ವಾರಗಳ ಕಾಲ ಮನೆಯಲ್ಲಿ ಉಳಿದುಕೊಂಡರು ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿತ್ತು. ಆದರೆ ಈ ವಾರ ಒಬ್ಬರು ಮನೆಯಿಂದ ಹೊರಬರಲೇಬೇಕಿತ್ತು. ಕಾರಣ ಕಳೆದ ವಾರ ಎಲಿಮಿನೇಷನ್ ನಡೆದಿರಲಿಲ್ಲ. ಕೊನೆಗೂ ಆ ಸಾಲಿಗೆ ಐಶ್ವರ್ಯ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇನ್ನು ಐಶ್ವರ್ಯ ಜೊತೆಗೆ ಮೋಕ್ಷಿತಾ ಎಲಿಮಿನೇಷನ್ ತುತ್ತತುದಿಗೆ ಬಂದಿದ್ದರು. ಆದರೆ ಅಂತಿಮವಾಗಿ ಐಶ್ವರ್ಯಾ ಬಿಗ್‌ಬಾಸ್ ದ್ವಾರದಿಂದ ಹೊರ ಬಂದರು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಇದೀಗ ಮನೆಯೊಳಗೆ 9 ಜನ ಮಾತ್ರ ಉಳಿದುಕೊಂಡಿದ್ದಾರೆ. ಈಗಾಗಲೇ ಶೋ 90 ದಿನ ದಾಟಿದೆ. 100 ದಿನಗಳನ್ನು ದಾಟಿ ಮುಂದೆ ಹೋಗುವಂತೆ ಕಾಣುತ್ತಿದೆ. ಈ ಬಾರಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕೂತೂಹಲ ಎಲ್ಲರಲ್ಲಿದೆ.
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು ಸಹ ನಟಿಸಿದ್ದಾರೆ. ಹಾಗಾಗಿ ಚಿತ್ರದ ಸಕ್ಸಸ್ ಬಗ್ಗೆ ಇತ್ತೀಚೆಗೆ ಬಿಗ್‌ಬಾಸ್ ಮನೆಮಂದಿಗೆ ತಿಳಿಸಲಾಗಿತ್ತು. ಮಂಜು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ಕೇಕ್ ಕಟ್ ಮಾಡಲಾಗಿತ್ತು. ಆ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
'ಮ್ಯಾಕ್ಸ್' ಚಿತ್ರದ ಸಕ್ಸಸ್ ಬಗ್ಗೆ ಸುದೀಪ್ ಜೊತೆಗೂ ಚರ್ಚೆ ಆಯಿತು. ಸಿನಿಮಾ ಗೆಲ್ಲಲು ತಮ್ಮ ತಾಯಿ ಆಶೀರ್ವಾದ ಕೂಡ ಕಾರಣ ಎಂದು ಸುದೀಪ್ ಹೇಳಿದ್ದಾರೆ. ಉಗ್ರಂ ಮಂಜುಗೆ ಸುದೀಪ್ ಸಹ ಅಭಿನಂದನೆ ತಿಳಿಸಿದರು.
ಶನಿವಾರದ ಎಪಿಸೋಡ್‌ನಲ್ಲಿ ಭವ್ಯಾಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದರು. 3ನೇ ಬಾರಿ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಆದರೆ ಮೋಸದ ಆಟ ಆಗಿ ಈ ಅವಕಾಶ ಪಡೆದರು ಎನ್ನುವುದು ಮನೆಯಲ್ಲಿ ಕೆಲವರಿಗೆ ಗೊತ್ತಿಲ್ಲ. ಈ ವಿಷಯ ಪ್ರಸ್ತಾಪಿಸಿ ಸುದೀಪ್ ಆಕೆಗೆ ಎಚ್ಚರಿಕೆ ಕೊಟ್ಟರು.


Click it and Unblock the Notifications











