BBK11: ಬಿಗ್‌ಬಾಸ್ ಮನೆಯಿಂದ ಮೊದಲ ಎಲಿಮಿನೇಷನ್, ಪ್ರಬಲ ಸ್ಪರ್ಧಿಯೇ ಔಟ್?
ಬಿಗ್‌ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಶನಿವಾರ(ಅಕ್ಟೋಬರ್ 5) ವಾರದ ಕಥೆ ಕಿಚ್ಚನ ಜೊತೆ ನಡೆದಿದೆ. ಮೊದಲ ವಾರ ಎಲಿಮಿನೇಷನ್ ಇರಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸದ್ದಿಲ್ಲದೇ ಒಬ್ಬರು ಮನೆಯಿಂದ ಹೊಸ ಬಂದಿದ್ದಾರೆ ಎನ್ನಲಾಗ್ತಿದೆ.
ಈ ಬಾರಿ ವಿವಿಧ ಕ್ಷೇತ್ರಗಳ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಕಿರುತೆರೆ ತಾರೆಯರ ಜೊತೆಗೆ ವಕೀಲರು, ಉದ್ಯಮಿ, ಸೋಶಿಯಲ್ ಮೀಡಿಯಾ ಇನ್‌ಫ್ಲುರೆನ್ಸರ್ ಹೀಗೆ ಹಲವರು ಲಿಸ್ಟ್‌ನಲ್ಲಿದ್ದಾರೆ. ಸ್ವರ್ಗ ಹಾಗೂ ನರಕ ಎಂದು ಬಿಗ್‌ಬಾಸ್ ಮನೆಯನ್ನು ಎರಡು ಭಾಗವಾಗಿ ವಿಭಾಗಿಸಲಾಗಿದೆ. 7 ಮಂದಿ ಸ್ಪರ್ಧಿಗಳು ನರಕದಲ್ಲೂ ಇನ್ನುಳಿದ 10 ಮಂದಿ ಸ್ವರ್ಗದಲ್ಲಿ ಇದ್ದಾರೆ.

ಕೆಲವೇ ಗಂಟೆಗಳಲ್ಲಿ 'ಸೂಪರ್ ಸಂಡೇ ವಿತ್ ಸುದೀಪ' ಎಪಿಸೋಡ್ ಪ್ರಸಾರವಾಗಲಿದೆ. ಇನ್ನು ಮೊದಲ ಹಂಸ, ಜಗದೀಶ್, ಭವ್ಯಾ ಗೌಡ, ಚೈತ್ರ ಕುಂದಾಪುರ, ಗೌತಮಿ ಜಾಧವ್, ಮಾನಸ, ಮೋಕ್ಷಿತಾ, ಶಿಶಿರ್, ಯಮುನಾ ನಾಮಿನೇಟ್ ಆಗಿದ್ದರು. ಟಾಸ್ಕ್‌ವೊಂದರಲ್ಲಿ ಗೆದ್ದು ಉಗ್ರಂ ಮಂಜು ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದರು.
ಶನಿವಾರದ ಎಪಿಸೋಡ್‌ನಲ್ಲಿ ಗೌತಮಿ, ಮಾನಸಾ, ಭವ್ಯಾ ಸೇವ್ ಆಗಿದ್ದರು. ಇನ್ನುಳಿದವರು ನಾಮಿನೇಟ್ ಆಗಿದ್ದು ಯಮುನಾ ಶ್ರೀನಿಧಿ ಮೊದಲ ವಾರವೇ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಬಹಳ ಕಡಿಮೆ ವೋಟ್ ಬಂದಿರುವುದರಿಂದ ಆಕೆಗೆ ದೊಡ್ಮನೆಯಿಂದ ಗೇಟ್‌ಪಾಸ್ ಸಿಕ್ಕಿದೆ ಎನ್ನಲಾಗ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ಯಮುನಾ ಶ್ರೀನಿಧಿ ಮೊದಲ ವಾರ ಹೈಲೆಟ್ ಆಗಿದ್ದಾರೆ. ಕೆಲವರ ವಿರುದ್ಧ ಕೂಗಾಡಿದ್ದು ಇದೆ. ಆಕೆಯನ್ನು ಕೆಲವರು ಟಾರ್ಗೆಟ್ ಮಾಡಿದ್ದು ಸನ್ನಿವೇಶಗಳು ಇದೆ. ವಯಸ್ಸು 50 ದಾಟಿದರೂ ನನ್ನನ್ನು ನಾನು ಸಾಬೀತು ಮಾಡಿಕೊಳ್ಳಲು ಈ ಶೋಗೆ ಬಂದಿದ್ದೆ. ನನ್ನನ್ನು ಈ ಮನೆಯಲ್ಲಿ ಕೆಲವರು ಟಾರ್ಗೆಟ್ ಮಾಡ್ತಿದ್ದಾರೆ ಅಂದರೆ ಅಷ್ಟರಮಟ್ಟಿಗೆ ನಾನು ಪೈಪೋಟಿ ಕೊಡ್ತಿದ್ದೀನಿ ಎನಿಸುತ್ತೆ. ಇದು ಖುಷಿ ತಂದಿದೆ ಎಂದು ಸುದೀಪ್ ಎದುರು ಯಮುನಾ ಹೇಳಿಕೊಂಡಿದ್ದರು.
ಕೆಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಯಮುನಾ ಶ್ರೀನಿಧಿ ನಟಿಸಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ಶಿಶಿರ್ ಮೇಲೆ ಯಮುನಾ ಕೂಗಾಡಿದ್ದರು. ಇಬ್ಬರ ವಾಕ್ಸಮರ ಸಖತ್ ವೈರಲ್ ಆಗುತ್ತು.

ಚೈತ್ರಾ ಕುಂದಾಪುರ ಸೀಬೆ ಹಣ್ಣು ತಿಂದ ವಿಚಾರಕ್ಕೆ ಯಮುನಾ ಶ್ರೀನಿಧಿ ಗರಂ ಆಗಿದ್ದರು. ಬಿಗ್‌ಬಾಸ್ ಮನೆ ನಿಯಮ ಪಾಲಿಸಲಿಲ್ಲ ಎಂದು ಚೈತ್ರಾ ಮೇಲೆ ಯಮುನಾ ಗರಂ ಆಗಿದ್ದರು. ಬಿಗ್‌ಬಾಸ್ ಮನೆಗೆ 2ನೇ ಸ್ಪರ್ಧಿಯಾಗಿ ಯಮುನಾ ಪ್ರವೇಶಿಸಿದ್ದರು. ಆಕೆ ದೊಡ್ಮನೆ ಒಳಗೆ ಎಂಟ್ರಿ ಕೊಡುತ್ತಿದ್ದಂತೆ ಮಾತಿನ ಧಾಟಿ ನೋಡಿ ಓವರ್ ಆಕ್ಟಿಂಗ್ ಆಂಟಿ ಎಂದು ಕಾಮೆಂಟ್ ಮಾಡಿದ್ದರು.
ಅಂದಹಾಗೆ ಮೊದಲ ವಾರವೇ ಯಮುನಾ ಶ್ರೀನಿಧಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರಾ? ಎನ್ನುವ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ. 'ಸೂಪರ್ ಸಂಡೇ ವಿತ್ ಸುದೀಪ' ಶೋನಲ್ಲಿ ಇದು ಗೊತ್ತಾಗಲಿದೆ. ಶೋನಲ್ಲಿ ಕೆಲವೊಮ್ಮೆ ಮೊದಲ ವಾರ ಎಲಿಮಿನೇಷನ್ ಇರಲ್ಲ. ದಸರಾ ಹಬ್ಬದ ಕಾರಣಕ್ಕೆ ಈ ರಿಯಾಯಿತಿ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.
ಈ ಹಿಂದೆ ಕೆಲ ಸೀಸನ್‌ಗಳಲ್ಲಿ ಯಾವುದೇ ಎಲಿಮಿನೇಷನ್ ಇಲ್ಲದೇ 2ನೇ ವಾರಕ್ಕೆ ಶೋ ಕಾಲಿಟ್ಟಿತ್ತು. ಮೊದಲ ವಾರ ಸ್ಪರ್ಧಿಗಳಿಗೆ ದೊಡ್ಮನೆಯ ನಿಯಮಗಳನ್ನು ಅರಿತುಕೊಳ್ಳಲು ಅವಕಾಶ ನೀಡಲಾಗುತ್ತದೆ. ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ಮೊದಲ ವಾರವೇ ಎಲಿಮಿನೇಷನ್ ಮಾಡಿದ ಉದಾಹರಣೆಗಳು ಇವೆ. ಕೆಲವೇ ಗಂಟೆಗಳಲ್ಲಿ ಎಲ್ಲದಕ್ಕೂ ತೆರೆ ಬೀಳಲಿದೆ.


Click it and Unblock the Notifications











