ಬಿಗ್ ಬಾಸ್‌ನಲ್ಲಿ ಅವಿದ್ಯಾವಂತ ರೈತರಿಗೆ ಅವಕಾಶ ಕೊಡಿ: ಎತ್ತಿನಗಾಡಿಯಲ್ಲಿ ಕಿಚ್ಚ ಸುದೀಪ್ ಮನೆಗೆ ಬಂದ ರೈತ!
ಬಿಗ್ ಬಾಸ್ ಮನೆಗೆ ಬರಬೇಕು ಎಂಬುದು ಹಲವು ಜನರ ಕನಸು. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುಬೇಕು ಎಂಬ ಆಸೆ ಹಲವರಿಗಿರುತ್ತದೆ. ಸೆಲಬ್ರಿಟಿಗಳು, ನಟ ನಟಿಯರ ಜೊತೆಗೆ ಜನ ಸಾಮಾನ್ಯರಿಗೂ ಅವಕಾಶ ಕೊಡಬೇಕು ಎಂಬ ಬೇಡಿಕೆ ಬರುತ್ತಿತ್ತು. ಕೆಲವು ಶೋಗಳಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಅವಕಾಶ ನೀಡಲಾಗಿತ್ತು. ಆದರೂ ಅನೇಕರು ಈ ಶೋನಲ್ಲಿ ಸಾಮಾನ್ಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪ ಮಾಡಿದ್ದರು.
ಬಿಗ್ ಬಾಸ್ ಮನೆಗೆ ಹೋಗಲು ಜನ ಫೇಮಸ್ ಆಗಿರಬೇಕು. ಇದಕ್ಕಾಗಿ ಹಲವು ಮಂದಿ ಸಕತ್ ಸರ್ಕಸ್ ಕೂಡ ಮಾಡುತ್ತಾರೆ. ಈಗ ರೈತರೊಬ್ಬರು ಬಿಗ್ ಬಾಸ್ ಮನೆಗೆ ಹೋಗುವ ಆಸೆಯಿಂದ ಎತ್ತಿನ ಗಾಡಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಅದು ನಟ ಕಿಚ್ಚ ಸುದೀಪ್ ಅವರ ನಿವಾಸದ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ.

ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದ ರೈತ
ಟಿ ನರಸೀಪುರದ ರೈತ ಮಂಜು ಎಂಬುವವರು ಬೆಂಗಳೂರಿಗೆ ಎತ್ತಿನ ಗಾಡಿಯಲ್ಲಿ ಬಂದು ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಬೇಕು ಎಂದು ನಟ ಸುದೀಪ್ ಮನೆ ಬಳಿ ಬಂದಿದ್ದಾರೆ. ಈಗಾಗಲೇ ಬಿಗ್ ಬಾಸ್‌ನಲ್ಲಿ ರೈತ ವರ್ತೀರ್ ಸಂತೋಷ್ ಇದ್ದಾರೆ. ಹಳ್ಳಿಕಾರ್ ತಳಿಯನ್ನು ಉಳಿಸಿ ಬೆಳೆಸಬೇಕು ಎಂಬ ಕನಸು ಅವರದ್ದು.
ಟಿ ನರಸೀಪುರ ತಾಲೂಕಿನ ಏಳುಮಲೆ ಹಳ್ಳಿಯಿಂದ ಎತ್ತಿನ ಗಾಡಿಯಲ್ಲಿ ಬಂದಿದ್ದ ರೈತ ಮಂಜು ತಮ್ಮ ಗಾಡಿಗೆ ಬ್ಯಾನರ್ ಕೂಡ ಕಟ್ಟಿಕೊಂಡು ಬಂದಿದ್ದರು. "ನಮ್ಮ ನಡಿಗೆ ಬಿಗ್ ಬಾಸ್ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ" ಎಂದು ಬ್ಯಾನರ್ ಬರೆಸಿ ಗಾಡಿಗೆ ಕಟ್ಟಿಕೊಂಡು ಬಂದಿದ್ದಾರೆ.
ಎತ್ತಿನ ಗಾಡಿಯಲ್ಲಿ ಬಂದ ರೈತ ಮಂಜು ಹೇಳಿದ್ದೇನು?
"ನಾನು ಟಿ ನರಸೀಪುರ ತಾಲೂಕಿನ ಬಿಳಿಗೇರೆ ಹಳ್ಳಿಯಿಂದ ಶುಕ್ರವಾರ ಎತ್ತಿನ ಗಾಡಿಯಲ್ಲಿ ಹೊರಟು ಇಂದು ಬೆಳಗ್ಗೆ ಆರು ಗಂಟೆಗೆ ಸುದೀಪ್ ಮನೆ ಹತ್ತಿರ ಬಂದೆ. ಆದರೆ ಅಲ್ಲಿ ಇರುವವರು ನನ್ನನ್ನು ತಡೆದರು. ಇಲ್ಲಿ ಇದ್ದರೆ ನಿನ್ನ ಮೇಲೆ ಮಾನನಷ್ಟ ಮೊಕ್ಕದಮೆ ಹಾಕಬಹುದು ಎಂದು ಹೇಳಿದರು" ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ನಮ್ಮಂತ ಅವಿದ್ಯಾವಂತರು, ಕನಾರ್ಟಕದಲ್ಲಿ ಓದದೇ ಇರುವವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳೋಕೆ ಸುದೀಪ್ ಅಣ್ಣ ಅವರ ಹತ್ತಿರ ಬಂದಿದ್ದೆ. ಅವರು ಚೆನ್ನೈಗೋ ಎಲ್ಲಿಗೋ ಹೋಗಿದ್ದಾರೆ ಎಂದು ಇಲ್ಲಿನವರು ಹೇಳಿದರು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಬಂದು ಕಳಿಸಿದರು" ಎಂದು ಮಂಜು ಏಳುಮಲೆ ತಿಳಿಸಿದ್ದಾರೆ.
ಇನ್ನು, ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಈಗಾಗಲೇ ವರ್ತೂರು ಸಂತೋಷ್ ರೈತರನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಹಲವು ಮಂದಿ ಅವರನ್ನು ರೈತ ಎಂದು ಒಪ್ಪಿಕೊಂಡಿಲ್ಲ. ಸಾಮಾನ್ಯ ರೈತರಿಗೂ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬುದು ಜನರ ವಾದ. ಹಳ್ಳಿಕಾರ್ ಹಸುಗಳ ತಳಿಯನ್ನು ಉಳಿಸುವ ಪಣದಿಂದ ಕೆಲಸ ಮಾಡುತ್ತಿರುವ ಅವರು ತಾವು ಒಬ್ಬ ರೈತ, ಇಂದಿಗೂ ಕೃಷಿ ಮಾಡಿಯೇ ಬದುಕುತ್ತಿದ್ದೇನೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಇದರ ನಡುವೆ ಟಿ ನರಸೀಪುರದ ಮಂಜು ಎಂಬುವವರು ಹೊಸ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











