Bigg Boss: ಬಿಗ್ ಬಾಸ್ ಕಾರ್ಯಕ್ರಮ ನಿಲ್ಲಿಸಲು ಒತ್ತಾಯ, ಸಾಗರದ ವಕೀಲರಿಂದ ವಿರುದ್ಧ ದೂರು ದಾಖಲು

By ಫಿಲ್ಮಿಬೀಟ್ ಡೆಸ್ಕ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನೋಡುಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, ಬಿಗ್‌ ಬಾಸ್ ಮನೆಯೊಳಗೆ ಸ್ಪರ್ಧಿಗಳ ವರ್ತನೆ ವಿರುದ್ಧ ಅಪಸ್ವರವೂ ಕೇಳಿ ಬರುತ್ತಿದೆ. ಈ ಸಂಬಂಧ ದೂರನ್ನು ದಾಖಲು ಮಾಡಲಾಗಿದೆ.

ಈ ಬಾರಿಯ ಬಿಗ್ ಬಾಸ್ ವಿವಾದಗಳಲ್ಲಿ ಮುಳುಗಿ ಹೋಗಿದೆ. ಒಂದಲ್ಲ ಒಂದು ರೀತಿಯಲ್ಲಿ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದೆ. ಬಿಗ್ ಸ್ಟರ್ಧಿಗಳು ಅಷ್ಟೇ ಮನೆಯೊಳಗೆ ಗೆಲ್ಲುವುದಕ್ಕೆ ಆಡುವುದಕ್ಕಿಂತ ಹೆಚ್ಚಾಗಿ ದ್ವೇಷ ಸಾಧಿಸುವುದಕ್ಕೆ ಆಡುತ್ತಿದ್ದಾರೇನೋ ಅಂತ ವೀಕ್ಷಕರಿಗೆ ಭಾಸವಾಗುತ್ತಿದೆ. ಹೀಗಾಗಿ ಸ್ಪರ್ಧಿಗಳ ವರ್ತನೆ ವಿರುದ್ಧವೂ ಕಿಡಿಕಾರುತ್ತಿದ್ದಾರೆ.

Bigg Boss Kannada 10 Advocate KV Praveen from Shivamogga district sagar filed complaint

ಇತ್ತೀಚೆಗೆ ನಡೆದ ಟಾಸ್ಕ್‌ನಲ್ಲಿ ಇಬ್ಬರ ಸ್ಪರ್ಧಿಗಳ ಕಣ್ಣುಗಳಿಗೆ ಕುತ್ತು ಬಂದಿತ್ತು. ನೀರು ಎರಚುವ ಆಟದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಾದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮೇಲೆ ಕೆಮಿಕಲ್ ಮಿಶ್ರಣ ಮಾಡಿದ್ದ ನೀರನ್ನು ಬಳಸಲಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಿಗ್ ಬಾಸ್ ಶೋಗೆ ಹಿಂತಿರುಗಿದ್ದಾರೆ. ಹೀಗಾಗಿ ಅಶ್ಲೀಲ ಪದ ಬಳಿಕೆ, ಚಪ್ಪಲಿಯಲ್ಲಿ ಹೊಡೆದಾಟ ಇಂತಹದ್ದನ್ನು ವಿರೋಧಿಸಿ ದೂರು ದಾಖಲಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಯಾಕೋ ವಿವಾದಗಳ ಸುತ್ತವೇ ತಿರುತ್ತಿದೆ. ಹುಲಿ ಉಗುರು ಸಂಬಂಧ ವರ್ತೂರು ಸಂತೋಷ್ ಜೈಲು ಸೇರಿದ್ದರು. ಅದೇ ಜಾತಿ ನಿಂಧನೆ ಆರೋಪದ ಮೇಲೂ ದೂರು ದಾಖಲಾಗಿತ್ತು. ಈಗ ಮತ್ತೊಂದು ದೂರನ್ನು ದಾಖಲು ಮಾಡಲಾಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋ ಸಂಕಷ್ಟಕ್ಕೆ ಸಿಲುಕಿದೆ.

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಕೆ.ವಿ.ಪ್ರವೀಣ್ ಎಂಬುವವರು ದೂರನ್ನು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ ಎಂದು ಆರೋಪ ಮಾಡಿದ್ದಾರೆ.

Bigg Boss Kannada 10 Advocate KV Praveen from Shivamogga district sagar filed complaint

ಬಿಗ್ ಬಾಸ್‌ ಶೋನಲ್ಲಿ ಅಶ್ಲೀಲ ಪದ ಬಳಕೆ, ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ಇದು ಸಮಾಜ ಹಾಗೂ ಕೌಟುಂಬಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ಕಾರ್ಯಕ್ರಮದ ಪ್ರಸಾರ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಈ ದೂರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮೇಲ್ ಹಾಗೂ ಅಂಚೆ ಮೂಲಕ ನೀಡಲಾಗಿದೆ.

ಈ ದೂರಿನ ಮೂಲಕ ಮತ್ತೊಮ್ಮೆ ಬಿಗ್ ಬಾಸ್ ಕನ್ನಡ ಸಂಕಷ್ಟಕ್ಕೆ ಸಿಲುಕಿದೆ. ದೂರು ದಾಖಲಾದ ಬಳಿಕ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಏನಾದರೂ ಬದಲಾವಣೆಯಾಗುತ್ತಾ? ಸ್ಪರ್ಧಿಗಳಿಗೆ ಖಡಕ್ ಸೂಚನೆ ಕೊಟ್ಟು ಟಾಸ್ಕ್‌ಗಳೂ ನಡೆಯುವಂತೆ ನೋಡಿ ಕೊಳ್ಳುತ್ತಾರಾ? ಅನ್ನೋದು ಇನ್ನಷ್ಟೆ ಹೊರಬೀಳಬೇಕಿದೆ.

More from Filmibeat

English summary
Bigg Boss Kannada 10:Advocate KV Praveen from sagar filed complaint|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X