Snehith Gowda: ದೊಡ್ಮನೆಯಿಂದ ಬಂದು ತಂದೆ-ತಾಯಿಯ ಬಳಿ ಕ್ಷಮೆಯಾಚಿಸಿದ ಸ್ನೇಹಿತ್..! ಕಾರಣವೇನು?

By Shruthi Harishgowda

ಬಿಗ್ ಬಾಸ್ ಮನೆಯ ಜರ್ನಿಯನ್ನು‌ 9 ವಾರಕ್ಕೆ ಮುಗಿಸಿದ ಸ್ನೇಹಿತ್ ಮರಳಿ ತಮ್ಮ ಮನೆಗೆ ಬಂದಿದ್ದಾರೆ. ಮನೆಗೆ ಮರಳಿದ ಸ್ನೇಹಿತ್ ಅವರನ್ನು ಕುಟುಂಬಸ್ಥರು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸ್ನೇಹಿತ್ ಬಂದ ಕೂಡಲೇ ಆರತಿಯನ್ನು ಬೆಳಗಿ ಮನೆಗೆ ಕರೆದುಕೊಂಡಿದ್ದಾರೆ.

ಸ್ನೇಹಿತ್‌ಗೆ ಅವರ ತಾಯಿ ಎಂದರೆ ತುಂಬಾನೆ ಇಷ್ಟ. ಅದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಕೂಡ ಅಲ್ಲಲ್ಲಿ ಕಾಣುತ್ತಿತ್ತು. ಯಾವುದೇ ಒಂದು ಗೆಲುವು ಬಂದರೂ ಅದನ್ನ ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದು ಹೇಳುತ್ತಿದ್ದರು. ಈಗಲೂ ಕೂಡ ತಂದೆ ತಾಯಿ ಮೇಲೆ ಅಪಾರ ಗೌರವ ಹೊಂದಿರುವ ಸ್ನೇಹಿತ್ ತಂದೆ ತಾಯಿ ಬಳಿ ಕ್ಷಮೆ ಯಾಚಿಸಿದ್ದಾರೆ.

Bigg Boss Kannada 10: After being eliminated from Bigg Boss, Snehith Gowda has apologized to his parents

ಸ್ನೇಹಿತ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ವಿಚಾರಗಳಿಗಾಗಿ ಟ್ರೋಲ್‌ಗೆ ಒಳಗಾಗಿದ್ದರು. ಅದರಿಂದ ತಂದೆ-ತಾಯಿಗೆ ಎನಾದರೂ ನೋವಾಗಿದ್ದರೆ ಎಂದುಕೊಂಡು ಅಮ್ಮ -ಅಮ್ಮ ನನ್ನಿಂದ ಎನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಇದೇ ವೇಳೆ ತನ್ನ ಅಮ್ಮನನ್ನು ತಬ್ಬಿಕೊಂಡು ಮುದ್ದಾಡಿದ್ದಾರೆ.

ತಂದೆ-ತಾಯಿ‌ ಬಳಿ ಕ್ಷಮೆ ಕೇಳಿದ ಸ್ನೇಹಿತ್

ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಇದೆ ವೇಳೆ ತಂದೆ ತಾಯಿಯ ಬಳಿ ಬಂದು ಅಮ್ಮ ಅಪ್ಪ ನಿಮ್ಮ ಗೌರವ ಕಳೆಯುವ ಕೆಲಸವನ್ನು ನಾನು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಇದಕ್ಕೆ ಸ್ನೇಹಿತ್ ತಾಯಿ 'ಇಲ್ಲ ಕಂದ' ಎಂದು ಸಮಾಧಾನವನ್ನು ಮಾಡಿದ್ದಾರೆ. ನಾನು ಗೊತ್ತಿದ್ದು ಯಾವ ತಪ್ಪನ್ನು ಮಾಡಲಿಲ್ಲ. ಗೊತ್ತಿಲ್ಲದೆ ಆಗಿರುವ ತಪ್ಪಿಗೆ ದಯವಿಟ್ಟು ನನ್ನನ್ನ ಕ್ಷಮಿಸಿ ಎಂದು ಸ್ನೇಹಿತ್ ಕೇಳಿಕೊಂಡಿದ್ದಾರೆ.

Bigg Boss Kannada 10: After being eliminated from Bigg Boss, Snehith Gowda has apologized to his parents

ನಾನು ಬೇರೆ ಯಾರನ್ನು ಸಾರಿ ಕೇಳೋದಿಲ್ಲ. ಆದರೆ ನಿಮಗೆ ಮಾತ್ರ ಸಾರಿ ಕೇಳುತ್ತೇನೆ ಎಂದು ಹೇಳಿದ್ದಾರೆ. ನಾನು ಇಲ್ಲಿವರೆಗೂ ನೀವು ಹೆಮ್ಮೆ ಪಡುವ ಕೆಲಸವನ್ನೇ ಮಾಡಿದ್ದೆ. ಆದರೆ ನನ್ನಿಂದ ಗೊತ್ತಿಲ್ದೆ ತಪ್ಪಾಗಿದ್ದರೆ ಅದನ್ನು ಮಾತ್ರ ಕ್ಷಮಿಸಿಬಿಡಿ ಎಂದಿದ್ದಾರೆ. ಇನ್ನು ಇದೇ ವೇಳೆ ಅಮ್ಮನನ್ನು ತಬ್ಬಿಕೊಂಡು ನೀನು ನನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಅವರ ಅಮ್ಮ ಹೌದು ಎಂದಿದ್ದಾರೆ. ಪ್ರತಿದಿನವೂ ಎಪಿಸೋಡ್ ನೋಡುತ್ತಿದ್ದೀಯಾ ಎಂದು ಕೇಳಿದ್ದಾರೆ. ಇದಕ್ಕೂ ಸಹ ಹೌದು ಎಂದು ಹೇಳಿದ್ದಾರೆ. ಅಮ್ಮ ನಿನಗೆ ಖುಷಿಯಾಗಿದ್ಯಾ? ಎಷ್ಟು ವಾರ ನಿನಗೆ ನಾನು ಡೆಡಿಕೇಟ್ ಮಾಡಿದ್ದೇನೆ ಎಂದು ಅಮ್ಮನನ್ನ ಖುಷಿಪಡಿಸಿದ್ದಾರೆ.

ಅಮ್ಮನನ್ನು ತಬ್ಬಿಕೊಂಡು ಸ್ನೇಹಿತ್ ಭಾವುಕ

ಸ್ನೇಹಿತ್‌ಗೆ ತನ್ನ ತಂದೆ ತಾಯಿ ಎಂದರೆ ತುಂಬಾನೆ ಪ್ರೀತಿ ಗೌರವ ಇನ್ನೂ ಅವರಿಗೂ ಸಹ ಮಗ ಎಂದರೆ ಪ್ರಾಣ. ಅದನ್ನು ಕಿಚ್ಚ ಸುದೀಪ್ ನೆನ್ನೆ ನಡೆಸಿಕೊಟ್ಟ ಶೋನಲ್ಲೂ ತೋರಿಸಿದರು. ನಮ್ಮ ಮಗ ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಇದ್ದಿದ್ದೆ ನನಗೆ ಖುಷಿಯನ್ನು ತಂದಿದೆ ಎಂದು ಹೇಳಿದ್ದರು. ಅದರ ಜೊತೆಗೆ ನಮ್ರತಾ ಬಂದಿದ್ದರೆ ಇನ್ನಷ್ಟು ಖುಷಿಪಡುತ್ತಿದ್ದೆ ಎಂದು ನಗೆಯ ಚಟಾಕಿಯನ್ನ ಹಾರಿಸಿದ್ದರು. ಮನೆಗೆ ಬಂದಿರುವ ಸ್ನೇಹಿತ್ ಅಮ್ಮನನ್ನ ತಬ್ಬಿಕೊಂಡು ಭಾವುಕರಾಗಿದ್ದಾರೆ. ಇಷ್ಟು ದಿನ ಪೋಷಕರಿಂದ ದೂರ ಇದ್ದ ಸ್ನೇಹಿತ್ ಮರಳಿ ಗೂಡಿಗೆ ಸೇರಿದ್ದು ತಮ್ಮ ತಂದೆ ತಾಯಿಯ ಜೊತೆ ಖುಷಿಯಾಗಿ ಇದ್ದಾರೆ.

More from Filmibeat

English summary
Snehith Gowda has apologized to his parents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X