ಲೆಹೆಂಗಾ ತೊಟ್ಟು ಮಿಂಚಿದ ನಮ್ರತಾ ಗೌಡ; ಕಾರ್ತಿಕ್ ಜೊತೆ ಡೇಟಿಂಗ್ ಯಾವಾಗ ಎಂದ ನೆಟ್ಟಿಗರು?

By ಪೂರ್ವ

ಬಿಗ್‌ಬಾಸ್ ಮೂಲಕ ವೀಕ್ಷಕರಿಗೆ ಮನರಂಜನೆ ಕೊಟ್ಟ ಸ್ಪರ್ಧಿಗಳ ಪೈಕಿ ನಮ್ರತಾ ಗೌಡ ಕೂಡ ಒಬ್ಬರು. ನಮ್ರತಾ ಗೌಡ ನಟನೆಗೆ ಕಾಲಿಡುವುದಕ್ಕೂ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆ ಬಳಿಕ 2011ರಲ್ಲಿ ಪ್ರಸಾರವಾದ 'ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ್ದರು.

'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಹಿಮ ಪಾತ್ರಧಾರಿಯಾಗಿ ಕಾಣಿಸಿಕೊಂಡ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಅಷ್ಟರ ಮಟ್ಟಿಗೆ ಅದ್ಭುತವಾಗಿ ನಟನೆ ಮಾಡುತ್ತಿದ್ದರು. ಅದಾದ ಬಳಿಕ ಜೀ ಕನ್ನಡದಲ್ಲಿ 'ನಾಗಿಣಿ 2' ಸೀರಿಯಲ್‌ನಲ್ಲಿ ನಟನೆ ಮಾಡುವ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ.

Bigg Boss Kannada 10 and Nagini fame Namratha Gowda new photo shoot

ಈ ಧಾರಾವಾಹಿ ಬಳಿಕ ಉತ್ತಮ ನಟನೆಯಿಂದ ನಮ್ರತಾ ಗೌಡ ಅಭಿಮಾನಿಗಳ ಮನದಲ್ಲಿ ಬೇರೂರಿ ಬಿಟ್ಟರು . ಇನ್ನು ನಮ್ರತಾ ಬಿಗ್ ಬಾಸ್‌ನಲ್ಲಿ 100 ದಿನಕ್ಕಿಂತ ಹೆಚ್ಚು ದಿನ ಇದ್ದು, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹಾಗೆಯೇ 'ತಕಮಿಧಿತ' ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ಈ ಮೂಲಕ ಅಭಿಮಾನಿಗಳಿಗೆ ಮಾತ್ರ ಒಂದಲ್ಲ ಒಂದು ಸಂತಸದ ಸುದ್ದಿಯನ್ನು ನೀಡುತ್ತಲೆ ಇರುತ್ತಾರೆ. ಬಹಳ ಕಷ್ಟದಿಂದ ಈ ನಟಿ ಮೇಲೆ ಬಂದಿರುವುದರಿಂದ ಆ ದಿನಗಳನ್ನು ಹಲವಾರು ಸಂದರ್ಶನದ ಮೂಲಕ ನಮ್ರತಾ ಮನ ಬಿಚ್ಚಿ ಮಾತನಾಡಿದ್ದಾರೆ.

ಹಾಗೆಯೇ ಇದೀಗ ಬಿಗ್‌ಬಾಸ್ ಮೂಲಕ ನಮ್ರತಾ ಗೌಡ ಮತ್ತಷ್ಟು ಫೇಮಸ್ ಆಗಿದ್ದಾರೆ. ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಹಾಗೆಯೇ ಅಭಿಮಾನಿಗಳ ಜೊತೆ ಮಾತುಕತೆಯೂ ನಡೆಸುತ್ತಾರೆ. ಹಾಗೆಯೇ ಫೋಟೋ ಶೂಟ್ ಕೂಡ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.

ನಮ್ರತಾ ಗೌಡ ಫೋಟೋಶೂಟ್‌ ಖುಷಿ

ಅಭಿಮಾನಿಗಳು ನಮ್ರತಾ ಫೋಟೋ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಲೈಕ್ ಹಾಗೂ ಕಾಮೆಂಟ್ ಮಾಡುವ ಮೂಲಕ ಮತ್ತಷ್ಟು ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ರತಾ ಗೌಡ ಅಪಾರ ಸ್ನೇಹಿತರನ್ನು ಹಾಗೆಯೇ ಅಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡು ಇದ್ದಾರೆ. ನಮ್ರತಾ ಗೌಡ ಆಗಾಗ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಅದು ಸಾಮಾನ್ಯ ಬಿಡಿ.. ಆದರೆ, ಈ ಬಾರಿ ನಮ್ರತಾ ಗೌಡ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದು, ಇನ್ನಷ್ಟು ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಚೆಂದದ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆಯೇ ಬಿಗ್​ ಬಾಸ್​ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇನ್ನೂ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಗಳ ಸುರಿಮಳೆ ಸುರಿಸುತ್ತಾ ಇದ್ದಾರೆ. ಹಾಗೆಯೇ ಕಾರ್ತಿಕ್ ಜೊತೆ ಡೇಟಿಂಗ್ ಯಾವಾಗ? ಎಂದು ನಮ್ರತಾ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ.


ನಮ್ರತಾ ಗೌಡ ನೋಡಿ ಫ್ಯಾನ್ಸ್ ಫುಲ್ ಖುಷ್

ನೆಚ್ಚಿನ ನಟಿಯ ಫೋಟೋ ನೋಡಿ ಅಭಿಮಾನಿಗಳಂತೂ ಸಖತ್ ಖುಷಿ ಪಟ್ಟಿದ್ದಾರೆ. ಲೆಹೆಂಗದಲ್ಲಿ ಮಿಂಚುತ್ತಿರುವ ನಟಿಯ ಫೋಟೋ ಕಂಡು ಬ್ಯೂಟಿ ಫುಲ್, ಕಾರ್ತಿಕ್ ಜೊತೆ ಯಾವಾಗ ಡೇಟಿಂಗ್? ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ನಮ್ರತಾ ಮುಂದಿನ ಧಾರಾವಾಹಿ ಯಾವುದೆಂದು ಅನೌನ್ಸ್ ಮಾಡಬೇಕಿದೆ. ಸದ್ಯ ಬಿಗ್‌ಬಾಸ್‌ನಿಂದ ಹೊರ ಬಂದ್ಮೇಲೆ ನಮ್ರತಾ ಗೌಡ ಟೆಂಪಲ್ ರನ್ ಮಾಡುತ್ತಿದ್ದು, ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಬೇಕಿದೆ.

More from Filmibeat

English summary
BBK10 and Nagini fame Namratha Gowda new photo shoot went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X