Bigg Boss Kannada 10 Launch Live: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್

ಬಿಗ್‌ಬಾಸ್ ಕನ್ನಡ ಸೀಸನ್ 10ರ ಕುತೂಹಲಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ. ಭಾರೀ ಕುತೂಹಲ ಮೂಡಿಸಿದ್ದ ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಭರ್ಜರಿ ಮನರಂಜನೆ ಹೊತ್ತು ತಂದಿದೆ. ಹೊಸ ಮನೆಯಲ್ಲಿ ಈ ಬಾರಿ ಬಿಗ್‌ಬಾಸ್ ಶೋ ನಡೆಯಲಿದ್ದು ಕಿಚ್ಚ ಸುದೀಪ್ ವೇದಿಕೆಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳನ್ನು ಸ್ವಾಗತಿಸಲಿದ್ದಾರೆ. ಈ ಮೆಗಾ ಈವೆಂಟಿನ ಲೈವ್ ಅಪ್ಡೇಟ್ಸ್ ಅನ್ನು ಈ ಪೇಜಿನಲ್ಲಿ ನೀಡಲಾಗುತ್ತದೆ.

Bigg Boss Kannada 10 (BBK 10) Live Updates:Confirmed contestants list, Starting time, kichcha Sudeep

  • Oct 8, 2023 11:04 PM
    ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಎಂಟ್ರಿ

    ಬಿಗ್ ಬಾಸ್ ಕನ್ನಡ ಸೀಸನ್ 10 ವೇದಿಕೆ ವಿಭಿನ್ನ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ವಿಭಿನ್ನ ವ್ಯಕ್ತಿತ್ವದ, ಕ್ಷೇತ್ರದ ವ್ಯಕ್ತಿಯನ್ನು ಮನೆಯೊಳಗೆ ಕಳಿಸಲಾಗುತ್ತಿದೆ. ಈ ಬಾರಿ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಎಂಟ್ರಿ ಕೊಟ್ಟಿದ್ದಾರೆ. ಮಾಡಲ್, ಬಾಸ್ಕೆಟ್ ಬಾಲ್, ಫಿಟ್ನೆಸ್ ಬಗ್ಗೆ ಹೆಚ್ಚು ಒಲವಿದೆ. ಕಳೆದ ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿದ್ದಾರೆ. ಇವರ ಕನ್ನಡಕ್ಕೆ ನಟಿ ಶ್ರುತಿನೇ ಫಿದಾ ಆಗಿದ್ದಾರೆ.

  • Oct 8, 2023 10:57 PM
    ಬಿಗ್‌ಬಾಸ್ ಸ್ಪರ್ಧಿ ಮನೆ ಪ್ರವೇಶಿಸಿದ ಪತ್ರಕರ್ತ ಗೌರೀಶ ಅಕ್ಕಿ

    ಕನ್ನಡದ ಖ್ಯಾತ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಸಾಕಷ್ಟು ಸುದ್ದಿ ವಾಹಿನಿಗಳಲ್ಲಿ ವಾರ್ತಾ ವಾಚಕರಾಗಿ ಕೆಲಸ ಮಾಡಿದ್ದಾರೆ. ಸುದ್ದಿ ಕ್ಷೇತ್ರದಲ್ಲಿ ಜನಪ್ರಿಯ ವ್ಯಕ್ತಿಯಾಗಿರೋ ಗೌರೀಶ್ ಅಕ್ಕಿಗೆ ವೀಕ್ಷಕರು 82 ಪರ್ಸೆಂಟ್ ವೋಟ್ ಹಾಕಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

  • Oct 8, 2023 10:30 PM
    ಬಿಗ್ ಬಾಸ್ ವೇದಿಕೆಯಲ್ಲಿ ವರ್ತೂರು ಸಂತೋಷ್ ಹೋಲ್ಡ್

    "ಸಗಣಿಯನ್ನೂ ಎತ್ತುತ್ತೀನಿ.. ಶೋಕಿಯನ್ನೂ ಮಾಡ್ತೀನಿ" ಎಂದು ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹೇಳುತ್ತಲೇ ವೇದಿಕೆ ಬಂದಿದ್ದರು. ವರ್ತೂರಿನಲ್ಲಿ ಸಂತೋಷ್‌ ವ್ಯವಸಾಯ ಮಾಡಿಕೊಂಡಿದ್ದಾರೆ. "ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ.. ಶೋಕಿನೂ ಮಾಡಬಹುದು" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಆದರೆ, "ಇರುವವರೆಗೂ ಬದುಕನ್ನು ಆನಂದಿಸಿ. ಯಾರಿಗೂ ಮೋಸ ಮಾಡಬೇಡಿ" ವೇದಿಕೆ ಮೇಲೆ ಹೇಳಿದ್ದರು. ಆದರೂ ಜನರು 78% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದಾರೆ.

  • Oct 8, 2023 10:25 PM
    ಬಾಡಿ ಬಿಲ್ಡರ್ ಚಿತ್ರಾ ವಿಫಲ

    ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆಯಬೇಕು ಅನ್ನೋದು ಹಲವು ಮಂದಿಯ ಕನಸು. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಬಾಡಿ ಬಿಲ್ಡರ್ ಚಿತ್ರಾ ಪ್ರಯತ್ನ ಪಟ್ಟಿದ್ದರು. ಆದರೆ, ವಿಫಲರಾಗಿದ್ದಾರೆ. ವೀಕ್ಷಕರು ಚಿತ್ರಾಗೆ 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಸಿಕ್ಕಿಲ್ಲ.

  • Oct 8, 2023 9:37 PM
    777 ಚಾರ್ಲಿ ನಟಿ ಸಂಗೀತಾ ಶೃಂಗೇರಿ ಹೋಲ್ಡ್

    777 ಚಾರ್ಲಿ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿರೋ ನಟಿ ಸಂಗೀತಾ ಶೃಂಗೇರಿ. ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಶೃಂಗೇರಿ ಈ ಹಿಂದೆ ಕೋಟಿ ಕೊಟ್ಟರೂ ಬಿಗ್ ಬಾಸ್‌ಗೆ ಹೋಗಲ್ಲ ಎಂದಿದ್ದರು. ಅದನ್ನೇ ಕಿಚ್ಚ ಸುದೀಪ್ ಈಗ ಕಾಲೆಳೆದಿದ್ದಾರೆ. ಈ ಬಾರಿ ಹ್ಯಾಪಿ ಬಿಗ್ ಬಾಸ್ ಆಗಿದ್ದರಿಂದ ಈ ಸೀಸನ್‌ಗೆ ಒಪ್ಪಿಕೊಂಡೆ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅದರೆ, ವೀಕ್ಷಕರು 76 ಪರ್ಸೆಂಟ್ ವೋಟ್ ಹಾಕಿ ಹೋಲ್ಡ್‌ಗೆ ಹಾಕಿದ್ದಾರೆ.

  • Oct 8, 2023 9:28 PM

    ಮುಂದಿನ ಕಂಟೆಸ್ಟೆಂಟ್ ಸಂತೋಷ್ ಕುಮಾರ್

  • Oct 8, 2023 9:27 PM
    ಹೋಲ್ಡ್‌ನಲ್ಲಿ ಕುಳಿತ ಬುಲೆಟ್ ಪ್ರಕಾಶ್ ಮಗ ರಕ್ಷಕ್

    ತುಂಬಾ ಉತ್ಸಾಹದಲ್ಲಿ ತನ್ನನ್ನು ತಾನು ಸಾಬೀತುಪಡಿಸುತ್ತೇನೆ, ನನ್ನ ಬಗ್ಗೆ ನೆಗೆಟಿವ್ ಇರುವ ವಿಷಯಗಳನ್ನು ಪಾಸಿಟಿವ್ ಮಾಡುವೆ ಎಂದಿದ್ದ ರಕ್ಷಕ್‌ಗೆ ವೀಕ್ಷಕರು 53% ವೀಟು ನೀಡಿದ್ದಾರೆ. ಹೀಗಾಗಿ ತನಿಷಾ ಮತ್ತು ಡ್ರೋನ್ ಪ್ರತಾಪ್ ಜೊತೆಗೆ ವೈಟಿಂಗ್ ರೂಂನಲ್ಲಿ ಕುಳಿತುಕೊಳ್ಳಬೇಕಾಗಿದೆ

  • Oct 8, 2023 8:38 PM
    ನಟಿ ತನಿಷಾಗೆ ಬಿಗ್‌ಬಾಸ್ ಎಂಟ್ರಿ ಸಿಗುತ್ತಾ?

    ನಟಿ ತನಿಷಾ ಕುಪ್ಪಂಡ ಕೂಡ ಬಿಗ್‌ಬಾಸ್ ಮನೆ ಒಳಗೆ ಹೋಗಲು ಬಹಳ ಉತ್ಸುಕರಾಗಿದ್ದರು. ಆದರೆ ಅಷ್ಟು ಸುಲಭವಾಗಿ ಅವರಿಗೆ ಆ ಅವಕಾಶ ಸಿಗಲಿಲ್ಲ. 68% ವೋಟ್ ಪಡೆದ ತನಿಷಾ ಎಂಟ್ರಿಯನ್ನು ಇನ್ನು ಖಚಿತಪಡಿಸಿಲ್ಲ. ಡ್ರೋಣ್ ಪ್ರತಾಪ್ ಜೊತೆಗೆ ಆಕೆ ಕೂಡ ದೊಡ್ಮನೆ ಒಳಗೆ ಹೋಗಲು ಕಾಯುವಂತಾಗಿದೆ.

  • Oct 8, 2023 8:33 PM
    ತುಕಾಲಿ ಸಂತು- ಮಾನಸಾ ಬಿಂದಾಸ್ ಡ್ಯಾನ್ಸ್

    ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು 5ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪತ್ನಿ ಮಾನಸಾ ಜೊತೆ ವೇದಿಕೆ ಏರಿ ಹೆಜ್ಜೆ ಹಾಕಿದ್ದ ಸಂತು ತಮ್ಮ ಕಾಮಿಡಿಯಿಂದ ರಂಜಿಸಿದರು. ಸುದೀಪ್ ಇಬ್ಬರನ್ನು ಒಳಗೆ ಕಳುಹಿಸುವುದಾಗಿ ಹೇಳಿ ಕೆಲಹೊತ್ತು ಇಬ್ಬರನ್ನು ಗೋಳು ಹುಯ್ದುಕೊಂಡರು. ಕೊನೆಗೆ ಸಂತು 93% ವೋಟ್ ಪಡೆದು ಮನೆ ಒಳಗೆ ಪ್ರವೇಶಿಸಿದರು.

  • Oct 8, 2023 8:01 PM
    ಡ್ರೋಣ್ ಪ್ರತಾಪ್‌ಗೆ ಶಾಕ್

    ನಾನು ವಿಜ್ಞಾನಿ, ಡ್ರೋನ್​ ತಯಾರಿಸಿದ್ದೇನೆ ಎಂದು ಹೇಳಿಕೊಂಡು ಭಾರೀ ಚರ್ಚೆ ಹುಟ್ಟಾಕಿದ್ದ ಡ್ರೋಣ್ ಪ್ರತಾಪ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ಆದರೆ ಈ ಹಿಂದೆ ಸೀಸನ್‌ಗಳಲ್ಲಿ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಕೂಡ ಬಿಗ್‌ಬಾಸ್ ಪ್ರೀಮಿಯರ್ ವೇದಿಕೆವರೆಗೂ ಬಂದ ಪ್ರತಾಪ್‌ಗೆ ಸದ್ಯ ನಿರಾಸೆಯಾಗಿದೆ. 41% ವೋಟ್ ಪಡೆದು ಬಿಗ್‌ಬಾಸ್ ಮನೆಗೆ ಹೋಗುತ್ತಾರೋ ಇಲ್ಲವೋ ಎನ್ನುವ ಕುತೂಹಲ ಮೂಡಿದೆ. ಇನ್ನು ವೇದಿಕೆ ಏರಿದ ಪ್ರತಾಪ್ ತಮ್ಮ ವಿಚಾರದಲ್ಲಿ ಏನೆಲ್ಲಾ ಆಯಿತು? ಎನ್ನುವುದನ್ನು ವಿವರಿಸುವ ಪ್ರಯತ್ನ ಮಾಡಿದ್ದರು.

  • Oct 8, 2023 7:59 PM

    ನಾಲ್ಕನೆಯ ಕಂಟೆಸ್ಟೆಂಟ್ ವಿನಯ್

  • Oct 8, 2023 7:39 PM
    'ಹರಹರ ಮಹಾದೇವ' ವಿನಯ್ ಗೌಡ 4ನೇ ಸ್ಪರ್ಧಿ

    ಕನ್ನಡ ಕಿರುತೆರೆಯ ನಟ ವಿನಯ್ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದ್ದಾರೆ. ಇಷ್ಟೇ ಅಲ್ಲದೆ ಬಯಸದೆ ಬಳಿ ಬಂದೆ, ಮರಳಿ ಮನಸಾಗಿದೆ, ನಮ್ಮ ಲಚ್ಚಿ, ನಂದಿನಿ ಅಂತಹ ಧಾರಾವಾಹಿಗಳನ್ನು ಕಾಣಿಸಿಕೊಂಡಿದ್ದಾರೆ. ಕಟುಮಸ್ತಾದ ದೇಹವನ್ನು ಇಟ್ಟುಕೊಂಡು ನಟನೆಗೆ ಎಂಟ್ರಿ ಕೊಟ್ಟಿರೋ ವಿನಯ್ ಗೌಡ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವೀಕ್ಷಕರು ಇವರಿಗೆ 84 ಪರ್ಸೆಂಟ್‌ನಷ್ಟು ವೋಟ್ ಗಿಟ್ಟಿಸಿಕೊಂಡಿದ್ದಾರೆ.

  • Oct 8, 2023 7:31 PM
    ಸುರಸುಂದರನಿಗೆ ನಿರಾಸೆ

    ಜ್ಯೂನಿಯರ್ ಆರ್ಟಿಸ್ಟ್ ಸುರಸುಂದರ ಅವಿನಾಶ್ ಬಿಗ್‌ಬಾಸ್ ಸೀಸನ್ 10ರಲ್ಲಿ ದೊಡ್ಮನೆ ಸೇರುವ ಕನಸು ಕಂಡಿದ್ದರು. ಆದರೆ ವೇದಿಕೆ ಏರಿದ್ದ ಅವಿನಾಶ್ ಬಿಗ್‌ಬಾಸ್ ಮನೆ ಒಳಗೆ ಪ್ರವೇಶ ಪಡೆಯಲು ವಿಫಲವಾಗಿದ್ದಾರೆ. ಕೋಟಿಗೊಬ್ಬ-2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬಳಿಕ ಒಂದಷ್ಟು ಕಾಮಿಡಿ ಸೀರಿಸ್‌ನಲ್ಲಿ ನಟಿಸಿರುವುದಾಗಿ ತಮ್ಮ ಪರಿಚಯ ಮಾಡಿಕೊಂಡಿದ್ದರು. ಅಂದಹಾಗೆ ಇವರು ಸುರಸುಂದರ ಅವಿನಾಶ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುರ್ತಿಸಿಕೊಂಡಿದ್ದರು. ಆದರೆ ಅವಿನಾಶ್ 27% ವೋಟ್‌ ಮಾತ್ರ ಸಿಕ್ಕಿ ಹೊರ ನಡೆಯುವಂತಾಯಿತು. ಕೊನೆ ಪಕ್ಷ ಈ ವೇದಿಕೆಗೆ ಬಂದಿದ್ದು ಖುಷಿ ಇದೆ. ಇದೇ ನನ್ನ ಗೆಲುವು ಎಂದು ಹೊರ ಬಂದರು.

  • Oct 8, 2023 7:12 PM
    ಇಶಾನಿಗೆ ಕಿಚ್ಚನ ಸ್ವೀಟ್ ಶಾಕ್

    ಕಿಚ್ಚ ಕರೆಯುವುದಕ್ಕು ಮುನ್ನ ವೇದಿಕೆ ಏರಿದ ಇಶಾನಿ. ಸುದೀಪ್ ಬ್ಯಾಕ್‌ಸ್ಟೇಜ್‌ ಹೋಗಿದ್ದಾಗ ಆಕೆ ವೇದಿಕೆ ಬಂದಿದ್ದರು. ಬಳಿಕ ಸುದೀಪ್ ಬಂದು ಸ್ವೀಟ್ ಶಾಕ್ ಕೊಟ್ಟಿದ್ದರು. ಮೈಸೂರಿನಲ್ಲಿ ಹುಟ್ಟಿದ ರ್ಯಾಪರ್ ಇಶಾನಿ ದುಬೈ, ಲಾಸ್ ಏಂಜಲೀಸ್‌ನಲ್ಲಿ ಓದಿ ಬೆಳೆದವರು. 3ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಂಜು ಪಾವಗಡ ಜೊತೆ ಇಶಾನಿ ತಮಾಷೆ ವೀಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು. 83% ವೋಟ್ ಪಡೆದ ಇಶಾನಿ ಮನೆಯೊಳಗೆ ಹೋಗುವ ಮುನ್ನ ಪೋಕಷರತ್ತ ನೋಡಿ ಭಾವುಕರಾದರು. ರ್ಯಾಪ್ ಸಾಂಗ್‌ಗಳಿಂದ ಸದ್ದು ಮಾಡಿದ ಇಶಾನಿ ಬಿಗ್‌ಬಾಸ್ ಮನೆಯಲ್ಲಿ ಹೇಗೆ ಆಟ ಆಡುತ್ತಾರೆ ಕಾದು ನೋಡಬೇಕಿದೆ.

  • Oct 8, 2023 7:00 PM

    ನಮ್ಮ ಮೊದಲ ಕಂಟೆಸ್ಟೆಂಟ್ ನಮ್ರತಾ

  • Oct 8, 2023 6:55 PM
    ಎರಡನೇ ಕಂಟೆಸ್ಟೆಂಟ್ ಸ್ನೇಹಿತ್ ಗೌಡ

    ಬಿಗ್ ಬಾಸ್ ಕನ್ನಡ ಸೀಸನ್ ಕನ್ನಡದ ಎರಡನೇ ಅತಿಥಿಯಾಗಿ ಸ್ನೇಹಿತ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಯಾಗಿರೋ ಸ್ನೇಹಿತ್ ಗೌಡ ಕಿರುತೆರೆಯ ಜನಪ್ರಿಯ ಯುವ ನಟ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. 2016ರಲ್ಲಿ ಚಿರವಾದ ನೆನಪು ಅನ್ನೋ ಸಿನಿಮಾದಲ್ಲಿಯೂ ನಟಿಸಿದ್ದರು.

  • Oct 8, 2023 6:31 PM
    ನಮ್ರತಾ ಗೌಡಗೆ 86% ವೋಟ್

    ಊರಿಗೊಬ್ಬಳೇ ಪದ್ಮಾವತಿ ಎನ್ನುತ್ತಲೇ ಬಿಗ್ ಬಾಸ್ ಕನ್ನಡ ಸೀಸನ್ 10ರ ವೇದಿಕೆ ಮೇಲೆ ಎಂಟ್ರಿ ಕೊಟ್ಟ ನಮ್ರತಾ ಗೌಡ. ಬಿಗ್ ಬಾಸ್ ಕಲರ್‌ಫುಲ್ ವೇದಿಕೆ ಮೇಲೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್ ನಾಗಿಣಿ ನಟಿ ನಮ್ರತಾ ಗೌಡ ಕಾಲೆಳೆದಿದ್ದಾರೆ. ಅಡುಗೆ, ಬಟ್ಟೆ ಒಗೆಯೋಕೂ ಬಾರಾದ ನಟಿ ಹೇಗೆ ಬಿಗ್ ಬಾಸ್ ಮನೆಯೊಳೆಗೆ ಉಳಿದುಕೊಳ್ಳಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಿರಿಯಾನಿ ಮಾಡೋದು ಹೇಗೆ ಅಂತ ಹೇಳಿ ವೋಟ್ ಆಗ್ರಹಿಸಿದ್ದಾರೆ. ಬಿಗ್ ಬಾಸ್‌ನಲ್ಲಿ ಬದುಕನ್ನು ಕಲಿಯೋದಕ್ಕೆ ಬಂದಿದ್ದೇನೆ ಎಂದು ವೀಕ್ಷಕರಿಗೆ ಹೇಳಿದ್ದಾರೆ. ವೀಕ್ಷಕರಿ 86 ಪರ್ಸೆಂಟ್ ವೋಟ್ ಕೊಟ್ಟಿದ್ದಾರೆ.

  • Oct 8, 2023 6:20 PM
    ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಯಲ್ಲೇ ಆಟ ಶುರು

    ವೇದಿಕೆಯಿಂದಲೇ ಬಿಗ್‌ಬಾಸ್ ಕನ್ನಡ ಸೀಸನ್- 10 ಆಟ ಶುರುವಾಗಲಿದೆ. ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಯಲ್ಲೇ ಸ್ಪರ್ಧಿಗಳ ಆಯ್ಕೆ ನಡೆಯುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಉಪಸ್ಥಿತಿಯಲ್ಲಿ ಸ್ಪರ್ಧಿಗಳ ಆಯ್ಕೆ ಎಂದು ಸುದೀಪ್ ಹೇಳಿದ್ದಾರೆ. ಮೊದಲ ಸ್ಪರ್ಧಿಯಾಗಿ ಕಿರುತೆರೆ ನಟಿ ನಮ್ರತಾ ಗೌಡ ವೇದಿಕೆ ಏರುತ್ತಿದ್ದಾರೆ.

  • Oct 8, 2023 6:06 PM
    ಬಿಗ್ ಬಾಸ್ ಮನೆಯೊಳಗೆ ಕಿಚ್ಚ ಸುದೀಪ್ ಪ್ರವೇಶ

    ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗಿದೆ. ಈ ಲಾಂಗ್ ಜರ್ನಿಯಲ್ಲಿ ಭಾಗಿಯಾಗಿದ್ದಕ್ಕೆ ಕಿಚ್ಚ ಸುದೀಪ್ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೇ ಬಿಗ್ ಬಾಸ್ ಮನೆಯೊಳಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದು, ಹೊಸ ಮನೆಯನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಹೊಸ ಮನೆಯೊಳಗಿನಿಂದಲೇ ಬಿಗ್‌ಬಾಸ್ ಕನ್ನಡ ಸೀಸನ್ 10 ಅನ್ನು ಕಿಚ್ಚ ಸುದೀಪ್ ಆರಂಭ ಮಾಡಿದ್ದಾರೆ.

  • Oct 8, 2023 5:36 PM
    ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್, ವರ್ತೂರು ಪ್ರಕಾಶ್ ಎಂಟ್ರಿ

    ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಇಂದು (ಅಕ್ಟೋಬರ್ 8) ಆರಂಭ ಆಗಿದೆ. ಆದರೆ, ಸಂಜೆ 6 ಗಂಟೆಯಿಂದ ಈ ರಿಯಾಲಿಟಿ ಶೋ ಪ್ರಸಾರ ಆಗಲಿದೆ. ಈಗಾಗಲೇ ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್ ಹಾಗೂ ವರ್ತೂರು ಸಂತೋಷ್ ಮೊದಲ ಮೂರು ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ವೀಕ್ಷಕರೇ ಯಾವ ಸ್ಪರ್ದಿ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು ಅನ್ನೋದನ್ನು ನಿರ್ಧಾರ ಮಾಡಿದ್ದರು. ಅದರಂತೆ ಮೂವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

  • Oct 8, 2023 5:21 PM

    ಬಿಗ್‌ಬಾಸ್ ಹೌದು ಸ್ವಾಮಿ, ಎಂದು ಕಿಚ್ಚ ಸುದೀಪ್ ಮತ್ತೆ ಬರುತ್ತಿದ್ದಾರೆ. ಕಲರ್‌ಫುಲ್ ವೇದಿಕೆಯಲ್ಲಿ ಕಲರ್‌ಫುಲ್ ಪರ್ಫಾರ್ಮೆನ್ಸ್‌ಗಳು ಗ್ರ್ಯಾಂಡ್ ಪ್ರೀಮಿಯರ್‌ ರಂಗೇರಿಸಲಿದೆ. ಹಳೇ ಬಿಗ್‌ಬಾಸ್ ಸ್ಪರ್ಧಿಗಳು ಕೂಡ ಹೊಸ ಸ್ಪರ್ಧಿಗಳ ಗೃಹಪ್ರವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ರ‍್ಯಾಪರ್ ಚಂದನ್ ಶೆಟ್ಟಿ, ಪ್ರಥಮ್ ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ಭಾಗಿ ಆಗಿರೋದು ಪ್ರೋಮೊಗಳಲ್ಲಿ ರಿವೀಲ್ ಆಗಿದೆ.

  • Oct 8, 2023 5:21 PM

    ಒಂದು ದಿನ ಮೊದ್ಲೆ ಗ್ರ್ಯಾಂಡ್ ಪ್ರೀಮಿಯರ್ ಚಿತ್ರೀಕರಣವಾಗಿದ್ದು ಈಗಾಗಲೇ ಮನೆಗೆ ಎಂಟ್ರಿ ಕೊಡುವವರ ಬಗ್ಗೆ ಚರ್ಚೆ ನಡೀತಿದೆ. ವಿವಿಧ ಕ್ಷೇತ್ರಗಳ 16 ವಿಭಿನ್ನ ವ್ಯಕ್ತಿತ್ವಗಳನ್ನು ಒಂದು ಮನೆಯಲ್ಲಿ ಸೇರಿಸಿ ಸುತ್ತಾ ಕ್ಯಾಮರಾಗಳನ್ನಿಟ್ಟು ದೊಡ್ಮನೆ ದೊಡ್ಡಾಟಕ್ಕೆ ವೇದಿಕೆ ಸಿದ್ಧಮಾಡಲಾಗುತ್ತಿದೆ.

  • Oct 8, 2023 5:20 PM

    ಕನ್ನಡದಲ್ಲಿ ಬಿಗ್‌ಬಾಸ್ 9 ಸೀಸನ್‌ಗಳು ಯಶಸ್ವಿಯಾಗಿ ನಡೆದಿದೆ. ಕಿಚ್ಚ ಸುದೀಪ್ ಎಲ್ಲಾ ಸೀಸನ್‌ಗಳನ್ನು ನಿರೂಪಣೆ ಮಾಡಿ ಗೆದ್ದಿದ್ದಾರೆ. ಮತ್ತೊಮ್ಮೆ ಕಿಚ್ಚನ ನೇತೃತ್ವದಲ್ಲಿ ಹೊಸ ಮನೆಯಲ್ಲಿ ಹೊಸ ಸ್ಪರ್ಧಿಗಳ ಜೊತೆ ಹೊಸ ಸೀಸನ್ ಆರಂಭವಾಗುತ್ತಿದೆ.

English summary
Bigg Boss Kannada 10 Live Updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X