Bigg Boss Kannada 10: ಬಿಗ್ ಬಾಸ್‌ಗೆ ಹೋಗುವ ಉತ್ಸಾಹದಲ್ಲಿ ಬಂದು, ಹೋಲ್ಡ್‌ನಲ್ಲಿ ಕುಳಿತ ತನಿಷಾ ಕುಪ್ಪಂಡ!

ಬಿಗ್ ಬಾಸ್ ಮನೆಗೆ ಒಬ್ಬೊಬ್ಬರೇ ಹೋಗುತ್ತಿದ್ದು, ಕೆಲವರು ಹೋಲ್ಡ್‌ನಲ್ಲಿ ಇದ್ದರೇ, ಮತ್ತೊಬ್ಬರು ವೇದಿಕೆಯಲ್ಲಿಯೇ ಎಲಿಮಿನೇಟ್ ಆಗಿ ವಾಪಸ್ ಮನೆಗೆ ತೆರಳಿದ್ದಾರೆ. ಹೌದು...ಈ ಬಾರಿಯ ಬಿಗ್ ಬಾಸ್ ತುಂಬಾ ವಿಶೇಷವಾಗಿದ್ದು, ಹಲವು ಟ್ವಿಸ್ಟ್‌ಗಳನ್ನು ಹೊಂದಿದೆ. ಈಗಾಗಲೇ ಡ್ರೋನ್ ಪ್ರತಾಪ್ ವೈಟಿಂಗ್ ರೂಂನಲ್ಲಿ ಕಾಯುತ್ತಿದ್ದು, ಅದಕ್ಕೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.

ಕಲರ್ಸ್ ಕನ್ನಡದ ಸೂಪರ್ ಹಿಟ್ ಧಾರಾವಾಹಿಯಾಗಿದ್ದ 'ಮಂಗಳ ಗೌರಿ'ಯಲ್ಲಿ ಖಡಕ್ ವಿಲನ್ ಆಗಿ ಮಿಂಚಿ ಈಗ ಬೆಳ್ಳಿತೆರೆಗೆ ಕಾಲಿಟ್ಟ ನಟಿ ತನಿಷಾ ಕುಪ್ಪಂಡ ಬಿಗ್‌ ಬಾಸ್ ಮನೆಯಲ್ಲಿ ಬರಲು ತಯಾರಾಗಿದ್ದರು. ಆದರೆ, ಎಷ್ಟು ಉತ್ಸಾಹದಲ್ಲಿ ಬಂದಿದ್ದರೋ ಹಾಗೆಯೇ ಅವರ ಉತ್ಸಾಹಕ್ಕೆ ನೀರು ಎರಚಿದಂತಾಗಿದೆ.

Bigg Boss Kannada 10: Bigg Boss contestant tv actress Tanisha Kuppanda

ವೀಕ್ಷಕರ ವೋಟ್ ಕೇಳಿದ ತನಿಷಾ ಕುಪ್ಪಂಡ

ವೀಕ್ಷಕರ ಬಳಿ ವೋಟಿಂಗ್‌ಗೆ ಮನವಿ ಮಾಡಿದ್ದ ತನಿಷಾ ಕುಪ್ಪಂಡ, "ಬಿಗ್ ಬಾಸ್ ಮನೆಯಲ್ಲಿ ನಾನು ಪಕ್ಕ ಮನರಂಜನೆ ನೀಡುತ್ತೇನೆ. ನಾನು ನಿಯತ್ತಿನ ವ್ಯಕ್ತಿ. ನನ್ನನ್ನು ನೀವು ತೆರೆಯ ಮೇಲೆ ನೋಡಿರುವುದು ಬೇರೆ, ನಾನು ಇರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗಾಗಿ ನನ್ನನ್ನು ನಾನಾಗಿ ನೋಡಲು ನನಗೆ ವೋಟ್ ಮಾಡಿ" ಎಂದು ಮನವಿ ಮಾಡಿಕೊಂಡಿದ್ದರು.

ಆದರೆ, ವೀಕ್ಷಕರು ಅಷ್ಟಾಗಿ ಅವರ ಕೈ ಹಿಡಿಯಲಿಲ್ಲ. ಅವರಿಗೆ ಸಿಕ್ಕಿದ್ದು, 68% ವೋಟ್ ಅಷ್ಟೇ ಅದೇ ಕಾರಣಕ್ಕೆ ಅವರು ಹೋಲ್ಡ್‌ನಲ್ಲಿ ಇದ್ದಾರೆ. ಅವರು ಬಿಗ್ ಬಾಸ್ ಮನೆಗೆ ತೆರಳಲು 80% ವೋಟ್‌ನ ಅವಶ್ಯಕತೆಯಿತ್ತು. ತನಿಷಾ ಕುಪ್ಪಂಡ ಮನೆಯೊಳಗೆ ಹೋಗಲು ಇನ್ನೂ ಅವಕಾಶವಿದ್ದು, ಡ್ರೋನ್ ಪ್ರತಾಪ್ ಜೊತೆಗೆ ಕಾಯುತ್ತಿದ್ದಾರೆ.

ತನಿಷಾ ಕುಪ್ಪಂಡಗೆ ಅಲ್‌ ದಿ ಬೆಸ್ಟ್ ಹೇಳಿದ್ದ ನಟಿ ಶೃತಿ

ಇನ್ನೂ, ವೀಕ್ಷಕರ ವೋಟಿಂಗ್‌ಗೂ ಮುನ್ನ ತನಿಷಾ ಜೊತೆಗೆ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಶೃತಿ ಮಾತನಾಡಿದ್ದರು. ತನಿಷಾ ಅವರ ಕಾನ್ಫಿಡೆನ್ಸ್ ನೋಡಿದ್ದ ಅವರು, ಅದು ಓವರ್ ಕಾನ್ಫಿಡೆನ್ಸ್ ಆಗದಿರಲಿ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಬಿಗ್ ಬಾಸ್ ಟ್ರೋಫಿ ಮತ್ತೊಮ್ಮೆ ಮಹಿಳಾ ಸ್ಪರ್ಧಿ ಪಾಲಾಗಲಿ ಎಂದು ಆಶಿಸಿದ್ದರು. ಆದರೆ, ತನಿಷಾ ಕುಪ್ಪಂಡ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರಾ ಎಂಬುದು ಎನ್ನು ಪ್ರಶ್ನೆಯಾಗಿ ಉಳಿಸಿದೆ.

More from Filmibeat

English summary
Bigg Boss Kannada 10: Bigg Boss contestant tv actress Tanisha Kuppanda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X