Bigg Boss Kannada 10: ಸಿನಿಮಾ, ಟಿವಿ ನಟ-ನಟಿಯಲ್ಲ...ಚಾರ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸ್ಪರ್ಧಿ!
ಈಗೇನಿದ್ದರೂ ಎಲ್ಲಾ ಕಡೆ ಬಿಗ್ ಬಾಸ್‌ದೆ ಮಾತು. ಬಿಗ್ ಬಾಸ್ ಕನ್ನಡ ಸೀಸನ್ 10 ಘೋಷಣೆಯಾಗಿದ್ದು, ಯಾವ ಸಿನಿಮಾ ನಟ ನಟಿಯರು, ಯಾವ ಕಿರುತೆರೆ ಸ್ಟಾರ್ ಮನೆಯೊಳಗೆ ಬರಬಹುದು ಎಂಬ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಯಾವ ಧಾರಾವಾಹಿ ಮುಗಿದಿದೆ..? ಯಾರು ಹೆಚ್ಚು ವಿವಾದ ಮಾಡಿಕೊಂಡಿದ್ದಾರೆ ಅಂತೆಲ್ಲಾ ಲೆಕ್ಕ ಹಾಕುತ್ತಿದ್ದಾರೆ.
ಟಿವಿ ಪರದೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಹೆಚ್ಚು ಜನರನ್ನು ಸೆಳೆದ ಕಾರ್ಯಕ್ರಮ. ಇದು ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬರುತ್ತಿದ್ದು, ಕನ್ನಡದಲ್ಲಿ 9 ಸೀಸನ್‌ಗಳು ಬಂದಿವೆ. ಹತ್ತನೆ ಸೀಸನ್‌ಗೆ ಭರ್ಜರಿ ತಯಾರಿ ನಡೆದಿದೆ. ಕಳೆದ ಒಂಬತ್ತು ಸೀಸನ್‌ಗಳಿಗೂ ಕನ್ನಡ ಕಿರುತೆರೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ
ಬಿಗ್ ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8 ರಿಂದ ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಈ ಬಗ್ಗೆ ಪ್ರೋಮೊ ಪ್ರಸಾರ ಆಗುತ್ತಿದ್ದು, ಆರಂಭದ ದಿನವನ್ನು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕಳೆದ 9 ಸೀಸನ್‌ಗಳಿಗಿಂತ ಈ ಸೀಸನ್ ಹೆಚ್ಚು ವಿಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಸಾರವಾಗಲಿದೆ.
ಮುಂದಿನ ಅಕ್ಟೋಬರ್ 8 ರಂದು ಬಿಗ್ ಬಾಸ್ ಸೀಸನ್ 10ಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಅಸಲಿ ಆಟ ಅಕ್ಟೋಬರ್ 10ರಿಂದ ಆರಂಭ ಆಗಲಿದೆ. ಎರಡು ದಿನಗಳ ಸ್ಪರ್ಧಿಗಳ ಪರಿಚಯ ಮತ್ತು ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳಿಹಿಸಲಾಗುತ್ತೆ. ಈ ಬಾರಿ ಸುಮಾರು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಅದರಲ್ಲಿ ಮೊದಲ ಸ್ಪರ್ಧಿ ಮಾತ್ರ ತುಂಬಾನೇ ಡಿಫರೆಂಟು!
ಮೊದಲನೆ ಸ್ಪರ್ಧಿ ಯಾರು ಗೊತ್ತಾ?
ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು ಯಾರಾಗಬಹುದು ಎಂಬ ಬಗ್ಗೆ ಹಲವು ಲಿಸ್ಟ್‌ಗಳು ಹೊರಬಂದಿವೆ. ಕಲರ್ಸ್ ಕನ್ನಡ ಯಾವುದಕ್ಕೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೂ ಯಾರು ಯಾರು ಕಿರುತೆರೆಯಿಮದ ಹೊರ ಹೋಗಿದ್ದಾರೆ. ವಿವಾದಗಳಲ್ಲಿ ಹೆಸರು ಬಂದಿದೆ ಎಂಬುದನ್ನೆಲ್ಲಾ ಜನ ಪರಿಗಣಿಸಿ ಸ್ಪರ್ಧಿಗಳ ಪಟ್ಟಿ ಮಾಡುತ್ತಿದ್ದಾರೆ.

ಇದರ ನಡುವೆ ಕಲರ್ಸ್ ಕನ್ನಡ ಯಾರು ಬಿಗ್ ಬಾಸ್ ಮನೆಯೊಳಗೆ ಹೋಗುವ ಮೊದಲ ಸ್ಪರ್ಧಿ ಎಂಬ ಬಗ್ಗೆ ಮಾಹಿತಿ ನೀಡಿದೆ. ಕಲರ್ಸ್ ಕನ್ನಡ ಅಫಿಶೀಯಲ್ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಮೊದಲ ಸ್ಪರ್ಧಿಯಾಗಿ ತನ್ನ ಅಭಿನಯದಿಂದ ಇಡೀ ಕರುನಾಡ ಜನರ ಮನಗೆದ್ದ 777 ಚಾರ್ಲಿ ಸಿನಿಮಾದ ಮುದ್ದಾದ ಚಾರ್ಲಿ!.
ಅನುಬಂಧ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬೆಸ್ಟ್ ರೇಟೆಡ್ ಚಲನ ಚಿತ್ರ ಎಂದು ಚಾರ್ಲಿ ಆಯ್ಕೆಯಾಗಿದೆ. ಸಿನಿಮಾಗೆ ಶುಭಾಶಯ ಹೇಳುವಾಗ ಬಿಗ್ ಬಾಸ್ ಸೀಸನ್ 10 ಮೊದಲ ಸ್ಪರ್ಧು ಬಗ್ಗೆಯೂ ಮಾಹಿತಿ ನೀಡಲಾಗಿದೆ. "ಬೆಸ್ಟ್ ರೇಟೆಡ್ ಚಲನ ಚಿತ್ರ - ಚಾರ್ಲಿ. ಬಿಗ್ ಬಾಸ್ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ" ಎಂದು ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಚಾರ್ಲಿ ಆಯ್ಕೆಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಪ್ರಾಣಿ ಹಿಂಸೆ ಆಗದಿರಲಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ಚಾರ್ಲಿ ಬಿಗ್ ಬಾಸ್ ಗೆ ಬರ್ತಿದೆ.. ಅದ್ಕೇನಾ ಏನೋ ವಿಶೇಷ" ಎಂದಿದ್ದು ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.


Click it and Unblock the Notifications