ವರ್ತೂರ್ ಸಂತೋಷ್‌ಗೆ ಮತ್ತೆ ಲವ್ ಆಗಿದೆ; ಈ ಬಾರಿ ಟೂ ಸೈಡ್ ಲವ್; ಆ ಹುಡುಗಿ ಯಾರು?

By ಫಿಲ್ಮಿಬೀಟ್ ಡೆಸ್ಕ್

ಹಳ್ಳಿಕಾರ್ ಅಂತಲೇ ಜನಪ್ರಿಯರಾಗಿರುವ ವರ್ತೂರು ಸಂತೋಷ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಬಿಗ್‌ಬಾಸ್ ಮನೆಗೆ ಹೋಗಿ ಬಂದ್ಮೇಲೆ ಏನಾದರೂ ಕಾರಣಕ್ಕೆ ವರ್ತೂರು ಸಂತೋಷ್ ಚರ್ಚೆಯಲ್ಲಿ ಇರುತ್ತಾರೆ. ಹಳ್ಳಿಕಾರ್ ಬಿರುದಿನ ವಿಚಾರಕ್ಕೆ ವಿವಾದಗಳು ಹುಟ್ಟಿಕೊಂಡಿದ್ದವು. ಆಗಲೂ ವರ್ತೂರು ಸುದ್ದಿಯಲ್ಲಿದ್ದರು. ಇನ್ನು ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಕೌಟುಂಬಿಕ ಕಲಹ ವಿವಾದ ಸೃಷ್ಟಿ ಆಗಿತ್ತು.

ವರ್ತೂರು ಸಂತೋಷ್ ಪತ್ನಿಯೊಂದಿಗೆ ಇಲ್ಲ. ಮಗು ಜನಿಸಿದ ಬಳಿಕ ಮತ್ತೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿಲ್ಲ ಎಂದು ಅವರ ಮಾವ ಆರೋಪ ಮಾಡಿದ್ದರು. ಬಿಗ್‌ಬಾಸ್ ಮನೆಯೊಳಗೆ ಇದ್ದಂತೆ ಈ ವಿವಾದ ಸೃಷ್ಟಿಯಾಗಿತ್ತು. ವರ್ತೂರ್ ಸಂತೋಷ್ ವಿರುದ್ಧ ಕೆಲವರು ತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಈ ಸುದ್ದಿ ಇದ್ದಕ್ಕಿದ್ದ ಹಾಗೆ ತಣ್ಣಗಾಗಿತ್ತು.

Bigg Boss Kannada 10 contestant Hallikar Varthur Santhosh revealed he is dating someone

ಬಿಗ್‌ಬಾಸ್ ಮನೆಯಲ್ಲಿ ಇರುವಾಗ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಇಬ್ಬರೂ ಆತ್ಮೀಯರಾಗಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದರು. ಆದರೆ, ನಾವಿಬ್ಬರೂ ಸ್ನೇಹಿತರ ಅಂತ ವರ್ತೂರು ಸಂತೋಷ್ ಹಾಗೂ ತನಿಷಾ ಇಬ್ಬರೂ ಹೇಳಿಕೊಂಡೇ ಬಂದಿದ್ದರು. ಆದರೂ ನೆಟ್ಟಿಗರು ಆ ಮಾತನ್ನು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಈಗ ವರ್ತೂರು ಸಂತೋಷ್ ತನ್ನ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ತಾನು ಪ್ರೀತಿ ಮಾಡುತ್ತಿರೋದು ನಿಜ ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಹೌದು, ಇದು ವರ್ತೂರು ಸಂತೋಷ್ ಅವರೇ ಹೇಳಿದ ಮಾತು. ಎರಡೂ ಕಡೆಯಿಂದಲೂ ಪ್ರೀತಿಯಿದೆ. ತನ್ನ ತಾಯಿಯನ್ನು ಬಿಟ್ಟರೆ, ನಂತರ ಸ್ಥಾನ ಅವರಿಗೆ ನೀಡುತ್ತೇನೆ. ಡಿಪ್ರೆಷನ್‌ಗೆ ಹೋಗಿದ್ದಾಗ ಅದರಿಂದ ಹೊರಗೆ ಕರೆದುಕೊಂಡು ಬಂದಿದ್ದೇ ಅವರು ಎಂದು ವರ್ತೂರು ಸಂತೋಷ್ ಡಿಜಿಟಲ್ ಪಿಚ್ಚರ್ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Bigg Boss Kannada 10 contestant Hallikar Varthur Santhosh revealed he is dating someone

"ಕ್ರಶ್ ಅಂತನಾದ್ರೂ ತಿಳಿದುಕೊಳ್ಳಿ, ಲವ್ ಅಂತನಾದ್ರೂ ತಿಳಿದುಕೊಳ್ಳಿ. 10ನೇ ಕ್ಲಾಸ್‌ನಲ್ಲೇ ಇತ್ತು. ಫಸ್ಟ್ ಪಿಯುಗೆ ಬಂದ್ಮೇಲೆ ಅಲ್ಲೂ ಸೇಮ್ ಅದೇ ತರಾನೇ ಇತ್ತು. ಅಲ್ಲಿವರೆಗೂ ಟೂ ಸೈಡ್ ಲವ್ ನಾನು ನೋಡಿಯೇ ಇಲ್ಲ. ಈಗ ಟೂ ಸೈಡ್ ಲವ್ ಇದೆ. ಯಾಕಂದ್ರೆ ಒಬ್ಬ ಮನುಷ್ಯ ಡಿಪ್ರೆಷನ್‌ಗೆ ಹೋದಾಗ ಕೆಳೆಗೆ ಬಿದ್ದಾಗ, ವಯಸ್ಸಿಗೆ ಬಂದಾಗ ಒಬ್ಬರ ಹುಡುಗನಿಗೆ ಒಬ್ಬ ಹುಡುಗಿ ಇದ್ದಾಗನೇ ವಾಪಸ್ ಬರುವುದಕ್ಕೆ ಸಾಧ್ಯ. ನಾನು ಇವತ್ತು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಮ್ಮ ತಾಯಿ ಆದ್ಮೇಲೆ ಅವರೇ ನೆಕ್ಸ್ಟ್. ನಾನು ಯಾವತ್ತೂ ಈ ಮಾತನ್ನು ಹೇಳಿಕೊಂಡಿಲ್ಲ. ಅವರು ನನ್ನ ಸೆಕೆಂಡ್ ಹಾರ್ಟ್." ಎಂದು ವರ್ತೂರು ಸಂತೋಷ್ ತಾನು ಪ್ರೀತಿ ಮಾಡುವ ಹುಡುಗಿ ಬಗ್ಗೆ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ತಮ್ಮ ಲೈಫ್‌ನಲ್ಲಿ ಆ ಹುಡುಗಿ ಎಷ್ಟು ಮುಖ್ಯ ಅನ್ನೋದನ್ನು ಹೇಳಿಕೊಂಡಿದ್ದಾರೆ. "ನೀನು ಇಲ್ಲಿ ಇರಬಾರದು. ನೀನು ಇರುವ ಸ್ಥಾನವೇ ಬೇರೆ ಅಂತ ಹೇಳಿದ್ದೇ ಅವರು. ಕಮ್‌ ಬ್ಯಾಕ್ ಅನ್ನೋದು ಇದೆಯಲ್ಲ. ಅದು ಬಹಳ ಮುಖ್ಯ. ಅದನ್ನು ಯಾರೂ ಮರೆಯಬಾರದು. ನಾನು ಎಲ್ಲೂ ಹೇಳಿರಲಿಲ್ಲ. ಯಾಕಂದ್ರೆ ಹೇಳಿದರೆ, ನಾನೆಲ್ಲಿ ಸಣ್ಣವರಾಗಿ ಹೋಗುತ್ತೇವೆ ಅಂತ. ಯಾವತ್ತೂ ನನ್ನ ಮನಸ್ಸಿನಲ್ಲಿ ಆಕೆ ಇರುತ್ತಾಳೆ. ನಾನು ವರ್ತೂರು ಸಂತೋಷ್ ಅಂತ ಆಗುವುದಕ್ಕೆ ಮುಂಚೆಯಿಂದಾನೂ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ." ಎಂದಿದ್ದಾರೆ.

ಇದೇ ವೇಳೆ ತನ್ನ ವೈವಾಹಿಕ ಬದುಕಿನ ಬಗ್ಗೆ ಮಾರ್ಮಿಕವಾಗಿ ಮಾತಾಡಿದ್ದಾರೆ. ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ ಅನ್ನುವಂತೆ ಅದು ಮುಗಿದು ಹೋದ ಕಥೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಹಾಗೇ ಇಬ್ಬರೂ ಪ್ರತಿ ದಿನ ಮಾತಾಡುತ್ತೇವೆ. ಯಾವಾಗಲೂ ಮೀಟ್ ಆಗುತ್ತೇವೆ. ಹಾಗಂತ ತನಿಷಾ ಅಂತೆಲ್ಲ ಹೇಳಿ ಬಿಡಬೇಡಿ. ಅದು ಕೇವಲ ಫ್ರೆಂಡ್‌ಶಿಪ್ ಅಷ್ಟೇ. ತನಿಷಾ ಅಂತೂ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಮೊದಲ ಪತ್ನಿ ಹಾಗೂ ಮಗುವಿನ ಬಗ್ಗೆ ವರ್ತೂರು ಸಂತೋಷ್ ಮಾತಾಡಿಲ್ಲ.

More from Filmibeat

English summary
Bigg Boss Kannada 10 contestant Hallikar Varthur Santhosh revealed he is dating someone. Know more
Read more about: bigg boss dating wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X