Bigg Boss: ಡಬಲ್ ಎಲಿಮಿನೇಷನ್..! ಈ ವಾರ ಮನೆಯಿಂದ ಹೊರಬರೋದು ಇವರಿಬ್ಬರೇ?

By Shruthi Harishgowda

ಬಿಗ್‌ಬಾಸ್ ಕನ್ನಡ ಈ ಭಾನುವಾರದ ಶೋ ಸಾಕಷ್ಟು ಕುತೂಹಲ ಮೂಡಿಸಿದೆ.ಕಿಚ್ಚ ಸುದೀಪ್ ಸೂಪರ್ ಸಂಡೇ ನಡೆಸಿಕೊಡಲು ಬಂದಿಲ್ಲ. ಅವರ ಬದಲಾಗಿ ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗೂ ಶುಭಾ ಪುಂಜಾ ಬಂದಿದ್ದಾರೆ. ಎಲ್ಲಾ ಸ್ಪರ್ಧಿಗಳು ಈ ಇಬ್ಬರನ್ನ ನೋಡಿ ಸಖತ್ ಖುಷಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಶೃತಿ ಅವರು ತಮ್ಮ ಪಂಚಾಯಿತಿಯಲ್ಲಿ ಬೆಳಕು ಚೆಲ್ಲಿದರು. ಇದು ಸ್ಪರ್ಧಿಗಳಿಗೆ ಒಂದು ರೀತಿಯ ಎಚ್ಚರಿಕೆ ಪಾಠವು ಕೂಡ ಹೌದು. ಎಲ್ಲರೂ ತುಂಬಾ ಚೆನ್ನಾಗಿ ಆಡುತ್ತಿದ್ದೀರಾ ಇದೇ ರೀತಿ ಆಟವನ್ನು ಆಡಿ ಎಂದು ಹುರಿದುಂಬಿಸಿದ್ದರು.

Bigg Boss kannada 10: Double Elimination This Week After pavi poovappas Exit

ಈ ವಾರವು ಕೂಡ ಎಲಿಮಿನೇಷನ್ ಎಂಬ ಭೂತ ಎಲ್ಲರನ್ನೂ ಕಾಡುತ್ತಲೇ ಇರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ತಮ್ಮ ಜರ್ನಿಯನ್ನ ಮುಗಿಸಿ ಹೊರಗೆ ಹೋಗಲಿದ್ದಾರೆ. ಬಿಗ್ ಬಾಸ್ ಸೆಮಿ ಫೈನಲ್ ಸೆಮಿಪಿಸುತ್ತಾ ಇದ್ದು ಇನ್ಮುಂದೆ ಡಬಲ್ ಎಲಿಮಿನೇಷನ್ ಟ್ರಿಪಲ್ ಎಲಿಮಿನೇಷನ್ ಆಗಲಿದೆ. ಸದ್ಯಕ್ಕೆ ಮನೆಯಲ್ಲಿರುವ ಎಲ್ಲರೂ ಕೂಡ ಸೇಫ್ ಆಗಿ ಆಟ ಆಡುತ್ತಾ ಇದ್ದಾರೆ. ಹೊಸ ಪ್ರಮೋದಲ್ಲಿ ಡಬಲ್ ಎಲಿಮಿನೇಷನ್ ಇದೆ ಎಂಬುದನ್ನು ತೋರಿಸಲಾಗಿದೆ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಯಾರು ಶತ್ರುಗಳಲ್ಲ ಮಿತ್ರರು ಅಲ್ಲ ಎಂಬುದನ್ನ ಪದೇ ಪದೇ ಸಾಬೀತಾಗುತ್ತಿದೆ. ಇಷ್ಟು ದಿನ ನಮ್ರತಾ, ವಿನಯ್ ಜೊತೆಗೆ ಇದ್ದವರು, ಏಕಾಏಕಿ ಈಗ ಸಂಗೀತಾ ಜೊತೆಗೆ ಸೇರಿಕೊಂಡಂತೆ ಕಾಣುತ್ತಿದೆ. ವಿನಯ್ ಮೇಲೆ ತಪ್ಪು ಕಲ್ಪನೆ ಬಂದಂತೆ ಇದೆ. ಶ್ರುತಿ ನಡೆಸಿದ ನ್ಯಾಯ ಪಂಚಾಯಿತಿಯಲ್ಲಿ ಇದು ಕೂಡ ಹೊರಗೆ ಬಂದಿದೆ. ಇನ್ನು ಸಂಗೀತಾ ಕೂಡ ನಾನು ಮನಸ್ಸನ್ನು ಡೈವರ್ಟ್ ಮಾಡಿದೆ ಎಂಬ ವಿಚಾರ ಇಲ್ಲಿ ಬರುತ್ತದೆ ಎಂಬುದನ್ನು ಕೂಡ ನಮ್ರತಾಗೆ ಹೇಳಿದ್ದಾರೆ. ಆದರೆ ನಮ್ರತಾ ಹಾಗೇನು ಇಲ್ಲ ಎಂದಿದ್ದಾರೆ. ಸದ್ಯಕ್ಕೆ ನಮ್ರತಾ ಮನೆಯ ಕ್ಯಾಪ್ಟನ್ ಆಗಿದ್ದು ಈ ವಾರವು ಕೂಡ ಸೇಫ್ ಆಗಲಿದ್ದಾರೆ.

6 ಮಂದಿ ತಲೆ ಮೇಲೆ ಎಲಿಮಿನೇಷನ್ ಕತ್ತಿ

ಆರು ಮಂದಿಯ ತಲೆಯ ಮೇಲೆ ಎಲಿಮಿನೇಷನ್ ತೂಗುಕತ್ತಿ ತೂಗುತ್ತಿದೆ. ಡಬ್ಬಲ್ ಎಲಿಮಿನೇಷನ್ ಇದ್ದು ದೊಡ್ಮನೆಯಿಂದ ಇಬ್ಬರು ತಮ್ಮ ಜರ್ನಿಯನ್ನ ಮುಗಿಸಿ ಹೊರಗಡೆ ಹೋಗಲಿದ್ದಾರೆ. ವರ್ತೂರು ಸಂತೋಷ್ ಅವರು ನಮ್ರತಾಗೆ ಸಿಕ್ಕ ವಿಶೇಷ ಅಧಿಕಾರದಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ. ಸಂಗೀತಾ, ಸಿರಿ, ಅವಿನಾಶ್ ಶೆಟ್ಟಿ, ಪ್ರತಾಪ್, ಮೈಕಲ್ ಇಷ್ಟು ಮಂದಿ ನಾಮಿನೇಟ್ ಆಗಿದ್ದು ಅದರಲ್ಲಿ ಇಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗಲಿದ್ದಾರೆ. ಸದ್ಯಕ್ಕೆ ಈಗ ಎಲ್ಲಾ ಸ್ಪರ್ಧಿಗಳ ತಲೆಯಲ್ಲಿ ಟೆನ್ಷನ್ ತುಂಬಿಕೊಂಡಿದೆ. ಯಾರು ಮನೆಯಿಂದ ಹೊರಗೆ ಹೋಗ್ತಾರೆ ಎಂಬುದೇ ಕುತೂಹಲವಾಗಿದೆ.

Bigg Boss kannada 10: Double Elimination This Week After pavi poovappas Exit

ಶೈನ್, ಶುಭಾ ಎಂಟ್ರಿ

ಸೂಪರ್ ಸಂಡೇ ಕಾರ್ಯಕ್ರಮ ನಡೆಸಿಕೊಡಲು ಸುದೀಪ್ ಬಂದಿಲ್ಲ. ಬದಲಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ಮನೆಯೊಳಗೆ ಹೋಗಿದ್ದಾರೆ. ಈ ಇಬ್ಬರ ಆಗಮನ ಎಲ್ಲ ಸ್ಪರ್ಧಿಗಳ ಮುಖದಲ್ಲೂ ಸಂತಸ ತರಿಸಿದೆ. ಈ ಸಂತಸದ ಜೊತೆಗೆ ಎಲಿಮಿನೇಷನ್ ಟೆನ್ಷನ್ ಕೂಡ ಇದೆ. ಇನ್ನು ನಮ್ರತಾ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂಬ ಮಾತನ್ನು ಕೂಡ ಆಡಿದ್ದಾರೆ.

ಸಿರಿ, ಅವಿನಾಶ್ ಹೊರಗೆ ಹೋಗ್ತಾರಾ..!?

ಈ ವಾರ ಮನೆಯಿಂದ ಹೊರಗೆ ಹೋಗೋದು ಸಿರಿ ಹಾಗೂ ಅವಿನಾಶ್ ಶೆಟ್ಟಿ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಎಲ್ಲರೂ ಕೂಡ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಾರೆ. ಅವಿನಾಶ್ ಈ ವಾರ ಅಂತೂ ತುಂಬಾ ಚೆನ್ನಾಗಿ ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ವೀಕ್ಷಕರ ತೀರ್ಪು ಇಲ್ಲಿ ಅಂತಿಮ ಆಗಿದ್ದು ಯಾರು ಅತಿ ಹೆಚ್ಚು ಮತಗಳನ್ನ ಪಡೆದುಕೊಳ್ಳುತ್ತಾರೆ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಯಾರು ಕಡಿಮೆ ಮತಗಳನ್ನು ಪಡೆದುಕೊಳ್ಳುತ್ತಾರೆ? ಅವರು ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗುತ್ತಾರೆ. ಬಿಗ್ ಬಾಸ್ ನಾವೇ ಎಲಿಮಿನೇಷನ್ ಮಾಡುತ್ತೇವೆ. ಈ ವಾರ ಎಲಿಮಿನೇಷನ್ ಇದೆ ಎಂದು ಮೊದಲೇ ತಿಳಿಸಿದ್ದರು. ಎಲ್ಲರ ಚಿತ್ತ ಯಾರು ಈ ವಾರ ಮನೆಯಿಂದ ಹೊರ ಹೋಗುತ್ತಾರೆ ಎಂಬುದರ ಮೇಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಉಚಿತವಾಗಿ ಬಿಗ್‌ಬಾಸ್ ಶೋ ನೋಡಬಹುದು.

More from Filmibeat

English summary
Bigg boss kannada 10: Here is the details about Shubha Punja and Shine setty house entry, today double elimination;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X