Bigg Boss: ಪ್ರತಾಪ್ ವಿರುದ್ಧ ತಿರುಗಿ ಬಿದ್ದ ಮೈಕಲ್; ವರ್ತೂರು ಕ್ಲಾಸ್‌ನಲ್ಲಿ ಎಲಿಮಿನೇಷನ್ ಸಂಕಟ!

By Shruthi Harish Gowda

ಬಿಗ್ ಬಾಸ್ ಮನೆಯಲ್ಲಿ ಈಗ ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆ ಶುರುವಾಗಿದ್ದು ಕೆಲವು ಸ್ಪರ್ಧಿಗಳು ಆದ ಮೇಲೆ ಇನ್ನೂ ಕೆಲವು ಸ್ಪರ್ಧಿಗಳು ಟೀಚರ್ ಆಗಿದ್ದಾರೆ. ಇಂದು ವರ್ತೂರು ಸಂತೋಷ್ ಕೂಡ ಟೀಚರ್ ಆಗಿದ್ದು ಅವರ ಕ್ಲಾಸ್‌ನಲ್ಲಿ ನೇರ ಮಾತುಗಳು ನಡೆದಿದೆ. ಇದರಲ್ಲಿ ಎಲಿಮಿನೇಷನ್ ಹಾಗೂ ಯಾರನ್ನು ಉಳಿಸುತ್ತೀರಾ, ಯಾರಿಗೆ ಶಿಕ್ಷೆ ಕೊಡುತ್ತೀರಾ? ಯಾರು ಕ್ಯಾಪ್ಟನ್ ಆಗಬೇಕು ಎಂಬ ಇತ್ಯಾದಿ ಪ್ರಶ್ನೆಗಳನ್ನು ಬೋರ್ಡ್ ಮೇಲೆ ಬರೆಯಲಾಗಿತ್ತು. ಇದಕ್ಕೆ ಬಿಗ್ ಬಾಸ್ ವಿದ್ಯಾರ್ಥಿಗಳು ತಮಗೆ ಯಾರು ಇಷ್ಟ ಇಲ್ಲ. ಅವರಿಗೆ ಇಲ್ಲಿರುವ ಕ್ಯಾಟಗರಿಗಳನ್ನು ಸೆಲೆಕ್ಟ್ ಮಾಡಿದ್ದಾರೆ.

ಬೋರ್ಡ್ ಮೇಲೆ ಶಿಕ್ಷೆ, ಕ್ಯಾಪ್ಟನ್, ರಕ್ಷಿಸುತ್ತಿದ್ದೀರಿ, ಎಲಿಮಿನೇಷನ್, ಹೊಗಳುವಿಕೆ ಇಷ್ಟು ಆಯ್ಕೆಯನ್ನು ಬರೆಯಲಾಗಿತ್ತು. ಒಬ್ಬೊಬ್ಬರೆ ಬಂದು ತಮಗೆ ಯಾರು ಇಷ್ಟವಿಲ್ಲ ಅವರ ಹೆಸರನ್ನು ತಗೆದುಕೊಂಡು ಬೋರ್ಡ್ ಮೇಲೆ ಹೆಸರನ್ನು ಬರೆದಿದ್ದಾರೆ. ಶಿಕ್ಷೆ ಜಾಗದಲ್ಲಿ ವಿನಯ್ ಹೆಸರು ಇದ್ದರೆ, ಕ್ಯಾಪ್ಟನ್ ಜಾಗದಲ್ಲಿ ಪ್ರತಾಪ್ ಹೆಸರು ಇದೆ. ಯಾರನ್ನು ಶಿಕ್ಷಿಸುತ್ತಾ ಇದ್ದೀರಿ ಎಂಬ ಆ ಜಾಗದಲ್ಲಿ ಕಾರ್ತಿಕ್ ಹೆಸರು ಇದೆ. ಇದೇ ವೇಳೆ ಎಲಿಮಿನೇಷನ್ ಎಂಬ ಭೂತ ಬಿಗ್ ಬಾಸ್ ಮನೆಯಲ್ಲಿರುವವರನ್ನು ಕಾಡುತ್ತಿದೆ. ಯಾಕೆಂದರೆ ಇಲ್ಲಿ ತಮಗೆ ಯಾರು ಇಷ್ಟವಾಗುವುದಿಲ್ಲ ಅವರು ಎಲಿಮಿನೇಷನ್ ಸ್ಥಾನದಲ್ಲಿ ಇರುತ್ತಾರೆ. ಈ ದೃಶ್ಯಗಳು ಜಿಯೋ ರಿಲೀಸ್ ಮಾಡಿದ ಪ್ರೋಮೊದಲ್ಲಿದೆ.

Bigg Boss Kannada 10 Drone Prathap and Sangeetha Nominated Michael Ajay

ಬೋರ್ಡ್ ಬಳಿ ಬಂದ ಸಂಗೀತ, ಪ್ರತಾಪ್ ಹಾಗೂ ತುಕಾಲಿ ಸಂತೋಷ್, ಅವಿನಾಶ್ ಶೆಟ್ಟಿ ನಾಲ್ಕು ಮಂದಿಯನ್ನು ಎಲಿಮಿನೇಟ್ ಮಾಡಿದ್ದಾರೆ. ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆಯಲ್ಲಿ ಎಲ್ಲರೂ ಶಾಲಾ ಮಕ್ಕಳಾಗಿದ್ದು, ಅಲ್ಲೇ ಕೂಡ ಟಾಸ್ಕ್‌ಗಳನ್ನು ನೀಡಲಾಗುತ್ತಾ ಇದೆ. ಸದ್ಯಕ್ಕೆ ಈ ವಾರ ಅಷ್ಟೇ ಸ್ಪರ್ಧಿಗಳು ತಾವು ಯಾವುದೇ ರೀತಿಯಲ್ಲಿ ಜಗಳವಾಡಿಲ್ಲ ಎಂದು ಕಾಣಿಸುತ್ತದೆ. ಆದರೆ, ಒಬ್ಬರ ಮಾತು ಕೆಲವೊಬ್ಬರ ಮುನಿಸಿಗೆ ಹಾಗೂ ಬೇಸರಕ್ಕೆ ಕಾರಣವಾಗುತ್ತಾ ಇವೆ. ಅದೇ ಈಗ ಮೈಕಲ್ ಪ್ರತಾಪ್ ಮೇಲೆ ಮುಗಿಬೀಳಲು ಕಾರಣ. ಇನ್ನು ಸಂಗೀತಾ ಕೂಡ ಮೈಕಲ್ ಮೇಲೆ ಮುಗಿಬಿದ್ದಿದ್ದಾರೆ. ಅದಕ್ಕೆ ಸಂಗೀತಾ ಕಂಡರೆ ನನಗೆ ಇಷ್ಟವಿಲ್ಲ ಎಂಬ ಮಾತನ್ನು ಮೈಕಲ್ ಹೇಳಿದ್ದಾರೆ.

ಪ್ರತಾಪ್ -ಸಂಗೀತಾ ಮೇಲೆ ಮುಗಿಬಿದ್ದ ಮೈಕಲ್

ಪ್ರತಾಪ್ ಹಾಗೂ ಸಂಗೀತಾ ಇಬ್ಬರೂ ಕೂಡ ಬೋರ್ಡ್ ಬಳಿ ಬಂದು ನಾವು ಮೈಕಲ್ ಅವರನ್ನು ಎಲಿಮಿನೇಟ್ ಮಾಡುತ್ತೇವೆ ಎಂಬ ಮಾತನ್ನು ಆಡಿದ್ದಾರೆ. ಸಂಗೀತಾ ಅದಕ್ಕೆ ಸೂಕ್ತ ಕಾರಣ ಕೊಟ್ಟಿದ್ದಾರೆ. ಎನೋ ಒಂದು ಪದ ಇಟ್ಟುಕೊಂಡು ಮೈಕಲ್ ಅವರು ಪದೇ ಪದೇ ಚುಚ್ಚಿ ಚುಚ್ಚಿ ಹೇಳುತ್ತಾ ಇದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಇದಕ್ಕೆ ಮೈಕಲ್ ಐ ಡೋಂಟ್ ಲೈಕ್ ಯು ಎಂದು ಹೇಳಿದ್ದಾರೆ. ಇನ್ನು ಪ್ರತಾಪ್ ಕೂಡ ಮೈಕಲ್ ಅವರನ್ನು ಎಲಿಮಿನೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾನು ಚೆನ್ನಾಗಿ ಆಡುವಾಗ ಅವರು ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತಾ ಇರುತ್ತಾರೆ ಎಂದು ಹೇಳಿದ್ದು, ಈ ಮಾತು ಮೈಕಲ್‌ಗೆ ಇಷ್ಟವಾಗಿಲ್ಲ. ಅದಕ್ಕಾಗಿ ಪ್ರತಾಪ್ ವಿರುದ್ಧವೂ ಕೂಡ ಮೈಕಲ್ ಮಾತನಾಡಿದ್ದಾರೆ.

Bigg Boss Kannada 10 Drone Prathap and Sangeetha Nominated Michael Ajay

ಬಿಗ್ ಬಾಸ್ ಶುರುವಾದಾಗ ಮೈಕಲ್ ಒಂದು ವಾರ ಎಲಿಮಿನೇಟ್ ಆಗಿದ್ದರು. ಆ ವೇಳೆ ಉಳಿದುಕೊಂಡಿದ್ದ ಪ್ರತಾಪ್ ಫ್ಯಾನ್ಸ್‌ಗೂ ಈ ವೇಳೆ ಧನ್ಯವಾದ ಹೇಳಿದ್ದರು. ಅಂದು ಪ್ರತಾಪ್ ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಮೈಕಲ್ ಇಂದು ಪ್ರತಾಪ್ ವಿರುದ್ಧ ತಿರುಗಿ ಬಿದ್ದಿದ್ದು, ಪ್ರತಾಪ್‌ಗೆ ಪರ್ಸನಾಲಿಟಿ ಎಂಬುವುದೇ ಇಲ್ಲ. ಸಿಂಪತಿಯ ಮೇಲೆ ಬದುಕುತ್ತಿರುವವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ನಾನು ಇಲ್ಲಿಯವರೆಗೂ ಪ್ರತಾಪ್‌ನನ್ನು ನನ್ನ ವಿರೋಧಿ ಸ್ಪರ್ಧಿ ಎಂದು ಅಂದುಕೊಳ್ಳಲಿಲ್ಲ. ಮುಂದೆಯೂ ಅಂದುಕೊಳ್ಳೋದಿಲ್ಲ ಎಂಬ ಮಾತನ್ನು ಪ್ರತಾಪ್‌ಗೆ, ಮೈಕಲ್ ಹೇಳಿದ್ದಾರೆ. ಪ್ರತಾಪ್‌ಗೆ ಮೈಕಲ್ ಮಾತು ಕೇಳಿ ಬೇಸರವಾಗಿದೆ.

ತುಕಾಲಿ-ಅವಿ ಎಲಿಮಿನೇಟ್ ಮಾಡಿದ್ದು ಯಾರನ್ನು?

ತುಕಾಲಿ ಸಂತೋಷ ಯಾವಾಗಲೂ ಸಂಗೀತಾ ಅವರನ್ನೇ ಎಲಿಮಿನೇಟ್ ಮಾಡುತ್ತಿದ್ದರು. ಆದರೆ, ಇಂದು ವರ್ತೂರು ಕ್ಲಾಸ್‌ನಲ್ಲಿ ಪವಿ ಹೆಸರನ್ನು ಬೋರ್ಡ್ ಮೇಲೆ ಬರೆದಿದ್ದಾರೆ. ನಂತರ ಬಂದ ಅವಿನಾಶ್, ನಮ್ರತಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಹೊಸದೊಂದು ಟಾಸ್ಕ್ ಯಾರ ಯಾರ ನಡುವೆ ಬೇಸರ ಹಾಗೂ ಬಿರುಕನ್ನು ಮೂಡಿಸಲಿದೆ ಎಂಬುದನ್ನು ನೋಡಬೇಕಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದ್ದು, ಯಾರು ವಿನ್ನರ್ ಆಗಿ ನೂರು ದಿನ ಪೂರೈಸುತ್ತಾರೆ ಎಂಬುದೇ ಕುತೂಹಲ.

More from Filmibeat

English summary
Bigg Boss season 10: Here is the details about Michael hate speech on Drone Pratap and Sangeetha:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X