Bigg boss 10: ಈ ವಾರ ಡ್ರೋನ್ ಪ್ರತಾಪ್ 'ಉತ್ತಮ', ಕಳಪೆ ಪಟ್ಟ ಹೊತ್ತು ಜೈಲಿಗೆ ಹೋದ ಇಶಾನಿ, ನೀತು!
ಬಿಗ್ ಬಾಸ್ ಕನ್ನಡ ಸೀಸನ್ 10ರ ಐದನೇ ವಾರ ಡ್ರೋನ್ ಪ್ರತಾಪ್ ನೇತೃತ್ವದ 'ಗಂಧದ ಗುಡಿ' ತಂಡ ಸಕತ್ ಪರ್ಫಾರ್ಮೆನ್ಸ್ ನೀಡಿದೆ. ಹೀಗಾಗಿ ಅವರ ತಂಡದವರೇ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಭಾಗ್ಯಶ್ರೀ ಮತ್ತು ಮೈಕಲ್ ನಡುವಿನ ಸೆಣೆಸಾಟದಲ್ಲಿ ಮೈಕಲ್ ಕ್ಯಾಪ್ಟನ್ ಆಗಿದ್ದಾರೆ. ಇದರ ಜೊತೆಗೆ ಈ ವಾರದ ಉತ್ತಮ ಮತ್ತು ಕಳಪೆ ಸ್ಪರ್ಧಿಗಳನ್ನು ಮನೆಯ ಸದಸ್ಯರು ಸೆಲೆಕ್ಟ್ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಪಾಲಿಗೆ 'ಉತ್ತಮ' ಪಟ್ಟ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಟ್ರೋನ್ ಪ್ರತಾಪ್ ಗಂಧದ ಗುಡಿ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಸಕತ್ ಆಟವಾಡಿದ್ದ ಅವರು, ತಂಡವನ್ನು ತುಂಬಾ ಚೆನ್ನಾಗಿ ನಡೆಸಿದ್ದರು. ಮೊದಲ ಎರಡು ದಿನ ತಂಡದ ಸದಸ್ಯರ ಮೇಲೆ ಕಿರುಚಾಡಿದ್ದರೂ ಕೂಡ ಬಳಿಕ ಎಲ್ಲರನ್ನೂ ಸರಿದೂಗಿಸಿಕೊಂಡಿ ಹೋಗಿದ್ದರು. ಇದು ಗಂಧದ ಗುಡಿ ತಂಡ ಮತ್ತು ವಜ್ರಕಾಯ ತಂಡದ ಸದಸ್ಯರಿಗೂ ಇಷ್ಟವಾಗಿದೆ. ಹೀಗಾಗಿ ಅತಿ ಹೆಚ್ಚು ಮಂದಿ ಅವರಿಗೆ 'ಉತ್ತಮ' ಪಟ್ಟವನ್ನು ನೀಡಿದ್ದಾರೆ.

ಡ್ರೋನ್ ಪ್ರತಾಪ್ ಪರವಾಗಿ ಮೈಕಲ್ ಅಜಯ್, ಸ್ನೇಹಿತ್ ಗೌಡ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ನೀತು ಉತ್ತಮ ಎಂದು ಮತ ಹಾಕಿದ್ದರು. ಇನ್ನು, ಕಳಪೆ ಪಟ್ಟವನ್ನು ಪ್ರತಾಪ್‌ಗೂ ಕೊಡಲಾಗಿತ್ತು. ಗೊಂಬೆ ಆಟದಲ್ಲಿ ಪ್ರತಾಪ್ ತೆಗೆದುಕೊಂಡ ನಿರ್ಧಾರ ತಮಗೆ ಇಷ್ಟವಾಗಲಿಲ್ಲ ಎಂದು ಸಿರಿ ಹೇಳಿದ್ದಾರೆ. ಆದರೆ, ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ 'ಉತ್ತಮ' ಪಟ್ಟಕ್ಕೆ ಅರ್ಹರಾಗಿದ್ದಾರೆ.
ಮೊದಲ ಬಾರಿಗೆ ಇಬ್ಬರಿಗೆ ಕಳಪೆ ಪಟ್ಟ!
ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ. ಐದನೇ ವಾರ ರ್ಯಾಪರ್ ಇಶಾನಿ ಮತ್ತು ನೀತು ಕಳಪೆ ಪಟ್ಟ ಪಡೆದಿದ್ದಾರೆ. ನೀತುಗೆ ವಿನಯ್ ಗೌಡ, ನಮ್ರತಾ ಗೌಡ, ಸ್ನೇಹಿತ್, ಇಶಾನಿ, ತುಕಾಲಿ ಸಂರೋಷ್, ಸಿರಿ, ಮೈಕಲ್ ಅಜಯ್ ಕಳಪೆ ಪಟ್ಟ ಕೊಟ್ಟಿದ್ದಾರೆ. ಜೈಲು ಸೇರಿರುವ ಇನ್ನೋಬ್ಬ ಸ್ಪರ್ಧಿ ಇಶಾನಿಗೆ ನೀತು, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ಭಾಗ್ಯಶ್ರೀ ಕಳಪೆ ಎಂದು ಪಟ್ಟ ನೀಡಿದ್ದಾರೆ.

ನೀತುಗೆ ಕಳೆಪೆ ಪಟ್ಟ ಕೊಡಲು ಮನೆಯ ಸದಸ್ಯರು ಕಾರಣಗಳನ್ನು ನೀಡಿದ್ದಾರೆ. ಬೇರೆಯವರ ಮನಸ್ತಾಪವನ್ನು ನೀತು ಟೀಂಗೆ ತಂದಿದ್ದು ಹಲವರಿಗೆ ಇಷ್ಟವಾಗಿಲ್ಲ. ಒಂದು ತಂಡ ಹಾಳಾಗುವುದು ಇಷ್ಟವಿಲ್ಲ ಎಂಬ ಅಭಿಪ್ರಾಯಗಳು ಸ್ಪರ್ಧಿಗಳಿಂದ ಕೇಳಿ ಬಂದಿದೆ. ಈ ವಾರದಲ್ಲಿಯೇ ನಮ್ರತಾ ಹಾಗೂ ನೀತು ನಡುವೆ ಜಗಳವೂ ನಡೆದಿತ್ತು.
ಕ್ಯಾಪ್ಟನ್ ಆದ ಮೈಕಲ್ ಅಜಯ್, ಕಣ್ಣೀರು ಹಾಕಿದ ಸಂಗೀತಾ!
ಈ ವಾರ ಬಿಗ್ ಬಾಸ್ ಮನೆಗೆ ಮೈಕೆಲ್ ಅಜಯ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಪಟ್ಟಕ್ಕಾಗಿ ಭಾಗ್ಯಶ್ರೀ ಮತ್ತು ಮೈಕಲ್ ಸ್ಪರ್ಧೆಯಲ್ಲಿದ್ದರು, ಇಬ್ಬರಲ್ಲಿ ಮೈಕೆಲ್ ಜಯ ಸಾಧಿಸಿದ್ದಾರೆ. ಮೈಕೆಲ್ ಪರವಾಗಿ ಸ್ನೇಹಿತ್ ಗೌಡ, ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ ಆಟವಾಡಿದ್ದರೆ, ಭಾಗ್ಯಶ್ರೀ ಪರ ಸಂಗೀತಾ ಶೃಂಗೇರಿ, ನಮ್ರತಾ ಗೌಡ, ವಿನಯ್ ಗೌಡ ರೆಡಿ ಇದ್ದರು.
ಭಾಗ್ಯಶ್ರೀ ಪರ ಆಡವಾಡಲು ಹೋದ ಸಂಗೀತಾ ಶೃಂಗೇರಿ ಮೊದಲ ಹಂತವನ್ನೇ ಮುಗಿಸಲಿಲ್ಲ. ಪದೇ ಪದೇ ಬ್ಯಾಲೆನ್ಸ್ ಕಳೆದುಕೊಂಡು ಬೀಳುತ್ತಿದ್ದರು. ಹೀಗಾಗಿ ಮೂರು ಹಂತಗಳಲ್ಲಿ ಮೋದಲ ಹಂತದಲ್ಲೇ ಭಾಗ್ಯಶ್ರೀ ಟೀಂ ಸೋಲು ಕಂಡಿತು. ಹೀಗಾಗಿ ವಿನಯ್ ನಂತಹ ಸ್ಟ್ರಾಂಗ್ ಪ್ಲೇಯರ್ ತನ್ನ ಪರವಾಗಿದ್ದರೂ ಭ್ಯಾಗ್ಯಶ್ರೀ ಕ್ಯಾಪ್ಟನ್ ಆಗಲೇ ಇಲ್ಲ. ಬಳಿಕ ಸಂಗೀತಾ ತನಗೆ ತಾನೇ ಶೇಮ್ ಶೇಮ್ ಎಂದುಕೊಂಡು ಕಣ್ಣೀರು ಹಾಕಿದ್ದಾರೆ.


Click it and Unblock the Notifications











