Bigg Boss: ಬಿಗ್‌ಬಾಸ್ ಮನೆಗೆ ಡ್ರೋನ್ ಪ್ರತಾಪ್ ಪೋಷಕರು: ವರ್ಷಗಳ ಬಳಿಕ ತಂದೆ- ತಾಯಿ ನೋಡಿ ಕಣ್ಣೀರು

By Shruthi Harishgowda

ಬಿಗ್ ಬಾಸ್ ಕನ್ನಡ ಸೀಸನ್ -10 ಸದ್ಯ 80 ದಿನಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ. ಸೆಮಿ ಫೈನಲ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು ಎಲ್ಲರೂ ಕೂಡ ತಮ್ಮ ಕುಟುಂಬಸ್ಥರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಕುಟುಂಬದವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ. ಈಗ ಡ್ರೋನ್ ಪ್ರತಾಪ್ ಹಾಗೂ ವಿನಯ್ ಸರದಿಯಾಗಿದ್ದು ಮನೆಯೊಳಗೆ ಪ್ರತಾಪ್ ಅಪ್ಪ- ಅಮ್ಮ ಬಂದಿದ್ದಾರೆ.

ಪ್ರತಾಪ್‌ಗೆ ತಮ್ಮ ಕುಟುಂಬದವರನ್ನು ನೋಡುವ ಕಾತುರತೆ ಇತ್ತು. ಇತರೆ ಸ್ಪರ್ಧಿಗಳ ಕುಟುಂಬ ಸದಸ್ಯರನ್ನು ನೋಡಿದ ಪ್ರತಾಪ್‌ಗೂ ನನ್ನ ತಂದೆ ತಾಯಿ ಆದಷ್ಟು ಬೇಗನೆ ಬಂದರೆ ಚೆನ್ನಾಗಿ ಇರುತ್ತದೆ ಎಂದುಕೊಂಡಿದ್ದರು. ಪ್ರತಾಪ್ ಕ್ಯಾಮರಾ ಮುಂದೆ ಹೋದವರೇ ಬಿಗ್ ಬಾಸ್ ನನ್ನ ಅಪ್ಪ ಅಮ್ಮ ಬಂದಿದ್ದಾರಾ ದಯವಿಟ್ಟು ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಇದಕ್ಕೆ ಏನು ಉತ್ತರವನ್ನು ನೀಡಿಲ್ಲ. ಇದೇ ಕಾರಣಕ್ಕಾಗಿ ಪ್ರತಾಪ್ ಊಟ ಬಿಟ್ಟು ಸಣ್ಣ ಮಗುವಿನಂತೆ ಹಠ ಮಾಡುತ್ತಾರೆ. ನನ್ನ ತಂದೆ ತಾಯಿ ಬಂದೇ ಬರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅದೇ ವಿಶ್ವಾಸದಲ್ಲಿ ಕಾಯುತ್ತಾ ಇದ್ದಾರೆ.

Bigg Boss kannada 10: Drone Prathap Breaks Down As His parents Enters The House

ಬಿಗ್ ಬಾಸ್ ಮನೆಗೆ ಎಲ್ಲರಿಗೂ ಕೂಡ ಲೆಟರ್ ಬಂದಿತ್ತು. ಆದರೆ ಪ್ರತಾಪ್‌ಗೆ ಯಾವುದೇ ಲೆಟರ್ ಬಂದಿರಲಿಲ್ಲ. ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಪ್ರತಾಪ್‌ಗೆ ಒಂದು ಸರ್ಪ್ರೈಸ್ ನೀಡಿದ್ದರು. ಅವರ ತಂದೆಯ ಜೊತೆ ಮಾತನಾಡಿಸುವ ಪ್ರಯತ್ನ ಮಾಡಿದ್ದರು. ಆಗ ಪ್ರತಾಪ್ ಭಾವುಕರಾಗಿದ್ದರು. ಇನ್ನೂ ಮನೆಯ ಇತರ ಸದಸ್ಯರು ಸಮಾಧಾನ ಪಡಿಸಿದ್ದರು. ಇದಾದ ಮೇಲೆ ಪ್ರತಾಪ್ ಸಿಂಪತಿಯಿಂದ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾತನ್ನು ಕೂಡ ಕೇಳಬೇಕಾಯಿತು.

ತಂದೆ ತಾಯಿಗಾಗಿ ಕಣ್ಣೀರು ಹಾಕಿದ ಪ್ರತಾಪ್

ಪ್ರತಾಪ್‌ಗೆ ಎಲ್ಲೋ ಒಂದು ಕಡೆ ನನ್ನ ತಂದೆ ತಾಯಿ ಬಂದಿದ್ದಾರಾ? ಇಲ್ಲವಾ? ಎಂಬ ಅನುಮಾನ ಕಾಡುತ್ತಿತ್ತು. ಅದಕ್ಕೆ ಬಿಗ್ ಬಾಸ್ ನನ್ನ ತಂದೆ ತಾಯಿ ಬಂದಿದ್ದಾರಾ ತಿಳಿಸಿ ಎಂದು ಕೇಳಿದ್ದಾರೆ. ಇದೇ ವೇಳೆ ಅಪ್ಪ-ಅಮ್ಮ ಬೇಕು ಎಂದು ಹಠ ಮಾಡಿದ್ದಾರೆ. ಒಂದು ತುತ್ತು ಅನ್ನವನ್ನು ತಿನ್ನದೇ ಉಪವಾಸವಿದ್ದಾರೆ. ನಮ್ರತಾ, ಸಂಗೀತಾ ಹಾಗೂ ವರ್ತೂರು ಸಂತೋಷ್ ಮೂವರು ಕೂಡ ಪ್ರತಾಪ್ ಸಮಾಧಾನ ಮಾಡುತ್ತಲೇ ಇದ್ದಾರೆ. ಆದರೆ ಪ್ರತಾಪ್ ಏನನ್ನು ತಿನ್ನದೇ ಕುಡಿಯದೇ ಬೇಸರದಲ್ಲೇ ಕಾಲ ಕಳೆಯುತ್ತಾ ಇದ್ದಾರೆ.

Bigg Boss kannada 10: Drone Prathap Breaks Down As His parents Enters The House

ಉಪವಾಸ ಮಾಡುತ್ತಾ ಕುಳಿತಿರುವ ಡ್ರೋಣ್

ಸಂಗೀತಾ ಏನಾದರೂ ಕುಡಿ ನಿಮ್ಮ ತಂದೆ ತಾಯಿ ಬರುತ್ತಾರೆ ಎಂದು ಹೇಳಿದಾಗಲೂ ಪ್ರತಾಪ್ ನಿರಾಕರಣೆ ಮಾಡಿದ್ದಾರೆ. ನಮ್ರತಾ ಊಟ ತಂದು ಇದೊಂದು ತುತ್ತು ತಿನ್ನು ಅವರಿಗೂ ಕೂಡ ಬೇಸರವಾಗುತ್ತದೆ ಎಂದು ಹೇಳಿದಾಗಲೂ ನನಗೆ ಏನು ಬೇಡ ನನ್ನ ತಂದೆ ತಾಯಿ ಬಂದರೆ ಅಷ್ಟೇ ಸಾಕು ಎಂದು ಪ್ರತಾಪ್ ಊಟ ಮಾಡದೆ ಉಪವಾಸವಿದ್ದಾರೆ. ಮೂರು ವರ್ಷದಿಂದಲೂ ಕೂಡ ತನ್ನ ತಂದೆ ತಾಯಿ ಹಾಗೂ ತಂಗಿಯಿಂದ ದೂರವಿರುವ ಪ್ರತಾಪ್ ಬಹಳಷ್ಟು ನೊಂದಿದ್ದರು. ಇದಕ್ಕಾಗಿ ತಂದೆ ತಾಯಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ಪ್ರತಾಪ್ ಕುಟುಂಬ

ಕೊನೆಗೂ ಬಿಗ್ ಬಾಸ್ ಮನೆಗೆ ಪ್ರತಾಪ್ ಕುಟುಂಬಸ್ಥರನ್ನು ಕಳಿಸಲಾಗಿದೆ. ತನ್ನ ತಂದೆ ತಾಯಿಯ ಧ್ವನಿ ಕೇಳಿದ ತಕ್ಷಣವೇ ಪ್ರತಾಪ್ ಎಲ್ಲಾ ಕಡೆ ಹುಡುಕಾಡಿದ್ದಾರೆ. ನಂತರ ಮುಖ್ಯದ್ವಾರದ ಮೂಲಕ ಪ್ರತಾಪ್ ಪೋಷಕರು ಎಂಟ್ರಿ ಕೊಟ್ಟರು. ಪ್ರತಾಪ್, ಅಪ್ಪ ಅಮ್ಮ ಮಾತ್ರ ಬಿಗ್ ಬಾಸ್ ಮನೆಗೆ ಬಂದಿರುವಂತೆ ಹೊಸ ಪ್ರೋಮೋದಲ್ಲಿ ತೋರಿಸಿದ್ದಾರೆ. ಪ್ರತಾಪ್ ತನ್ನ ತಂದೆ ತಾಯಿಯನ್ನು ನೋಡಲು ಹೋದಾಗ ಡೋರ್ ಲಾಕ್ ಆಗಿರುವಂತೆ ಕಾಣುತ್ತಿದೆ.

ತಂದೆ ತಾಯಿಯನ್ನು ಕಣ್ತುಂಬಿಕೊಂಡ ಡ್ರೋನ್

ಬಿಗ್ ಬಾಸ್ ಬಳಿ ಪ್ರತಾಪ್ ಬಿಗ್ ಬಾಸ್ ದಯವಿಟ್ಟು ಡೋರ್ ತೆಗೆಯಿರಿ ಎಂದು ಬೇಡಿಕೊಂಡಿದ್ದಾರೆ. ತನ್ನ ತಂದೆ ತಾಯಿಯನ್ನು ನೋಡಿದ ಕೂಡಲೇ ಪ್ರತಾಪ್ ಕಣ್ಣೀರಾಗಿದ್ದಾರೆ. ನಿಜಕ್ಕೂ ಕೂಡ ಪ್ರತಾಪ್ ಬದಲಾಗಿದ್ದಾರಾ? ಅವರಿಗೆ ತಾವು ಮಾಡಿರುವ ತಪ್ಪಿನ ಬಗ್ಗೆ ಪಶ್ಚಾತಾಪವಿದೆಯಾ ಎಂಬ ಪ್ರಶ್ನೆ ವೀಕ್ಷಕರನ್ನ ಕಾಡುತ್ತಿದೆ. ಎಲ್ಲದಕ್ಕೂ ಕೂಡ ಹೊಸ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಬಿಗ್‌ಬಾಸ್ ಶೋ ಲೈವ್ ವೀಕ್ಷಿಸುವ ಅವಕಾಶವಿದೆ.

More from Filmibeat

English summary
Bigg Boss Kannada: Here is the details about drone pratap parents comes to bigboss house;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X