ಆಸ್ಪತ್ರೆಯಿಂದ ಮತ್ತೆ ದೊಡ್ಮನೆಗೆ ಮರಳಿದ ಡ್ರೋನ್ ಪ್ರತಾಪ್: ಮೊದಲು ಮಾಡಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 10 ಸೆಮಿ ಫೈನಲ್ ಹಂತಕ್ಕೆ ತಲುಪುತ್ತಿದೆ. ದಿನ ದಿನಕ್ಕೆ ಕಲರ್ಸ್ ಕನ್ನಡ ರಿಯಾಲಿಟಿ ಶೋ ಕುತೂಹಲ ಮೂಡಿಸುತ್ತಿದೆ. ಹಲವು ಮೊದಲುಗಳಿಗೆ ಈ ಸೀಸನ್ ಸಾಕ್ಷಿಯಾಗಿದೆ. ಹಲವು ಪೊಲೀಸ್ ಕೇಸ್‌ಗಳು, ಎಫ್‌ಐಆರ್‌ಗಳು, ವಿವಾದಗಳಿಂದ ಈ ಶೋ ಸದ್ದು ಮಾಡುತ್ತಿದೆ. ಈಗ ಮತ್ತೆ ಡ್ರೋನ್ ಪ್ರತಾಪ್ ಎರಡನೇ ಬಾರಿ ಆಸ್ಪತ್ರೆಗೆ ಹೋಗಿ ದೊಡ್ಮನೆಗೆ ವಾಪಸ್ ಆಗಿದ್ದಾರೆ.
ಕಳೆದ ಬಾರಿ ಕಣ್ಣೀಗೆ ಹಾನಿಯಾಗಿ ಸಂಗೀತಾ ಜೊತೆಗೆ ಆಸ್ಪತ್ರೆಗೆ ಸೇರಿದ್ದ ಡ್ರೋನ್ ಇದೀಗ ಮತ್ತೆ ಆಸ್ಪತ್ರೆ ಸೇರಿದ್ದರು. ಇದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ಡ್ರೋನ್‌ಗೆ ಅನಾರೋಗ್ಯ ಉಂಟಾಗಿತ್ತು. ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಇದರ ಜೊತೆಗೆ ಮತ್ತೊಮ್ಮೆ ದೊಡ್ಮನೆಗೆ ಪೊಲೀಸರು ಕಾಲಿಟ್ಟಿದ್ದಾರೆ ಎನ್ನಲಾಗಿತ್ತು. ಇದರಲ್ಲದರ ನಡುವೆ ಮತ್ತೆ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಮತ್ತೆ ದೊಡ್ಮನೆಗೆ ಕಾಲಿಟ್ಟ ಡ್ರೋನ್ ಪ್ರತಾಪ್!
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಡ್ರೋನ್ ಪ್ರತಾಪ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದ ಪ್ರೋಮೋ ಕಲರ್ಸ್ ಕನ್ನಡ ಹಂಚಿಕೊಂಡಿದ್ದು, ಅದರಲ್ಲಿ ಪ್ರತಾಪ್ ವಾಪಸ್ ಬಂದಿದ್ದಾರೆ. ಆದರೆ, ಮನೆಗೆ ಬಂದವತೇ ಮೌನಕ್ಕೆ ಶರಣಾಗಿದ್ದಾರೆ. ಯಾರೊಂದಿಗೂ ಅಷ್ಟೊಂದು ಮಾತನಾಡಿಲ್ಲ. ಜೊತೆಗೆ ಯಾವುದೇ ಯೋಚನೆಯಲ್ಲಿ ಕಳೆದುಹೋದ ಹಾಗೆ ಕಾಣಿಸುತ್ತಿದ್ದಾರೆ.
ಬುಗ್ ಬಾಸ್ ಮನೆಯ ಗೇಟ್ ತೆಗೆದು ಒಳಗೆ ಬಂದ ಡ್ರೋನ್ ಪ್ರತಾಪ್ ಅವರನ್ನು ಓಡಿ ಹೋಗಿ ನಮ್ರತಾ ಮತ್ತು ಸಂಗೀತಾ ಶೃಂಗೇರಿ ಸ್ವಾಗತಿಸಿದ್ದಾರೆ. ಇಬ್ಬರು ಪ್ರತಾಪ್‌ಗೆ ಅಪ್ಪುಗೆಯ ವೆಲ್‌ಕಂ ನೀಡಿದ್ದಾರೆ. ಜೊತೆಗೆ ನಿನ್ನ ತುಂಬಾ ಮಿಸ್ ಮಾಡಿಕೊಂಡೆ ಎಂದು ಸಂಗೀತಾ ಡ್ರೋನ್‌ಗೆ ಹೇಳಿದ್ದಾರೆ. ಆದರೆ, ಪ್ರತಾಪ್ ಯಾವುದೇ ಮಾತನಾಡಿಲ್ಲ.

ಮನೆಗೆ ಬಂದು ದೇವರ ಮುಂದೆ ಶರಣಾದ ಡ್ರೋನ್ ಪ್ರತಾಪ್!
ಮತ್ತೆ ಬಿಗ್ ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್, ತುಂಬಾ ಚಿಂತೆಯಲ್ಲಿ ಇರುವಂತೆ ಕಾಣುತ್ತಿದ್ದಾರೆ. ದೇವರ ಮುಂದೆ ಹೋಗಿ ಕೈ ಮುಗಿದು ಏನೋ ಕೇಳಿಕೊಂಡಿದ್ದಾರೆ. ದೇವರಿಗೆ ಅಗರಬತ್ತಿ ಹಚ್ಚಿ ಪ್ರಾರ್ಥನೆ ಮಾಡಿದ್ದಾರೆ. ಇದಕಕೆ ಸಂಗೀತಾ ಸಾಥ್ ನೀಡಿದ್ದಾರೆ. ಫ್ರೋಮೋದಲ್ಲಿ ಯಾರ ಜೊತೆಗೂ ಮಾತನಾಡಿರುವುದನ್ನು ತೋರಿಸಿಲ್ಲ.
ಇನ್ನು, ಪ್ರತಾಪ್ ಅವರಿಗೆ ಧೈರ್ಯ ತುಂಬಿರುವ ತುಕಾಲಿ ಸಂತೋಷ್, ಯೋಚನೆ ಮಾಡಬೇಡ ನೀನು ಆರೋಗ್ಯವಾಗಿದ್ದರೇ ಅಷ್ಟೇ ಸಾಕು ಎಂದಿದ್ದಾರೆ. ವರ್ತೂರ್ ಸಂತೋಷ್ ಕೂಡ ನೀನು ಅರಾಮಾಗಿ ಇದ್ದೀಯಾ ಎಂದು ಪ್ರಶ್ನೆ ಮಾಡಿದ್ದು, ತುಕಾಲಿ ಸಂತೋಷ್ ಮಾರಿಗೆ ತಲೆ ಆಡಿಸಿದ್ದಾರೆ. ಆದರೂ, ಡ್ರೋನ್ ಪ್ರತಾಪ್ ಒಂದೂ ಮಾತು ಆಡಿಲ್ಲ.... ಸುಮ್ಮನೆ ತಮ್ಮದೇ ಲೋಕದಲ್ಲಿದ್ದಾರೆ. ಈ ಬಾರಿಯೂ ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಕೂಡ ಅವರು ಸೇವ್ ಆಗೋ ಚಾನ್ಸ್ ಜಾಸ್ತಿಯಿದೆ. ಹಾಗಾಗಿ ಮನೆಯಲ್ಲೇ ಉಳಿಯಲಿದ್ದಾರೆ.
ಪ್ರತಾಪ್ ಆರೋಗ್ಯದ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ
ಪ್ರತಾಪ್ ಆರೋಗ್ಯದ ಬಗ್ಗೆ ಏನೇನೋ ಊಹಾಪೋಹಗಳು ಹರಡಿದ್ದವು, ಅದಕ್ಕೆ ಫಿಲ್ಮಿಬೀಟ್‌ಗೆ ಕಲರ್ಸ್ ಕನ್ನಡ ವಾಹಿನಿ ತಂಡದಿಂದ ಸ್ಪಷ್ಟನೆ ಸಿಕ್ಕಿತ್ತು. "ಪ್ರತಾಪ್ ಎರಡು ದಿನಗಳಿಂದ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಮಾತ್ರೆ ತೆಗೆದುಕೊಂಡಿದ್ದರು. ಇದರಿಂದ ಹೊಟ್ಟೆ ನೋವು ಬಂದು ವಾಂತಿ ಮಾಡಿಕೊಂಡಿದ್ದರು. ಹಾಗಾಗಿ ಆಸ್ಪತ್ರೆ ಸೇರಿಸಿ ಡ್ರಿಪ್ಸ್ ಹಾಕಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ರು ಎನ್ನುವ ವದಂತಿ ಯಾರು ಹಬ್ಬಿಸಿದರೋ ಗೊತ್ತಿಲ್ಲ" ಎಂದು ಬಿಗ್‌ಬಾಸ್ ಪಿಆರ್ ಮನೋಜ್ ತಿಳಿಸಿದ್ದರು.


Click it and Unblock the Notifications











