ಡ್ರೋನ್ ಪ್ರತಾಪ್ ಕ್ಯಾಪ್ಟನ್ ಆಗೋದು ದೊಡ್ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ...!? ಯಾಕೆ ಹಿಂಗೆ??
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮನೆಯ ಸ್ಪರ್ದಿಗಳ ಕುಟುಂಬದವರು ಬಂದು ಧೈರ್ಯ ತುಂಬಿ ಹೋಗಿದ್ದಾರೆ. ಇದರ ಜೊತೆಗೆ ಮನೆಯ ಕ್ಯಾಪ್ಟನ್ ಯಾರಾಗಬೇಕು ಎಂಬ ಬಗ್ಗೆಯೂ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈಗ ತಮ್ಮ ಫ್ಯಾಮಿಲಿ ಸೆಲೆಕ್ಟ್ ಮಾಡಿರುವ ಮೂವರು ಕ್ಯಾಂಡಿಡೇಟ್‌ಗಳಲ್ಲಿ ಒಬ್ಬರನ್ನು ಕ್ಯಾಪ್ಟನ್ ಮಾಡುವ ಜವಾಬ್ದಾರಿ ಮನೆಯ ಸದಸ್ಯರ ಮೇಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ನೇ ವಾರದಲ್ಲಿ ಇರುವುದು ಹತ್ತು ಮಂದಿ. ಇದರಲ್ಲಿ ಬರುತೇಕರು ಸ್ಟ್ರಾಂಗ್ ಕ್ಯಾಂಡಿಡೇಟ್‌ಗಳೇ ಇದ್ದಾರೆ. ಆದರೆ, ಕಳೆದ ಮೂರು ವಾರಗಳಿಂದ ಎಲ್ಲರೂ ಟಾರ್ಗೆಟ್ ಮಾಡುತ್ತಿರುವುದು ಮಾತ್ರ ಡ್ರೋನ್ ಪ್ರತಾಪ್ ಅವರನ್ನು. ಅವರನ್ನ ಮನೆಯಿಂದ ಹೊರ ಹಾಕಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಈ ವಾರ ಕ್ಯಾಪ್ಟನ್ ಆಗುವುದನ್ನು ತಪ್ಪಿಸಲು ಮನೆ ಮಂದಿ ಟೊಂಕ ಕಟ್ಟಿ ನಿಂತಿದ್ದಾರೆ.

ಕ್ಯಾಪ್ಟನ್ ರೇಸ್‌ನಿಂದ ಪ್ರತಾಪ್ ಹೊರಗೆ..!?
ಬಿಗ್ ಬಾಸ್ ಕನ್ನಡ ಸೀಸನ್ 10, ಸೆಮೆ ಫೈನಲ್ ಹಂತಕ್ಕೆ ತಲುಪಿದೆ. ಈಗಾಗಲೆ 11ನೇ ವಾರಕ್ಕೆ ಕಾಲಿಟ್ಟಿದೆ. ಕೊನೆಯ ವಾರಗಳಲ್ಲಿ ಮನೆಯಲ್ಲಿ ಕ್ಯಾಪ್ಟನ್ ಆಗುವುದು ತುಂಬಾ ಮುಖ್ಯವಾಗುತ್ತದೆ. ಮನೆಗೆ ಬಂದಿದ್ದ ಕುಟುಂಬ ಸದಸ್ಯರು ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ತಿಳಿಸಿದ್ದಾರೆ. ಇದರ ಪ್ರಕಾರ ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅವರನ್ನು ಫೈನಲ್ ಮಾಡಲಾಗಿದೆ.
ಈ ಮೂವರಲ್ಲಿ ಒಬ್ಬರನ್ನು ಮನೆಯ ಇತರ ಸದಸ್ಯರು ಯಾರು ಕ್ಯಾಪ್ಟನ್ ಆಗಬಾರದು ಎಂದು ಆಯ್ಕೆ ಮಾಡಬೇಕಿದೆ. ಹೀಗಾಗಿ ಮನೆ ಮಂದಿ ತನಿಷಾ, ಸಂಗೀತಾ ಹಾಗೂ ಪ್ರತಾಪ್ ಅವರಲ್ಲಿ ಪ್ರತಾಪ್ ಅವರನ್ನು ಹೊರಗಿಡುತ್ತಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋ ಪ್ರಕಾರ ಎಲ್ಲರು ಪ್ರತಾಪ್ ವಿರುದ್ಧ ಮಾತನಾಡಿದ್ದಾರೆ.
ಕ್ಯಾಪ್ಟನ್ ಆದ ತಕ್ಷಣ ಕಮಾಂಡೋ ಆಗ್ತಾರಂತೆ ಪ್ರತಾಪ್!
ಕಾರ್ತಿಕ್, ನಮ್ರತಾ, ವಿನಯ್, ಸಿರಿ, ಮೈಕಲ್, ವರ್ತೂರು ಸಂತೋಷ್ ಎಲ್ಲರೂ ಡ್ರೋನ್ ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ. ಇದಕ್ಕೆ ತಮ್ಮದೆ ಆದ ಕಾರಣವನ್ನು ನೀಡಿದ್ದಾರೆ. ನಮ್ರತಾ ಅವರು ಪ್ರತಾಪ್ ಹೆಸರು ಹೇಳಿ ಪ್ರತಾಪ್ ತುಂಬಾ ಸ್ಟ್ರಿಕ್ಟ್. ಕ್ಯಾಪ್ಟನ್ ಆದ ಕೂಡಲೇ ಸ್ಟ್ರಿಕ್ಟ್ ಆಗುತ್ತಾರೆ ಎಂದಿದ್ದಾರೆ.

ವಿನಯ್ ಗೌಡ ಕೂಡ ನಗುತ್ತಲೇ ಪ್ರತಾಪ್ ಲೀಡರ್ ಆದ ಕೂಡಲೇ ಕಮಾಂಡೋ ಆಗಿಬಿಡುತ್ತಾರೆ ಎಂದಿದ್ದಾರೆ. ಕಾರ್ತಿಕ್ ಮಹೇಶ್ ಯಾವ ಕಾರಣ ಕೊಟ್ಟಿದ್ದಾರೆ ಎಂಬುದನ್ನು ತೋರಿಸಿಲ್ಲ. ವರ್ತೂರ್ ಸಂತೋಷ್ ಮೂಡ್ ಪ್ರಕಾರ ಪ್ರತಾಪ್ ಮಾತನಾಡುತ್ತಾರೆ ಎಂದಿದ್ದಾರೆ. ಇದರ ಜೊತೆಗೆ ಸಿರಿ ಅವರು ಪ್ರತಾಪ್ಗೆ ಮೂಡ್ಸ್ವಿಂಗ್ಸ್ ಜಾಸ್ತಿ ಎಂದಿದ್ದಾರೆ.
ಮನೆಯವರ ಮಾತಿಗೆ ಗರಂ ಅದ ಪ್ರತಾಪ್!
ಸಿರಿ ಅವರ ಮಾತಿಗೆ ಗರಂ ಆದ ಪ್ರತಾಪ್, ಮೂಡ್ಸ್ವಿಂಗ್ಸ್ ಅಂತೆಲ್ಲಾ ಮಾತನಾಡಬೇಡಿ. ಒಂದು ಸಲ ಹೇಳಿದರೆ ಸರಿ. ಪದೇ ಪದೇ ಚೆನ್ನಾಗಿರಲ್ಲ ಎಂದಿದ್ದಾರೆ. ಜೊತೆಗೆ ತಮ್ಮನ್ನು ಕ್ಯಾಪ್ಟನ್ ಪಟ್ಟದಿಂದ ದೂರ ಇಡುತ್ತಿರುವ ಮನೆ ಮಂದಿ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನು ಮನೆ ಮಂದಿಯೇಲ್ಲಾ ಪ್ರತಾಪ್ ಅವರನ್ನು ಕ್ಯಾಪ್ಟನ್ ಆಗುವುದರಿಂ್ ತಪ್ಪಿಸುತ್ತಿದ್ದಾರೆ. ಹೀಗಾಗಿ ಈ ವಾರ ತನಿಷಾ ಹಾಗೂ ಸಂಗೀತಾ ಇಬ್ಬರ ನಡುವೆ ಯಾರು ಕ್ಯಾಪ್ಟನ್ ಆಗುತ್ತಾರೆ ನೋಡಬೇಕು. ಅಥವಾ ಮತ್ತೆ ಪ್ರತಾಪ್ ಅವರೇ ಕ್ಯಾಪ್ಟನ್ ಆಗುವ ಅವಕಾಶ ಸಿಗುತ್ತಾ ಎಂಬುದನ್ನು ನೋಡಬೇಕಾಗಿದೆ.


Click it and Unblock the Notifications











