BBK10: ಆತ್ಮಹತ್ಯೆಗೆ ಯತ್ನಿಸಿದ್ರಾ ಡ್ರೋನ್ ಪ್ರತಾಪ್? ಕಲರ್ಸ್ ವಾಹಿನಿ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 10 ಕೊನೆ ಹಂತಕ್ಕೆ ತಲುಪುತ್ತಿದೆ. ದಿನದಿಂದ ದಿನಕ್ಕೆ ಶೋ ಕುತೂಹಲ ಮೂಡಿಸುತ್ತಿದೆ. ಜೊತೆಗೆ ಈ ಹಿಂದಿನ ಸೀಸನ್‌ಗಳಿಗಿಂತ ವಿಚಿತ್ರ ಕಾರಣಗಳಿಗೆ ಶೋ ಸುದ್ದಿ ಮಾಡುತ್ತಿದೆ. ಇದೀಗ ಮತ್ತೆ ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಒಂದ್ಕಾಲದಲ್ಲಿ ನಾನು ಡ್ರೋನ್ ತಯಾರಕ, ಯುವ ವಿಜ್ಞಾನಿ ಎಂದು ಹೇಳಿಕೊಂಡು ಡ್ರೋನ್ ಪ್ರತಾಪ್ ಭಾರೀ ಜನಪ್ರಿಯತೆ ಗಳಿಸಿದ್ದರು. ಬಳಿಕ ಅದೆಲ್ಲ ಸುಳ್ಳು ಎನ್ನುವ ಮಾತುಗಳು ಕೇಳಿಬಂತು. ಮೊದಲು ಆತನ ಮಾತುಗಳನ್ನು ನೋಡಿ ಮೆಚ್ಚಿಕೊಂಡವರೇ ಬಳಿಕ ಟೀಕಿಸಿದ್ದರು. ಇದೇ ಜನಪ್ರಿಯತೆಯಿಂದ ಪ್ರತಾಪ್ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಪ್ರತಾಪ್ ಬಹಳ ದಿನ ಮನೆಯಲ್ಲಿ ಉಳಿದುಕೊಳ್ಳಲ್ಲ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಇದೀಗ ಆತನೇ ಗೆಲ್ಲೋದು ಎಂದು ಕೆಲವರು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಟಾಸ್ಕ್ ವೇಳೆ ಕಣ್ಣಿಗೆ ಸೋಪಿನ ನೀರು ಬಿದ್ದು ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಇದೀಗ ಮತ್ತೆ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಫುಡ್ ಪಾಯ್ಸನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಪ್ರತಾಪ್ ಆತ್ಮಹತ್ಯೆ ಯತ್ನಿಸಿದ್ದರು ಎನ್ನುವ ಊಹಾಪೋಹ ಶುರುವಾಗಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಗ್‌ಬಾಸ್ ಶೋಗೆ ಬರೋಕೆ ಆಗದಂತಹ ಘಟನೆ ಏನೋ ನಡೆದಿದೆ ಎಂದು ಕೆಲವರು ಊಹಿಸುತ್ತಿದ್ದಾರೆ.
ಪ್ರತಾಪ್ ಆರೋಗ್ಯದ ಬಗ್ಗೆ ಇದೀಗ ಕಲರ್ಸ್ ಕನ್ನಡ ವಾಹಿನಿ ತಂಡದಿಂದ ಸ್ಪಷ್ಟನೆ ಸಿಕ್ಕಿದೆ. "ಪ್ರತಾಪ್ ಎರಡು ದಿನಗಳಿಂದ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಮಾತ್ರೆ ತೆಗೆದುಕೊಂಡಿದ್ದರು. ಇದರಿಂದ ಹೊಟ್ಟೆ ನೋವು ಬಂದು ವಾಂತಿ ಮಾಡಿಕೊಂಡಿದ್ದರು. ಕನ್ಫೆಷನ್ ರೂಂಗೆ ಬಂದು ಕೇಳಿಕೊಂಡರು. ಹಾಗಾಗಿ ಆಸ್ಪತ್ರೆ ಸೇರಿಸಿ ಡ್ರಿಪ್ಸ್ ಹಾಕಲಾಗಿದೆ. ಶೀಘ್ರದಲ್ಲೇ ಮತ್ತೆ ಬಿಗ್‌ಬಾಸ್ ಮನಗೆ ಹೋಗುತ್ತಾರೆ. ಆತ್ಮಹತ್ಯೆಗೆ ಯತ್ನಿಸಿದ್ರು ಎನ್ನುವ ವದಂತಿ ಯಾರು ಹಬ್ಬಿಸಿದರೋ ಗೊತ್ತಿಲ್ಲ" ಎಂದು ಬಿಗ್‌ಬಾಸ್ ಪಿಆರ್ ಮನೋಜ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

ಇನ್ನು ಡ್ರೋನ್ ಪ್ರತಾಪ್ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಪ್ರತಾಪ್ ಟೀಂ ನೋಡಿಕೊಳ್ಳುವ ಇನ್‌ಸ್ಟಾ ಪೇಜ್‌ನಲ್ಲಿ "ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರ್ ತಪ್ಪಿದ್ದಾರೆ. ಇನ್ನು ಸ್ವಲ್ಪ ಸಮಯದಲ್ಲಿ ಬಿಗ್‌ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಲಿದ್ದಾರೆ" ಎಂದು ಸ್ಟೋರಿ ಹಾಕಲಾಗಿದೆ. ಇನ್ನು ಪ್ರತಾಪ್ ಆತ್ಮಹತ್ಯೆ ಯತ್ನಿಸಿದ್ರು ಎನ್ನುವ ಗಾಳಿಸುದ್ದಿ ಕೇಳಿ ಕೆಲ ಅಭಿಮಾನಿಗಳು ಆತಂಕಗೊಂಡಿದ್ದರು.
ಇನ್ನು ಡ್ರೋನ್ ಪ್ರತಾಪ್ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಪ್ರತಾಪ್ ಟೀಂ ನೋಡಿಕೊಳ್ಳುವ ಇನ್‌ಸ್ಟಾ ಖಾತೆಯಲ್ಲಿ "ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರ್ ತಪ್ಪಿದ್ದಾರೆ. ಇನ್ನು ಸ್ವಲ್ಪ ಸಮಯದಲ್ಲಿ ಬಿಗ್‌ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಲಿದ್ದಾರೆ" ಎಂದು ಸ್ಟೋರಿ ಹಾಕಲಾಗಿದೆ. ಇನ್ನು ಪ್ರತಾಪ್ ಆತ್ಮಹತ್ಯೆ ಯತ್ನಿಸಿದ್ರು ಎನ್ನುವ ಗಾಳಿಸುದ್ದಿ ಕೇಳಿ ಕೆಲ ಅಭಿಮಾನಿಗಳು ಆತಂಕಗೊಂಡಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಇತ್ತೀಚೆಗೆ ಡ್ರೋನ್ ಪ್ರತಾಪ್ ಭಾರೀ ಸುದ್ದಿಯಲ್ಲಿದ್ದಾರೆ. ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಇನ್ನು ಸಂಗೀತಾ ಹಾಗೂ ಪ್ರತಾಪ್ ನಡುವೆ ಇತ್ತೀಚೆಗೆ ಬಹಳ ಆತ್ಮೀಯತೆ ಬೆಳೆದಿತ್ತು. ಟಾಸ್ಕ್ ವೇಳೆ ಇಬ್ಬರ ಕಣ್ಣಿಗೆ ಸೋಪಿನ ನೀರು ಬಿದ್ದು ಇಬ್ಬರು ಚಿಕಿತ್ಸೆ ಪಡೆದು ಬಂದಿದ್ದರು. ಬಳಿಕ ಕಣ್ಣಿಗೆ ಕನ್ನಡಕ ಹಾಕಿಕೊಂಡು ಬಹಳ ದಿನ ಕಾಣಿಸಿಕೊಂಡಿದ್ದರು. ಇಬ್ಬರ ಅಕ್ಕ, ತಮ್ಮ ಎನ್ನುವಂತಿದ್ದರು.
ಸಂಗೀತಾರನ್ನು ಪ್ರತಾಪ್, ದೀದಿ ಎಂದೇ ಕರೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸಂಗೀತಾ ಜೋಕ್ ಮಾಡಲು ಹೋಗಿ ಪ್ರತಾಪ್‌ಗೆ ಬೇಸರ ತಂದಿದ್ದರು. ಇದು ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಅಂತ್ಲೇ ಹೇಳಬಹುದು. ಇನ್ನು ಸುದೀಪ್ ಎದುರು ಮಾತನಾಡುವಾಗ ಸಂಗೀತಾ 'ಪ್ರತಾಪ್ ನನಗೆ ಏಣಿ ಇದ್ದಂತೆ ಇದ್ದಾನೆ' ಎಂದಿದ್ದರು.
ಟಾಸ್ಕ್‌ವೊಂದರ ಸಮಯದಲ್ಲಿ ಪ್ರತಾಪ್ ಮಾತನಾಡುತ್ತಾ "ನೀವೆಲ್ಲಾ ಮನರಂಜನಾ ಕ್ಷೇತ್ರದಿಂದ ಬಂದವರು. ನಾನು, ವರ್ತೂರು ಸಂತೋಷ್ ಆ ರೀತಿ ಅಲ್ಲ" ಎಂದಿದ್ದರು. ಇದಕ್ಕೆ ಬೇಸರಗೊಂಡ ಸಂಗೀತಾ ನಾವೆಲ್ಲಾ ಇಲ್ಲಿ ಒಂದೇ ಎಂದಿದ್ದರು. ಹೀಗೆ ಇತ್ತೀಚೆಗೆ ಒಂದಿಲ್ಲೊಂದು ಕಾರಣಕ್ಕೆ ಪ್ರತಾಪ್ ಬಿಗ್‌ಬಾಸ್ ಮನೆಯಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ.


Click it and Unblock the Notifications











