ಸ್ಪರ್ಧಿಗಳಿಗೆ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಬಿಗ್ ಬಾಸ್: ಅವಿನಾಶ್ ಶೆಟ್ಟಿ ಮತ್ತು ಮೈಕಲ್ ಅಜಯ್ ಔಟ್!
ಬಿಗ್ ಬಾಸ್ ಕನ್ನಡ 10 ಎಲಿಮಿನೇಷನ್ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಬಿಗ್ ಬಾಸ್ ಶಾಕ್ ನೀಡಿದೆ. ಡಬಲ್ ಎಲಿಮಿನೇಷನ್ ಮಾಡುವ ಮೂಲಕ ಮನೆ ಮಂದಿಯನ್ನು ಚಿಂತೆಗೆ ನೂಕಿದೆ. ಕೆಸಿಸಿ ಪಂದ್ಯಗಳು ನಡೆಯುತ್ತಿರುವ ಕಾರಣ ಕಿಚ್ಚ ಸುದೀಪ್ ದೊಡ್ಮನೆ ವೇದಿಕೆಗೆ ಬಂದಿಲ್ಲ. ಆದರೂ ಅತಿಥಿಗಳು ಬಂದು ಮನೆ ಮಂದಿಯನ್ನು ರಂಜಿಸಿದ್ದಾರೆ.
ಬಿಗ್ ಬಾಸ್‌ನ 11ನೇ ವಾರದಲ್ಲಿ ಅವಿನಾಶ್ ಶೆಟ್ಟಿ, ಸಿರಿ, ವರ್ತೂರು ಸಂತೋಷ್, ಮೈಕೆಲ್ ಅಜಯ್, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ನಾಮಿನೇಟ್ ಆಗಿದ್ದರು. ಅದರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿದ್ದ ಮೈಕಲ್ ಮತ್ತು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ ಅವಿನಾಶ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಯನ್ನು ವಿಭಿನ್ನವಾಗಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಅವಿನಾಶ್ ಶೆಟ್ಟಿ ಮತ್ತು ಮೈಕಲ್ ಅಜಯ್ ಔಟ್!
ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದ ಪವಿ ಪೂವಪ್ಪ ಮೂರೇ ವಾರಕ್ಕೆ ಕಳೆದ ವಾರ ಮನೆಯಿಂದ ಹೊರ ಹೋಗಿದ್ದರು. ಈ ವಾರ ಅವರ ಜೊತೆಗೆ ಬಂದಿದ್ದ ಅವಿನಾಶ್ ಶೆಟ್ಟಿ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಆನೆಗೆ ಮಾವುತಾ ಆಗುತ್ತೇನೆ ಎಂದು ಬಂದು, ನಾಲ್ಕು ವಾರಗಳಲ್ಲಿ ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ್ದಾರೆ.
ಇನ್ನು, ಬಿಗ್ ಬಾಸ್ ಮನೆಗೆ ಕಾಮನ್ ಎಂಟ್ರಿ ನೀಡಿದ್ದ ಮಾಡೆಲ್ ಮೈಕಲ್ ಅಜಯ್ ಕೂಡ ತಮ್ಮ ಬಿಗ್ ಬಾಸ್ ಪಯಣ ಮುಗಿಸಿದ್ದಾರೆ. ಕನ್ನಡ ಬರದೇ ಇದ್ದರೂ ಕನ್ನಡ ಕಲಿತು, ಕನ್ನಡ ಟೀಚರ್ ಆಗಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇವರ ಕನ್ನಡ ಪ್ರೇಮದಿಂದಾಗಿ ಜನ 77 ದಿನ ಅವರನ್ನು ಮನೆಯಲ್ಲಿ ಉಳಿಸಿಕೊಂಡಿದ್ದರು. ಸದ್ಯಕ್ಕೆ ಅವರು ಕೂಡ ಡಬಲ್ ಎಲಿಮಿನೇಷನ್ ಪ್ರಕ್ರಿಯೆಗೆ ಬಲಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೀಗೂ ಹೊರ ಹೋಗಬಹುದು ನೋಡಿ!
ನಾಮಿನೇಷನ್‌ನಲ್ಲಿ ಕೊನೆಗೆ ಉಳಿದುಕೊಂಡಿದ್ದ ಮೈಕಲ್ ಮತ್ತು ಅವಿನಾಶ್ ಪರ ಬಿಗ್ ಬಾಸ್ ಇತರ ಸದಸ್ಯರು ಕೂಡ ಓಟ್ ಮಾಡಿದ್ದರು. ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್ ಎಲ್ಲರು ಅವಿನಾಶ್‌ಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಕೇಳಿದ್ದರು. ವಿನಯ್, ಕಾರ್ತಿಕ್, ನಮ್ರತಾ ಎಲ್ಲರೂ ಮೈಕಲ್ ಕಡೆ ಒಲವು ತೋರಿದ್ದರು.

ಆದರೆ, ಬಿಗ್ ಬಾಸ್ ಇಬ್ಬರನ್ನು ಗೇಟಿನಿಂದ ಹೊರಗೆ ಕರೆಯಿತು. ಭಾನುವಾರದ ಎಲಿಮಿನೇಷನ್ ಸಂಚಿಕೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಾತ್ರ ಕಾರಿನ ಪ್ರಸಂಗ. ಎಲಿಮಿನೇಷನ್ ಬಗೆಗಿನ ಬಿಗ್ ಬಾಸ್ ತೀರ್ಪಿಗಾಗಿ ಕಾಯುತ್ತಿದ್ದ ಇಬ್ಬರು ಕೂಡ ಒಬ್ಬರಿಗೊಬ್ಬರು ಆಲ್ ದಿ ಬೆಸ್ಟ್ ಹೇಳಿದ್ದರು. ಆದರೆ, ಬಿಗ್ ಬಾಸ್ ಮನೆಯೊಳಗೆ ಬಂದಿದ್ದ ಎರಡು ಕಾರುಗಳಲ್ಲಿ ಒಬ್ಬೊಬ್ಬರನ್ನು ಕುರಿಸಿಕೊಂಡು ಅಲ್ಲೇ ಎರಡು ರೌಂಡ್ ಹಾಕಿಸಿ, ಹಾಗೆ ಮನೆಯಿಂದ ಹೊರಗೆ ಕಡೆದುಕೊಂಡು ಹೋಗಲಾಗಿದೆ.
ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸದೆ ಇಬ್ಬರನ್ನು ಹೊರಗೆ ಕರೆದುಕೊಂಡು ಹೋದ ಬಗ್ಗೆ ಮನೆಯ ಇತರ ಸ್ಪರ್ಧಿಗಳು ತಮ್ಮದೇ ಊಹಾಪೋಹಗಳಲ್ಲಿ ಮುಳುಗಿದ್ದಾರೆ. ಅವರು ವಾಪಸ್ ಬರುತ್ತಾರೆ, ಇಲ್ಲ ಮೈಕಲ್ ವಾಪಸ್ ಬರುತ್ತಾರೆ... ಇಬ್ಬರು ಡಬಲ್ ಎಲಿಮಿನೇಷನ್ ಆಗಿದ್ದಾರೆ.. ಹೀಗೆ ಹಲವು ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಬಿಗ್ ಬಾಸ್ ಯಾವುದೇ ಸ್ಪಷ್ಟನೆ ನೀಡಿಲ್ಲ.


Click it and Unblock the Notifications











