BBK10: ಕಿಚ್ಚನ ಪಂಚಾಯ್ತಿಗೆ ಕ್ಷಣಗಣನೆ.. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬರೋದು ಇವ್ರೇನಾ?

By Shruthi Harishgowda

ಬಿಗ್ ಬಾಸ್ ಸೀಸನ್ 10 ಅಂತೂ ಇಂತೂ ಎಂಟನೇ ವಾರದ ಮುಕ್ತಾಯದ ಹಂತಕ್ಕೆ ಬಂದಿದೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಈ ವಾರ ಹೊರಗೆ ಹೋಗೋದು ಯಾರು..? ಮನೆಯಲ್ಲಿ ಉಳಿದುಕೊಳ್ಳೋರು ಯಾರು? ಯಾರಿಗೆ ಅತಿ ಹೆಚ್ಚು ಮತ ಬಂದಿದೆ ಎಂಬ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಇದೆ.

ವಿನಯ್, ಪ್ರತಾಪ್, ನಮ್ರತಾ, ಸಂತೋಷ್, ಮೈಕಲ್, ಸ್ನೇಹಿತ್, ಸಂಗೀತಾ ಇಷ್ಟು ಜನರ ಕತ್ತಿನ ಮೇಲೆ ಎಲಿಮಿನೇಷನ್ ತೂಗುಕತ್ತಿ ತೂಗುತ್ತಾ ಇದೆ. ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗುತ್ತದೆ. ಯಾರು ಕಿಚ್ಚನ ಚಪ್ಪಾಳೆಯನ್ನು ತೆಗೆದುಕೊಳ್ತಾರೆ? ಎಂಬನ್ನುವುಕ್ಕೆಲ್ಲಾ ಈ ದಿನದ ಎಪಿಸೋಡ್ ಉತ್ತರ ಕೊಡಲಿದೆ. ಹೊಸ ಗೆಟಪ್‌ನಲ್ಲಿ ಇಂದು ವಾರದ ಕಥೆ ಕಿಚ್ಚನ ಜೊತೆಗೆ ನಡೆಸಿಕೊಡಲು ಸುದೀಪ್ ರೆಡಿಯಾಗಿದ್ದಾರೆ.

Bigg Boss kannada 10 elimination, eviction, voting results today december 02

ಬಿಗ್ ಬಾಸ್ ಮನೆಯಲ್ಲಿ ಸಪ್ರೈಸ್ ಮೇಲೆ ಸಪ್ರೈಸ್ ಕೊಟ್ಟ ವಾರವಾಗಿದೆ. ವಾರದ ಆರಂಭದಲ್ಲಿಯೇ ದೊಡ್ಮನೆಗೆ ಇಬ್ಬರು ಹೊಸಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು. ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಇಬ್ಬರು ಮನೆಗೆ ಬಂದ ವೇಳೆಗೆ ನಾಮಿನೇಷನ್ ಸುಳಿಯೊಳಗೆ ವಿನಯ್, ಪ್ರತಾಪ್, ಸಿರಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್, ಸಂಗೀತಾ, ಮೈಕಲ್ ಸಿಲುಕಿಕೊಂಡರು. ಇನ್ನು ಬಿಗ್ ಬಾಸ್ ಮನೆಗೆ ಬಂದ ಹೊಸ ಸದಸ್ಯರಿಗೆ ನಾಮಿನೇಷನ್‌ನಿಂದ ಇಬ್ಬರನ್ನು ಪಾರು ಮಾಡುವ ಅಧಿಕಾರವನ್ನು ಸಹ ಕೊಟ್ಟರು. ಈ ವೇಳೆ ತುಕಾಲಿ ಸಂತೋಷ್ ಹಾಗೂ ಸಿರಿ ನಾಮಿನೇಷನ್‌ ಆಗಿದ್ದವರು ಸೇವ್ ಆದರು. ನಂತರದ ದಿನಗಳಲ್ಲಿ ನಡೆದ ಟಾಸ್ಕ್‌ಗಳಲ್ಲಿ ಆಟವನ್ನು ಆಡಿದರು.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯಾಗುವಂತಹ ಯಾವುದೇ ಘಟನೆಗಳು ನಡೆದಿಲ್ಲ. ಕಿಚ್ಚ ಶೋನಲ್ಲಿ ಪ್ರತಾಪ್ ತೆಗೆದುಕೊಂಡ ತಪ್ಪು ನಿರ್ಧಾರದಿಂದ ಅವರ ತಂಡ ಸೋತಿತ್ತಾ? ಎಂಬುದರ ಬಗ್ಗೆ ಮಾತನಾಡಬಹುದು. ಇನ್ನೂ ಮನೆಯಲ್ಲಿ ಸಂಗೀತಾ ಹಾಗೂ ತುಕಾಲಿ ಸಂತೋಷ್ ನಡುವೆ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗುತ್ತಲೇ ಇದೆ. ಯಾಕೆ ಈ ರೀತಿಯಾಗುತ್ತಿದೆ ಎಂಬುದನ್ನು ಚರ್ಚೆ ಮಾಡಬಹುದು ಎಂದು ವೀಕ್ಷಕರು ಅಂದುಕೊಂಡಿದ್ದಾರೆ. ಪ್ರತಾಪ್ ತೆಗೆದುಕೊಂಡ ಒಂದು ನಿರ್ಧಾರ ಇಡೀ ವಾರ ಯಾವುದೇ ಟಾಸ್ಕ್‌ಗಳಲ್ಲಿ ಗೆಲುವು ಸಾಧಿಸದಂತೆ ಆಯಿತು.ಇನ್ನೂ ಕಿಚ್ಚನ ಮೆಚ್ಚುಗೆ ಯಾರಿಗೆ? ಯಾವ ವಿಷಯಕ್ಕೆ? ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Bigg Boss kannada 10 elimination, eviction, voting results today december 02

ಮನೆಯಿಂದ ಹೊರ ಬರೋದು ಯಾರು..?

ಕಳೆದ ಬಾರಿ ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ಬಾರಿ ಸ್ನೇಹಿತ್ ಕೂಡ ಕ್ಯಾಪ್ಟನ್ ಆಗಿದ್ದು ಎಲಿಮಿನೇಷನ್ ತೂಗು ಕತ್ತಿ ಸ್ನೇಹಿತ್ ಮೇಲೆ ಇದೆ. ಅದರ ಜೊತೆಗೆ ನಮ್ರತಾ, ವಿನಯ್, ವರ್ತೂರು ಸಂತೋಷ್ ಸೇರಿದಂತೆ ಇನ್ನೂ ಹಲವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಆಟವನ್ನು ಮುಗಿಸಿ ದೊಡ್ಮನೆಯಿಂದ ಹೊರಗಡೆ ಹೋಗೋದು ಯಾರು? ಎಂಬುದನ್ನು ನೋಡಲು ವೀಕ್ಷಕರು ಕಾಯುತ್ತಾ ಇದ್ದಾರೆ. ಈ ವಾರ ಎಲ್ಲಾ ಸ್ಪರ್ಧಿಗಳಿಗೂ ಮಾಡು ಇಲ್ಲವೇ ಮಡಿಯ ವಾತಾವರಣ ನಿರ್ಮಾಣವಾಗಿತ್ತು. ಹೇಗೋ ಅದೃಷ್ಟದಿಂದಾಗಿ ತುಕಾಲಿ ಸಂತೋಷ್ ಹಾಗೂ ಸಿರಿ ಎಲಿಮಿನೇಷನ್‌ನಿಂದ ಬಚಾವಾದರು.

ಸ್ನೇಹಿತ್ ಎಲಿಮಿನೇಟ್ ಆಗ್ತಾರಾ?

ಕಳೆದ ವಾರದಂತೆ ನೀತು ಕ್ಯಾಪ್ಟನ್ ಆಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ವಾರವು ಸಹ ಕ್ಯಾಪ್ಟನ್ ಆಗಿರುವ ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬಹುದು ಎಂದು ವೀಕ್ಷಕರು ಲೆಕ್ಕಾಚಾರ ಹಾಕುತ್ತಾ ಇದ್ದಾರೆ. ಕೆಲವೊಮ್ಮೆ ವೀಕ್ಷಕರ ಲೆಕ್ಕಾಚಾರ ತಪ್ಪಾಗಲಾರದು. ಕಳೆದ ವಾರವು ಸಹ ನೀತು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಹೇಳಿದ್ದರು . ಆದರೆ ಈ ವಾರ ಎಲ್ಲರೂ ಕೂಡ ಚೆನ್ನಾಗಿ ಆಟ ಆಡಿದ್ದಾರೆ. ಹಾಗಾಗಿ ಯಾರಿಗೆ ಅತಿ ಹೆಚ್ಚು ಮತ ಬಂದು ಸೇವ್ ಆಗಿದ್ದಾರೆ ಎಂಬುದನ್ನು ನೋಡಬೇಕಾಗಿದೆ.

ನಮ್ರತಾ ಆಟಕ್ಕೆ ಸಿಗುತ್ತಾ ಮೆಚ್ಚುಗೆ

ನಮ್ರತಾ, ತನಿಷಾಗೋಸ್ಕರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡಿದ್ದರು. ಆದ್ದರಿಂದ ಮನೆಯಲ್ಲಿ ಎಲ್ಲರೂ ಕೂಡ ನಮ್ರತಾ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂದು ಹೊಗಳಿದರು. ಅದರಂತೆ ಕಿಚ್ಚ ಕೂಡ ತನಿಷಾಗೋಸ್ಕರ ನಮ್ರತಾ ಮಾಡಿದ ತ್ಯಾಗಕ್ಕೆ ಚಪ್ಪಾಳೆ ಕೊಡುತ್ತಾರಾ ನೋಡಬೇಕಾಗಿದೆ. ಇನ್ನು ಯಾವುದೇ ಒಂದು ಟಾಸ್ಕ್ ಬಂದರೂ ಕೂಡ ಎದುರಾಳಿ ತಂಡಗಳಂತಿದ್ದ ತನಿಷಾ ಹಾಗೂ ನಮ್ರತಾ ಇಬ್ಬರೂ ಕೂಡ ಕಚ್ಚಾಡಿಕೊಳ್ಳುತ್ತಿದ್ದರು. ಹೋಗೆಲೇ, ಬಾರೇಲೇ ಎಂಬ ಮಾತುಗಳನ್ನು ಕೂಡ ಆಡಿಕೊಂಡಿದ್ದರು. ಆದರೆ ಎಲ್ಲಾ ದ್ವೇಷ ಮರೆತು ತನಿಷಾಗೋಸ್ಕರ ನಾನು ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತೇನೆ ಎಂದು ನಮ್ರತಾ ಒಪ್ಪಿಕೊಂಡಿದ್ದರು.

ಕಿಚ್ಚನ ಚಪ್ಪಾಳೆ ಯಾರಿಗೆ?

ನಮ್ರತಾ ಫೈನಲ್ ಸ್ಟೇಜ್‌ವರೆಗೂ ಬಂದರು ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಇದಕ್ಕಾಗಿ ನಮ್ರತಾಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕಾದರೂ ಕಿಚ್ಚನ ಚಪ್ಪಾಳೆ ಬರುತ್ತಾದ ಎಂದು ನೋಡಬೇಕಾಗಿದೆ. ಇಂದು ವಾರದ ಕಥೆ ಕಿಚ್ಚನ ಜೊತೆಗೆ ಎಪಿಸೋಡ್ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಾ ಇದ್ದಾರೆ. ಇದರೊಟ್ಟಿಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ 24 ಗಂಟೆ ಉಚಿತವಾಗಿ ನೋಡಬಹುದಾಗಿದೆ.

More from Filmibeat

English summary
Bigg boss kannada 10 week 8; Meet the 7 Contestants Nominated for Eviction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X