ಬಿಗ್ ಬಾಸ್ ಎಲಿಮಿನೇಷನ್: ತೋಳ ಬಂತು ತೋಳ ಆಟವಾಡಿ ಕೊನೆಗೂ ದೊಡ್ಮನೆಯಿಂದ ಹೊರ ಬಂದ ಕನ್ನಡ ಮೇಷ್ಟ್ರು!

ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಮತ್ತೊಂದು ವಾರ ಮುಗಿಸಿದೆ. 13 ನೇ ವಾರದಲ್ಲಿ ಐದು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ಕನ್ನಡ ಕಲಿತು ಕನ್ನಡಿಗರ ಮನಗೆದ್ದಿದ್ದ ಮಾಡೆಲ್ ಮೈಕಲ್ ಅಜಯ್ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ. ಈಗಾಗಲೇ ಎರಡು ಬಾರಿ ಮನೆಯಿಂದ ಹೊರಹೋಗಬೇಕಿದ್ದ ಅವರು ಹೇಗೋ ಉಳಿದುಕೊಂಡಿದ್ದರು.

ಬಿಗ್ ಬಾಸ್ ಈ ತಿಂಗಳ ಕೊನೆಯೊಳಗೆ ಮುಗಿಯಲಿದ್ದು, ಈ ವಾರ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್ ಅಜಯ್ ಮತ್ತು ಕಾರ್ತಿಕ್ ಮಹೇಶ್ ಮಂದಿ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳು ನಾಮಿನೇಟ್ ಆಗಿದ್ದರು. ಅದರಲ್ಲಿ ಜನರ ಮತಗಳ ಆಧಾರದಲ್ಲಿ ಮೈಕಲ್ ಅಜಯ್ ಮನೆಯಿಂದ ಹೊರ ನಡೆದಿದ್ದಾರೆ.

Bigg Boss Kannada 10 Elimination: Michael Ajay eliminated from bigg boss house on Week 13

ಎರಡು ಬಾರಿ ಬಚಾವ್ ಆಗಿದ್ದ ಮೈಕಲ್ ಅಜಯ್

ನೈಜಿರಿಯನ್ ಪ್ರಜೆಯಾದರೂ ಕನ್ನಡದ ಮೇಲಿನ ಅವರ ಪ್ರೀತಿ ಮತ್ತು ಕನ್ನಡ ಕಲಿತು ದೊಡ್ಮನೆಯಲ್ಲಿ ಹೆಚ್ಚು ಕನ್ನಡ ಬಳಸುತ್ತಿದ್ದ ಅವರನ್ನು ಜನ ಹದಿಮೂರು ವಾರ ಉಳಿಸಿಕೊಂಡಿದ್ದರು. ಯಾವುದೇ ಹಿನ್ನೆಲೆಯಿಲ್ಲದೇ ಬಂದ ಅವರನ್ನು ಜನ ಮನೆ ಮಗನಂತೆ ಇಷ್ಟಪಟ್ಟಿದ್ದರು. ಕನ್ನಡ ಟೀಚರ್ ಆಗಿ, ಕನ್ನಡಿಗರ ಮನಗೆದ್ದು ಮತ್ತಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ಕಾಂಪಿಟೇಷನ್ ಟಫ್ ಆಗುತ್ತಿದ್ದು, ಒಬ್ಬೊಬ್ಬರೇ ಮನೆಯಿಂದ ಔಟ್ ಆಗುತ್ತಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಾರ್ತಿಕ್ ಸೇವ್ ಆಗಿದ್ದರು, ಭಾನುವಾರದ ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್, ವಿನಯ್, ವರ್ತೂರ್ ಸಂತೋಷ್ ಮೊದಲಿಗೆ ಸೇವ್ ಆದರು ಬಳಿಕ ಮೈಜಲ್ ಮತ್ತು ತುಕಾಲಿ ಸಂತೋಷ್ ಇಳಿದಿದ್ದರು. ಇಬ್ಬರಲ್ಲಿ ಕಡಿಮೆ ಮತ ಪಡೆದಿದ್ದ ಮೈಕಲ್ ಮನೆಯಿಂದ ಔಟ್ ಆಗಿದ್ದಾರೆ.

ದೊಡ್ಮನೆಯಿಂದ ಹೊರ ಹೋಗುವಾಗ ಭಾವುಕರಾದ ಮೈಕಲ್

ಈಗಾಗಲೇ ಮೈಕಲ್ ಎರಡು ಬಾರಿ ಎಲಿಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. ಈ ಹಿಂದೆ ಸ್ನೇಹಿತ್ ಗೌಡ ಮತ್ತು ಮೈಜಲ್ ಅಜಯ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೋಗಬೇಕಿತ್ತು. ಆಗ ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಇಬ್ಬರನ್ನು ಉಳಿಸಿಕೊಂಡಿದ್ದರು. ಎರಡು ವಾರಗಳ ಹಿಂದೆ ವೈಲ್ಡ್ ಕಾರ್ಡ್ ಎಂಟ್ರಿ ಅವಿನಾಶ್ ಶೆಟ್ಟಿ ಜೊತೆಗೆ ಮೈಕಲ್ ಕೂಡ ಡಬಲ್ ಎಲಿಮಿನೇಶನ್‌ಗೆ ಒಳಗಾಗಿದ್ದರು. ಆದರೆ, ಮತತೆ ಮನೆಗೆ ಬಂದಿದ್ದರು. ಹೀಗಾಗಿ ಮೂರನೇ ಬಾರಿ ಮನೆಯಿಂದ ಹೊರ ಹೋಗುವುದು ಪಕ್ಕ ಆಗಿತ್ತು. ಮನೆಯ ಸದಸ್ಯರು ಕೂಡ ಇದನ್ನು ಮೊದಲೇ ಊಹಿಸಿದ್ದರು.

Bigg Boss Kannada 10 Elimination: Michael Ajay eliminated from bigg boss house on Week 13

ಬಿಗ್ ಬಾಸ್‌ಗೆ ಬಂದ ದಿನದಿಂದ ಡೋಂಟ್ ಕೇರ್ ಆಟಿಟ್ಯೂಡ್‌ನಲ್ಲಿದ್ದ ಮೈಕಲ್, ಯಾವುದಕ್ಕೂ ಕೇರ್ ಮಾಡುತ್ತಿರಲಿಲ್ಲ. ಇರುವಷ್ಟು ದಿನ ಚೆನ್ನಾಗಿ ಆಡುತ್ತಿನಿ, ನಂತರ ಮನೆಗೆ ಹೋಗುತ್ತಿನಿ ಎನ್ನುತ್ತಿದ್ದರು. ಕಳೆದ ಬಾರಿ ಕೂಡ ದೊಡ್ಮನೆಯಿಂದ ಹೊರ ಹೋದರೆ ಎಲ್ಲರನ್ನು ಮಿಸ್ ಮಾಡಿಕೊಳ್ತಿನಿ ಎಂದಿದ್ದರು ಅಷ್ಟೇ. ಆದರೆ, ಇಂದು ಸುದೀಪ್ ಅವರರಿಗೆ ಥ್ಯಾಂಕ್ಸ್ ಹೇಳಿ ಮನೆಯಿಂದ ಹೊರ ಕರೆದಾಗ ಮೈಕಲ್ ಭಾವುಕರಾಗಿದ್ದಾರೆ, ಜೊತೆಗೆ ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆ

ಇನ್ನು, ಬಿಗ್ ಬಾಸ್ ನೂರು ದಿನಗಳ ಆಟ. ಆದರೆ, ಈ ಬಾರಿ ನೂರು ದಿನಗಳಿಂದ ಇನ್ನೂ ಹೆಚ್ಚು ದಿನ ಪ್ರಸಾರವಾಗಲಿದೆ ಎಂದು ಕಳೆದ ವಾರವೇ ತಿಳಿದು ಬಂದಿದೆ. ಬಿಗ್ ಬಾಸ್ ಸೀಸನ್ 10 ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ. ಕಾರ್ಯಕ್ರಮವನ್ನು 14 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಚಾನೆಲ್ ಬಹಿರಂಗಪಡಿಸಿದೆ. ಹೀಗಾಗಿ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ಪ್ರಸಾರವಾಗಲಿದೆ.

More from Filmibeat

English summary
Bigg Boss Kannada Elimination: Michael Ajay eliminated from bigg boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X