ಬಿಗ್ ಬಾಸ್ ಕನ್ನಡ 10 ಎಲಿಮಿನೇಷನ್: 13ನೇ ವಾರ ಮನೆಯಿಂದ ಹೋಗೋದು ಮೈಕಲ್ ಅಥವಾ ತುಕಾಲಿ ಸಂತೋಷ್!?
ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಮತ್ತೊಂದು ವಾರ ಮುಗಿಸಿದೆ. ಈ ಬಾರಿ ಐದು ಮಂದಿ ನಾಮಿನೇಟ್ ಆಗಿದ್ದು, ಎಲಿಮಿನೇಷನ್ ಎಂಬ ಕುರ್ಚಿಯಲ್ಲಿ ಕುತ್ತಿದ್ದಾರೆ. ಕಿಚ್ಚ ಸುದೀಪ್ ಇಂದು 'ವಾರದ ಕತೆ ಕಿಚ್ಚನ ಜೊತೆ' ಕಾರ್ಯಕ್ರಮ ನಡೆಸಲಿದ್ದು, ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದು ತಿಳಿದು ಬರಲಿದೆ. ಆದರೆ, ಇಬ್ಬರು ಕಂಟೆಸ್ಟೆಂಟ್ ನೆತ್ತಿಯ ಮೇಲೆ ಎಲಿಮಿನೇಷನ್ ಎಂಬ ಭೂತ ನೇತಾಡುತ್ತಿದೆ.
ಈ ವಾರ ಐದು ಮಂದಿ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳು ನಾಮಿನೇಟ್ ಆಗಿದ್ದಾರೆ. ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್ ಅಜಯ್ ಮತ್ತು ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿದ್ದು, ಈ ವಾರ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ. ಆದರೆ, ಆನ್‌ಲೈನ್ ಸಮೀಕ್ಷೆಗಳ ವರದಿಯಂತೆ ಈ ವಾರ ತುಕಾಲಿ ಸಂತೋಷ್ ಅಥವಾ ಮೈಕೆಲ್ ಅಜಯ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಔಟ್ ಆಗಲಿದ್ದಾರೆ.

ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆ
ಬಿಗ್ ಬಾಸ್ ಕನ್ನಡ ಈ ಬಾರಿ ನೂರು ದಿನಗಳಿಂದ ಇನ್ನೂ ಹೆಚ್ಚು ದಿನ ಪ್ರಸಾರವಾಗಲಿದೆ ಎಂದು ಕಳೆದ ವಾರವೇ ತಿಳಿಸು ಬಂದಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಕಲರ್ಸ್ ಕನ್ನಡ ಅಧಿಕೃತವಾಗಿ ಖಚಿತಪಡಿಸಿದೆ. ಕಾರ್ಯಕ್ರಮವನ್ನು 14 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಚಾನೆಲ್ ಬಹಿರಂಗಪಡಿಸಿದೆ. ಇದರ ಅನುಸಾರ BBK 10 ಗ್ರ್ಯಾಂಡ್ ಫಿನಾಲೆ ಜನವರಿ 28, 2024 ರಂದು ಪ್ರಸಾರವಾಗಲಿದೆ.
ಇನ್ನು, ಇಷ್ಟು ದಿನಗಳಲ್ಲಿ ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಸಿರಿ, ಸ್ನೇಹಿತ್ ಗೌಡ, ನೀತು ವನಜಾಕ್ಷಿ, ಈಶಾನಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ, ರಕ್ಷಕ್ ಬುಲೆಟ್ ಮತ್ತು ಸ್ನೇಕ್ ಶ್ಯಾಮ್ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ಈಗ 13 ನೇ ವಾರದಲ್ಲಿ ಐವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಮತ್ತೊಬ್ಬರು ದೊಡ್ಮನೆಗೆ ವಿದಾಯ ಹೇಳಲಿದ್ದಾರೆ.

ತುಕಾಲಿ ಸಂತೋಷ್ ಅಥವಾ ಮೈಕೆಲ್ ಅಜಯ್: ಮನೆಯಿಂದ ಹೊರ ಹೋಗೋದು ಯಾರು?
13 ನೇ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ , ಮೈಕೆಲ್ ಅಜಯ್ ಮತ್ತು ಕಾರ್ತಿಕ್ ಮಹೇಶ್ ಮೇಲೆ ತೂಗುಗತ್ತಿಯಿದೆ. ಆನ್‌ಲೈನ್ ಸಮೀಕ್ಷೆಗಳು ಮತ್ತು ಟ್ವಿಟರ್ ಪುಟಗಳ ಪ್ರಕಾರ, ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್ ಮಹೇಶ್ ಈಗಾಗಲೇ ಎಲಿಮಿನೇಷನ್‌ನಿಂದ ಸೇಫ್ ಆಗಿದ್ದಾರೆ ಎಂದು ಹೇಳಲಾಗಿದೆ.
ಜೊತೆಗೆ ಇಬ್ಬರಿಗೂ ಒಳ್ಳೆ ಮತಗಳು ಸಿಕ್ಕಿವೆ. ಡ್ರೋನ್ ಪ್ರತಾಪ್ ಮೊದಲಿನಿಂದಲೂ ಕನ್ನಡಿಗರ ಮನಗೆಲ್ಲುತ್ತಿದ್ದಾರೆ. ವೋಟ್ ತೆಗೆದುಕೊಳ್ಳುವುದರಲ್ಲಿಯೂ ಮುಂದಿದ್ದಾರೆ. ಇನ್ನು, ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ ಆಗುವ ಅಭ್ಯರ್ಥಿ ಎನ್ನಲಾಗುತ್ತಿದೆ. ಜೊತೆಗ ವಿನಯ್‌ಗೆ ಟಕ್ಕರ್ ಕೊಡುವ ಒಬ್ಬ ಸ್ಪರ್ಧಿ ಎನ್ನಲಾಗಿದ್ದು, ಬಿಗ್ ಬಾಸ್‌ನಲ್ಲಿ ಇನ್ನು ಕೆಲಸ ದಿನ ಉಳಿಯಲಿದ್ದಾರೆ. ವರ್ತೂರು ಸಂತೋಷ್ ಅಂತು ಯಾವಾಗಲೂ ಮತಗಳಲ್ಲಿ ಮುಂದಿರುತ್ತಾರೆ.
ಇವೆಲ್ಲಾ ಕಾರಣಗಳಿಗೆ ಈ ಬಾರಿ ತುಕಾಲಿ ಸಂತೋಷ್ ಮತ್ತು ಮೈಕಲ್ ಅಜಯ್ ಕೊನೆಯ ಎರಡು ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿದೆ. ವೋಟಿಂಗ್‌ನಲ್ಲೂ ಇಬ್ಬರು ಕೊನೆಯಲ್ಲಿದ್ದು, ಅತೀ ಕಡಿಮೆ ಮತ ಪಡೆದವರು ಮನೆ ಬಿಟ್ಟು ಹೋಗಲಿದ್ದಾರೆ. ಈಗಾಗಲೇ ಮೈಜಲ್ ಎರಡು ಬಾರಿ ಎಲಿಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. ಮೂರನೇ ಬಾರಿ ಮತ್ತೆ ಬಚಾವ್ ಆಗಲಿದ್ದಾರಾ ಎಂಬುದು ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ತಿಳಿದು ಬರಲಿದೆ.


Click it and Unblock the Notifications











