ಬಿಗ್ ಬಾಸ್ ಫಿನಾಲೆ: ಕನ್ನಡಿ ಮುಂದೆ ತಮ್ಮ ಬಗ್ಗೆಯೇ ಮಾತನಾಡಿಕೊಂಡ ಸ್ಪರ್ಧಿಗಳು..! ನೋವಿನಲ್ಲಿ ಕಾರ್ತಿಕ್

By Shruthi Harishgowda

ಬಿಗ್ ಬಾಸ್ ಸೀಸನ್ ಹತ್ತರ ಗ್ರಾಂಡ್ ಫಿನಾಲೆಗೆ ಇನ್ನೂ ಎರಡು ದಿನಗಳಷ್ಟೇ ಬಾಕಿ ಇದ್ದು ಸ್ಪರ್ಧಿಗಳು ತಮ್ಮನ್ನ ತಾವು ಮರಳಿ ಪಡೆಯುತ್ತಾರಾ ಎಂಬ ವಿಚಾರ ಈಗ ಸಾಕಷ್ಟು ಚರ್ಚೆಯಲ್ಲಿದೆ. ಸೀಸನ್ 10 ಬರಿ ಜಗಳಗಳಿಂದಲೇ ತುಂಬಿ ಹೋಗಿತ್ತು. ಸೀಸನ್ ಶುರುವಾದ ದಿನದಿಂದಲೂ ಕೂಡ ಇಲ್ಲಿಯ ತನಕ ಅತಿ ಹೆಚ್ಚು ಜಗಳ ಮಾಡಿದ್ದು ಪ್ರತಾಪ್ ಹಾಗೂ ವಿನಯ್. ಈಗ ಗ್ರಾಂಡ್ ಫಿನಾಲೆಯ ತನಕವೂ ಕೂಡ ವಿನಯ್ ಅವರ ಧ್ವನಿ ಬಿಗ್ ಬಾಸ್ ಮನೆಯಲ್ಲಿ ಕೇಳಿಸುತ್ತಲೇ ಬಂದಿದೆ.

ಸದ್ಯಕ್ಕೆ ಕಾರ್ತಿಕ್ ಮಾತ್ರ ಯಾವುದೋ ವಿಚಾರಕ್ಕೆ ಕುಗ್ಗಿ ಹೋದವರಂತೆ ಕಾಣುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಂತು ಪಂತು ಸ್ನೇಹ ಎಲ್ಲರಿಗೂ ಮಾದರಿ ಆಗಿದೆ. ಸದ್ಯಕ್ಕೆ ಗ್ರಾಂಡ್ ಫಿನಾಲೆಗೆ ಇನ್ನೂ ಎರಡು ದಿನವಷ್ಟೇ ಬಾಕಿ ಇದ್ದು ಯಾರಿಗೆ ಟ್ರೋಫಿ ಹೋಗಲಿದೆ ಎಂಬುದೇ ಕುತೂಹಲವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆರು ಮಂದಿ ಸದಸ್ಯರಷ್ಟೇ ಉಳಿದಿದ್ದು, ಮಧ್ಯಂತರದ ಎಲಿಮಿನೇಷನ್ ನಲ್ಲಿ ಯಾರು ಹೋಗಲಿದ್ದಾರೆ ಎಂಬುದೇ ಈಗ ವೀಕ್ಷಕರಲ್ಲಿ ಉಳಿದಿರುವ ಪ್ರಶ್ನೆಯಾಗಿದೆ. ಈಗ ಬಿಗ್ ಬಾಸ್ ಸ್ಪರ್ಧಿಗಳು ಕನ್ನಡಿಯ ಮುಂದೆ ನಿಂತುಕೊಂಡು ತಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಾ ಇದ್ದಾರೆ.

Bigg Boss Kannada 10 finale week: All Contestants expressing her feelings in Front of Mirror

ಕನ್ನಡಿಯ ಮುಂದೆ ನಿಂತು ಕುಣಿದಾಡಿದ ಸಂಗೀತಾ

ಸಂಗೀತಾ ಕನ್ನಡಿಯ ಮುಂದೆ ಬಂದವರೇ ಯಾರು ನನ್ನ ಜೊತೆಗೆ ಇಲ್ಲದ ವೇಳೆ ನಿನ್ನ ಜೊತೆಗೆ ನಾನು ಮಾತನಾಡಿದ್ದೇನೆ ಸಾಕಷ್ಟು ಬಾರಿ ನನ್ನ ನೋವುಗಳನ್ನು ನಿನ್ನ ಬಳಿ ಹೇಳಿಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಯಾರು ನನ್ನ ಜೊತೆ ಇಲ್ಲದ ವೇಳೆ ನೀನು ಇದ್ದೀಯಾ ನನಗೆ ನನ್ನ ಶಕ್ತಿ ಏನು ಎಂಬುದನ್ನು ಪರಿಚಯ ಮಾಡಿಸಿದ್ದೀಯಾ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ತಾವು ವಿನ್ನರ್ ಆಗುತ್ತೇನೆ ಎಂಬ ಖುಷಿಯಲ್ಲಿ ಅವರು ಕುಣಿದಾಡಿದ್ದಾರೆ. ನನಗೆ ನನ್ನ ಸಾಮರ್ಥ್ಯ ಏನು ಎಂದು ತೋರಿಸಿದ್ದಕ್ಕೆ ನಿನಗೆ ಥ್ಯಾಂಕ್ಸ್ ಎಂದು ಕನ್ನಡಿಗೆ ಹೇಳಿದ್ದಾರೆ.

ವಿನಯ್ ಬಿಗ್ ಬಾಸ್ ಮನೆಯಲ್ಲಿರುವ ಸ್ಟ್ರಾಂಗ್ ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಗೆ ಅವರು ಬಂದ ದಿನದಿಂದ ಹಿಡಿದು ಕೊನೆಯ ತನಕವೂ ಕೂಡ ಆಟವನ್ನ ತಾವು ಆಡಿದ್ದಾರೆ. ಇಂತಹ ವಿನಯ್ ಕನ್ನಡಿಯ ಮುಂದೆ ಬಂದವರೇ ತಮ್ಮ ಪರಿಚಯವನ್ನು ಮಾಡಿಕೊಂಡಿದ್ದಾರೆ. ಹಲೋ ಮಿಸ್ಟರ್ ವಿನಯ್ ಗೌಡ ಎಂದೇ ಕನ್ನಡಿಯ ಮುಂದೆ ಮಾತು ಶುರು ಮಾಡಿದ್ದಾರೆ.

Bigg Boss Kannada 10 finale week: All Contestants expressing her feelings in Front of Mirror

ಪ್ರತಾಪ್‌ಗೆ ಕಾಡುತ್ತಿದೆಯಂತೆ ಅಪರಾಧಿ ಮನೋಭಾವ

ಕನ್ನಡಿಯ ಮುಂದೆ ಬಂದ ಪ್ರತಾಪ್ ನನ್ನನ್ನು ನಾನೇ ನೋಡಿಕೊಂಡಾಗ ನನ್ನ ಮನಸ್ಸಿನಲ್ಲಿ ಕೆಲವು ವಿಚಾರಗಳು ನನ್ನನ್ನೇ ಚುಚ್ಚುತ್ತವೆ ಎಂಬ ರೀತಿಯಲ್ಲಿ ಹೇಳಿದ್ದಾರೆ. ಡ್ರೋಣ್ ಪ್ರತಾಪ್ ಅವರಿಗೆ ಯಾವ ವಿಷಯಗಳು ಚುಚ್ಚುತ್ತಿವೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಿಲ್ಲ. ಪ್ರತಾಪ್ ಗೆ ಕೆಲವೊಂದು ವಿಚಾರಗಳಿಗೆ ಅಪರಾಧಿ ಮನೋಭಾವ ಕಾಡುತ್ತಿರುವಂತೆ ಇದೆ. ಆದರೆ ಅದನ್ನು ಬಾಯಿ ಬಿಟ್ಟು ಹೇಳಿಕೊಳ್ಳುತ್ತಿಲ್ಲ.

ಕಾರ್ತಿಕ್ ಅವರಿಗೆ ಎಲ್ಲರೂ ಸ್ನೇಹವನ್ನು ದುರುಪಯೋಗ ಮಾಡಿಕೊಂಡರು ಎಂಬ ಮಾತು ಬಹಳಷ್ಟು ಹರ್ಟ್ ಮಾಡಿದಂತೆ ಕಾಣುತ್ತಿದೆ. ಇದಕ್ಕಾಗಿ ಕನ್ನಡಿಯ ಮುಂದೆ ಬಂದವರೆ ಎಲ್ಲರೂ ನನಗೆ ಫ್ರೆಂಡ್‌ಶಿಪ್‌ನ್ನು ದುರುಪಯೋಗ ಮಾಡಿಕೊಂಡ ಎಂದು ಮಾತನಾಡುತ್ತಾ ಇದ್ದಾರೆ. ನಾನು ಯಾರ ಫ್ರೆಂಡ್ ಶಿಫ್‌ನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಈಗ ಸ್ಪರ್ಧಿಗಳನ್ನು ಗೆಲ್ಲಿಸುವುದು ಅವರ ಅಭಿಮಾನಿ ಕೈನಲ್ಲಿ ಇದೆ ಯಾರಿಗೆ ಅತಿ ಹೆಚ್ಚು ಮತಗಳು ಬರುತ್ತವೆ ಅವರು ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ.

More from Filmibeat

English summary
BBK Season 10 finale week Written Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X