BBK 10 finale: ಕನ್ನಡ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಇವರೇನಾ? ವೈರಲ್ ಆಗ್ತಿರೋ ಪೋಸ್ಟ್ ಹೇಳೋದೇನು?
ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಇನ್ನೇನು ಮುಗಿಯುತ್ತಿದೆ. ಕೊನೆಯ ಹಂತದಲ್ಲಿರುವ ಕಿಚ್ಚ ಸುದೀಪ್ ಅವರ ರಿಯಾಲಿಟಿ ಶೋ ಯಶಸ್ವಿಯಾಗಿದೆ. ಹಿಂದಿನ ಎಲ್ಲಾ ಟಿಆರ್‌ಪಿ ದಾಖಲೆಗಳನ್ನು ಮುರಿಯುವ ಮೂಲಕ ಕನ್ನಡ ಟೆಲಿವಿಷನ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮವಾಗಿ ಹೆಸರು ಮಾಡಿದ್ದು, ಈ ವಾರ ಫಿನಾಲೆ ನಡೆಯಲಿದೆ.
ಸದ್ಯ ದೊಡ್ಮನರಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದಾರೆ. ಅವರಲ್ಲಿ ಒಬ್ಬರು ಮಧ್ಯಂತರ ಎಲಿಮಿನೇಷನ್‌ಗೆ ಗುರಿಯಾಗಲಿದ್ದಾರೆ. ಇದಾದ ನಂತರ ಟಾಪ್ ಐದು ಫೈನಲಿಸ್ಟ್‌ಗಳ ಹೆಸರು ಫೈನಲ್ ಆಗಲಿದೆ. ಆದರೆ, ಅದಕ್ಕೂ ಮುನ್ನವೇ ಕಾರ್ಯಕ್ರಮದ ವಿಜೇತರನ್ನು ಈಗಾಗಲೇ ಫಿಕ್ಸ್ ಮಾಡಲಾಗಿದೆ ಎಂಬ ವದಂತಿಗಳಿವೆ. ಇದಕ್ಕೆ ಪುಷ್ಠಿ ಕೊಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಸಕತ್ ವೈರಲ್ ಆಗುತ್ತಿದೆ.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಈ ಪೋಸ್ಟ್ ಹೇಳೊದೇನು?
ಬಿಗ್ ಬಾಸ್ ಸೀಸನ್ ಹತ್ತರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು ಟಾಫ್ ಫೈವ್‌ನಲ್ಲಿ ಯಾರು ಇರ್ತಾರೆ ಎಂಬುದೇ ದೊಡ್ಡ ಕುತೂಹಲ. ಎಲ್ಲಾ ಕಣ್ಣುಗಳು ಬಿಬಿಕೆ 10 ಗ್ರಾಂಡ್ ಫಿನಾಲೆಯ ಮೇಲೆ ಇದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಲ್ಲಿ ಹಲವು ಬಗೆಯ ಪೋಸ್ಟ್‌ಗಳು ಓಡಾಡುತ್ತಿವೆ. ಆದರೆ, ಒಂದು ಪೋಸ್ಟ್ ಮಾತ್ರ ಸಕತ್ ವೈರಲ್ ಆಗುತ್ತಿದೆ.
ಈ ವೈರಲ್ ಪೋಸ್ಟ್ ಪ್ರಕಾರ ಬಿಗ್ ಬಾಸ್ ಕನ್ನಡ 10 ರ ವಿಜೇತರನ್ನು ಈಗಾಗಲೇ ಬಿಗ್ ಬಾಸ್ ತಂಡ ನಿರ್ಧರಿಸಿದೆ ಎನ್ನುವುದು. ಹೌದು, ಈಗಾಗಲೇ ವಿನ್ನರ್, ಮೊದಲ ರನ್ನರ್ ಅಪ್ ಮತ್ತು ಎರಡನೇ ರನ್ನರ್ ಅಪ್ ಹೆಸರನ್ನು ಒಳಗೊಂಡ ಪೋಸ್ಟ್ ಸಕತ್ ಶೇರ್ ಮಾಡಲಾಗುತ್ತಿದೆ.
ಬಿಗ್ ಬಾಸ್ ಟ್ರೋಫಿಗೆ ಮುತ್ತಿಡುತ್ತಾರಾ ಸಂಗೀತಾ ಶೃಂಗೇರಿ?
ಇಂಟರ್‌ನೆಟ್ ಬಝ್ ಪ್ರಕಾರ, ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ 'ಬಿಗ್ ಬಾಸ್ ಕನ್ನಡ' ಸೀಸನ್ 10 ರಲ್ಲಿ ಗೆದ್ದು ಟ್ರೋಫಿಗೆ ಮುತ್ತಿಡಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಆಕೆಯ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಇನ್ನು, ಕಾರ್ತಿಕ್ ಮಹೇಶ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಒಂದು ಕಾಲದಲ್ಲಿ ಸಂಗೀತಾ ಮತ್ತು ಕಾರ್ತಿಕ್ ಒಂದು ಮನೆಯೊಳಗೆ ಉತ್ತಮ ಸ್ನೇಹಿತರಾಗಿದ್ದರು. ಆದರೆ, ವಿನಯ್ ಮಧ್ಯ ಪ್ರವೇಶದಿಂದಾಗಿ ಇಬ್ಬರ ಸಂಬಂಧವು ಹದಗೆಟ್ಟಿದೆ. ಆದರೆ, ಇಂದಿನ ಸಂಚಿಕೆಯಲ್ಲಿ ಸಂಗೀತಾ ಮತ್ತೆ ಕಾರ್ತಿಕ್‌ಗೆ ಧನ್ಯವಾದ ಹೇಳಿದ್ದು, ಸ್ನೇಹ ಮತ್ತೆ ಚಿಗುರುವ ಲಕ್ಷಣಗಳು ಕಾಣಿಸುತ್ತಿವೆ.
ಶೋ ಗೆಲ್ಲುವ ಕುದುರೆ ಎನ್ನಲಾಗಿದ್ದ ವಿನಯ್ ಗೌಡ ನಾಲ್ಕನೇ ಸ್ಥಾನದಲ್ಲಿದ್ದರೆ, ಪ್ರತಾಪ್ ಮೂರನೇ ಸ್ಥಾನದಲ್ಲಿದ್ದಾರೆ ಎಂದು ವೈರಲ್ ಪೋಸ್ಟ್ ಹೇಳುತ್ತದೆ. ಆದರೂ, ಇದು ನಕಲಿ ಪೋಸ್ಟ್ ಮತ್ತು ಈ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅನೇಕ ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನು, ಫಿನಾಲೆ ರೇಸ್‌ನಲ್ಲಿ ವಿನಯ್, ಸಂಗೀತಾ, ಪ್ರತಾಪ್, ಕಾರ್ತಿಕ್, ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಎಂಬ ಆರು ಮಂದಿ ಸ್ಪರ್ಧಿಗಳಿದ್ದು, ಶನಿವಾರ ಬೆಳಗ್ಗೆ 11 ಗಂಟೆಯವರೆಗೆ ವೋಟ್ ಮಾಡಲು ಅವಕಾಶವಿದೆ. 'ಬಿಗ್ ಬಾಸ್ ಕನ್ನಡ 10' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ನಡೆಯಲಿದೆ.
ಅಕ್ಟೋಬರ್ 8 ರಂದು ಆರಂಭವಾದ ಬಿಗ್ ಬಾಸ್ ಕನ್ನಡ ಸೀಸನ್ ಹತ್ತಕ್ಕೆ, ನಮ್ರತಾ ಗೌಡ, ಸ್ನೇಹಿತ್ ಗೌಡ , ಕಾರ್ತಿಕ್ ಮಹೇಶ್, ಮೈಕಲ್ ಅಜಯ್, ಗೌರೀಶ್ ಅಕ್ಕಿ, ಭಾಗ್ಯಶ್ರೀ ರಾವ್, ವರ್ತೂರು ಸಂತೋಷ್, ಸ್ನೇಕ್ ಶ್ಯಾಮ್, ಸಂಗೀತಾ ಶೃಂಗೇರಿ, ರಕ್ಷಕ್ ಬುಲೆಟ್, ಸಿರಿ, ನೀತು ವನಜಾಕ್ಷಿ, ತನಿಶಾ ಕುಪ್ಪಂಡ, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ, ಈಶಾನಿ ಚಂದ್ರಶೇಖರ್ ಸ್ಪರ್ಧಿಗಳಾಗಿ ಪ್ರವೇಶಿಸಿದ್ದರು. ಬಳಿಕ ಪವಿ ಮತ್ತು ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದರು.


Click it and Unblock the Notifications











