Bigg Boss 10 Finale: ಬಿಗ್ ಬಾಸ್ ಗೆದ್ದವರಿಗೆ ಲಕ್ಷಲಕ್ಷ ಹಣದ ಜೊತೆಗೆ ಏನೇನು ಸಿಗುತ್ತೆ ಗೊತ್ತಾ?

ಬಿಗ್ ಬಾಸ್ ಕನ್ನಡ 10 ರ ಗ್ರ್ಯಾಂಡ್ ಫಿನಾಲೆ ಇನ್ನೆರಡು ದಿನಗಳಲ್ಲಿ ನಡೆಯಲಿದೆ. ನಟ ಕಿಚ್ಚ ಸುದೀಪ್ ನಡೆಸಿಕೊಡುವ ಈ ಶೋ ಮುಗಿಯಲಿದ್ದು, ಯಾರು ಬಿಗ್ ಬಾಸ್ ಟ್ರೋಫಿ ಕೈಯಲ್ಲಿ ಹಿಡಿಯಲಿದ್ದಾರೆ ಎಂಬುದೇ ಪ್ರೇಕ್ಷಕರ ಕುತೂಹಲ. ಈಗಾಗಲೇ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿದ್ದು, ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಆರಂಭವಾದ ಈ ಬಿಗ್ ಬಾಸ್ ಹತ್ತನೇ ಸೀಸನ್ ಟಿಆರ್‌ಪಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗಿಂತ ಮುಂದಿತ್ತು. ಈಗ ಇನ್ನೇರಡು ದಿನದಲ್ಲಿ ಬ್ಲಾಕ್‌ಬಸ್ಟರ್ ಗ್ರ್ಯಾಂಡ್ ಫಿನಾಲೆಯೊಂದಿಗೆ ಕೊನೆಗೊಳ್ಳಲು ಸಿದ್ಧವಾಗಿದೆ. ಈ ಸೀಸನ್‌ನಲ್ಲಿ ಗೆಲ್ಲುವ ಸ್ಪರ್ಧಿಗೆ ಏನು ಸಿಗಲಿದೆ..? ಟ್ರೋಫಿ ಜೊತೆಗೆ ಹಣ ಮತ್ತು ಯಾವ್ಯಾವ ಬಹುಮಾನ ಸಿಗಲಿದೆ ಎಂದು ಪ್ರೇಕ್ಷಕರಲ್ಲಿ ಕುತೂಹಲವಿದೆ.

 Bigg Boss Kannada 10 Finale: What Will Winner Get At grand Finale, Prize Money and other details

ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆ

ಕನ್ನಡ ಬಿಗ್‌ ಬಾಸ್ ಈ ಬಾರಿ ಹಲವು ವಿವಾದಗಳಿಗೆ ಸಾಕ್ಷಿಯಾಗಿದೆ. ತನಿಶಾ ಮೇಲಿನ ಎಫ್‌ಐಆರ್ ವಿವಾದವಾಗಲಿ, ವರ್ತೂರ್ ಸಂತೋಷ್ ಹುಲಿಉಗುರು ಪೆಂಡೆಂಟ್ ಬಂಧನ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಕಣ್ಣಿಗೆ ಗಾಯ ಸೇರಿಸಂತೆ ಹಲವು ಕಾರಣಗಳಿಗೆ ಸಾಕ್ಷಿಯಾಗಿದೆ. ನಾಲ್ಕು ತಿಂಗಳ ಕಾಲ ನಡೆದ ಈ ಕಾರ್ಯಕ್ರಮದ ವಿಜೇತರನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಭಾನುವಾರ ಘೋಷಿಸಲಾಗುತ್ತದೆ.

ಕಾರ್ಯಕ್ರಮದ ನಿಕಟ ಮೂಲವೊಂದು ಫಿಲ್ಮಿಬೀಟ್‌ಗೆ ಹೇಳಿದ್ದು, "ಬಿಬಿಕೆ 10 ಗ್ರ್ಯಾಂಡ್ ಫಿನಾಲೆಯನ್ನು ತುಂಬಾ ಚೆನ್ನಾಗಿ ಮಾಡಲಾಗುತ್ತದೆ. ಇದು 2024 ರಲ್ಲಿ ಕನ್ನಡ ಕಿರುತೆರೆಯಲ್ಲಿನ ಅತಿದೊಡ್ಡ ಕಾರ್ಯಕ್ರಮವಾಗಲಿದೆ. ಕಾರ್ಯಕ್ರಮವು ಅದ್ಧೂರಿಯಾಗಿ ಮುಕ್ತಾಯಗೊಳ್ಳಲಿದೆ. ಈ ಈವೆಂಟ್ ಅತಿ ದೊಡ್ಡ ಸಂಭ್ರಮ" ಎಂದು ಹೇಳಿದ್ದಾರೆ.

 Bigg Boss Kannada 10 Finale: What Will Winner Get At grand Finale, Prize Money and other details

ಕನ್ನಡ ಬಿಗ್ ಬಾಸ್ ವಿಜೇತರಿಗೆ ಏನೇನು ಸಿಗಲಿದೆ?

ಸದ್ದಯ ಬಿಗ್ ಬಾಸ್ ಮನೆಯಲ್ಲಿ ಆರು ಫೈನಲಿಸ್ಟ್‌ಗಳು ಟ್ರೋಫಿಗಾಗಿ ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ ಮತ್ತು ತುಕಾಲಿ ಸಂತೋಷ್ ರಿಯಾಲಿಟಿ ಶೋನ ಅಂತಿಮ ಘಟಕ್ಕೆ ತಲುಪಿರುವ ಆರು ಸ್ಪರ್ಧಿಗಳು.

ಬಿಗ್ ಬಾಸ್‌ನ ಟ್ರೋಫಿಯ ಹೊರತಾಗಿ, ಬಿಗ್ ಬಾಸ್ 10 ವಿಜೇತರು ನಗದು ಬಹುಮಾನದ ಹಣದ ಜೊತೆಗೆ ಹೊಚ್ಚ ಹೊಸ ಕಾರನ್ನು ಸಹ ಪಡೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತರಿಗೆ ಶೋ ಗೆದ್ದ ನಂತರ 50 ಲಕ್ಷ ರೂಪಾಯಿ, ಅದ್ದೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗುವುದು.

ಬಿಗ್ ಬಾಸ್ ಸೀಸನ್‌ನಲ್ಲಿ ಆರು ಫೈನಲಿಸ್ಟ್‌ಗಳು

ಕಳೆದ ವಾರ ಈಶಾನಿ, ಭಾಗ್ಯಶ್ರೀ, ನೀತು, ಮೈಕೆಲ್ ಅಜಯ್, ಸಿರಿ, ಸ್ನೇಹಿತ್ ದೊಡ್ಮನೆಗೆ ಭೇಟಿ ನೀಡಿ ಮನೆಗೆ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದರು. ವಾರಾಂತ್ಯದ ಸಂಚಿಕೆಯಲ್ಲಿ ನಮ್ರತಾ ಗೌಡ ಎಲಿಮಿನೇಟ್ ಆಗಿದ್ದರೆ ವಾರದ ಮಧ್ಯದ ಎವಿಕ್ಷನ್‌ನಲ್ಲಿ ತನಿಶಾ ಎಲಿಮಿನೇಟ್ ಆಗಿದ್ದರು. ಈ ವಾರದ ಆರಂಭದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಬಿಗ್ ಬಾಸ್ ನ್ಯೂಸ್ ವರದಿಗಾರರಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವಾರ ಈಗಾಗಲೇ ಮತ್ತೆ ಸ್ಪರ್ಧಿಗಳೆಲ್ಲಾ ಒಂದಾಗಿದ್ದು, ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಒನ್ನೊಬ್ಬರ ಮೇಲಿನ ಭಾವನೆಯನ್ನು ಹೊರಹಾಕಿದ್ದಾರೆ.

More from Filmibeat

English summary
BBK 10 grand Finale: What Will Winner Get At Finale, Prize Money and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X