BBK10: ಆರೋಪ-ಪ್ರತ್ಯಾರೋಪ : ವರ್ತೂರು ಸಂತೋಷ್-ತನಿಷಾ ನಡುವೆ ಹೊತ್ತಿಕೊಳ್ತು 'ಬೆಂಕಿ'

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಬೇರೆ, ವೈಯಕ್ತಿಕ ವಿಚಾರಗಳು ಬೇರೆ. ಈ ರೀತಿ ಇದ್ದಾಗ ಮಾತ್ರ ಬಿಗ್ ಬಾಸ್ ಮನೆಯಲ್ಲಿರುವಷ್ಟು ದಿನವೂ ಮನಸ್ಸಿಗೂ ನೆಮ್ಮದಿ, ನಾಳೆಯ ದಿನಕ್ಕೂ ಸ್ಪೂರ್ತಿ. ಮನೆಯೊಳಗೆ ಇರುವುದೇ ಮೂರು ಮತ್ತೊಂದಿಷ್ಟು ಮಂದಿ. ಎಲ್ಲಾ ನಡವಳಿಕೆಯೂ ಎಲ್ಲರಿಗೂ ಹೊಂದಾಣಿಕೆಯಾಗಲ್ಲ. ಎಲ್ಲರಿಗೂ ಸರಿಯಾಗಿ ಕಾಣಬೇಕು ಅಂತಾನೂ ಏನಿಲ್ಲ. ಬಿಗ್ ಬಾಸ್ ಕೊಡುವ ನಾಮಿನೇಷನ್, ಕಳಪೆ, ಕೆಲವೊಂದು ಸಲ ಅಭಿಪ್ರಾಯ ವ್ಯಕ್ತಪಡಿಸುವ ಟಾಸ್ಕ್‌ಗಳಲ್ಲಿ ತಮಗೆ ತಪ್ಪು ಎನಿಸಿದ್ದನ್ನು ಹೇಳುತ್ತಾರೆ.

ಇದೊಂದು ಆಟ, ಗೆದ್ದರೆ ಐವತ್ತು ಲಕ್ಷ ಎಂಬುದು ಇಡೀ ಮನೆ ಮಂದಿಗೆ ಗೊತ್ತು. ಅಷ್ಟೇ ಯಾಕೆ ಅದಕ್ಕಾಗಿಯೇ ಎಲ್ಲರೂ ಗುರಿ ಇಟ್ಟಿರುವುದು. ಆದರೆ, ಕೆಲವೊಂದು ಸಲ ವೈಯಕ್ತಿಕ ನಿಂದನೆಯೇ ಹೆಚ್ಚಾಗುತ್ತದೆ‌. ಅದರಿಂದ ಕೆಲವೊಬ್ಬರ ಬಾಂಧವ್ಯ ಕಡಿತಗೊಂಡು, ಮತ್ತೆ ಚಿಗುರುವುದೇ ಇಲ್ಲ. ಆದರೆ ತನಿಷಾ ಹಾಗೂ ವರ್ತೂರು ಸಂತೋಷ್ ವಿಚಾರ ಅದರಲ್ಲಿ ಭಿನ್ನವಾಗಿದೆ.

Bigg Boss Kannada 10 fire ignited between Varthur Santhosh and Tanisha

ಪ್ರತಾಪ್-ವಿನಯ್ ಮನ:ಸ್ತಾಪ

ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಸಲ ವೈಯಕ್ತಿಕ ವಿಚಾರಕ್ಕೆ ಎಂಟ್ರಿಯಾದರೆ ಆ ಜಗಳ ತೀರಾ ಅತಿರೇಕಕ್ಕೆ ಹೋಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ವಿನಯ್ ಹಾಗೂ ಪ್ರತಾಪ್. ಸುದೀಪ್ ಮುಂದೆ ಹೇಳಿದ ಒಂದು ಹೇಳಿಕೆಯಿಂದ ವಿನಯ್, ನಿನ್ನೆಯಿಂದನೂ ದ್ವೇಷ ಮಾಡುವುದಕ್ಕೆ ಶುರು ಮಾಡಿದ್ದಾರೆ. ಟಾಸ್ಕ್‌ಗಳಲ್ಲಿ ಪ್ರತಾಪ್‌ರನ್ನೇ ಟಾರ್ಗೆಟ್ ಮಾಡಿದ್ದಾರೆ. ಏಕವಚನದ ಬಳಕೆ ಜಾಸ್ತಿಯಾಗಿದೆ.

ವರ್ತೂರು ಮೇಲೆ 'ಆರೋಪ' ಮಾಡಿದ ತನಿಷಾ

ಬಿಗ್ ಬಾಸ್ ನೀಡಿವ ಟಾಸ್ಕ್ ಸಿಕ್ಕಾಪಟ್ಟೆ ವಿಭಿನ್ನವಾಗಿಯೇ ಇರುತ್ತದೆ. ಆ ಟಾಸ್ಕ್‌ಗಳನ್ನು ನೋಡುವುದಕ್ಕೇನೆ ಹಲವು ಮಂದಿ ಕಾಯುತ್ತಿರುತ್ತಾರೆ. ಇಂದು ಕೂಡ ಅಂತದ್ದೊಂದು ಟಾಸ್ಕ್ ನೀಡಲಾಗಿತ್ತು. ಅದು ಎಮೋಷನ್ಸ್, ಆರೋಪ ಹೀಗೆ ಯಾರಿಗೆ ಮ್ಯಾಚ್ ಆಗುತ್ತೆ ಅವರಿಗೆ ನೀಡಬೇಕಿತ್ತು‌. ವೇದಿಕೆ ಮೇಲೆ ಬಂದ ತನಿಷಾ, ಈ ಕಾರ್ಡನ್ನು ನಾನು ವರ್ತೂರು ಸಂತೋಷ್ ನೀಡುತ್ತೇನೆ. ನಾನು ಮಾತನಾಡುತ್ತಿರಬೇಕಾದರೆ ಮಧ್ಯದಲ್ಲಿ ಮಾತಾನಡುವುದು ಇಷ್ಟವಿಲ್ಲ ಅಂತಾರೆ. ನಾಮಿನೇಷನ್ ಮಾಡಲು ಈ ರೀತಿ ಕಾರಣ ಕೊಟ್ಟಿದ್ದು ಅರಿಯಲ್ಲ ಎಂದರು.

ತನಿಷಾ ಮೇಲೆ ವರ್ತೂರು 'ಆರೋಪ'

ತನಿಷಾ ಆರೋಪದ ಕಾರ್ಡ್ ಕೊಡುತ್ತಿದ್ದಂತೆ, ಕಿತ್ತುಕೊಂಡ ವರ್ತೂರು ಸಂತೋಷ್, ಸ್ನೇಹಿತ್ ಕ್ಯಾಪ್ಟನ್ ಆಗಿರುತ್ತಾರೆ. ಇವರು ಸೋಲುತ್ತಾರೆ. ಆಗ ಸ್ನೇಹಿತ್ ಮೇಲೆ ಆರೋಪ ಮಾಡುತ್ತಾರೆ. ಎರಡು ಆಟಗಳನ್ನು ಸ್ನೇಹಿತ್ ಅವರಿಗೋಸ್ಕರನೇ ಗೆದ್ದು ಕೊಡುತ್ತಾರೆ. ಆದರೂ ಅವರ ಮೇಲೆ ಆರೋಪ ಮಾಡುತ್ತಾರೆ. ತಾನೂ ಸೋತು ಅವರ ಮೇಲೆ ಆರೋಪ ಮಾಡಿದ್ದು ಸರಿಯಲ್ಲ ಎಂದು ಸಮರ್ಥನೆ ನೀಡುತ್ತಾರೆ.

Bigg Boss Kannada 10 fire ignited between Varthur Santhosh and Tanisha

ಇಬ್ಬರ ನಡುವೆ ಉಳಿಯಲ್ಲ ದ್ವೇಷ

ಆಟ, ಟಾಸ್ಕ್ ಅಂತ ಬಂದಾಗ ತಪ್ಪು ಯಾರದ್ದು ಕಾಣುತ್ತೋ ಅವರ ಮೇಲೆ ಆರೋಪ ಮಾಡುತ್ತಾರೆ. ಕೆಲವೊಂದು ಸಲ ಅಗ್ರೆಸ್ಸಿವ್ ಆಗಿ ತಮ್ಮ ತಮ್ಮ ಮೇಲೆ ಆರೋಪಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಒಮ್ಮೆ ತನಿಷಾ ಕಾಲಿಗೆ ಪೆಟ್ಟಾದಾಗ, ಆ ಟಾಸ್ಕ್‌ನಲ್ಲಿ ವರ್ತೂರು ಮಾಡಿದ ಮಿಸ್ಟೇಕ್ ನಿಂದಾಗಿಯೇ ಆ ಪೆಟ್ಟಾಗಿತ್ತು. ಆಟ ಅಂತ ಬಂದಾಗ ಕನಿಕರ ಇಲ್ಲ ಎಂದೇ ಜೋರು ಧ್ವನಿಯಲ್ಲಿ ಹೇಳಿದ್ದರು‌. ತನಿಷಾ ಕೂಡ ವರ್ತೂರು ಸಂತೋಷ್ ಮೇಲೆ ಕಿಡಿಕಾರಿದ್ದರು. ಆದರೆ ಇಬ್ಬರ ಫ್ರೆಂಡ್ಶಿಪ್ ನಡುವೆ ಆ ಯುದ್ದವನ್ನು ತಂದಿರಲಿಲ್ಲ. ಈ ಬಾರಿಯೂ ಹಾಗೇ ಮುಂದುವರೆಯುತ್ತಾರೆ ಎಂಬ ಭರವಸೆ ಇದೆ.

More from Filmibeat

English summary
BBK 10: Accusation - counter-accusation: 'fire' ignited between Varthur Santhosh and Tanisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X