Bigg Boss Kannada 10: ಅಡುಗೆ, ಮನೆಕೆಲಸ ಏನು ಗೊತ್ತಿಲ್ಲದ ನಮ್ರತಾ ಬಿಗ್ ಬಾಸ್ ಮನೆಯಲ್ಲಿ ಏನ್ ಮಾಡ್ತಾರೆ?
ಬಿಗ್ ಬಾಸ್ ಸೀಸನ್ 10 ಆರಂಭವಾಗಿದೆ. ಕಲರ್ಸ್ ಕನ್ನಡದಲ್ಲಿ ನೇರ ಪ್ರಸಾರ ಆರಂಭವಾಗಿದ್ದು, ಕಿಚ್ಚ ಸುದೀಪ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಮನೆಗೆ ಕಳಿಸುತ್ತಿದ್ದಾರೆ. ಈಗಾಗಲೇ ನಾಲ್ಕು ಮಂದಿ ಸ್ಪರ್ಧಿಗಳ ಹೆಸರನ್ನು ಘೋಷಿಸಲಾಗಿತ್ತು. ಡ್ರೋನ್ ಪ್ರತಾಪ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ವರ್ತೂರು ಸಂತೋಷ್ ಮತ್ತು ಚಾರ್ಲಿ ಮನೆಗೆ ಕಾಲಿಡುವುದು ಖಚಿತವಾಗಿತ್ತು.
ಈಗ ಮೊದಲ ಬಿಗ್ ಬಾಸ್ ಸ್ವರ್ಧಿಯಾಗಿ, ಪುಟ್ಟಗೌರಿ ಮದುವೆ, ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ ನಟಿ ನಮ್ರತಾ ಗೌಡ ಕಾಲಿಟ್ಟಿದ್ದಾರೆ. "ಊರಿಗೊಬ್ಬಳೇ ಪದ್ಮಾವತಿ" ಎಂಬ ಹಾಡಿಗೆ ಸೊಂಟ ಬಳುಕಿಸಿ ಬಿಗ್ ಬಾಸ್ ಕನ್ನಡ ಸೀಸನ್ 10ರ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ.

ಅಡುಗೆ, ಮನೆ ಕೆಲಸ ಬರುತ್ತಾ ನಮ್ರತಾ ಗೌಡಗೆ..?
ಬಿಗ್ ಬಾಸ್ ಕಲರ್‌ಫುಲ್ ವೇದಿಕೆ ಮೇಲೆ ಬಂದ ನಾಗಿಣಿ 2 ನಟಿ ನಮ್ರತಾ ಗೌಡ ಅಡುಗೆ, ಮನೆ ಕೆಲಸದ ಬಗ್ಗೆ ಕೇಳಿ ಕಾಲೆಳೆದಿದ್ದಾರೆ. ಅಡುಗೆ, ಮನೆ ಕೆಲಸ ಮತ್ತು ಬಟ್ಟೆ ಒಗೆಯಲು ಕೂಡ ಬರದ ನಮ್ರತಾ ಹೇಗೆ ಉಳಿಯುತ್ತಾರೆ ಬಿಗ್‌ಬಾಸ್‌ನಲ್ಲಿ ಎಂಬ ಪ್ರಶ್ನೆ ಕೂಡ ಸುದೀಪ್ ಕೇಳಿದ್ದಾರೆ. ಇದಕ್ಕೆ ಅದನ್ನೇಲ್ಲಾ ಕಲಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇನ್ನು, ವೇದಿಕೆಯಲ್ಲಿ ಎಗ್ ಬಿರಿಯಾನಿ ಮಾಡೋದು ಹೇಗೆ ಅಂತ ಸುದೀಪ್ ಕೇಳಿದ್ದು, ಅದಕ್ಕೆ ತುಂಬಾ ಕ್ಯೂಟ್ ಆಗಿ ನಮ್ರತಾ ಗೌಡ ಉತ್ತರ ಹೇಳಿದ್ದಾರೆ. ಇದಕ್ಕೆ ಮಂಜು ಪಾವಗಡ ಕೂಡ ಕಾಲೆಳೆದಿದ್ದಾರೆ. ಬಳಿಕ ಮನೆಗೆ ಹೋಗಲು ವೀಕ್ಷಕ ವೋಟ್ ಕೇಳಿದ್ದಾರೆ.
ವೀಕ್ಷಕರ ಬಳಿ ನಮ್ರತಾ ವೋಟ್ ಕೇಳಿದ್ದು ಹೀಗೆ
ವೀಕ್ಷಕರ ಬಳಿ ನಟಿ ನಮ್ರತಾ ಕೇಳಿದ್ದು ಹೀಗೆ, "ಬಿಗ್ ಬಾಸ್ ನನಗೆ ತುಂಬಾ ಸ್ಪೆಷಲ್. ಇಲ್ಲಿ ನಾನು ತುಂಬಾ ಕಲಿಯೋಕೆ ಬಂದಿದ್ದೆನೆ.. ಮನೆ, ಕೆಲಸ ಮಾತ್ರ ನನ್ನ ಜೀವನ ಆಗೋಗಿದೆ. ಅಪ್ಪ ಅಮ್ಮನ ಜೊತೆಗೆ ಮಾತ್ರ ಬೆಳೆದು ಹೊರಗಿನ ಪ್ರಪಂಚದ ಬಗ್ಗೆ ಅಷ್ಟಾಗಿ ನನಗೆ ಏನು ಗೊತ್ತಿಲ್ಲ. ಹೀಗಾಗಿ ಜೀವನ ಪಾಠ ಕಲಿಯಲು ನಾನು ಬಂದಿದ್ದೇನೆ. ದಯವಿಟ್ಟು ನನಗೆ ಆಶೀರ್ವಾದ ನೀಡಿ" ಎಂದು ಮನವಿ ಮಾಡಿದ್ದಾರೆ. ನಮ್ರತಾ ಗೌಡ ಮನವಿಗೆ ವೀಕ್ಷಕರು 86% ಮತಗಳನ್ನು ನೀಡಿ ಮನೆಗೆ ಕಳುಹಿಸಿದ್ದಾರೆ.

ಹೊಸ ಮನೆಯಲ್ಲಿ ಹಾಲು ಉಕ್ಕಿಸುವ ಟಾಸ್ಕ್ ಕೊಟ್ಟ ಸುದೀಪ್
ನಟಿ ನಮ್ರತಾಗೆ ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೆ ಸುದೀಪ್ ಒಂದು ಟಾಸ್ಕ್ ನೀಡಿದ್ದರು. ಅದು ಹೊಸ ಮನೆಗೆ ಹೋಗಿ ಹಾಲು ಉಕ್ಕಿಸುವ ಟಾಸ್ಕ್ ಕೊಟ್ಟಿದ್ದಾರೆ. ಮೊದಲ ಸ್ಪರ್ಧಿಯಾಗಿ, ಹೊಸ ಮನೆಗೆ ಕಾಲಿಡಲು ಹೋಗುತ್ತಿರುವ ನೀವು ಮನೆಯಲ್ಲಿ ಹಾಲು ಉಕ್ಕಿಸಿ ಎಂದಿದ್ದರು. ಹಾಲಿನ ಕ್ಯಾನ್ ಹಿಡಿದು ಮನೆಯೊಳಗೆ ಬಲಗಾಲಿಟ್ಟು ಹೋಗಿದ್ದಾರೆ.
ಮನೆ ನೋಡಿ ಖುಷಿ ಪಟ್ಟ ನಟಿ ನಮ್ರತಾ ಗೌಡ, ಮನೆಯೊಳಗೆ ಹೋಗಿ ಅಲ್ಲಿದ್ದ ದೇವರ ಫೋಟೋ ಮುಂದೆ ಇಟ್ಟಿದ್ದ ದೀಪ ಬೆಳಗಿಸಿ, ಪೂಜೆ ಮಾಡಿದ್ದಾರೆ. ಬಳಿಕ ಕಿಚನ್‌ನಲ್ಲಿ ಹಾಲು ಉಕ್ಕಿಸಲು ಪಾತ್ರೆ ಹುಡುಕಿ ಹಾಲಿಟ್ಟು, ಬಳಿಕ ಬೆಡ್ ರೂಂಗೆ ಹೋಗಿ ತಮಗಾಗಿ ಹೊಸ ಬೆಡ್ ಕೂಡ ರಿಸರ್ವ್ ಮಾಡಿದ್ದಾರೆ.
ನಮ್ರತಾ ಗೌಡ
ನಮ್ರತಾ ಗೌಡ ಕನ್ನಡ ಕಿರುತೆರೆಯ ಪ್ರಮುಖ ನಟಿಯರಲ್ಲಿ ಒಬ್ಬರು. 1993 ಏಪ್ರಿಲ್ 15 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ 'ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆಗಹೆ ಪಾದರ್ಪಣೆ ಮಾಡಿದವರು. ಬಳಿಕ ಇವರಿಗೆ ಹೆಸರು ತಂದುಕೊಟ್ಟಿದ್ದು, ಕಲರ್ಸ್ ಕನ್ನಡದ 'ಪುಟ್ಟಗೌರಿ ಮದುವೆ'ಯ ಹಿಮಾ ಪಾತ್ರ. ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದ ಅವರು ಬಳಿಕ ಕಾಣಿಸಿಕೊಂಡಿದ್ದು, ನಾಗಿಣಿ 2 ಧಾರಾವಾಹಿಯಲ್ಲಿ. ನಾಗಕನ್ಯೆಯಾಗಿ ಜನರ ಮನಗೆದ್ದಿದ್ದು, ಈಗ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.


Click it and Unblock the Notifications











