Bigg Boss Kannada 10: ಐದಕ್ಕೆ ಏರಿದ ವೈಟಿಂಗ್ ಲಿಸ್ಟ್‌ನಲ್ಲಿರುವವರ ಸಂಖ್ಯೆ, ಇನ್ನೂ ಹೆಚ್ಚಾಗುತ್ತಾ?

ಬಿಗ್‌ ಬಾಸ್ ಮನೆಗೆ ಹೋಗುವುದು ಅಷ್ಟು ಸುಲಭವಾಗಿಲ್ಲ ಈ ಬಾರಿ. ಸ್ಪರ್ಧಿಗಳನ್ನು ಆಯ್ಕೆ ಮಾಡುವ ಕೆಲಸ ಕೇವಲ ಬಿಗ್ ಬಾಸ್‌ದು ಮಾತ್ರವಲ್ಲ ವೀಕ್ಷಕರಿಗೂ ಆ ಅವಕಾಶವಿದ್ದು ಸರಿಯಾಗಿಯೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಒಟ್ಟು ಐದು ಮಂದಿಯನ್ನು ವೈಟಿಂಗ್ ಲಿಸ್ಟ್‌ನಲ್ಲಿ ಇಡಲಾಗಿದೆ.

ಸಂಗೀತಾ ಶೃಂಗೇರಿ

ರಾಷ್ಟ್ರೀಯ ಪ್ರಶಸ್ತಿ ಪಡೆದ ಚಾರ್ಲಿ 777 ಸಿನಿಮಾ ಮೂಲಕ ಮತ್ತು ಹರ ಹರ ಮಹಾದೇವದ 'ಸತಿ'ಯಾಗಿ ಕನ್ನಡಿಗರಿಗೆ ಮನಗೆದ್ದಿರೋ ನಟಿ ಸಂಗೀತಾ ಶೃಂಗೇರಿ ಇನ್ನು ವೈಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ. ಈ ಹಿಂದೆ ಕೋಟಿ ಕೊಟ್ಟರೂ ಬಿಗ್ ಬಾಸ್‌ಗೆ ಹೋಗಲ್ಲ ಎಂದಿದ್ದ ಅವರನ್ನು ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಈ ಬಾರಿ ಹ್ಯಾಪಿ ಬಿಗ್ ಬಾಸ್ ಆಗಿದ್ದ ಕಾರಣ ಬಂದಿದ್ದೇನೆ ಎಂದಿದ್ದರು. ಆದರೂ ವೀಕ್ಷಕರು 76 ಪರ್ಸೆಂಟ್ ವೋಟ್ ಹಾಕಿ ವೈಟಿಂಗ್ ಲಿಸ್ಟ್‌ಗೆ ಹಾಕಿದ್ದಾರೆ.

Bigg Boss Kannada 10: Five contestants in waiting list of bigg boss

ರಕ್ಷಕ್ ಬುಲೆಟ್

ದಿವಂಗತ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಈ ಬಾರಿ ತುಂಬಾ ಉತ್ಸಾಹದಲ್ಲಿ ತನ್ನನ್ನು ತಾನು ಸಾಬೀತುಪಡಿಸುತ್ತೇನೆ, ನನ್ನ ಬಗ್ಗೆ ನೆಗೆಟಿವ್ ಇರುವ ವಿಷಯಗಳನ್ನು ಪಾಸಿಟಿವ್ ಮಾಡುವೆ ಎಂದು ಬಿಗ್‌ ಬಾಸ್‌ಗೆ ಬಂದಿದ್ದರು. ಆದರೆ, ವೀಕ್ಷಕರು 53% ವೋಟು ನೀಡಿ ವೈಟಿಂಗ್ ರೂಂಗೆ ಕಳಿಸಿದ್ದಾರೆ.

ಡ್ರೋನ್ ಪ್ರತಾಪ್

ಡ್ರೋನ್ ತಯಾರಿಸಿದ್ದೇನೆ ಎಂದು ಭಾರಿ ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದ್ದ, ಈ ಬಾರಿ ಬಿಗ್‌ ಬಾಸ್‌ಗೆ ಬರುವ ಸ್ವರ್ಧಿಗಳಲ್ಲಿ ಪ್ರಮುಖರಾಗಿದ್ದ ಡ್ರೋನ್ ಪ್ರತಾಪ್ 41% ವೋಟ್ ಪಡೆದು ವೈಟಿಂಗ್ ಲಿಸ್ಟ್‌ಗೆ ಸೇರಿದ್ದಾರೆ. ವೈಟಿಂಗ್ ರೂಂನಲ್ಲಿ ಅವರ ಪರದಾಟ ಒಂಥರಾ ವಿಚಿತ್ರವಾಗಿದ್ದು, ಇವರೇ ಮೊದಲು ಹೋಲ್ಡ್‌ಗೆ ಹೋದ ಸ್ಪರ್ಧಿ.

ತನಿಷಾ ಕುಪ್ಪಂಡ

ಮಂಗಳ ಗೌರಿ ಧಾರಾವಾಹಿಯ ಖಡಕ್ ವಿಲನ್ ಆಗಿದ್ದ ನಟಿ ತನಿಷಾ ಕುಪ್ಪಂಡ ಕೂಡ ಬಿಗ್‌ಬಾಸ್ ಮನೆ ಒಳಗೆ ಹೋಗಲು ಬಹಳ ಉತ್ಸುಕರಾಗಿದ್ದರು. ಆದರೆ ಅಷ್ಟು ಸುಲಭವಾಗಿ ಅವರಿಗೆ ಆ ಅವಕಾಶ ಸಿಕ್ಕಿಲ್ಲ. ವೀಕ್ಷಕರು 68% ವೋಟ್ ಪಡೆದು ವೈಟಿಂಗ್ ರೂಂಗೆ ಸೇರಿದ್ದಾರೆ.

Bigg Boss Kannada 10: Five contestants in waiting list of bigg boss

ವರ್ತೂರು ಸಂತೋಷ್

ಹಳ್ಳಿಕಾರ್ ತಳಿಯನ್ನು ಉಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಶ್ರೀಮಂತ ರೈತ ವರ್ತೂರು ಸಂತೋಷ್ ಕೂಡ ಬಿಗ್ ಬಾಸ್ ಮನೆಗೆ ಅಷ್ಟು ಸುಲಭವಾಗಿ ಹೋಗಲು ಸಾಧ್ಯವಾಗಿಲ್ಲ. ಮನೆಯ ಒಳಗೆ ಪ್ರವೇಶಿಸಲು ಬೇಕಾಗಿದ್ದ 80% ವೋಟಿಂಗ್‌ನಲ್ಲಿ ಕೇವಲ ಎರಡು ಪರ್ಸೆಂಟ್ ವೋಟ್ ಕಡಿಮೆಯಗಿದ್ದು 78% ಪಡೆದಿದ್ದಾರೆ. ಹೀಗಾಗಿ ಅವರು ಕೂಡ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ. ಇನ್ನೂ ಅಭ್ಯರ್ಥಿಗಳು ಹೆಚ್ಚಾಗಲಿದ್ದು, ಈ ವೈಟಿಂಗ್ ಲಿಸ್ಟ್ ಕೂಡ ದೊಡ್ಡದಾಗುತ್ತಾ ನೋಡಬೇಕಿದೆ.

More from Filmibeat

English summary
Bigg Boss Kannada 10: Five contestants in waiting list of bigg boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X