BBK10: ಸ್ಪರ್ಧಿಗಳಿಗೆ ಬಿಗ್ ಬಾಸ್ ಹೊಸ ಟಾಸ್ಕ್: ಮನೆಯ ಅಶಾಂತಿಗೆ ಕಾರಣವಾಗುತ್ತಾ ಈ ಆಟ..?

By Shruthi Harishgowda

ಬಿಗ್ ಬಾಸ್ ಸೀಸನ್ 10 ಎಂಟು ವಾರಗಳನ್ನು ಮುಗಿಸಿ ಈಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನರಂಜನೆ ನೀಡುವಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕೆಲವರಿಗೆ ಸ್ಪರ್ಧೆಗಳು ಜಗಳವಾಡುವುದು ಇಷ್ಟವಾದರೆ ಇನ್ನೂ ಕೆಲವೊಬ್ಬರಿಗೆ ಯಾವ ರೀತಿ ಗೇಮ್‌ಗಳಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮನೆಯಲ್ಲಿ ಉಳಿದುಕೊಂಡಿರುವ ಸ್ನೇಹಿತ್ ಹಾಗೂ ಮೈಕಲ್ ನಾವು ನಮ್ಮ ಆಟವನ್ನು ಆಡುವ ಮೂಲಕ ವೀಕ್ಷಕರ ಮನಗೆಲ್ಲುತ್ತೇವೆ ಎಂದು ಸುದೀಪ್‌ಗೆ ಮಾತು ಕೊಟ್ಟಿದ್ದಾರೆ.

ವಾರದ ಮೊದಲನೆಯ ದಿನವೇ ಹೊಸ ಹೊಸ ಟಾಸ್ಕ್‌ಗಳನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡುತ್ತಾ ಇದೆ. ಇದರಲ್ಲಿ ತಮಾಷೆಯಾದ ವಿಷಯವು ಅಡಗಿದೆ. ಬಿಗ್‌ಬಾಸ್ ಹೇಳಿದಂತಹ ಚಟುವಟಿಕೆಗಳನ್ನು ಹೆಸರು ಸೂಚಿಸಿದವರು ಮಾಡಬೇಕಾಗಿದೆ. ಬೇರೊಬ್ಬರ ರೀತಿ ಮಾತನಾಡುವುದು ಅಥವಾ ನಾಯಿ ಅಳುವ ರೀತಿ ಅಳುವುದು, ಮಿಮಿಕ್ರಿ ಮಾಡುವ ಟಾಸ್ಕ್‌ಗಳನ್ನು ಸ್ಪರ್ಧಿಗಳಿಗೆ ಬಿಗ್ ಬಾಸ್ ವಾರದ ಮೊದಲ ದಿನ ನೀಡಿದ್ದಾರೆ. ಇದು ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಬೇರೆಯವರ ರೀತಿ ನಟನೆ ಮಾಡುವಾಗ ಅವರು ಎಲ್ಲೋ ಹೇಳಿದ ಮಾತು ಇಲ್ಲಿ ಹೊರಬರಬಹುದು. ಆ ಮಾತು ಮಾತನಾಡಿದ ಇಬ್ಬರ ನಡುವೆ ಕೋಪಕ್ಕೆ ಕಾರಣವಾಗಿ ಜಗಳವಾಗಬಹುದು ಎಂಬ ನಿರೀಕ್ಷೆ ಇದೆ.

bigg boss kannada 10: funny task turns wrong in the house

ಸಂಗೀತಾ ಮೇಲೆ ಈಗ ಮನೆಯಲ್ಲಿರುವ ಇತರ ಸದಸ್ಯರಿಗೆ ಅಭಿಪ್ರಾಯ ಬದಲಾಗಿದೆ. ಇದಕ್ಕೆ ತನಿಷಾ ಕೂಡ ನಂಬಿಕೆ ದ್ರೋಹದ ಕೆಲಸವನ್ನು ಸಂಗೀತಾ ಇನ್ಮುಂದೆ ಮಾಡಬಾರದು ಎಂದು ಎಲ್ಲರ ಎದುರೇ ಹೇಳಿದ್ದಾರೆ. ಸಂಗೀತಾ ನಾಯಿಯ ರೀತಿ ಅಭಿನಯ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ನಮ್ಮ ಮನೆಯ ನಾಯಿಯನ್ನ ಹೊರಗಡೆ ಬಿಟ್ಟಿದ್ದೇನೆ ಎಂದಿದ್ದಾರೆ. ಈ ತಮಾಷೆಯ ಮಾತೇ ಸೀರಿಯಸ್ಸಾಗಿ ಜಗಳಕ್ಕೆ ಕಾರಣವಾಗುತ್ತಾ?

ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಎಲ್ಲವನ್ನು ತಮಾಷೆಯಾಗಿಯೇ ತೆಗೆದುಕೊಳ್ಳಲಾಗಿದೆ. ಆದರೆ ತದನಂತರ ಏನಾಗುತ್ತದೆ ಎಂಬುದನ್ನ ತೋರಿಸಿಲ್ಲ. ಈ ಟಾಸ್ಕ್ ಮನೆಯಲ್ಲಿ ಶಾಂತಿ ಕದಡುತ್ತಾ ಕಾದು ನೋಡಬೇಕಿದೆ.

bigg boss kannada 10: funny task turns wrong in the house

ಹೊಸ ಟಾಸ್ಕ್ ನೀಡಿದ ಬಿಗ್ ಬಾಸ್

ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಹೊಸ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳು, ಬಿಗ್ ಬಾಸ್ ಹೇಳಿದ ಚಟುವಟಿಕೆಯನ್ನ ಮಾಡಬೇಕಾಗಿದೆ ಕೆಲವರಿಗೆ ನಾಯಿಯಂತೆ ಅಳುವ ಟಾಸ್ಕ್ ಕೊಟ್ಟರೆ. ಇನ್ನು ಕೆಲವರಿಗೆ ಹಾವಿನಂತೆ ಹಾಗೂ ಕೋತಿ ಯಾವ ರೀತಿ ಜಿಗಿಯುತ್ತದೆ ಹೀಗೆ ತರಹೇವಾರಿ ಟಾಸ್ಕ್‌ಗಳನ್ನು ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಅವಿನಾಶ್ ಶೆಟ್ಟಿ ಹಾಗೂ ವಿನಯ್, ಕಾರ್ತಿಕ್, ಸ್ನೇಹಿತ್ ಹಾಗೂ ಸಂಗೀತಾ, ತುಕಾಲಿ‌ ಹಾಗೂ ವರ್ತೂರು ಸಂತೋಷ್ ಟಾಸ್ಕ್‌ನಲ್ಲಿ ಭಾಗಿಯಾಗಿದ್ದಾರೆ. ಅವಿನಾಶ್ ಶೆಟ್ಟಿ ಹಾವಿನ ರೀತಿಯಲ್ಲಿ ವರ್ತಿಸಿದ್ದಾರೆ. ನಂತರ ವಿನಯ್ ಹಾಗೂ ಸ್ನೇಹಿತ್ ಕಾರ್ತಿಕ್ ತಮಗೆ ನೀಡಿದ ಟಾಸ್ಕ್ ಮಾಡಿದ್ದಾರೆ.

ಕೋತಿ, ನಾಯಿಯಂತೆ ವರ್ತಿಸಿದ ಸ್ಪರ್ಧೆಗಳು

ಇನ್ನು ಸಂಗೀತಾಗೆ ಬಿಗ್ ಬಾಸ್ ಅಳುವ ನಾಯಿಯ ಮರಿಯಂತೆ ನೀವು ಆಕ್ಟ್ ಮಾಡಿ ತೋರಿಸಬೇಕು ಎಂದಿದ್ದಾರೆ. ಇದಕ್ಕೆ ಸಂಗೀತಾ ಅಳುವ ನಾಯಿಯ ರೀತಿ ಮಾಡಿದ್ದಾರೆ. ಆದರೆ ಟಾಸ್ಕ್ ವೇಳೆ ಈ ಮಾತಿಗೆ ಯಾವುದೇ ಜಗಳಗಳಾಗಲಿ ಏನು ನಡೆದಿಲ್ಲ. ಟಾಸ್ಕ್ ಮುಗಿದಾದ ಮೇಲೆ ಈ ವಿಷಯ ಸಂಗೀತರನ್ನು ಕೆರಳಿಸಲಿದ್ದು ತುಕಾಲಿ ಸಂತೋಷ್ ಮೇಲೆ ಮುಗಿ ಬೀಳುತ್ತಾರಾ? ನೋಡಬೇಕು. ಯಾಕೆಂದರೆ ಮೊದಲಿನಿಂದಲೂ ತುಕಾಲಿ ಸಂತೋಷ್ ಹಾಗೂ ಸಂಗೀತಾ ನಡುವೆ ಮನಸ್ತಾಪ ಇದೆ. ಈ ಮಾತು ಕೂಡ ಇಬ್ಬರಲ್ಲಿ ಜಗಳವನ್ನ ತರಬಹುದು.

ಸಂಗೀತಾರನ್ನು ಅನುಕರಣೆ ಮಾಡಿದ ತುಕಾಲಿ

ಬಿಗ್ ಬಾಸ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್‌ಗೆ ಹೊಸದೊಂದು ಟಾಸ್ಕ್ ನೀಡಿದ್ದಾರೆ. ಸಂಗೀತಾ ಹಾಗೂ ಕಾರ್ತಿಕ್ ರೀತಿ ಇಬ್ಬರೂ ವರ್ತಿಸಬೇಕು ಎಂದಿದ್ದಾರೆ. ಇದರಲ್ಲಿ ತುಕಾಲಿ ಸಂತೋಷ್, ಸಂಗೀತಾ ರೀತಿ ಅನುಕರಣೆ ಮಾಡಿದ್ದಾರೆ‌. ಕಾರ್ತಿಕ್ ರೀತಿ ವರ್ತೂರು ಸಂತೋಷ್ ನಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಒಡನಾಟ ಹೇಗಿರುತ್ತದೆ ಎಂದು ಮಾಡಿ ತೋರಿಸಿದ್ದಾರೆ.

ಕಾರ್ತಿಕ್ ರೀತಿ ಮಾತನಾಡಿದ ವರ್ತೂರು

ವರ್ತೂರು ಸಂತೋಷ್ ನಾನು ವಿನಯ್‌ನನ್ನು ಬಿಡೋದಿಲ್ಲ, ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಟಾಸ್ಕ್ ಆಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಅವರನ್ನು ಯಾಕೆ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿಯಾ? ನನ್ನನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡು ಎಂದಿದ್ದಾರೆ. ನಂತರ ವರ್ತೂರು ನೀವು ವಿನಯ್ ಟೀಮ್‌ಗೆ ಸೇರಿದಾಗ ಏನು ಮಾಡಿದ್ರಿ? ಎಂದಾಗ ನಾನು ಎಲ್ಲಿಗೆ ಹೋಗುತ್ತೇನೆ ಅಲ್ಲಿ ಎಲ್ಲರಿಗೂ ಗುಂಡಿ ತೋಡಿ ಬರುತ್ತೇನೆ ಎಂದು ಸಂಗೀತಾ ರೀತಿ ಮಾತನಾಡಿದ್ದಾರೆ. ಈ ಎಲ್ಲಾ ಮಾತುಗಳು ಕೂಡ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು, ತಮಾಷೆ ಹೋಗಿ ಅಮಾಸೆ ಆಗುತ್ತದಾ? ಎಂಬುದನ್ನ ನೋಡಬೇಕಾಗಿದೆ.

More from Filmibeat

English summary
Colors kannada bigboss Written Update on Bigboss season 10 Here is the details about new task new challenge;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X