Varthur Santhosh: ಕೊನೆಗೂ ಫೈನಲಿಸ್ಟ್‌ಗಳಿಗೆ ವರ್ತೂರು ಸಂತೋಷ್ 'ಜೈಲು ಕಹಾನಿ' ಹೇಳಿದ ಸುದೀಪ್!
ಬಿಗ್ ಬಾಸ್ ಕನ್ನಡ ಶೋ ಇತಿಹಾಸದಲ್ಲಿ ಮೊದಲ ಬಾರಿ ಒಬ್ಬ ವ್ಯಕ್ತಿಯನ್ನು ಬಿಗ್ ಬಾಸ್ ಮನೆಯಿಂದ ಬಂಧಿಸಲಾಗಿತ್ತು. ಅದು ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್. ಹೌದು.. ಬಿಗ್ ಬಾಸ್ ಮನೆಗೆ ಬರುವಾಗ ರೈತ ವರ್ತೂರು ಸಂತೋಷ್ ತಮ್ಮ ಚಿನ್ನದ ಸರದಲ್ಲಿ ಒಂದು ಹುಲಿಉಗುರಿನ ಪೆಂಡೆಂಟ್ ಧರಿಸಿದ್ದರು. ಇದು ಈ ಎಲ್ಲಾ ವಿವಾದಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮ ಆರಂಭವಾಗಿ ಕೆಲವು ವಾರಗಳ ಬಳಿಕ ಈ ಹುಲಿ ಉಗುರಿನ ಪೆಂಡೆಂಟ್ ವಿವಾದ ಉಂಟಾಯಿತು. ವರ್ತೂರು ಸಂತೋಷ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೆ ಕಾರಣಕ್ಕೆ ಬಿಗ್ ಬಾಸ್ ಶೂಟಿಂಗ್ ನಡೆಯುವ ಜಾಗಕ್ಕೆ ಹೋಗಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಸೀದಾ ದೊಡ್ಮನೆಗೆ ವಾಪಸ್ ಬಂದಿದ್ದರು. ಇದು ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಈಗ ಈ ವಿಷಯವನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಹೇಳಿದ್ದಾರೆ.

ಫೈನಲಿಸ್ಟ್‌ಗಳಿಗೆ ಕೊನೆಗೂ ತಿಳಿತು ವರ್ತೂರ್ ಜೈಲ್ ಕಹಾನಿ!
ಬಿಗ್ ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆ ಸಂಚಿಕೆ ಪ್ರಸಾರವಾಗುತ್ತಿದೆ. ಅದ್ದೂರಿ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ಫೈನಲಿಸ್ಟ್‌ಗಳನ್ನು ಮಾತನಾಡಿಸುತ್ತಿದ್ದಾರೆ. ಅವರ ಅನುಭವಗಳನ್ನು ಎಲ್ಲರ ಮತ್ತೆ ನೆನಪಿಸಿದ್ದಾರೆ. ಇದೇ ವೇಳೆ ಮನೆಯಲ್ಲಿ ಇರುವ ಸ್ಪರ್ಥಿಗಳಿಗೆ ತಿಳಿಯದ ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್ ಅವರು ಒಂದು ವಾರ ದೊಡ್ಮನೆಯಿಂದ ಕಾಣೆಯಾಗಿದ್ದರ ಬಗ್ಗೆ ಮಾತು ಬಂದಿದೆ.
ದೊಡ್ಡಮೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಈಗಾಗಲೇ ವರ್ತೂರ್ ಸಂತೋಷ್ ಅವರ ಹುಲಿ ಉಗುರಿನ ಪ್ರಕರಣದ ಬಗ್ಗೆ ತಿಳಿದಿದೆ. ಆದರೆ, ಫೈನಲಿಸ್ಟ್‌ಗಳಿಗೆ ಈ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ವರ್ತೂರು ಸಂತೋಷ್ ಅವರು ಅನುಭವಿಸಿದ ಕಷ್ಟ ಮತ್ತು ಬಿಗ್ ಬಾಸ್ ಮನೆಯಲ್ಲಿ ಅವರು ಇರಲೇಬೇಕು ಎಂದು ತಾವು ಹಠ ಯಾಕೆ ಮಾಡಿದೆ ಎಂಬುದನ್ನು ಹೇಳಿದ್ದಾರೆ.
ವರ್ತೂರು ಸಂತೋಷ್ ಮುಗ್ಧ ಮನಸ್ಸಿನವರು ಎಂದ ಸುದೀಪ್
ವರ್ತೂರು ಸಂತೋಷ್ ಅವರಿಗೆಯೇ ನೀವು ಒಂದು ವಾರ ಏನು ಮಾಡಿದ್ರೆ ಎಂಬುದನ್ನು ಹೇಳಿ ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ವರ್ತೂರು, ನೀವೇ ಹೇಳಿ ಸರ್ ಎಂದು ತಿಳಿಸಿದ್ದರು. ವರ್ತೂರು ಸಂತೋಷ್ ಬಗ್ಗೆ ಮಾತನಾಡಿದ ಸುದೀಪ್ ಇಡೀ ಘಟನೆಯನ್ನು ಫೈನಲಿಸ್ಟ್‌ಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಇದಕ್ಕೆ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದೆ. ಸಂಗೀತಾ ಬಾಯಿ ಬಿಟ್ಟುಕೊಂಡು ನೋಡಿದ್ದಾರೆ. ತುಕಾಲಿ ಸಂತೋಷ್ ಗೆಳೆಯನಿಗೆ ಸಮಾಧಾನ ಮಾಡಿದ್ದಾರೆ. ಎಲ್ಲರೂ ನೀವು ಗ್ರೇಟ್ ಎಂದು ಹೇಳಿದ್ದಾರೆ.

ಇನ್ನು, ತಾನು ಯಾಕೆ ವರ್ತೂರು ಸಂತೋಷ್ ಮನೆ ಬಿಟ್ಟು ಹೋಗುತ್ತೆನೆ ಎಂದು ಹೇಳಿದಾಗ ಒಪ್ಪಲಿಲ್ಲ ಎಂಬುದನ್ನು ಸುದೀಪ್ ಬಹಿರಂಗಪಡಿಸಿದ್ದಾರೆ. ಮುಗ್ಧ ಮನಸ್ಸಿನ ವರ್ತೂರು ಸಂತೋಷ್ ಅವರಿಗೆ ಹೊರಗಿನ ವಿಷಯ ಒಳಗೆ ಹೇಳಬಾರದು ಎಂದು ನಿಯಮ ಹೇಳಿದ್ದೇವು. ಅವರು ಅದನ್ನು ಒಮ್ಮೆಯು ಮುರಿಯಲಿಲ್ಲ. ಅಷ್ಟು ನೋವಿನಲ್ಲೂ ಕೂಡ ಫೈನಲ್‌ವರೆಗೂ ಬಂದಿದ್ದಾರೆ ಎಂದರು. ಇದಕ್ಕೆ ವರ್ತೂರು ಸಂತೋಷ್ ಅವರ ತಾಯಿ ಭಾವುಕರಾಗಿದ್ದು, ಕಣ್ಣೀರು ಹಾಕಿದ್ದಾರೆ.


Click it and Unblock the Notifications











