Varthur-Tukali: ವರ್ತೂರು ಸಂತೋಷ್‌ಗೆ ಸಿಗದ ಟ್ರೋಫಿ, ಕಣ್ಣೀರು ಹಾಕಿದ ತುಕಾಲಿ ಸಂತೋಷ್!
ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ನಾಲ್ಕನೇ ರನ್ನರ್ ಅಪ್ ಆಗಿ ವರ್ತೂರು ಸಂತೋಷ್ ಮನೆಯಿಂದ ಹೊರ ಬಂದಿದ್ದಾರೆ. ನಮ್ರತಾ ಗೌಡ ಮನೆಯೊಳಗೆ ಬಂದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ವರ್ತೂರು ಸಂತೋಷ್ ಅವರನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಅವರೇನೋ ಖುಷಿಯಿಂದಲೇ ಮನೆಯಿಂದ ಹೊರಹೋಗಿದ್ದಾರೆ. ಆದರೆ, ಕಣ್ಣೀರು ಹಾಕಿರುವುದು ಮಾತ್ರ ಅವರ ಸ್ನೇಹಿತರಾಗಿದ್ದ ತುಕಾಲಿ ಸಂತೋಷ್!.
ಹೌದು... ಬಿಗ್ ಬಾಸ್‌ನಲ್ಲಿ ಸಂತು- ಪಂತು ಎಂದೇ ಖ್ಯಾತರಾಗಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರ ಸ್ನೇಹಕ್ಕೆ ಮನೆ ಮಂದಿ ಮಾತ್ರವಲ್ಲದೇ ಜನರು ಕೂಡ ಫಿದಾ ಆಗಿದ್ದರು. ಅವರ ಸ್ನೇಹ ಕಂಡು ನಟ ಕಿಚ್ಚ ಸುದೀಪ್ ಕೂಡ ಅವರಿಬ್ಬರನ್ನೂ ದೂರ ಮಾಡಲು ಇಚ್ಛಿಸದೇ ಎಲಿಮಿನೇಷನ್‌ನಿಂದ ಕಾಪಾಡಿದ್ದರು. ಈಗ ಇಬ್ಬರು ಟ್ರೋಫಿ ಪಡೆಯದೇ ಐದನೇ ಮತ್ತು ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ವರ್ತೂರು ಸಂತೋಷ್ ಎಲಿಮಿನೇಟ್: ತುಕಾಲಿ ಕಣ್ಣೀರು!
ವರ್ತೂರು ಸಂತೋಷ್ ಎಲಿಮಿನೇಟ್ ಎಂದು ಘೋಷಿಸಿದ ತಕ್ಷಣ ತುಕಾಲಿ ಸಂತೋಷ್ ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿದೆ. ವರ್ತೂರು ವೇದಿಕೆಗೆ ಬರುವ ಮುನ್ನವೇ ತುಕಾಲಿ ಕಣ್ಣೀರು ಹಾಕುತ್ತಾ ಭಾವುಕರಾಗಿದ್ದರು. ಇಲ್ಲಿಗೆ ಬಂದವರೇ ಯಾಕೆ ಬಂದೆ ಎಂದು ಪ್ರಶ್ನಿಸಿದ್ದಾರೆ. ಟ್ರೋಫಿ ತಗೊಂಡು ಬಾ ಎಂದರೆ ಹಾಗೆ ಬಂದಿದ್ದಿಯಾ ಎಂದು ಕಣ್ಣೀರು ಹಾಕುತ್ತಲೇ ಪ್ರಶ್ನಿಸಿದ್ದಾರೆ.
ಇನ್ನು, ತುಕಾಲಿ ಸಂತೋಷ್ ಪ್ರಶ್ನೆಗಳಿಗೆ ವರ್ತೂರು ಸಂತೋಷ್ ಕೂಡ ನೀನೇ ಬಾ ಅಂದಿದ್ದು ಎಂದು ಕಾಲೆಳೆದಿದ್ದಾರೆ. "ನೀನೇ ಬಾ ಎಂದೆ, ಅದಕ್ಕೆ ನಾನು ಬಂದೆ" ಎಂದು ವರ್ತೂರು ಹೇಳಿದರು. ಆಗ ತುಕಾಲಿ ಸಂತೋಷ್, 'ಅಣ್ಣ, ನಾನು ಕಪ್ ಜೊತೆಗೆ ಬಾ ಅಂದಿದ್ದು. ಹಾಗೆ ಬಾ ಅನ್ನಲಿಲ್ಲ' ಎಂದು ಭಾವುಕರಾಗಿದ್ದಾರೆ. ಇಬ್ಬರನ್ನು ನೋಡಿದ ನಟ ಸುದೀಪ್ ತುಕಾಲಿ ಅವರನ್ನು ಸ್ಟೇಜ್ ಮೇಲೆ ಕರಿಸಿದ್ದಾರೆ.

ಫಿನಾಲೆ ವೇದಿಕೆಗೂ ಬಂತು ಬೀನ್ ಬ್ಯಾನ್!
ಇನ್ನು, ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಇಬ್ಬರ ಮಾತುಕತೆ ಗಮನಿಸಿದ ಕಿಚ್ಚ ಸುದೀಪ್ ಇಬ್ಬರಿಗೂ ಬೀನ್ ಬ್ಯಾಗ್ ತರಿಸಿ ವೇದಿಕೆ ಮೇಲೆ ಹಾಕಿದ್ದಾರೆ. ಅವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಬಿನ್ ಬ್ಯಾಗ್ ಮೇಲೆ ಕುಳಿತು ಸ್ಪರ್ಧಿಗಳ ಬಗ್ಗೆ ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಹೀಗಾಗಿಯೇ ಅವರಿಗಾಗಿ ವೇದಿಕೆ ಬಿಟ್ಟು ತಾವು ಸ್ಪರ್ಧಿಗಳ ಜೊತೆಗೆ ಹೋಗಿ ನಿಂತಿದ್ದಾರೆ. ವೇದಿಕೆ ಮೇಲೆ ಇಬ್ಬರು ಕೂಡ ಕೆಲ ಹೊತ್ತು ಮಾತನಾಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಬಗ್ಗೆಯೂ ಮಾತನಾಡಿ ಕಾಲೆಳೆದಿದ್ದಾರೆ.
ಖುಷಿಯಿಂದ ಮನೆಯಿಂದ ಬಂದ ವರ್ತೂರ್
ಇನ್ನು, ದೊಡ್ಮನೆಯಲ್ಲಿ 112 ದಿನಗಳನ್ನು ಕಳೆದ ವರ್ತೂರು ಸಂತೋಷ್ ಟ್ರೋಫಿ ಗೆಲ್ಲದೆ ಇರದಕ್ಕೆ ಬೇಸರಪಟ್ಟುಕೊಂಡಿಲ್ಲ. ಇಷ್ಟು ದೂರ ಬಂದಿದ್ದಕ್ಕೆ ಖುಷಿ ಇದೆ ಎನ್ನುತ್ತಲೇ ಖುಷಿಯಿಂದ ಹೊರ ಬಂದಿದ್ದಾರೆ. ನಾನು ಈಗಾಗಲೇ ಬಿಗ್ ಬಾಸ್ ಗೆದ್ದಿದ್ದೇನೆ. ಇಷ್ಟು ದಿನಗಳ ಕಾಲ ಮನೆಯಲ್ಲಿದ್ದು, ಜನರ ಪ್ರೀತಿ ಗಳಿಸಿದ್ದೇನೆ ಫೈನಲ್ ಹಂತದವರೆಗೂ ಬಂದಿದ್ದೇನೆ ಎಂದಿದ್ದಾರೆ. ಪ್ರತಿ ಬಾರಿ ಹಳ್ಳಿಕಾರ್‌ಗೆ ಜೈ ಎನ್ನುತ್ತಿದ್ದ ಅವರನ್ನು ಫೈನಲಿಸ್ಟ್‌ಗಳು ಕೂಡ 'ಜೈ ಹಳ್ಳಿಕಾರ್' ಎನ್ನುತ್ತಲೇ ಹೊರಗೆ ಕಳುಹಿಸಿದ್ದಾರೆ. ಫೈನಲ್‌ಗೆ ಬಂದಿದ್ದ ರೈತ ವರ್ತೂರ್ ಸಂತೋಷ್ ಅವರಿಗೆ ಬಹುಮಾನವಾಗಿ ಎರಡು ಲಕ್ಷ ಹಣ ನೀಡಲಾಗಿದೆ.


Click it and Unblock the Notifications











