BBK10 Grand Finale: ಯಾರ ಮುಡಿಗೆರಲಿದೆ ಬಿಗ್ ಬಾಸ್ ಸೀಸನ್ ಹತ್ತರ ಟ್ರೋಫಿ: ಯಾರ ಕೈ ಮೇಲೆತ್ತಲಿದ್ದಾರೆ ಕಿಚ್ಚ?
ಬಿಗ್ ಬಾಸ್ ವೀಕ್ಷಕರು ಕುತೂಹಲದಿಂದ ಕಾಯುತ್ತಿರುವ ಕ್ಷಣ ಬಂದೇ ಬಿಟ್ಟಿದೆ. ಯಾರು ಬಿಗ್ ಬಾಸ್‌ನ ಟ್ರೋಫಿ ಗೆಲ್ಲುತ್ತಾರೆ ಎಂಬುದಕ್ಕೆ ಭಾನುವಾರ ಸಂಜೆ ಉತ್ತರ ಸಿಗಲಿದೆ. ಈ ಬಾರಿಯ ಸೀಸನ್ ಕಳೆದ ಒಂಬತ್ತು ಸೀಸನ್‌ಗಳಿಗಿಂತ ವಿಭಿನ್ನ. ಇಲ್ಲಿ ಜಗಳಗಳಾದಷ್ಟು ಕಳೆದ ಸೀಸನ್ ನಲ್ಲಿ ಆಗಿಲ್ಲ. ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳು ಕೂಡ ನಾವೇನು ಯಾರಿಗೂ ಕಮ್ಮಿ ಇಲ್ಲ ಎಂದು ತನಿಷಾ , ಸಂಗೀತಾ, ನಮ್ರತಾ, ನೀತು ಗಂಡು ಮಕ್ಕಳ ಜೊತೆಗೆ ಮಾತಿನಲ್ಲೇ ಯುದ್ಧ ಶುರು ಮಾಡುತ್ತಿದ್ದರು.
ಈಗ ತುಕಾಲಿ ಸಂತೋಷ್ ಟಾಪ್ ಸಿಕ್ಸ್ ಸ್ಪರ್ಧಿಯಾಗಿ ಹೊರಗೆ ಹೋಗಿದ್ದಾರೆ. ಇನ್ನು ಟಾಪ್ ಫೈವ್ ಮಂದಿ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದು ಯಾರ ಕೈಗೆ ಕಿಚ್ಚ ಟ್ರೋಫಿಯನ್ನು ಕೊಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಎಲ್ಲರೂ ಕೂಡ ಯಾರ ಕೈಗೆ ಈ ಸಲದ ಟ್ರೋಫಿ ಹೋಗಲಿದೆ ಎಂದು ಕಾಯುತ್ತಾ ಇದ್ದಾರೆ.

ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಸೀಸನ್ ಹತ್ತರ ರೀತಿ ಯಾವ ಸೀಸನ್ ಕೂಡ ನಡೆದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಈ ಸೀಸನ್ ನಲ್ಲಿ ಕಿತ್ತಾಟವಿತ್ತು, ಸ್ನೇಹವಿತ್ತು, ನಾವೇ ಕಪ್ಪು ಗೆಲ್ಲಬೇಕು ಎಂಬ ಗುರಿಯಿತ್ತು. ಎಲ್ಲರಲ್ಲೂ ಕೂಡ ಒಂದೇ ಒಂದು ಗುರಿ ಇತ್ತು ಅದು ಏನೆಂದರೆ ಈ ಬಿಗ್ ಬಾಸ್ ಸೀಸನ್ 10ನ್ನು ನಾನೇ ಪಡೆಯಬೇಕು ಎಂಬುದೇ ಆಗಿತ್ತು ಎಂದು ಹೇಳಿದ್ದಾರೆ. ಈ ಬಾರಿ ಅದ್ಯಾಕೋ ಕಾಣೆ ವೇದಿಕೆಯ ಮೇಲೆ ಯಾರು ಎಷ್ಟು ವೋಟ್‌ಗಳನ್ನ ಪಡೆದಿದ್ದಾರೆ ಎಂಬುದನ್ನು ರಿವೀಲ್ ಮಾಡಲಾಗುತ್ತಿದೆ.
ಯಾರ ಕೈಗೆ ಸಿಗಲಿದೆ ಸೀಸನ್ ಹತ್ತರ ಟ್ರೋಫಿ?
ಬಿಗ್ ಬಾಸ್ ಸೀಸನ್ 10 ಹಲವಾರು ವಿಶೇಷತೆಗಳನ್ನ ಒಳಗೊಂಡು ಮುಕ್ತಾಯವನ್ನು ಕಾಣುತ್ತಿದೆ. ಈಗ ಎಲ್ಲದಕ್ಕೂ ಕೂಡ ಮುಕ್ತಾಯದ ಹಂತ ಬಂದಿದ್ದು ಇಂದು ಬಿಗ್ ಬಾಸ್ ಸೀಸನ್ ಹತ್ತರ ಗ್ರಾಂಡ್ ಫಿನಾಲೆಯಲ್ಲಿ ಕಪ್ ಯಾರ ಕೈಗೆ ಸಿಗುತ್ತದೆ ಎಂಬುದನ್ನು ವೀಕ್ಷಕರು ಕುತೂಹಲದಿಂದ ನೋಡಲು ಕಾಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಐದು ಮಂದಿ ಸ್ಪರ್ಧಿಗಳು ಕಪ್ ಯಾರ ಕೈಗೆ ಸಿಗಲಿದೆ ಎಂದು ಟೆನ್ಶನ್ ನಲ್ಲೇ ಕಾಯುತ್ತಿದ್ದಾರೆ. ತುಕಾಲಿ ಸಂತೋಷ ಹೊರಗೆ ಬಂದಿದ್ದು, ಇನ್ನೂ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ವಿನಯ್, ಪ್ರತಾಪ್ ಟ್ರೋಫಿ ನಮಗೆ ಸಿಗಲಿ ಎಂದು ಕಾಯುತ್ತಿದ್ದಾರೆ.
ಈ ಬಾರಿ ಇಂತಹವರೇ ಗೆಲ್ಲುತ್ತಾರೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅವರವರ ಅಭಿಮಾನಿಗಳು ಅವರವರ ನೆಚ್ಚಿನ ಸ್ಪರ್ಧಿಗಳು ಗೆಲುವನ್ನು ಸಾಧಿಸಲಿ ಎಂದು ಹಾರೈಸುತ್ತಿದ್ದಾರೆ. ಟಾಪ್ ಫೈವ್‌ನಲ್ಲಿ ಕಿಚ್ಚ ಸುದೀಪ್ ಯಾರ ಕೈಯನ್ನು ಮೇಲಕ್ಕೆ ಎತ್ತುತ್ತಾರೆ ಎಂದು ಕಾಯುತ್ತಾ ಇದ್ದಾರೆ. ಈಗಾಗಲೇ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಬೇಕು ಎಂದು ಅಭಿಮಾನಿಗಳು ದೇವರ ಪೂಜೆ, ಅನ್ನದಾನ ಹೀಗೆ ಇನ್ನಿತರ ಕಾರ್ಯಗಳನ್ನು ಮಾಡಿದ್ದಾರೆ.

ಸ್ಪರ್ಧಿಗಳ ಎದೆಯಲ್ಲಿ ಟೆನ್ಷನ್ನೋ ಟೆನ್ಷನ್ನೋ
ಟಾಪ್ ಫೈವ್ ಕಂಟೆಸ್ಟೆಂಟ್ಗಳಲ್ಲಿ ಈಗ ನಡುಕ ಹುಟ್ಟಿಕೊಂಡಿದೆ ಯಾರಿಗೆ ಕಪ್ ಬರಲಿದೆ ಯಾರು 50 ಲಕ್ಷ ರೂಪಾಯಿಗಳನ್ನು ಯಾರು ಗೆಲ್ಲುತ್ತಾರೆ ಕಾರು ಯಾರ ಪಾಲಾಗಲಿದೆ ಎರಡು ಸ್ಕೂಟರ್‌ಗಳು ಯಾರಿಗೆ ಸೇರಲಿವೆ. ಇನ್ನು ವಿವಿಧ ರೀತಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾರು ಎಂಬ ಬಗ್ಗೆ ಈಗ ಟೆನ್ಶನ್ ಶುರುವಾದಂತಿದೆ. ದೇವರೇ ನನಗೆ ಕಪ್ಪನ್ನು ಬರುವಂತೆ ಮಾಡು ಎಂಬ ಪ್ರಾರ್ಥನೆಗಳು ಕೂಡ ಹೆಚ್ಚಾದಂತೆ ಸ್ಪರ್ಧಿಗಳ ಮುಖದಲ್ಲಿ ಕಾಣಿಸುತ್ತಾ ಇದೆ. ಈಗ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಹೊರಗೆ ಬರಲಿದ್ದಾರೆ ಇಬ್ಬರು ಉಳಿದುಕೊಂಡು ಯಾರು ರನ್ನರ್ ಹಾಗೂ ವಿನ್ನರ್ ಆಗುತ್ತಾರೆ ಎಂಬುದು ಕುತೂಹಲವಾಗಿದೆ.


Click it and Unblock the Notifications











