Biggboss: ಅಸಮರ್ಥರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಹೋಗಿದ್ದವರು ಕೊನೆಗೂ ಸಾಧಿಸಿ ತೋರಿಸಿಬಿಟ್ರಲ್ಲ
ಈ ಬಾರಿ ಕನ್ನಡ ಬಿಗ್‌ಬಾಸ್ ಸೀಸಸ್ ಹತ್ತು ಹಲವು ವಿಶೇಷಗಳಿಂದ ಗಮನ ಸೆಳೆಯಿತು. ಗ್ರ್ಯಾಂಡ್ ಓಪನಿಂಗ್ ದಿನವೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಕೆಲವರನ್ನು ಅಸಮರ್ಥರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಮನೆಯೊಳಗೆ ಹೋಗಿದ್ದರು.
ಶೋ ಆರಂಭವಾದ ವಾರವೇ ಸ್ಪರ್ಧಿಗಳನ್ನು ಸಮರ್ಥರು ಹಾಗೂ ಅಸಮರ್ಥರು ಎಂದು ವಿಭಾಗಿಸಲಾಗಿತ್ತು. ಗ್ರ್ಯಾಂಡ್ ಪ್ರೀಮಿಯರ್ ವೇದಿಕೆ ಮೇಲೆ ಲೈವ್ ಆಡಿಯೆನ್ಸ್ ಪೋಲ್ ನಡೆಸಲಾಗಿತ್ತು. ಇದರಲ್ಲಿ 40% ರಿಂದ 80% ವರೆಗಿನ ವೋಟಿಂಗ್ ಪಡೆದ 6 ಸ್ಪರ್ಧಿಗಳಿಗೆ ಅಸಮರ್ಥರು ಎಂದು ಹಣೆಪಟ್ಟೆ ಕಟ್ಟಲಾಗಿತ್ತು. ನೀವು ಸಮರ್ಥರು ಎಂದು ಪ್ರೂವ್ ಮಾಡಿಕೊಳ್ಳಿ ಎನ್ನುವ ಸವಾಲು ಹಾಕಲಾಗಿತ್ತು.

ಎರಡು ವಾರಗಳ ಅಸಮರ್ಥರು, ಸಮರ್ಥರು ಎನ್ನುವ ಭೇದ ಇಲ್ಲದೇ ಎಲ್ಲರೂ ಸ್ಪರ್ಧಿಗಳಾಗಿ ಆಟ ಆಡಲು ಆರಂಭಿಸಿದರು. ಒಂದಷ್ಟು ದಿನ ಎರಡು ತಂಡಗಳಾಗಿ ಸ್ಪರ್ಧಿಗಳು ಟಾಸ್ಕ್‌ಗಳಲ್ಲಿ ಭಾಗವಹಿಸಿದರು. ಅಂದಹಾಗೆ ರಕ್ಷಕ್ ಬುಲೆಟ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹಾಗೂ ವರ್ತೂರು ಸಂತೋಷ್ ಅಸಮರ್ಥರ ಗುಂಪಿನಲ್ಲಿ ಇದ್ದರು. ಅಚ್ಚರಿ ಎಂದರೆ ಅಸಮರ್ಥರ ಗುಂಪಿನಲ್ಲಿದ್ದ ಮೂವರು ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 10ರ ಟಾಪ್ 3 ಸ್ಥಾನಕ್ಕೇರಿದ್ದಾರೆ.
ವಿನಯ್ 3ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಅಲ್ಲಿಗೆ ಸಮರ್ಥರು ಎನಿಸಿಕೊಂಡು ಮನೆಯೊಳಗೆ ಹೋಗಿದ್ದ ಎಲ್ಲರೂ ಎಲಿಮಿನೇಟ್ ಆಗಿ ಹೊರ ಬಂದಂತೆ ಆಗಿದೆ. ಇನ್ನು ಅಂದು ನಡೆದ ಲೈವ್ ಆಡಿಯನ್ಸ್ ಪೋಲ್‌ನಲ್ಲಿ ಯಾರಿಗೆ ಶೇಕಡಾ ಎಷ್ಟು ಮತ ಸಿಕ್ಕಿತ್ತು ಎನ್ನುವುದನ್ನು ನೋಡುವುದಾದರೆ 11 ಜನ ಸೇಫ್ ಆಗಿ ಬಿಗ್‌ಬಾಸ್ ಮನೆ ಪ್ರವೇಶಿಸಲು ಅರ್ಹತೆ ಪಡೆದುಕೊಂಡಿದ್ದರು.
ನಮ್ರತಾ ಗೌಡ 86%, ಸ್ನೇಹಿತ್ 81%, ಇಶಾನಿ 83%, ವಿನಯ್ 89%, ಸಂತೋಷ್ 93%, ನೀತು 86%, ಸಿರಿ 83%, ಸ್ನೇಕ್ ಶ್ಯಾಮ್ 84%, ಭಾಗ್ಯಶ್ರೀ 81%, ಗೌರೀಶ್ ಅಕ್ಕಿ 82%, ಮೈಕೆಲ್ 81% ಮತಗಳನ್ನು ಪಡೆದು ಸಮರ್ಥರು ಎನಿಸಿಕೊಂಡು ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದರು.
ಡ್ರೋನ್ ಪ್ರತಾಪ್ 41%, ತನಿಷಾ 68%, ರಕ್ಷಕ್ 53%, ಸಂಗೀತಾ 76%, ವರ್ತೂರು 78%, ಕಾರ್ತಿಕ್ 76% ಮತಗಳನ್ನು ಪಡೆದು ಅಸಮರ್ಥರ ಹಣೆಪಟ್ಟಿ ಕೊಟ್ಟಿಕೊಂಡು ಮನೆ ಒಳಗೆ ಹೋಗುವಂತಾಗಿತ್ತು.
ವೇಯ್ಟಿಂಗ್ ಲಿಸ್ಟ್‌ನಲ್ಲಿದ್ದು ಕೊನೆಗೆ ಅಸಮರ್ಥರು ಎನಿಸಿಕೊಂಡು ಮನೆಯೊಳಗೆ ಹೋದವರಿಗೆ ಮೊದಲ ವಾರವೇ ಒಂದಷ್ಟು ಷರತ್ತುಗಳನ್ನು ವಿಧಿಸಲಾಗಿತ್ತು. ಮನೆಯಿಂದ ತೆಗೆದುಕೊಂಡು ಹೋದ ಸೂಟ್‌ಕೇಸ್ ಕೊಡಲ್ಲ, ಬಿಗ್‌ಬಾಸ್ ಕೊಟ್ಟ ಸಮವಸ್ತ್ರ ಮಾತ್ರ ಧರಿಸಿರಬೇಕು, ಮನೆಯೊಳಗೆ ಎಲ್ಲಿ ಬೇಕಾದರೂ ಓಡಾಡಬಹುದು ಆದರೆ, ಸೋಫಾ, ಕುರ್ಚಿಗಳ ಮೇಲೆ ಮೇಲೆ ಕೂರುವಂತಿಲ್ಲ. ಮಲಗುವಂತಿಲ್ಲ,
ನೆಲದ ಮೇಲಷ್ಟೆ ಕೂರಬೇಕು, ಮಲಗಬೇಕು ಇನ್ನು
ಜಿಮ್, ಸ್ವಿಮ್ಮಿಂಗ್ ಪೂಲ್ ಹಾಗೂ ಬಾಲ್ಕನಿಗೆ ಹೋಗುವಂತಿಲ್ಲ ಎನ್ನುವ ಷರತ್ತುಗಳು ಇತ್ತು.
ಸಮರ್ಥರು ಊಟ, ಸ್ನಾನ, ನಿದ್ದೆ ಮುಗಿಸಿದ ಮೇಲೆ ಅಸಮರ್ಥರು ದಿನಚರಿ ಪ್ರಾರಂಭಿಸಬೇಕು. ಬಾತ್‌ರೂಮ್ ತೊಳೆಯುವುದು, ಹಾಸಿಗೆ ಸಿದ್ಧಗೊಳಿಸುವುದು, ಅಡುಗೆ ಮಾಡುವುದು ಇಂತಹ ಕೆಲಸಗಳೆಲ್ಲಾ ಅಸಮರ್ಥರೇ ಹೆಗಲೇರಿತ್ತು. ಆದರೆ ಒಂದೇ ವಾರದಲ್ಲಿ ಅಸಮರ್ಥರ ಗುಂಪಿನಲ್ಲಿದ್ದವರು ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು. ಫಸ್ಟ್ ವೀಕೆಂಡ್‌ನಲ್ಲೇ ಸುದೀಪ್ ಬಂದು ಇದನ್ನು ಡಿಸಾಲ್ವ್ ಮಾಡಿದ್ದರು. ಇನ್ನು ಮುಂದೆ ಮನೆಯಲ್ಲಿ ಇರುವ ಎಲ್ಲರೂ ಸಮರ್ಥರು ಎಂದು ಘೋಷಿಸಿದ್ದರು.


Click it and Unblock the Notifications











