Bigg Boss Kannada 10: ವೈಟಿಂಗ್ ಲಿಸ್ಟ್‌ನಲ್ಲಿದ್ದ ಆರು ಮಂದಿ ಬಿಗ್ ಬಾಸ್ ಮನೆಗೆ!, ಆದ್ರೆ ಷರತ್ತು ಅನ್ವಯ!?

ಬಿಗ್‌ ಬಾಸ್ ಕನ್ನಡದ ಹತ್ತನೇ ಸೀಸನ್ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಸಕತ್ ನಿರೂಪಣೆಯಲ್ಲಿ ಸ್ಪರ್ಧಿಗಳ ಪರಿಚಯ ಕೂಡ ನಡೆದಿದೆ. ಆದರೆ, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಪರ್ಧಿಗಳನ್ನು ಆಯ್ಕೆ ಮಾಡುವ ಕೆಲಸ ವೀಕ್ಷಕರಿಗೂ ನೀಡಲಾಗಿತ್ತು. ಅದರಲ್ಲಿ ಬರೋಬ್ಬರಿ ಆರು ಮಂದಿ ವೀಕ್ಷಕರ ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಆರು ಮಂದಿಯನ್ನು ವೈಟಿಂಗ್ ಲಿಸ್ಟ್‌ನಲ್ಲಿ ಇಡಲಾಗಿದೆ.

ವೀಕ್ಷಕರಿಂದ ಕಡಿಮೆ ಮತಗಳನ್ನು ಪಡೆದಿದ್ದ ಡ್ರೋನ್ ಪ್ರತಾಪ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನಟಿಯರಾದ ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಹಳ್ಳಿಕಾರ್ ತಳಿಯ ಪ್ರಚಾರಕ ರೈತ ವರ್ತೂರು ಸಂತೋಷ್ ಮತ್ತು ಕೊನೆಯ ಸ್ಪರ್ಧಿ ನಟ ಕಾರ್ತಿಕ್ ಮಹೇಶ್ ಹೋಲ್ಡ್‌ನಲ್ಲಿ ಇದ್ದಾರೆ. ಇವರಿಗೆ ಬಿಗ್ ಬಾಸ್ ವಿಶೇಷ ಟಾಸ್ಕ್ ಕೊಡುವ ಮೂಲಕ ಒಳಗೆ ಕಳುಹಿಸುತ್ತಾರೆ ಎನ್ನಲಾಗಿತ್ತು, ಆದರೆ, ನಟಿ ಸುದೀಪ್ ಎಲ್ಲರನ್ನೂ ಬಿಗ್ ಬಾಸ್ ಮನೆಗೆ ಕಳುಹಿಸಿ ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.

Bigg Boss Kannada 10: Kiccha Sudeep sent all the 6 contestants Bigg Boss house, who are waiting list

ಮನೆಯೊಳಗೆ ಹೋಗಲು ಅವಕಾಶ, ಆದರೆ ಒಂದು ವಾರ ಮಾತ್ರ!

ವೈಟಿಂಗ್ ಲಿಸ್ಟ್‌ನಲ್ಲಿ ಇರುವ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆದ ಕಿಚ್ಚ ಸುದೀಪ್ ವೀಕ್ಷಕರು ಆಯ್ಕೆ ಮಾಡದ ಈ ಆರು ಸ್ಪರ್ಧಿಗಳನ್ನೂ ಮನೆಗೆ ಒಳಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಎಲ್ಲರಿಗೂ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಸೆಕೆಂಡ್ ಚಾನ್ಸ್‌ನಲ್ಲಿ ಇವರು ಆಡುವ ಆಟದ ಮೇಲೆ, ನಿಮ್ಮಲ್ಲಿ ಯಾರು ಉಳಿದುಕೊಳ್ಳಬೇಕು, ಯಾರು ಉಳಿದುಕೊಳ್ಳಬಾರದು ಎಂಬುದನ್ನು ಬಿಗ್​ಬಾಸ್ ನಿರ್ಣಯ ಮಾಡುತ್ತಾರೆ. ಹಾಗಾಗಿ ಈ ಒಂದು ವಾರ ಚೆನ್ನಾಗಿ ಆಟ ಆಡಿ ಎಂದು ಸುದೀಪ್ ಎಲ್ಲರಿಗೂ ಹೇಳಿದ್ದಾರೆ.

ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲು 80% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಬೇಕಾಗಿತ್ತು. 40% ಗಿಂತ ಕಡಿಮೆ ಮತಗಳು ಪಡೆದವರನ್ನು ವೇದಿಕೆಯೊಂದಲೇ ವಾಪಸ್ ತಮ್ಮ ಮನೆಗೆ ಕಳುಹಿಸಲಾಗಿದೆ. ಇನ್ನು, 80% ಗಿಂತಲೂ ಕಡಿಮೆ, 40 % ಗಿಂತಲೂ ಹೆಚ್ಚು ಮತ ಪಡೆದವರು ಬಿಗ್ ​ಬಾಸ್ ನಿರ್ಣಯಕ್ಕಾಗಿ ಹೋಲ್ಡ್‌ನಲ್ಲಿ ಇರಬೇಕಾಗಿತ್ತು. ಹೀಗಾಗಿ ಆರು ಮಂದಿ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ.

Bigg Boss Kannada 10: Kiccha Sudeep sent all the 6 contestants Bigg Boss house, who are waiting list

ವೈಟಿಂಗ್ ಲಿಸ್ಟ್‌ನಲ್ಲಿರುವ ಸ್ಪರ್ಧಿಗಳು

ಸಂಗೀತಾ ಶೃಂಗೇರಿ: ಹರ ಹರ ಮಹಾದೇವ ಮತ್ತು ಚಾರ್ಲಿ 777 ಸಿನಿಮಾ ಮೂಲಕ ಕನ್ನಡಿಗರಿಗೆ ಮನಗೆದ್ದಿರೋ ನಟಿ ಸಂಗೀತಾ ಶೃಂಗೇರಿ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ. ವೀಕ್ಷಕರು 76 ಪರ್ಸೆಂಟ್ ಮತಗಳನ್ನು ನೀಡಿದ್ದರು.

ರಕ್ಷಕ್ ಬುಲೆಟ್: ದಿವಂಗತ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಕೂಡ ಬಿಗ್ ಬಾಸ್‌ಗೆ ಬರ್ರಾತೆ ಎಂದು ಹೆಚ್ಚು ಸುದ್ದಿಯಲ್ಲಿದ್ದರು. ಆದರೆ, ವೀಕ್ಷಕರು 53% ವೋಟು ನೀಡಿ ವೈಟಿಂಗ್ ಲಿಸ್ಟ್‌ಗೆ ಹಾಕಿದ್ದಾರೆ.

ಡ್ರೋನ್ ಪ್ರತಾಪ್: ಡ್ರೋನ್ ವಿಷಯದಿಂದ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಯುವ ವಿಜ್ಞಾನಿ ಎನಿಸಿಕೊಂಡಿದ್ದ ಡ್ರೋನ್ ಪ್ರತಾಪ್ 41% ವೋಟ್ ಪಡೆದು ವೈಟಿಂಗ್ ಲಿಸ್ಟ್‌ಗೆ ಸೇರಿದ್ದಾರೆ.

ತನಿಷಾ ಕುಪ್ಪಂಡ : ಮಂಗಳ ಗೌರಿ ಧಾರಾವಾಹಿಯ ಖಡಕ್ ವಿಲನ್ ಆಗಿದ್ದ ನಟಿ ತನಿಷಾ ಕುಪ್ಪಂಡ ಅವರಿಗೆ ವೀಕ್ಷಕರು 68% ವೋಟ್ ನೀಡಿದ್ದಾರೆ.

ವರ್ತೂರು ಸಂತೋಷ್: ಹಳ್ಳಿಕಾರ್ ತಳಿಯನ್ನು ಉಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಶ್ರೀಮಂತ ರೈತ ವರ್ತೂರು ಸಂತೋಷ್ ಕೂಡ ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಆದರೆ, ಕೆವಲ ಎರಡು ಪರ್ಸೆಂಟ್ ವೋಟ್ ಕಡಿಮೆಯಗಿದ್ದು 78% ವೋಟಿಂಗ್ ಪಡೆದಿದ್ದಾರೆ.

ಕಾರ್ತಿಕ್ ಮಹೇಶ್: ರಾಷ್ಟ್ರ ಪ್ರಶಸ್ತಿ ವಿಜೇತ 'ಡೊಳ್ಳು' ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಗುರುತಿಸಿಕೊಂಡಿರುವ ಕಿರುತೆರೆ ನಟ ಕಾರ್ತಿಕ್ ಮಹೇಶ್ ಕೂಡ ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಆದರೆ, ಅವರಿಗೆ ವೀಕ್ಷಕರು 76% ವೋಟಿಂಗ್ ನೀಡಿದ್ದಾರೆ.

More from Filmibeat

English summary
Bigg Boss Kannada 10: Kiccha Sudeep sent all the six contestants to the Bigg Boss house, who are in waiting list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X